ಗುರುವಾರ, ಸೆಪ್ಟೆಂಬರ್ 20, 2018


ನನ್ನ ಕಣ್ಣಿಗೆ ಕೃಷ್ಣನು ಗೋಚರನಾಗಲಿ (ಶ್ರೀಶಂಕರಾಚಾರ್ಯರ ಕೃತಿಸಂಗ್ರಹ)


ಶ್ರಿಯಾಶ್ಲಿಷ್ಟೋ ವಿಷ್ಣುಃ ಸ್ಥಿರಚರಗುರುರ್ವೇದವಿಷಯೋ
ಧಿಯಾಂ ಸಾಕ್ಷೀ ಶುದ್ಧೋ ಹರಿರಸುರಹನ್ತಾಬ್ಜನಯನಃ |
ಗದೀ ಶಙ್ಖೇ ಚಕ್ರೀ ವಿಮಲವನಮಾಲೀ ಸ್ಥಿರರುಚಿಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ನೋಕ್ಷಿವಿಷಯಃ ||1||

ಲಕ್ಷ್ಮಿಯಿಂದಾಲಿಂಗತನಾಗಿರುವ ವಿಷ್ಣುವೂ, ಸ್ಥಾವರಜಂಗಮಪ್ರಾಣಿಗಳಿಗೆಲ್ಲ ಗುರುವೂ, ವೇದಗಳು ತಿಳಿಸಿಕೊಡತಕ್ಕ ಪರಮಾರ್ಥವಿಷಯವೂ, ಬುದ್ಧಿವೃತ್ತಿಗಳಿಗೆ ಸಾಕ್ಷಿಯಾಗಿರುವ ಶುದ್ಧಚೈತನ್ಯಸ್ವರೂಪನೂ, ಅಸುರರನ್ನು ಕೊಲೆಮಾಡುವ ಹರಿಯೂ, ಕಮಲನೇತ್ರನೂ, ಗದೆ, ಶಂಖ, ಚಕ್ರ, ನಿರ್ಮಲವಾದ ವನಮಾಲೆ ಇವುಗಳನ್ನು ಧರಿಸಿರುವವನೂ ನಿತ್ಯವಾದ ಕಾಂತಿಯುಳ್ಳವನೂ ಶರಣುಹೋಗುವದಕ್ಕೆ ತಕ್ಕವನೂ ಆದ ಶ್ರೀಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!


ಯತಃ ಸರ್ವಂ ಜಾತಂ ವಿಯದನಿಲಮುಖ್ಯಂ ಜಗದಿದಂ
ಸ್ಥಿತೌ ನಿಃಶೇಷಂ ಯೋವತಿ ನಿಜಸುಖಾಂಶೇನ ಮಧುಹಾ |
ಲಯೇ ಸರ್ವಂ ಸ್ವಸ್ಮಿನ್ ಹರತಿ ಕಲಯಾ ಯಸ್ತು ಸ ವಿಭುಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||2||

ಆಕಾಶ, ವಾಯು - ಮುಂತಾದ ಈ ಜಗತ್ತೆಲ್ಲವೂ ಯಾವಾತನಿಂದ ಹುಟ್ಟಿರುವದೋ, ಸ್ಥಿತಿಕಾಲದಲ್ಲಿ ಇದೆಲ್ಲವನ್ನೂ ತನ್ನ ಆನಂದದ ಅಂಶದಿಂದ ಯಾವಾತನು ಕಾಪಾಡುತ್ತಿರುವನೋ, ಯಾವ ಮಧುಸೂದನನು ಪ್ರಲಯಕಾಲದಲ್ಲಿ ತನ್ನ ಕಲಾಮಾತ್ರದಿಂದ ಎಲ್ಲವನ್ನೂ ತನ್ನಲ್ಲಿಯೇ ಅಡಗಿಸಿಕೊಳ್ಳುವನೋ, ಆ ಸರ್ವವ್ಯಾಪಕನೂ ಶರಣುಹೋಗುವದಕ್ಕೆ ತಕ್ಕವನ್ನೂ, ಲೋಕಗಳೊಡೆಯನೂ ಆದ ಶ್ರೀ ಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!


ಅಸೂನಾಯಮ್ಯಾದೌ ಯಮನಿಯಮಮುಖ್ಯೈಃ ಸುಕರಣೈ-
ರ್ನಿರುಧ್ಯೇದಂ ಚಿತ್ತಂ ಪೃದಿ ವಿಲಯಮಾನೀಯ ಸಕಲಮ್ |
ಯಮಿಡ್ಯಂ ಪಶ್ಯನ್ತಿ ಪ್ರವರಮತಯೋ ಮಾಯಿನಮಸೌ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||3||

ಶ್ರೇಷ್ಠಮತಿಗಳಾದವರು ಪ್ರಾಣಾಯಾಮವನ್ನು ಮಾಡಿಕೊಂಡು ಯಮ, ನಿಯಮ ಮುಂತಾದ ಉತ್ತಮ ಸಾಧನಗಳಿಂದ ಈ ಚಿತ್ತವನ್ನು ನಿರೋಧಮಾಡಿಕೊಂಡು ಸಕಲವನ್ನೂ ಹೃದಯದಲ್ಲಿ ಲಯಮಾಡಿಕೊಂಡು ಸ್ತುತ್ಯನೂ ಮಾಯಾವಿಯೂ ಆದ ಯಾವಾತನನ್ನು ಕಾಣುವರೋ ಆ ಶರಣುಹೋಗುವದಕ್ಕೆ ತಕ್ಕವನೂ ಲೋಕಗಳೊಡೆಯನೂ ಆದ ಶ್ರೀಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!


ಪೃಥಿವ್ಯಾಂ ತಿಷ್ಮನ್ಯೋ ಯಮಯತಿ ಮಹೀಂ ವೇದ ನ ಧರಾ
ಯಮಿತ್ಯಾದೌ ವೇದೋ ವದತಿ ಜಗತಾಮೀಶಮಮಲಮ್ |
ನಿಯನ್ತಾರಂ ಧ್ಯೇಯಂ ಮುನಿಸುರನೃಣಾಂ ಮೋಕ್ಷದಮಸೌ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||4||

ಯಾವಾತನು ಪೃಥ್ವಿಯಲ್ಲಿದ್ದುಕೊಂಡು ಪೃಥ್ವಿಯನ್ನು ವಶದಲ್ಲಿಟ್ಟುಕೊಂಡಿರುವನೋ ಆದರೆ ಯಾವಾತನನ್ನು ಪೃಥ್ವೀದೇವಿಯು ಅರಿಯಳೋ ಎಂಬುದೇ ಮುಂತಾದ ವಾಕ್ಕಿನಲ್ಲಿ ವೇದವು ಯಾವಾತನನ್ನೇ ಜಗತ್ತಿಗೆ ಈಶ್ವರನೆಂದೂ ನಿರ್ಮಲನೆಂದೂ ನಿಯಂತೃವೆಂದೂ ಧ್ಯಾನಮಾಡುವುದಕ್ಕೆ ತಕ್ಕವನೆಂದೂ ಮುನಿಗಳಿಗೂ ದೇವತೆಗಳಿಗೂ ಮನುಷ್ಯರಿಗೂ ಮೋಕ್ಷವನ್ನು ಕೊಡತಕ್ಕವನೆಂದೂ ಹೇಳಿತ್ತಿದೆಯೋ ಆ ಶರಣಹೋಗುವದಕ್ಕೆ ತಕ್ಕವನೂ ಲೋಕಗಳೊಡೆಯನೂ ಆದ ಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!


ಮಹೇನ್ದ್ರಾದಿರ್ದೇವೋ ಜಯತಿ ದಿತಿಜಾನ್ಯಸ್ಯ ಬಲತೋ
ನ ಕಸ್ಯ ಸ್ವಾತನ್ತ್ಯ್ರಂ ಕ್ವಚಿದಪಿ ಕೃತೌ ಯತ್ಕೃತಿಮೃತೇ |
ಬಲಾರಾತೇರ್ಗರ್ವಂ ಪರಿಹರತಿ ಯೋಸೌ ವಿಜಯಿನಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||5||

ಮಹೇಂದ್ರನೇ ಮೊದಲಾದ ದೇವತೆಗಳು ಯಾವಾತನ ಬಲದಿಂದಲೇ ದೈತ್ಯರನ್ನು ಗೆಲ್ಲುವರೋ, ಯಾವಾತನ ಪ್ರಯತ್ನವಿಲ್ಲದಿದ್ದರೆ ಮತ್ತೆ ಯಾರಿಗೂ ಪ್ರಯತ್ನಸ್ವಾತಂತ್ರ್ಯವಿಲ್ಲವೋ, ವಿಜಯಿಯಾದ ಇಂದ್ರನ ಗರ್ವವನ್ನು ಯಾವಾತನು ಹೋಗಲಾಡಿಸಿರುವನೋ ಆ ಶರಣುಹೋಗುವದಕ್ಕೆ ತಕ್ಕವನೂ ಲೋಕಗಳ ಒಡೆಯನೂ ಆದ ಕೃಷ್ಣನು ನನ್ನ
ಕಣ್ಣುಗಳಿಗೆ ಗೋಚರನಾಗಲಿ!
ವಿನಾ ಯಸ್ಯ ಧ್ಯಾನಂ ವ್ರಜತಿ ಪಶುತಾಂ ಸೂಕರಮುಖಾಂ
ವಿನಾ ಯಸ್ಯ ಜ್ಞಾನಂ ಜನಿಮೃತಿಭಯಂ ಯಾತಿ ಜನತಾ |
ವಿನಾ ಯಸ್ಯ ಸ್ಮೃತ್ಯಾ ಕ್ಷಮಿಶತಜನಿಂ ಯಾತಿ, ಸ ವಿಭುಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||6||
ಯಾವಾತನ ಧ್ಯಾನವಿಲ್ಲದಿದ್ದರೆ ಜನರು ಹಂದಿಯೇ ಮುಂತಾದ ಪಶುಜನ್ಮವನ್ನು ಪಡೆಯುವರೋ, ಯಾವಾತನ ಜ್ಞಾನವಿಲ್ಲದಿದ್ದರೆ ಜನನಮರಣ ಭಯವನ್ನು ಪಡೆಯವರೋ, ಯಾವಾತನ ಸ್ಮೃತಿಯಿಲ್ಲದಿದ್ದರೆ ನೂರಾರು ಬಗೆಯ ಕ್ರಿಮಿಗಳ ಜನ್ಮವನ್ನು ಪಡೆಯುವರೋ ಆ ವಿಭುವೂ ಶರಣು ಹೋಗುವದಕ್ಕೆ ತಕ್ಕವನೂ ಲೋಕಗಳ ಒಡೆಯನೂ ಆದ ಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!


ನರಾತಙ್ಕೋಟ್ಟಙ್ಕಃ ಶರಣಶರಣೋ ಭ್ರಾನ್ತಿಹರಣೋ
ಘನಶ್ಯಾಮೋ ವಾಮೋ ವ್ರಜಶಿಶುವಯಸ್ಯೋರ್ಜುನಸಖಃ |
ಸ್ವಯಮ್ಭೂರ್ಭೂತಾನಾಂ ಜನಕ ಉಚಿತಾಚಾರಸುಖದಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||7||

ಜನರಿಗೆ ಒದಗುವ ಭಯಗಳನ್ನು ನಾಶಪಡಿಸುವವನೂ ಶರಣಾಗತರನ್ನೂ ರಕ್ಷಿಸುವವನೂ, ಭ್ರಾಂತಿಯನ್ನು ತೊಲಗಿಸುವವನೂ, ಮೇಘದಂತೆ ಕಪ್ಪುಬಣ್ಣದವನೂ, ಸುಂದರನೂ, ಗೋಪಾಲಕರ ಗೆಳೆಯನೂ, ಅರ್ಜುನನ ಸ್ನೇಹಿತನೂ, ತಾನೇ ತೋರಿಕೊಳ್ಳುವನನೂ, ಸಕಲಭೂತಗಳನ್ನು ಸೃಷ್ಟಿಸಿದಾತನೂ, ಯೋಗ್ಯವಾದ ಆಚಾರವುಳ್ಳವರಿಗೆ ಸುಖವನ್ನು ಕೊಡುವಾತನೂ, ಶರಣುಹೋಗುವದಕ್ಕೆ ತಕ್ಕವನೂ, ಲೋಕಗಳೊಡೆಯನೂ ಆದ ಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!

ಯದಾ ಧರ್ಮಗ್ಲಾನಿರ್ಭವತಿ ಜಗತಾಂ ಕ್ಷೋಭಕರಣೀ
ತದಾ ಲೋಕಸ್ವಾಮಿ ಪ್ರಕಟಿತವಪುಃ ಸೇತುಧೃಗಜಃ |
ಸತಾಂ ಧಾತಾ ಸ್ವಚ್ಛೋ ನಿಗಮಗುಣಗೀತೋ ವ್ರಜಪತಿಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||8||

ಯಾವಯಾವಾಗ ಧರ್ಮವು ಕುಂದಿ ಜಗತ್ತಿಗೆಲ್ಲ ಕ್ಷೋಭವನ್ನುಂಟುಮಾಡುವದೋ ಆಗಾಗ ದೇಹವನ್ನು ಪ್ರಕಟಿಗೊಳಿಸಿಕೊಂಡು ಧರ್ಮಸೇತುವನ್ನು ಹಿಡಿದೆತ್ತಿ ಸತ್ಪುರುಷರನ್ನು ಕಾಪಾಡುವವನೂ ಸ್ವಚ್ಛನೂ ಶಾಸ್ತ್ರಗಳ ಸಮುದಾಯದಿಂದ ಕೊಂಡಾಡಲ್ಪಟ್ಟವನೂ ಗೋಕುಲದೊಡೆಯನೂ ಶರಣುಹೋಗುವದಕ್ಕೆ ತಕ್ಕವನೂ ಆದ ಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!


Taken from Facebook

ಸೋಮವಾರ, ಸೆಪ್ಟೆಂಬರ್ 10, 2018

ರಾಮರತ್ನಮ್

ಶ್ರೀರಾಮಕರ್ಣಾಮೃತಮ್ (ಶ್ರೀಶಂಕರಾಚಾರ್ಯಕೃತ)

ಶ್ರೀರಾಮಃ ಸಕಲೇಶ್ವರೋ ಮಮ ಪಿತಾ ಮಾತಾ ಚ ಸೀತಾ ಮಮ
ಭ್ರಾತಾ ಬ್ರಹ್ಮ ಸಖಾ ಪ್ರಭಂಜನಸುತಃ ಪತ್ನೀ ವಿರಕ್ತಿಃ ಪ್ರಿಯಾ |
ವಿಶ್ವಾಮಿತ್ರವಿಭೀಷಣಾದಿವಶಗಾ ಮಿತ್ರಾಣಿ ಬೋಧಸ್ಸುತೋ
ಭಕ್ತಿಃ ಶ್ರೀಹರಿಸಂಗತಾ ರತಿಸುಖಂ ವೈಕುಂಠಮಸ್ಮತ್ಪದಮ್ ||1||

 ಎಲ್ಲರಿಗೂ ಒಡೆಯನಾದ ಶ್ರೀರಾಮನು ತನ್ನ ತಂದೆ, ಸೀತೆಯು ನನ್ನ ತಾಯಿ. ಬ್ರಹ್ಮನು ಸೋದರನು. ವಾಯುಪುತ್ರನಾದ(ಹನುಮಂತನು) ಸ್ನೇಹಿತನು. ವೈರಾಗ್ಯಳೆಂಬುವಳೇ ಪ್ರಿಯಳಾದ ಹೆಂತಿಯು. ವಿಶ್ವಾಮಿತ್ರ, ವಿಭೀಷಣರೇ ಮುಂತಾದ ಅನುಯಾಯಿಗಳೇ ನನ್ನ ಮಿತ್ರರು. ಜ್ಞಾನವೇ ಪುತ್ರನು. ಶ್ರೀಹರಿಯಲ್ಲಿ ಅನುರಕ್ತವಾದ ಭಕ್ತಿಯೇ ರತಿಸುಖವು, ವೈಕುಂಠವೇ ನಮ್ಮ ಊರು.

ರಾಮಂ ಶ್ಯಾಮಾಭಿರಾಮಂ ರವಿಶಶಿನಯನಂ ಕೋಟಿಸೂರ್ಯಪ್ರಕಾಶಂ
ದಿವ್ಯಂ ದಿವ್ಯಾಸ್ತ್ರಪಾಣಿಂ ಶರಮುಖಶರಧಿಂ ಚಾರುಕೋದಂಡಹಸ್ತಮ್ |
ಕಾಲಂ ಕಾಲಾಗ್ನಿರುದ್ರಂ ರಿಪುಕುಲದಹನಂ ವಿಘ್ನವಿಚ್ಛೇದದಕ್ಷಂ
ಭೀಮಂ ಭೀಮಾಟ್ಟಹಾಸಂ ಸಕಲಭಯಹರಂ ರಾಮಚಂದ್ರಂ ಭಜೇಹಮ್ ||2||

 ಕಪ್ಪಾದ ದೇಹಕಾಂತಿಯುಳ್ಳ, ಸೂರ್ಯಚಂದ್ರರೇ ಕಣ್ಣಾಗಿ ಉಳ್ಳ, ಕೋಟಿ ಸೂರ್ಯರಂತೆ ಹೊಳೆಯುವ, ಪ್ರಕಾಶರೂಪನಾದ, ದಿವ್ಯವಾದ ಅಸ್ತ್ರಗಳನ್ನು ಹಿಡಿದಿರುವ, ಸಮುದ್ರದೋಪಾದಿಯ ಬಾಣಸಮೂಹವುಳ್ಳ, ಬಿಲ್ಲನ್ನು ಹಿಡಿದ ಸುಂದರವಾದ ಕೈಯುಳ್ಳ, (ರಾಕ್ಷಸರಿಗೆ) ಮೃತ್ಯುರೂಪನಾದ, ಕಾಲಾಗ್ನಿಯಂತೆ ಭಯಂಕರನಾದ, ಶತ್ರುಗಳ ಗುಂಪನ್ನು ಸುಡುವ, ಅಡ್ಡಿಗಳನ್ನು ತುಂಡುಮಾಡುವದರಲ್ಲಿ ಸಮರ್ಥನಾದ, ಭೀಮನೂ, ಅಂಜಿಕೆಯುಂಟುಮಾಡುವ ಭಾರಿಯ ನಗೆಯುಳ್ಳವನೂ ಸಕಲಭಯಗಳನ್ನೂ ಪರಿಹರಿಸುವವನೂ ಆದ ಶ್ರೀರಾಮನನ್ನು ಭಜಿಸುವೆನು.

ರಾಮೋ ಮತ್ಕುಲದೈವತಂ ಸಕರುಣಂ ರಾಮಂ ಭಜೇ ಸಾದರಂ
ರಾಮೇಣಾಖಿಲಘೋರಪಾಪನಿಹತೀ ರಾಮಾಯ ತಸ್ಮೈ ನಮಃ |
ರಾಮಾನ್ನಾಸ್ತಿ ಜಗತ್ತ್ರಯೈಕಸುಲಭೋ ರಾಮಸ್ಯ ದಾಸೋಸ್ಮ್ಯಹಂ
ರಾಮೇ ಪ್ರೀತಿರತೀವ ಮೇ ಕುಲಗುರೋ ಶ್ರೀರಾಮ ರಕ್ಷಸ್ವ ಮಾಮ್ ||3||

 ರಾಮನು ನನ್ನ ಕುಲದೇವರು. ದಯಾಪೂರ್ಣನಾದ ರಾಮನನ್ನು ಅದರದಿಂದ ಭಜಿಸುವೆನು. ಘೋರವಾದ ಪಾಪಗಳ ನಾಶವೆಲ್ಲವೂ ರಾಮನಿಂದಲೇ ರಾಮನಿಗೆ ನಮಸ್ಕಾರ. ಮೂರು ಲೋಕಗಳಿಗೂ ರಾಮನಷ್ಟು ಸುಲಭನಾದ ಬೇರೊಬ್ಬ ದೇವರಿಲ್ಲ ನಾನು ಶ್ರೀರಾಮನ ಸೇವಕನು ನನಗೆ ರಾಮನಲ್ಲಿಯೇ ಅತಿಯಾದ ಪ್ರೇಮವು ಕುಲಗುರುವಾದ ಶ್ರೀರಾಮನೆ ನನ್ನನ್ನು ಕಾಪಾಡು

ವಂದಾಮಹೇ ಮಹೇಶಾನಚಂಡಕೋದಂಡಖಂಡನಮ್ |
ಜಾನಕೀಹೃದಯಾನಂಚಂದನಂ ರಘುನಂದನಮ್ ||4||

 ಪರಮೇಶ್ವರನ ದುಸ್ಸಹವಾದ ಬಿಲ್ಲನ್ನು ತುಂಡುಮಾಡಿದ, ಜಾನಕೀ ದೇವಿಯ ಹೃದಯಕ್ಕೆ ಆನಂದವುಂಟುಮಾಡುವ ಚಂದನದಂತೆ ಇರುವ, ರಘನಂದನನಾದ ರಾಮನನ್ನು ನಮಸ್ಕರಿಸುತ್ತೇವೆ.

ಜಾನಾತಿ ರಾಮ ತವ ನಾಮರುಚಿಂ ಮಹೇಶಃ
ಜಾನತಿ ಗೌತಮಸತೀ ಚರಣಪ್ರಭಾವಮ್ |
ಜಾನತಿ ದೋರ್ಬಲಪರಾಕ್ರಮಮಿಶಚಾಪಃ
ಜಾನಾತ್ಯಮೋಘಪಟುಬಾಣಗತಿಂ ಪಯೋಧಿಃ ||5||

 ಎಲೈ ರಾಮನೆ, ನಿನ್ನ ನಾಮದ ರುಚಿಯನ್ನು ಪರಮೇಶ್ವರನು ಬಲ್ಲನು. ಗೌತಮನ ಹೆಂಡತಿಯಾದ ಅಹಲ್ಯೆಯು ನಿನ್ನ ಪಾದಗಳ ಮಹಿಮೆಯನ್ನು ಬಲ್ಲಳು. ನಿನ್ನ ಬಾಹುಗಳ ಪರಾಕ್ರಮವನ್ನು ಈಶ್ವರನ ಧನಸ್ಸು ಬಲ್ಲದು ವ್ಯರ್ಥವಾಗದ ತೀಕ್ಷ್ಣವಾದ ನಿನ್ನ ಬಾಣಗಳ ಸಂಚಾರವನ್ನು ಸಮುದ್ರ(ರಾಜನು) ಬಲ್ಲನು.

ಸಕಲಭುವನರತ್ನಂ ಸಚ್ಚಿದಾನಂದರತ್ನಂ
ಸಕಲಹೃದಯರತ್ನಂ ಸೂರ್ಯಬಿಂಬಾಂತರತ್ನಮ್ |
ವಿಮಲಸುಕೃತರತ್ನಂ ವೇದವೇದಾಂತರತ್ನಂ
ಪುರಹರಜಪರತ್ನಂ ಪಾತು ಮಾಂ ರಾಮರತ್ನಮ್ ||6||

 ಎಲ್ಲಾ ಲೋಕಗಳ ರತ್ನವಾದ, ಸಚ್ಚಿದಾನಂದತತ್ತ್ವವಾದ, ಎಲ್ಲರ ಹೃದಯದೊಳಗಿರುವ ಹಾಗೂ ಸೂರ್ಯಬಿಂಬದೊಳಗಿನ ರತ್ನವಾದ, ಪರಿಶುದ್ಧವಾದ ಪುಣ್ಯದ ಸಾರವಾದ, ವೇದವೇದಾಂತಗಳ ತಿರುಳಾದ. ಮಹೇಶ್ವರನು ನಿತ್ಯವೂ ಜಪಿಸುವ ರತ್ನವಾದ ರಾಮನೆಂಬ (ದಿವ್ಯ)ರತ್ನವು ನನ್ನನ್ನು ಕಾಪಾಡಲಿ!

ಸಕಲಸುಕೃತರತ್ನಂ ಸತ್ಯವಾಕ್ಯಾರ್ಥರತ್ನಂ
ಶಮದಮಗುಣರತ್ನಂ ಮುಖ್ಯವೈಕುಂಠರತ್ನಮ್ |
ಪ್ರಣವನಿಲಯರತ್ನಂ ನೀರಜಾಂತಸ್ಥರತ್ನಂ
ಮುನಿಜನಜಪರತ್ನಂ ಪಾತು ಮಾಂ ರಾಮರತ್ನಮ್ ||7||

 ಎಲ್ಲಾ ಪುಣ್ಯಗಳ ಸಾರವಾದ, ಸತ್ಯವಾಕ್ಯದ ಅರ್ಥವೆಂಬ ರತ್ನವಾದ, ಶಮ, ದಮೆ - ಮುಂತಾದ ಗುಣಗಳ ಸಾರವಾದ, ವೈಕುಂಠಲೋಕದ ಮುಖ್ಯವಸ್ತುವಾದ ಓಂಕಾರವೆಂಬ ನಿಲಯದ ರತ್ನವಾದ, (ಹೃದಯವೆಂಬ) ಕಮಲದೊಳಗಿನ ರತ್ನವಾದ, ಮುನಿಜನರು ಜಪಿಸುವ ರತ್ನವಾದ ರಾಮನೆಂಬ ರತ್ನವು ನನ್ನನ್ನು ಕಾಪಾಡಲಿ!

ಕನಕಧಾರಾ ಸ್ತೋತ್ರ - ವಿಶೇಷ - ಹಿನ್ನೆಲೆ

ಕನಕಧಾರಾ ಸ್ತೋತ್ರದ ವಿಶೇಷ - ಹಿನ್ನೆಲೆ

ಶ್ರೀ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಅದ್ವೈತಕೇಸರಿ ಜಗದ್ಗುರು ಶ್ರೀ ಶಂಕರಾಚಾರ್ಯರಿಂದ ವಿರಚಿತವಾದ ಕನಕಧಾರಾ ಸ್ತೋತ್ರವನ್ನು ನಿತ್ಯವೂ ಪಠಿಸುವುದರಿಂದ ನಮ್ಮ ಸಕಲ ಮನೋಕಾಮನೆಗಳು ಪೂರ್ಣಗೊಳ್ಳುವುದರ ಜೊತೆಗೆ ಪ್ರಾಪಂಚಿಕ, ಪಾರಮಾರ್ಥಿಕ ಎರಡೂ ಸಾಧನೆಗಳು ಪೂರ್ಣಗೊಳ್ಳುತ್ತವೆ. ನಮಗೆ ಧನ - ಕನಕ, ಸಿರಿ - ಸಂಪತ್ತು, ಐಶ್ವರ್ಯ, ಯಶಸ್ನು, ಸೌಭಾಗ್ಯ, ವಿಜಯಗಳನ್ನು ದಯಪಾಲಿಸುವ ಮಹಾ ಕಾಮಧೇನು " ಕನಕಧಾರಾ ಸ್ತೋತ್ರ "

 ಭಾಗ್ಯವಂತರ ಮನೆಗಳಲ್ಲಿ ಐಶ್ವರ್ಯ ಸ್ವರೂಪಳಾಗಿ, ಜ್ಞಾನಿಗಳ ಅಂತರಂಗದಲ್ಲಿ ಬುದ್ಧಿಸ್ವರೂಪಳಾಗಿ, ಭಕ್ತರ ಹೃದಯದಲ್ಲಿ ಶ್ರದ್ಧಾ ಸ್ವರೂಪಳಾಗಿ, ಮೋಕ್ಷೇಚ್ಛುಗಳ ಆಂತರ್ಯದಲ್ಲಿ ಮುಕ್ತಿಸ್ವರೂಪಳಾಗಿ ರಾರಾಜಿಸುತ್ತಿರುವ ಮಹಾಲಕ್ಷ್ಮಿಯ ಕರುಣಾ ಕಟಾಕ್ಷ ಶ್ರೀ ಶಂಕರಾಚಾರ್ಯರ ಕೃಪಾಶೀರ್ವಾದದಿಂದ ಚಿನ್ನದ ಮಳೆಯನ್ನೇ ಕರೆದ ಮಹಾಸ್ತೋತ್ರವೇ " ಕನಕಧಾರಾ ಸ್ತೋತ್ರ ". ಅದರ ಹಿನ್ನೆಲೆ ಹೀಗೆದೆ.

 ಪರಮಹಂಸ ಪರಿವ್ರಾಜಕ ಶ್ರೀ ಶಂಕರಭಗವತ್ಪಾದರು ಸನ್ಯಾಸಿಗಳಾದ್ದರಿಂದ ಮಧುಕರ ( ಭಿಕ್ಷೆ ) ವೃತ್ತಿಯನ್ನು ಅನುಸರಿಸುತ್ತಿದ್ದರು. ತಮ್ಮ ದಿಗ್ವಿಜಯ ಸಂಚಾರ ಕಾಲದಲ್ಲಿ ಒಮ್ಮೆ ಕೇರಳದ ಕುಗ್ರಾಮವೋಂದಕ್ಕೆ ಬರುತ್ತಾರೆ. ತಮ್ಮ ಶಿಷ್ಯರೊಡಗೂಡಿ

 ದೈವಭಕ್ತನಾದ ಒಬ್ಬ ಬಡ ಬ್ರಾಹ್ಮಣನ ಮನೆಯ ಮುಂದೆನಿಂತು, "ಭವತಿ ಭಿಕ್ಷಾಂದೇಹಿ " ಎಂದು ಭಿಕ್ಷೇಯನ್ನು ಬೇಡುತ್ತಾರೆ. ಆ ಬ್ರಾಹ್ಮಣನಾದರೋ ಕಡು ಬಡವ. ಮನೆ ಮಂದಿಗೆ ಊಟಕ್ಕಿಲ್ಲದ ಪರಿಸ್ಥಿತಿ. ಮನೆಗೆ ಭಿಕ್ಷೆಗೆ ಬಂದಿರುವವರು ಮಹಾ ಮಹಿಮರಾದ ಶಂಕರಾಚಾರ್ಯರು. ಬ್ರಾಹ್ಮಣ ತನ್ನ ಹೆಂಡತಿಗೆ ಏನಾದರೂ ಭಿಕ್ಷೆ ಇದ್ದರೆ ಯತಿಗಳಿಗೆ ನೀಡಲು ಹೇಳುತ್ತಾನೆ. ಆ ಸಾದ್ವಿಮಣಿಯೂ ಮಹಾ ದೈವ ಭಕ್ತೆ. ಕೊಡಲು ಮನೆಯಲ್ಲಿ ಏನೂ ಇಲ್ಲ. ಮನೆಗೆ ಬಂದ ಅತಿಥಿ ರೂಪದ ದೇವರನ್ನು ಬರಿಗೈಯಲ್ಲಿ ಕಳುಹಿಸುವುದು ಮಹಾಪಾಪವೆಂದರಿತು, ಮನೆಯಲ್ಲಿ ಹುಡುಕಿದಾಗ, ಒಂದು ಜಲಡಿಯಲ್ಲಿ ಇಟ್ಟಿದ್ದ ಒಣಗಿದ ನೆಲ್ಲಿಕಾಯಿಯೊಂದು ದೊರಕುತ್ತದೆ. ಆ ದಿನ ಆ ಒಣ ನೆಲ್ಲಿ ಕಾಯಿಯ ಪಾನಕ ಮಾಡಿ ಮನೆಯವರ ಹಸಿವು ನೀಗಿಸುವುದೆಮದು ಇಟ್ಟಿದ್ದುದು. ಅದನ್ನೇ ಯತಿಗಳಿಗೆ ನೀಡುವುದೆಂದು ನಿರ್ಧರಿಸುತ್ತಾಳೆ.

 ತನ್ನ ಗುಡಿಸಲು ಮುಂದೆ ಭಿಕ್ಷೆಗಾಗಿ ಕಾಯುತ್ತಿರುವ ಶಂಕರರಿಗೆ ನಮಸ್ಕರಿಸಿ, " ಸ್ವಾಮಿ ನಾವು ಕಡುಬಡವರು, ಮಹಾತ್ಮರಾದ ತಮ್ಮನ್ನು ಉಪಚರಿಸಲು ಮನೆಯಲ್ಲಿ ಏನು ಇಲ್ಲ. ಇದ್ದ ಒಂದು ನೆಲ್ಲಿಕಾಯಿಯನ್ನೇ ತಮಗೆ ಭಕ್ತಿಯಿಂದ ಅರ್ಪಿಸುತ್ತಿದ್ದೇನೆ, ದಯಮಾಡಿ ಸ್ವೀಕರಿಸಿ ಅನುಗ್ರಹಿಸಬೇಕು " ಎಂದು ಕಾಲಿಗೆ ಬೀಳುತ್ತಾಳೆ. ಸಾಕ್ಷಾತ್ ಶಿವನ ಅವತಾರವಾಗಿದ್ದ, ಸರ್ವಜ್ಞರಾದ ಶಂಕರರು, ಆ ಬಡ ಹೆಂಗಸಿನ ತ್ಯಾಗ ಬುದ್ಧಿಯನ್ನೂ, ಭಕ್ತಿಯನ್ನೂ ಮನಗಂಡು ಆ ಕುಟುಂಬದ ಬಡತನವನ್ನು ಹೋಗಲಾಡಿಸಬೇಕೆಂದು ಸಂಕಲ್ಪಮಾಡಿ, ಆಕ್ಷಣವೇ ಜಗನ್ಮಾತೆ ಮಹಾಲಕ್ಷ್ಮಿಯನ್ನು ಕುರಿತು ಸ್ತೋತ್ರವೊಂದನ್ನು ರಚಿಸುತ್ತಾರೆ. ಹಾಗೂ ಮಹಾಲಕ್ಷ್ಮಿಯಲ್ಲಿ ಈ ಬಡ ಕುಟುಂಬವನ್ನು ಉದ್ಧಾರ ಮಾಡಬೇಕೆಂದು ಪ್ರಾರ್ಥಿಸುತ್ತಾರೆ. ಮಹಾಲಕ್ಷ್ಮಿಯ ದಿವ್ಯಾನುಗ್ರಹದಿಂದ ಆ ಬ್ರಾಹ್ಮಣನ ಮನೆಯ ಮುಂದೆ ಬಂಗಾರದ ನೆಲ್ಲಿಕಾಯಿಗಳ ಮಳೆಯೇ ಆಯಿತು. ಆ ಮಹಾಮಹಿಮ ಸ್ತೋತ್ರವೇ " ಕನದಧಾರ ಸ್ತೋತ್ರ ". ಇದನ್ನು 'ಕನಕವೃಷ್ಟಿಸ್ತೋತ್ರ' ವೆಂದೂ ಕರೆಯುವುದುಂಟು. ಶಂಕರಭಗವತ್ಪಾದರ ಪವಾಡ, ಅನುಗ್ರಹಗಳಿಂದ ಬ್ರಾಹ್ಮಣನ ಕುಟುಂಬದವರೆಲ್ಲರೂ ಆನಂದ ತುಂಬಿರಲಾಗುತ್ತಾರೆ. ಶಂಕರರ ಶಿಷ್ಯವೃಂದ ದಿಗ್ಮೂಢವಾಗುತ್ತದೆ. ಬಡ ದಂಪತಿಗಳ ಕಣ್ಣಲ್ಲಿ ಆನಂದಾಶ್ರುಗಳು ದಾರಾಕಾರವಾಗಿ ಹರಿಯುತ್ತದೆ. ಶಂಕರರ ದಿವ್ಯ ಪಾದಗಳಿಗೆರಗಿ ತಮ್ಮನ್ನು ಉದ್ಧಾರ ಮಾಡಿದ್ದಕ್ಕಾಗಿ ಅನಂತ ಭಗವದ್ಭಕ್ತಿ, ಶ್ರದ್ಧೆ, ಶರಣಾಗತಿ, ಆತ್ಮಸಮರ್ಪಣೆಗಳ ಫಲವೇ ಆಗಿದೆ. ಯಾರು ಸರ್ವಶಕ್ತನಾದ ಪರಮಾತ್ಮನಲ್ಲಿ ಶ್ರವಣ, ಕೀರ್ತನ, ಸ್ಮರಣ, ಪದಸೇವನ, ಅರ್ಚನ, ವಂದನ, ದಾಸ್ಯ, ಸುಖ, ಆತ್ಮನಿವೇದನೆ ಗಳೆಂಬ ನವವಿಧ ಭಕ್ತಿಗಳಿಂದ ಪ್ರಾರ್ಥಿಸುತ್ತಾರೋ ಅವರು ಎಂದೂ ನಾಶವಾಗುವುದಿಲ್ಲ ಎಂದು ಸಾರಿ ತಮ್ಮ ವಿಜಯ ಯಾತ್ರೆಯನ್ನು ಮುಂದುವರೆಸುತ್ತಾರೆ.

 ಆಸ್ತಿಕ ಮಹಾಶರರೂ, ಸದ್ಭಕ್ತರೂ ಈ ಮಹಿಮಾನ್ವಿತ "ಕನಕಧಾರಾ ಸ್ತೋತ್ರ"ವನ್ನು ನಿತ್ಯ ಪಠಿಸಿ ಕೃತಕೃತ್ಯರಾಗಲಿ.

ಅಂಗಂ ಹರೇ ಪುಲಕಭೂಷಣಮಾಶ್ರಯಂತೀ ಭೃಂಗಾಗನೇವ ಮುಕುಲಾಭರಣಂ ತಮಾಲಮ್ |
ಅಂಗೀಕೃತಾಖಿಲವಿಭೂತಿರಪಾಂಗಲೀಲಾ ಮಾಂಗಲ್ಯದಾಸ್ತು ಮಮ ಮಂಗಳದೇವತಾಯಾ || 1 ||
ತಮಾಲವೆಂಬ ಮರದ ಆಭರಣಪ್ರಾಯವಾದ ಮೊಗ್ಗನ್ನು ಆಶ್ರಯಿಸಿರುವ ಹೆಣ್ಣುದುಂಬಿಯಂತೆ - ಶ್ರೀ ಮಹಾವಿಷ್ಣುವಿನ ರೋಮಾಂಚಗೊಂಡ ಶರೀರವನ್ನು ಅವಲಂಬಿಸಿರುವ, ಮಂಗಳದೇವತೆಯಾದ ( ಮಹಾಲಕ್ಷ್ಮಿಯ ), ಸಮಸ್ತ ಐಶ್ವರ್ಯಗಳನ್ನೂ ಅಡಗಿಸಿಕೊಂಡಿರುವ ಕುಡಿಗಣ್ಣಿನ ನೋಟಗಳೆಂಬ ಲೀಲೆಯು ನನಗೆ ಮಂಗಳವನ್ನೀಯಲಿ.

ಮುಗ್ಧಾಮುಹುರ್ವಿದಧತೀ ವದನೇ ಮುರಾರೇ |
ಪ್ರೇಮತ್ರಪಾಪ್ರಣೀಹಿತಾನಿ ಗತಾಗತಾನಿ |
ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರಸಂಭವಾಯಾಃ || 2 ||
ಶ್ರೀ ಮಹಾವಿಷ್ಣುವಿನ ಮುಖದ ಕಡೆಗೆ ಪ್ರೇಮಪೂರ್ವಕವಾದ ನಾಚಿಕೆಯಿಂದ ನೋಟವನ್ನು ಬೀರುತ್ತಾ ಹಾಗೂ ಹಿಂದೆಗೆಯುತ್ತಾ ಮುಗ್ದವಾದ ರೀತಿಯಿಂದ ಚಲಿಸುತ್ತಿರುವ ಎರಡು ದೊಡ್ಡನೈದಿಲೆಗಳಂತೆ ಇರುವ - ಹಾಗೂ ಹೂಮಾಲೆಯನ್ನು ನೋಡುತ್ತಿರುವ ದುಂಬಿಯಂತೆ ಇರುವ ಸಾಗರಕನ್ನಿಕೆಯಾದ ಲಕ್ಷ್ಮಿಯ ಕಟಾಕ್ಷಗಳು ನನಗೆ ಐಶ್ವರ್ಯವನ್ನುಂಟು ಮಾಡಲಿ

ಅಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದಂ -
ಆನಂದಕಂದಮನಿಮೇಷಮನಂಗತಂತ್ರಮ್ |
ಅಕೇಕರಸ್ಥಿತಕನೀನಿಕಪಕ್ಷ್ಮನೇತ್ರಮ್
ಭೂತ್ಯೈಭವೇನ್ಮಮ ಭುಜಂಗಶಯಾಂಗನಾಯಾಃ || 3 ||
ಸ್ವಲ್ಪವೇ ಮುಚ್ಚಿದ ಕಣ್ಣುಳ್ಳ ಹಾಗೂ ಆನಂದಭರಿತನೂ ರೆಪ್ಪೆಯಾಡಿಸದವನೂ ಮನ್ಮಥಾವಿಷ್ಟನೂ ಆದ ಮುಕುಂದ - ವಿಷ್ಣುನನ್ನು ಅರಿತವಳಾದ ನಾಗಶಯನನ ಮಡದಿಯಾದ ಲಕ್ಷ್ಮಿಯ ಕುಡಿಗಣ್ಣಿನ ನೋಟವನ್ನು ಅವಲಂಬಿಸಿರುವ ರೆಪ್ಪೆಗಳುಳ್ಳ ನೇತ್ರವು ನನ್ನ ಐಶ್ವರ್ಯ ಸಂವೃದ್ಧಿಗೆ ಕಾರಣವಾಗಲಿ.

ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ
ಹಾರಾವಲೀ ಚ ಹರಿನೀಲಮಣೀ ವಿಭಾತಿ |
ಕಾಮಪ್ರದಾ ಭವತೋಪಿ ಕಟಾಕ್ಷಮಾಲಾ
ಕಲ್ಯಾಣಮಾವಹತು ಮೇ ಕಮಲಲಯಾಯಾಃ || 4 ||
ಮಧುಸೂದನನಾದ ವಿಷ್ಣುವಿನ ತೋಳುಗಳ ನಡುವೆ ಹಾಯ್ದ ಕೌಸ್ತುಭ ರತ್ನವನ್ನು ಆಶ್ರಯಿಸಿರುವ ಹಸಿರುಮಿಶ್ರವಾದ ಎರಡು ನೀಲಮಣಿಗಳುಳ್ಳ ಯಾವ ಹಾರವು ಹೋಳೆಯುತ್ತಿದೆಯೋ, ಮತ್ತು ಭಗವಂತನ ಹಾಗೂ ಕಮಲವಾಸಿನಿಯಾದ ದೇವಿಯ ಕುಡಿಗಣ್ಣುಗಳ ನೋಟಗಳ ಸಾಲು ( ಭಕ್ತರಿಗೆ ) ಇಷ್ಟಾರ್ಥಪ್ರದವಾಗಿ ಶೋಭಿಸುತ್ತಿರುವುದೋ - ಅದು ಸಹ ನನಗೆ ಕಲ್ಯಾಣವನ್ನುಂಟು ಮಾಡಲಿ.

ಕಾಲಾಂಬುದಾಲಿಲಲಿತೋರಸಿ ಕೈಟಭಾರೇ-
ರ್ಧಾರಾಧರಸ್ಫುರತಿ ಯಾ ತಟಿದಂಗನೇವ |
ಮಾತುಃ ಸಮಸ್ತಜಗತಾಂ ಮಹನೀಯಮೂರ್ತಿ
ಭದ್ರಾಣಿ ಮೇ ದಿಶತು ಭಾರ್ಗವನಂದನಾಯಾಃ || 5 ||
ಕೈಟಭಶತೃವಾದ ( ವಿಷ್ಣುವಿನ ) ಕಾಲಮೇಘದಂತೆ ಕಾಂತಿಯುಳ್ಳ ಸುಂದರವಾದ ಎದೆಯಲ್ಲಿ ಮಿಂಚಿನಬಳ್ಳಿಯಂತೆ ಹೊಳೆಯುತ್ತಿರುವ ಖಡ್ಗವಿದೆಯೋ, ಅದರೋಡನೆಯೇ ಎದೆಯಲ್ಲಿ ನೆಲೆಸಿರುವ ಸಮಸ್ತ ಜಗತ್ತಿಗೂ ತಾಯಿಯಾದ ಮಹಾಶ್ರೇಷ್ಠವಾದ ಭಾರ್ಗವಪುತ್ರಿಯ ದಿವ್ಯರೂಪವು ನನಗೆ ಮಂಗಳವನ್ನುಂಟು ಮಾಡಲಿ.

ಪ್ರಾಪ್ತಂ ಪದಂ ಪ್ತಥಮತಃ ಖಲು ಯತ್ಪ್ರಭಾವಾತ್
ಮಾಂಗಲ್ಯಭಾಜಿ ಮಧುಮಾಥಿನಿ ಮನ್ಮಥೇನ |
ಮಯ್ಯಾಪತೇತ್ತದಿಹ ಮಂದರಮೀಕ್ಷಣಾರ್ಥಂ
ಮಂದಾಲಸಾಕ್ಷಿ ಮಕರಾಕರಕನ್ಯಕಾಯಾಃ || 6 ||
ಯಾವ ದೇವಿಯ ಅನುಗ್ರಹ ದೃಷ್ಟಿಯಿಂದ ಮಧುಸೂದನನಲ್ಲಿ ಸ್ಥಾನವು ಮೊದಲ ಬಾರಿಗೆ ಮಂಗಳಕರವಾಗಿ ಮನ್ಮಥನಿಗೆ ದೊರಕಿತೋ ( ಆ ದೇವಿಯ ), ಸಮುದ್ರರಾಜನ ಕನ್ಯೆಯಾದ ಲಕ್ಷ್ಮಿಯ ಕಟಾಕ್ಷವು ಅಲ್ಪವಾಗಿಯಾದರೂ ಮೆಲ್ಲ ಮೆಲ್ಲನೆ ನನ್ನ ಮೇಲೆ ಹರಿಯುವಂತಾಗಲಿ.

ವಿಶ್ವಾಮರೇಂದ್ರಪದವಿಭ್ರಮದಾನದಕ್ಷ ಮಾನಂದಹೇತುರಧಿಕಂ ಮಧವಿದ್ವಿಷೋಪಿ |
ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಧ ಮಿಂದೀವರೋದರಸಹೋದರಮಿಂದಿರಾಯಾಃ || 7 ||
ಸಮಸ್ತದೇವತಾಶ್ರೇಷ್ಠರ ಪದವಿಗಳೆಂಬ ಸೌಭಾಗ್ಯವನ್ನು ಕೊಡುವದರಲ್ಲಿ ಸಮರ್ಥವಾದ, ಮತ್ತು ಮಧುಸೂದನನಿಗೂ ಹೆಚ್ಚಿನ ಆನಂದಕಾರಣವಾದ, ಕಮಲದ ಗರ್ಭದಂತೆ ಮೃದುವಾದ ಇಂದಿರಾದೇವಿಯ ಕಣ್ಣಿನ ನೋಟದ ಅರ್ಧ ಭಾಗದಲ್ಲಿ ಒಂದಿಷ್ಟಾದರೂ ನನ್ನಲ್ಲಿ ನೆಲೆಗೊಳ್ಳಲಿ.

ಇಷ್ಟಾವಿಶಿಷ್ಟಮತಯೋಪಿನರಾಯಯಾ ದ್ರಾಗ್ ದೃಷ್ಟಾಸ್ತ್ರಿವಿಷ್ಟಪದಂ ಸುಲಭಂ ಲಭಂತೇ |
ದೃಷ್ಟಿಃ ಪ್ರಹೃಷ್ಟಕಮಲೋದರದೀಪ್ತಿರೀಷ್ಟಾಂ ಪುಷ್ಟಿಂ ಕೃಪೀಷ್ಟಮಮ ಪುಷ್ಕರವಿಷ್ಟರಾಯಾಃ || 8 ||
ವಿಶೇಷವಾದ ಪಾಂಡಿತ್ಯವುಳ್ಳ (ದೇವಿಗೆ) ಪ್ರಿಯರಾದ ಮನಷ್ಯರಾರೂ ಒಮ್ಮೆ ದೇವಿಯ ದೃಷ್ಟಿಗೆ ಪಾತ್ರರಾದದ್ದೇ ಆದರೆ ಸುಲಭವಾಗಿ ಸ್ವರ್ಗಪದವಿಯನ್ನು ಹೊಂದುವರು. ಅರಳಿದ ಕಮಲದ ಒಳಭಾಗದಂತೆ ಕಾಂತಿಯುಳ್ಳ, ಕಮಲಾಸನೆಯಾದ ದೇವಿಯ ಅಂಥ ದೃಷ್ಟಿಯ ನನಗೆ ಪುಷ್ಟಿಯನ್ನುಂಟುಮಾಡಲಿ.

ದದ್ಯಾದ್ದಯಾನುಪವನೋ ದ್ರವಿಣಾಂಬುಧಾರಾ ಮಸ್ಮಿನ್ನ ಕಿಂಚನ ವಿಹಂಗಶಿಶೌ ವಿಷಣ್ಣೇ |
ದುಷ್ಕರ್ಮಘರ್ಮಮಪನೀಯ ಚಿರಾಯ ದೂರಾನ್ನಾರಾಯಣಪ್ರಣಯಿನೀನಯನಾಂಬುವಾಹಃ || 9 ||
ನಾರಾಯಣನ ಪ್ರಿಯೆಯಾದ ದೇವಿಯ ಕಟಾಕ್ಷಪ್ರವಾಹವು ಕೆಟ್ಟ ಕರ್ಮಗಳೆಂಬ ಬಿಸಿಲನ್ನು ನಿತ್ಯವಾಗಿ ದೂರವಾಗಿ ತೊಡೆದುಹಾಕಿ ವಿಷಾದದಿಂದ ಕೂಡಿರುವ ದರಿದ್ರವೆಂಬ ಪಕ್ಷಿಯ ಮರಿಯಾದ (ನನ್ನಲ್ಲಿ ) ದಯೆಯಿಟ್ಟು ಕೃಪೆಯಿಂದ ಗಾಳಿಯಿಂದ ಪ್ರೇರಿಸಲ್ಪಟ್ಟ ಐಶ್ವರ್ಯವೆಂಬ ಮಳೆಯ ಧಾರೆಯುನ್ನುಂಟುಮಾಡಲಿ.

ಗೀರ್ದೇವತೇತಿ ಗರುಡಧ್ವಜಸುಂದರೀತಿ ಶಾಕಂಭರೀತಿ ಶಶಿಶೇಖರವಲ್ಲಭೇತಿ |
ಸೃಷ್ಟಿಸ್ಥಿತಿಪ್ರಲಯಕೇಲಿಷು ಸಂಸ್ಥಿತಾಯೈ ತಸ್ಮೈ ನಮಸ್ತ್ರಿಭುವನೈಕಗುರೋಸ್ತರುಣ್ಯೈ || 10 ||
ವಾಗ್ಧೇವಿಯೆಂದೂ ಗರುಡಧ್ವಜನಾದ ವಿಷ್ಣುವಿನ ಪ್ರಿಯಳೆಂದೂ ಶಾಖಂಬರಿಯೆಂದೂ ಚಂದ್ರಶೇಖರನಾದ ಶಿವನ ಪತ್ನಿಯೆಂದೂ ಆಯಾ ಕಾಲಕ್ಕೆ ಎಂದರೆ ಸೃಷ್ಟಿ-ಸ್ಥಿತಿ-ಸಂಹಾರ ಲೀಲೆಗಳಲ್ಲಿ ತೋರಿಕೊಂಡಿರುವವಳಾದ, ಮೂರು ಲೋಕಕ್ಕೂ ಗುರುವಾದ ಶ್ರೀ ಮನ್ನಾರಾಯಣನ ಮಡದಿಯಾದ ಅಕೆಗೆ ವಂದನೆಗಳು.

ಶ್ರುತ್ಯೈಸಮೋಸ್ತು ಶುಭಕರ್ಮಫಲಪ್ರಸೂತ್ಯೈ ರತ್ಯೈ ನಮೋಸ್ತು ರಮಣೀಯಗುಣಾಶ್ರಯಾಯೈ |
ಶಕ್ತ್ಯೈ ನಮೋಸ್ತು ಶತಪತ್ರನಿಕೇತನಾಯೈ ಪುಷ್ಪೈ ನಮೋಸ್ತು ಪುರುಷೋತ್ತಮವಲ್ಲಭಾಯೈ || 11 ||
ಶುಭಕರ್ಮಗಳ ಫಲವನ್ನು ಉಂಟುಮಾಡುವ ಶ್ರುತಿರೂಪಳಾದ ದೇವಿಗೆ ನಮಸ್ಕಾರವು. ರಮಣೀಯವಾದ ಗುಣಗಳಿಗೆ ಆಶ್ರಯಳಾದ ರತತಿಗೆ ನಮಸ್ಕಾರಗಳು. ಕಮಲನಿವಾಸಿನಿಯಾದ ಶಕ್ತಿರೂಪಳಾದ ಲಕ್ಷ್ಮಿಗೆ ನಮಸ್ಕಾರಗಳು. ಪುರುಷೋತ್ತಮನ ಪತ್ನಿಯಾದ ಪುಷ್ಪಿದೇವಿಗೆ ನಮಸ್ಕಾರಗಳು.

ನಮೋಸ್ತು ನಾಲಿಕನಿಭಾನನಾಯೈ ನಮೋಸ್ತು ದಿಗ್ಧೋದಧಿಜನ್ಮಭೂಮ್ಯೈ |
ನಮೋಸ್ತು ಸೋಮಾಮೃತಸೋದರಾಯೈ ನಮೋಸ್ತು ನಾರಾಯಣವಲ್ಲಭಾಯೈ || 12 ||
ಕಮಲದಂತೆ ಸುಂದರವಾದ ಮುಖವುಳ್ಳ ದೇವಿಗೆ ನಮಸ್ಕಾರ. ಕ್ಷೀರಸಮುದ್ರವನ್ನು ಜನ್ಮಸ್ಥಾನವಾಗಿ ಹೊಂದಿರುವವಳಿಗೆ ನಮಸ್ಕಾರ. ಸಮುದ್ರಮಂಥನ ಕಾಲದಲ್ಲಿಯೇ ( ಲಕ್ಷ್ಮಿಯೊಡನೆ ) ಹುಟ್ಟಿದ ಚಂದ್ರ ಹಾಗೂ ಅಮೃತಗಳಿಗೆ ಸೋದರಿಯಾದವಳಿಗೆ ನಮಸ್ಕಾರ ನಾರಾಯಣನ ವಲ್ಲಭೆಗೆ ವಂದನೆಗಳು.

ನಮೋಸ್ತು ಹೇಮಾಂಭುಜಪೀಠಕಾಯೈ ನಮೋಸ್ತು ಭೂಮಂಡಲನಾಯಿಕಾಯೈ |
ನಮೋಸ್ತು ದೇವಾದಿದಯಾಪರಾಯೈ ನಮೋಸ್ತು ಶಾರ್ಙ್ಗೌಯುಧವಲ್ಲಭಾಯೈ || 13 ||
ಸುವರ್ಣಕಮಲಪೀಠವಾಸಿನಿಯಾದ, ಭೂಮಂಡಲಕ್ಕೆಲ್ಲ ಒಡೆಯಳಾದ, ದೇವಾದಿ ಸಮಸ್ತ ಜೀವಿಗಳಲ್ಲಿಯೂ ದಯೆಯುಳ್ಳ ಮತ್ತು ಶಾರ್ಙ್ಗವೆಂಬ ಬಿಲ್ಲನ್ನು ಧರಿಸಿರುವ ವಿಷ್ಣುವಿನ ಪತ್ನಿಯಾದ ದೇವಿಗೆ ನಮಸ್ಕಾರಗಳು.

ನಮೋಸ್ತು ದೇವ್ಯೈ ಭೃಗುನಂದನಾಯೈ ನಮೋಸ್ತು ವಿಷ್ಣೋರುರಸಿ ಸ್ಥಿತಾಯೈ |
ನಮೋಸ್ತು ಲಕ್ಷ್ಮೈ ಕಮಲಾಲಯಾಯೈ ನಮೋಸ್ತು ದಾಮೋದರವಲ್ಲಭಾಯೈ || 14 ||
ಭೃಗುಪುತ್ರಿಯಾದ ದೇವಿಗೆ, ವಿಷ್ಣವಿನ ಹೃದಯವಾಸಿನಿಯಾದವಳಿಗೆ, ಕಮಲವಾಸಿನಿಯಾದ ಲಕ್ಷ್ಮಿಗೆ, ದಾಮೋದರನ ಪತ್ನಿಯಾದ ಮಹಾದೇವಿಗೆ ವಂದನೆಗಳು.

ನಮೋಸ್ತು ಕಾಂತ್ಯೈ ಕಮಲೇಕ್ಷಣಾಯೈ ನಮೋಸ್ತು ಭೂತ್ಯೈ ಭವನಪ್ರಸೂತ್ಯೈ |
ನಮೋಸ್ತು ದೇವಾದಿಭಿರರ್ಚಿತಾಯೈ ನಮೋಸ್ತು ನಂದಾತ್ಮಜವಲ್ಲಭಾಯೈ || 15 ||
ಕಮಲದಂತೆ ಕಂಗಳುಳ್ಳ ಪ್ರಕಾಶಮಾನಳಾದವಳಿಗೂ, ಜಗತ್ತನ್ನು ಹಡೆದಿರುವ ಮಹಿಮಾವಂತಳಿಗೂ ದೇವತೆಗಳೇ ಮೊದಲಾದವರಿಂದ ಪೂಜಿಸಲ್ಪಟ್ಟವಳಿಗೂ ನಂದಗೋಪನ ಮಜಗಳಾದ ದುರ್ಗೆಗೆ ಪ್ರಿಯಳಾಗಿಯೂ ಇರುವ ಮಹಾಲಕ್ಷ್ಮಿಗೆ ನಮಸ್ಕಾರಗಳು.

ಸಂಪತ್ಕರಾಣಿ ಸಕಲೇಂದ್ರಿಯ ನಂದನಾನಿ ಸಾಮ್ರಾಜ್ಯದಾನವಿಭವಾನಿ ಸರೋರುಹಾಣಿ |
ತ್ವದ್ವಂದನಾನಿ ದುರಿತಾಹರಣೋದ್ಯತಾನಿ ಮೂಮೇವ ಮಾತರನಿಶಂ ಕಲಯಂತು ಮಾನ್ಯೇ || 16 ||
ಸಂಪತ್ತುಗಳನ್ನು ನೀಡುವ, ಎಲ್ಲಾ ಇಂದ್ರಿಯಗಳಿಗೂ ಆನಂದವನ್ನುಂಟುಮಾಡುವ, ಸಾಮ್ರಾಜ್ಯ ಪದವಿಯನ್ನು ದಯಪಾಲಿಸುವ ನಿನ್ನ ಪಾದಕಮಲಗಳನ್ನು ನಮಸ್ಕರಿಸುವಿಕೆಯು ಸಕಲ ಪಾಪಗಳನ್ನೂ ಕಳೆಯುವುದರಲ್ಲಿ ಮುಂದಾಗಿರುವವು. ಎಲೌ ತಯೆ, ಮಾನನೀಯಳೆ, ಆ ವಂದನೆಗಳು ಯಾವಾಗಲೂ ನನಗೆ ಸಂಭವಿಸುತ್ತಿರಲಿ.

ಯತ್ಕಟಾಕ್ಷಸಮುಪಾಸನಾವಿಧಿಃ ಸೇವಕಸ್ಯ ಸಕಲಾರ್ಥಸಂಪದಃ |
ಸಂತನೋತಿ ವಚನಾಂಗಮಾನಸೈಸ್ತ್ವಾಂ ಮುರಾರಿಹೃದಯೇಶ್ವರೀಂ ಭಜೇ || 17 ||
ಯಾವ ದೇವಿಯ ಕುಡಿಗಣ್ಣಿನ ನೋಟದ ಚಿಂತನೆಯು ಸೇವಕನಾದ ಭಕ್ತನಿಗೆ ಸಮಸ್ತ ಇಷ್ಟಾರ್ಥಗಳನ್ನೂ ಕೊಡುವುದೋ ಅಂಥ, ಮರಾರಿಯಾದ ನಾರಾಯಣನ ಹೃದಯೇಶ್ವರಿಯಾದ ನಿನ್ನನ್ನು ಕಾಯೇನ-ಮನಸಾ-ವಾಚಾ ( ತ್ರಿಕರಣಗಳಿಂದಲೂ) ಭಜಿಸುವೆನು.

ಸರಸಿಜನಯನೇ ಸರೋಜಹಸ್ತೇ ಧವಲತಮಾಂಶುಕಗಂಧಮಾಲ್ಯಶೋಭೇ |
ಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್ || 18 ||
ಕಮಲದಂತೆ ಕಣ್ಣುಳ್ಳವಳೆ, ಕೈಯಲ್ಲಿ ಕಮಲವನ್ನು ಹಿಡಿದಿರುವವಳೆ, ಅತ್ಯಂತ ಶುಭ್ರವಾದ ವಸ್ತ್ರ, ಗಂಧ, ಹೂಮಾಲೆಗಳಿಂದ ಶೋಭಿಸುತ್ತಿರುವವಳೆ, ಪೂಜ್ಯಳೆ, ಶ್ರೀಹರಿಯ ಪ್ರಿಯಳೆ, ಮನೋಜ್ಞಳೆ, ಮೂರು ಲೋಕಗಳ ಐಶ್ವರ್ಯಗಳ ಐಶ್ವರ್ಯವನ್ನು ಕೊಡುವವಳೆ, ನನಗೆ ಪ್ರಸನ್ನಳಾಗು.

ದಿಗ್ ಹಸ್ತಿಭಿಃ ಕನಕಕುಂಭಮುಖಾವಸೃಷ್ಟ-
ಸ್ವರ್ವಾಹಿನೀವಿಮಲಚಾರುಜಲಾಪ್ಲುತಾಂಗೀಮ |
ಪ್ರಾತರ್ನಮಾಮಿ ಜಗತಾಂ ಜನನೀಮಶೇಷ-
ಲೋಕಾಧಿನಾಥಗೃಹಿಣೀಮಮೃತಾಬ್ಧಿಪುತ್ರೀಮ್ || 19 ||
ದಿಗ್ಗಜಗಳ ( ಸೊಂಡಿಲುಗಳಲ್ಲಿರುವ) ಚಿನ್ನದ ಕಲಶಗಳ ಬಾಯಿಂದ ಸುರಿಯಲ್ಪಟ್ಟ ಆಕಾಶಗಂಗೆಯ ದಿವ್ಯಜಲದಿಂದ ತೋಯಿಸಲ್ಪಟ್ಟ ಶರೀರವುಳ್ಳವಳೂ, ಜಗತ್ತಿಗೇ ತಾಯಿಯೂ, ಸಮಸ್ತ ಲೋಕಗಳ ಒಡೆಯನಾದ ( ವಿಷ್ಣುವಿನ ) ಪತ್ನಿಯೂ, ಅಮೃತಸಮುದ್ರರಜನ ಮಗಳೂ ಆದ ದೇವಿಯನ್ನು ನಾನು ಪ್ರಾತಃಕಾಲದಲ್ಲಿ ವಂದಿಸುವೆನು.

ಕಮಲೇ ಕಮಲಾಕ್ಷವಲ್ಲಭೇ ತ್ವಂ ಕರುಣಾಪೂರತರಂಗಿತೈರಪಾಂಗೈಃ |
ಅವಲೋಕಯ ಮಾಮಕಿಂಚನಾನಾಂ ಪ್ರಥಮಂ ಪಾತ್ರಮಕೃತ್ರಿಮಂ ದಯಾಯಾಃ || 20 ||
ಎಲೌ ಕಮಲಾದೇವಿಯ, ಕಮಲನಯನನಾದ ವಿಷ್ಣುವಿನ ಪ್ರಿಯಳೆ, ನೀನು ಕರುಣೆಯಿಂದ ತುಂಬಿದ ಚಂಚಲವಾದ ಕುಡಿನೋಡಗಳಿಂದ ನನ್ನನ್ನು ನೋಡುವವಳಾಗು. ದರಿದ್ರದಲ್ಲಿ ಮೊದಲಿಗನೂ ದಯೆತೋರಬೇಕಾದವರ ಗುಂಪಿನಲ್ಲಿ ಅರ್ಹನೂ ಕಪಟವಿಲ್ಲದವನೂ ನಾನಾಗಿರುವೆನಷ್ಟೆ?

ಸ್ತುವಂತಿ ಯೇ ಸ್ತುತಿಭಿರಮೀಭಿರನ್ವಹಂ ತ್ರಯೀಮಯೀಂ ತ್ರಿಭುವನಮಾತರಂ ರಮಾಮ್ |
ಗುಣಾಧಿಕಾ ಗುರುತರಭಾಗ್ಯಭಾಜಿನೋ ಭವಂತಿ ತೇ ಭುವಿ ಬುಧಭಾವಿತಾಶಯಾಃ || 21 ||
ಯಾರು ಈ ದಿವ್ಯ ಸ್ತುತಿಗಳಿಂದ ವೇದಮಯಳೂ, ಮೂರು ಲೋಕಗಳ ತಾಯಿಯೂ ಆದ ರಮಾದೇವಿಯನ್ನು ಸ್ತೋತ್ರ ಮಾಡುವರೋ ಅವರು ಈ ಭೂಲೋಕದಲ್ಲಿ ಗುಣಸಂಪನ್ನರೂ ಅತ್ಯಧಿಕವಾದ ಐಶ್ವರ್ಯಯುಕ್ತರೂ, ವಿದ್ವಾಂಸರಿಂದ ಗೌರವಿಸಲ್ಪಡುವವರೂ ಆಗಿ ಸುಖಿಸುವರು.
|| ಇತಿ ಶ್ರೀ ಜಗದ್ಗುರು ಆದಿಶಂಕರಾಚಾರ್ಯ ವಿರಚಿತ ಕನಕಧಾರಾ ಸ್ತೋತ್ರಂ ಸಂಪೂರ್ಣಂ ||

ಅವಧೂತಗೀತಾ

#ಅವಧೂತ_ಗೀತಾ

ಅಥ ಪ್ರಥಮೋಽಧ್ಯಾಯಃ ॥

ಈಶ್ವರಾನುಗ್ರಹಾದೇವ ಪುಂಸಾಮದ್ವೈತವಾಸನಾ ।
ಮಹದ್ಭಯಪರಿತ್ರಾಣಾದ್ವಿಪ್ರಾಣಾಮುಪಜಾಯತೇ ॥ 1॥

ಯೇನೇದಂ ಪೂರಿತಂ ಸರ್ವಮಾತ್ಮನೈವಾತ್ಮನಾತ್ಮನಿ ।
ನಿರಾಕಾರಂ ಕಥಂ ವಂದೇ ಹ್ಯಭಿನ್ನಂ ಶಿವಮವ್ಯಯಮ್ ॥ 2॥

ಪಂಚಭೂತಾತ್ಮಕಂ ವಿಶ್ವಂ ಮರೀಚಿಜಲಸನ್ನಿಭಮ್ ।
ಕಸ್ಯಾಪ್ಯಹೋ ನಮಸ್ಕುರ್ಯಾಮಹಮೇಕೋ ನಿರಂಜನಃ ॥ 3॥

ಆತ್ಮೈವ ಕೇವಲಂ ಸರ್ವಂ ಭೇದಾಭೇದೋ ನ ವಿದ್ಯತೇ ।
ಅಸ್ತಿ ನಾಸ್ತಿ ಕಥಂ ಬ್ರೂಯಾಂ ವಿಸ್ಮಯಃ ಪ್ರತಿಭಾತಿ ಮೇ ॥ 4॥

ವೇದಾಂತಸಾರಸರ್ವಸ್ವಂ ಜ್ಞಾನಂ ವಿಜ್ಞಾನಮೇವ ಚ ।
ಅಹಮಾತ್ಮಾ ನಿರಾಕಾರಃ ಸರ್ವವ್ಯಾಪೀ ಸ್ವಭಾವತಃ ॥ 5॥

ಯೋ ವೈ ಸರ್ವಾತ್ಮಕೋ ದೇವೋ ನಿಷ್ಕಲೋ ಗಗನೋಪಮಃ ।
ಸ್ವಭಾವನಿರ್ಮಲಃ ಶುದ್ಧಃ ಸ ಏವಾಯಂ ನ ಸಂಶಯಃ ॥ 6॥

ಅಹಮೇವಾವ್ಯಯೋಽನಂತಃ ಶುದ್ಧವಿಜ್ಞಾನವಿಗ್ರಹಃ ।
ಸುಖಂ ದುಃಖಂ ನ ಜಾನಾಮಿ ಕಥಂ ಕಸ್ಯಾಪಿ ವರ್ತತೇ ॥ 7॥

ನ ಮಾನಸಂ ಕರ್ಮ ಶುಭಾಶುಭಂ ಮೇ
     ನ ಕಾಯಿಕಂ ಕರ್ಮ ಶುಭಾಶುಭಂ ಮೇ ।
ನ ವಾಚಿಕಂ ಕರ್ಮ ಶುಭಾಶುಭಂ ಮೇ
     ಜ್ಞಾನಾಮೃತಂ ಶುದ್ಧಮತೀಂದ್ರಿಯೋಽಹಮ್ ॥ 8॥

ಮನೋ ವೈ ಗಗನಾಕಾರಂ ಮನೋ ವೈ ಸರ್ವತೋಮುಖಮ್ ।
ಮನೋಽತೀತಂ ಮನಃ ಸರ್ವಂ ನ ಮನಃ ಪರಮಾರ್ಥತಃ ॥ 9॥

ಅಹಮೇಕಮಿದಂ ಸರ್ವಂ ವ್ಯೋಮಾತೀತಂ ನಿರಂತರಮ್ ।
ಪಶ್ಯಾಮಿ ಕಥಮಾತ್ಮಾನಂ ಪ್ರತ್ಯಕ್ಷಂ ವಾ ತಿರೋಹಿತಮ್ ॥ 10॥

ತ್ವಮೇವಮೇಕಂ ಹಿ ಕಥಂ ನ ಬುಧ್ಯಸೇ
     ಸಮಂ ಹಿ ಸರ್ವೇಷು ವಿಮೃಷ್ಟಮವ್ಯಯಮ್ ।
ಸದೋದಿತೋಽಸಿ ತ್ವಮಖಂಡಿತಃ ಪ್ರಭೋ
     ದಿವಾ ಚ ನಕ್ತಂ ಚ ಕಥಂ ಹಿ ಮನ್ಯಸೇ ॥ 11॥

ಆತ್ಮಾನಂ ಸತತಂ ವಿದ್ಧಿ ಸರ್ವತ್ರೈಕಂ ನಿರಂತರಮ್ ।
ಅಹಂ ಧ್ಯಾತಾ ಪರಂ ಧ್ಯೇಯಮಖಂಡಂ ಖಂಡ್ಯತೇ ಕಥಮ್ ॥ 12॥

ನ ಜಾತೋ ನ ಮೃತೋಽಸಿ ತ್ವಂ ನ ತೇ ದೇಹಃ ಕದಾಚನ ।
ಸರ್ವಂ ಬ್ರಹ್ಮೇತಿ ವಿಖ್ಯಾತಂ ಬ್ರವೀತಿ ಬಹುಧಾ ಶ್ರುತಿಃ ॥ 13॥

ಸ ಬಾಹ್ಯಾಭ್ಯಂತರೋಽಸಿ ತ್ವಂ ಶಿವಃ ಸರ್ವತ್ರ ಸರ್ವದಾ ।
ಇತಸ್ತತಃ ಕಥಂ ಭ್ರಾಂತಃ ಪ್ರಧಾವಸಿ ಪಿಶಾಚವತ್ ॥ 14॥

ಸಂಯೋಗಶ್ಚ ವಿಯೋಗಶ್ಚ ವರ್ತತೇ ನ ಚ ತೇ ನ ಮೇ ।
ನ ತ್ವಂ ನಾಹಂ ಜಗನ್ನೇದಂ ಸರ್ವಮಾತ್ಮೈವ ಕೇವಲಮ್ ॥ 15॥

ಶಬ್ದಾದಿಪಂಚಕಸ್ಯಾಸ್ಯ ನೈವಾಸಿ ತ್ವಂ ನ ತೇ ಪುನಃ ।
ತ್ವಮೇವ ಪರಮಂ ತತ್ತ್ವಮತಃ ಕಿಂ ಪರಿತಪ್ಯಸೇ ॥ 16॥

ಜನ್ಮ ಮೃತ್ಯುರ್ನ ತೇ ಚಿತ್ತಂ ಬಂಧಮೋಕ್ಷೌ ಶುಭಾಶುಭೌ ।
ಕಥಂ ರೋದಿಷಿ ರೇ ವತ್ಸ ನಾಮರೂಪಂ ನ ತೇ ನ ಮೇ ॥ 17॥

ಅಹೋ ಚಿತ್ತ ಕಥಂ ಭ್ರಾಂತಃ ಪ್ರಧಾವಸಿ ಪಿಶಾಚವತ್ ।
ಅಭಿನ್ನಂ ಪಶ್ಯ ಚಾತ್ಮಾನಂ ರಾಗತ್ಯಾಗಾತ್ಸುಖೀ ಭವ ॥ 18॥

ತ್ವಮೇವ ತತ್ತ್ವಂ ಹಿ ವಿಕಾರವರ್ಜಿತಂ
     ನಿಷ್ಕಂಪಮೇಕಂ ಹಿ ವಿಮೋಕ್ಷವಿಗ್ರಹಮ್ ।
ನ ತೇ ಚ ರಾಗೋ ಹ್ಯಥವಾ ವಿರಾಗಃ
     ಕಥಂ ಹಿ ಸಂತಪ್ಯಸಿ ಕಾಮಕಾಮತಃ ॥ 19॥

ವದಂತಿ ಶ್ರುತಯಃ ಸರ್ವಾಃ ನಿರ್ಗುಣಂ ಶುದ್ಧಮವ್ಯಯಮ್ ।
ಅಶರೀರಂ ಸಮಂ ತತ್ತ್ವಂ ತನ್ಮಾಂ ವಿದ್ಧಿ ನ ಸಂಶಯಃ ॥ 20॥

ಸಾಕಾರಮನೃತಂ ವಿದ್ಧಿ ನಿರಾಕಾರಂ ನಿರಂತರಮ್ ।
ಏತತ್ತತ್ತ್ವೋಪದೇಶೇನ ನ ಪುನರ್ಭವಸಂಭವಃ ॥ 21॥

ಏಕಮೇವ ಸಮಂ ತತ್ತ್ವಂ ವದಂತಿ ಹಿ ವಿಪಶ್ಚಿತಃ ।
ರಾಗತ್ಯಾಗಾತ್ಪುನಶ್ಚಿತ್ತಮೇಕಾನೇಕಂ ನ ವಿದ್ಯತೇ ॥ 22॥

ಅನಾತ್ಮರೂಪಂ ಚ ಕಥಂ ಸಮಾಧಿ-
     ರಾತ್ಮಸ್ವರೂಪಂ ಚ ಕಥಂ ಸಮಾಧಿಃ ।
ಅಸ್ತೀತಿ ನಾಸ್ತೀತಿ ಕಥಂ ಸಮಾಧಿ-
     ರ್ಮೋಕ್ಷಸ್ವರೂಪಂ ಯದಿ ಸರ್ವಮೇಕಮ್ ॥ 23॥

ವಿಶುದ್ಧೋಽಸಿ ಸಮಂ ತತ್ತ್ವಂ ವಿದೇಹಸ್ತ್ವಮಜೋಽವ್ಯಯಃ ।
ಜಾನಾಮೀಹ ನ ಜಾನಾಮೀತ್ಯಾತ್ಮಾನಂ ಮನ್ಯಸೇ ಕಥಮ್ ॥ 24॥

ತತ್ತ್ವಮಸ್ಯಾದಿವಾಕ್ಯೇನ ಸ್ವಾತ್ಮಾ ಹಿ ಪ್ರತಿಪಾದಿತಃ ।
ನೇತಿ ನೇತಿ ಶ್ರುತಿರ್ಬ್ರೂಯಾದನೃತಂ ಪಾಂಚಭೌತಿಕಮ್ ॥ 25॥

ಆತ್ಮನ್ಯೇವಾತ್ಮನಾ ಸರ್ವಂ ತ್ವಯಾ ಪೂರ್ಣಂ ನಿರಂತರಮ್ ।
ಧ್ಯಾತಾ ಧ್ಯಾನಂ ನ ತೇ ಚಿತ್ತಂ ನಿರ್ಲಜ್ಜಂ ಧ್ಯಾಯತೇ ಕಥಮ್ ॥ 26॥

ಶಿವಂ ನ ಜಾನಾಮಿ ಕಥಂ ವದಾಮಿ
     ಶಿವಂ ನ ಜಾನಾಮಿ ಕಥಂ ಭಜಾಮಿ ।
ಅಹಂ ಶಿವಶ್ಚೇತ್ಪರಮಾರ್ಥತತ್ತ್ವಂ
     ಸಮಸ್ವರೂಪಂ ಗಗನೋಪಮಂ ಚ ॥ 27॥

ನಾಹಂ ತತ್ತ್ವಂ ಸಮಂ ತತ್ತ್ವಂ ಕಲ್ಪನಾಹೇತುವರ್ಜಿತಮ್ ।
ಗ್ರಾಹ್ಯಗ್ರಾಹಕನಿರ್ಮುಕ್ತಂ ಸ್ವಸಂವೇದ್ಯಂ ಕಥಂ ಭವೇತ್ ॥ 28॥

ಅನಂತರೂಪಂ ನ ಹಿ ವಸ್ತು ಕಿಂಚಿ-
     ತ್ತತ್ತ್ವಸ್ವರೂಪಂ ನ ಹಿ ವಸ್ತು ಕಿಂಚಿತ್ ।
ಆತ್ಮೈಕರೂಪಂ ಪರಮಾರ್ಥತತ್ತ್ವಂ
     ನ ಹಿಂಸಕೋ ವಾಪಿ ನ ಚಾಪ್ಯಹಿಂಸಾ ॥ 29॥

ವಿಶುದ್ಧೋಽಸಿ ಸಮಂ ತತ್ತ್ವಂ ವಿದೇಹಮಜಮವ್ಯಯಮ್ ।
ವಿಭ್ರಮಂ ಕಥಮಾತ್ಮಾರ್ಥೇ ವಿಭ್ರಾಂತೋಽಹಂ ಕಥಂ ಪುನಃ ॥ 30॥

ಘಟೇ ಭಿನ್ನೇ ಘಟಾಕಾಶಂ ಸುಲೀನಂ ಭೇದವರ್ಜಿತಮ್ ।
ಶಿವೇನ ಮನಸಾ ಶುದ್ಧೋ ನ ಭೇದಃ ಪ್ರತಿಭಾತಿ ಮೇ ॥ 31॥

ನ ಘಟೋ ನ ಘಟಾಕಾಶೋ ನ ಜೀವೋ ಜೀವವಿಗ್ರಹಃ ।
ಕೇವಲಂ ಬ್ರಹ್ಮ ಸಂವಿದ್ಧಿ ವೇದ್ಯವೇದಕವರ್ಜಿತಮ್ ॥ 32॥

ಸರ್ವತ್ರ ಸರ್ವದಾ ಸರ್ವಮಾತ್ಮಾನಂ ಸತತಂ ಧ್ರುವಮ್ ।
ಸರ್ವಂ ಶೂನ್ಯಮಶೂನ್ಯಂ ಚ ತನ್ಮಾಂ ವಿದ್ಧಿ ನ ಸಂಶಯಃ ॥ 33॥

ವೇದಾ ನ ಲೋಕಾ ನ ಸುರಾ ನ ಯಜ್ಞಾ
     ವರ್ಣಾಶ್ರಮೋ ನೈವ ಕುಲಂ ನ ಜಾತಿಃ ।
ನ ಧೂಮಮಾರ್ಗೋ ನ ಚ ದೀಪ್ತಿಮಾರ್ಗೋ
     ಬ್ರಹ್ಮೈಕರೂಪಂ ಪರಮಾರ್ಥತತ್ತ್ವಮ್ ॥ 34॥

ವ್ಯಾಪ್ಯವ್ಯಾಪಕನಿರ್ಮುಕ್ತಃ ತ್ವಮೇಕಃ ಸಫಲಂ ಯದಿ ।
ಪ್ರತ್ಯಕ್ಷಂ ಚಾಪರೋಕ್ಷಂ ಚ ಹ್ಯಾತ್ಮಾನಂ ಮನ್ಯಸೇ ಕಥಮ್ ॥ 35॥

ಅದ್ವೈತಂ ಕೇಚಿದಿಚ್ಛಂತಿ ದ್ವೈತಮಿಚ್ಛಂತಿ ಚಾಪರೇ ।
ಸಮಂ ತತ್ತ್ವಂ ನ ವಿಂದಂತಿ ದ್ವೈತಾದ್ವೈತವಿವರ್ಜಿತಮ್ ॥ 36॥

ಶ್ವೇತಾದಿವರ್ಣರಹಿತಂ ಶಬ್ದಾದಿಗುಣವರ್ಜಿತಮ್ ।
ಕಥಯಂತಿ ಕಥಂ ತತ್ತ್ವಂ ಮನೋವಾಚಾಮಗೋಚರಮ್ ॥ 37॥

ಯದಾಽನೃತಮಿದಂ ಸರ್ವಂ ದೇಹಾದಿಗಗನೋಪಮಮ್ ।
ತದಾ ಹಿ ಬ್ರಹ್ಮ ಸಂವೇತ್ತಿ ನ ತೇ ದ್ವೈತಪರಂಪರಾ ॥ 38॥

ಪರೇಣ ಸಹಜಾತ್ಮಾಪಿ ಹ್ಯಭಿನ್ನಃ ಪ್ರತಿಭಾತಿ ಮೇ ।
ವ್ಯೋಮಾಕಾರಂ ತಥೈವೈಕಂ ಧ್ಯಾತಾ ಧ್ಯಾನಂ ಕಥಂ ಭವೇತ್ ॥ 39॥

ಯತ್ಕರೋಮಿ ಯದಶ್ನಾಮಿ ಯಜ್ಜುಹೋಮಿ ದದಾಮಿ ಯತ್ ।
ಏತತ್ಸರ್ವಂ ನ ಮೇ ಕಿಂಚಿದ್ವಿಶುದ್ಧೋಽಹಮಜೋಽವ್ಯಯಃ ॥ 40॥

ಸರ್ವಂ ಜಗದ್ವಿದ್ಧಿ ನಿರಾಕೃತೀದಂ
     ಸರ್ವಂ ಜಗದ್ವಿದ್ಧಿ ವಿಕಾರಹೀನಮ್ ।
ಸರ್ವಂ ಜಗದ್ವಿದ್ಧಿ ವಿಶುದ್ಧದೇಹಂ
     ಸರ್ವಂ ಜಗದ್ವಿದ್ಧಿ ಶಿವೈಕರೂಪಮ್ ॥ 41॥

ತತ್ತ್ವಂ ತ್ವಂ ನ ಹಿ ಸಂದೇಹಃ ಕಿಂ ಜಾನಾಮ್ಯಥವಾ ಪುನಃ ।
ಅಸಂವೇದ್ಯಂ ಸ್ವಸಂವೇದ್ಯಮಾತ್ಮಾನಂ ಮನ್ಯಸೇ ಕಥಮ್ ॥ 42॥

ಮಾಯಾಽಮಾಯಾ ಕಥಂ ತಾತ ಛಾಯಾಽಛಾಯಾ ನ ವಿದ್ಯತೇ ।
ತತ್ತ್ವಮೇಕಮಿದಂ ಸರ್ವಂ ವ್ಯೋಮಾಕಾರಂ ನಿರಂಜನಮ್ ॥ 43॥

ಆದಿಮಧ್ಯಾಂತಮುಕ್ತೋಽಹಂ ನ ಬದ್ಧೋಽಹಂ ಕದಾಚನ ।
ಸ್ವಭಾವನಿರ್ಮಲಃ ಶುದ್ಧ ಇತಿ ಮೇ ನಿಶ್ಚಿತಾ ಮತಿಃ ॥ 44॥

ಮಹದಾದಿ ಜಗತ್ಸರ್ವಂ ನ ಕಿಂಚಿತ್ಪ್ರತಿಭಾತಿ ಮೇ ।
ಬ್ರಹ್ಮೈವ ಕೇವಲಂ ಸರ್ವಂ ಕಥಂ ವರ್ಣಾಶ್ರಮಸ್ಥಿತಿಃ ॥ 45॥

ಜಾನಾಮಿ ಸರ್ವಥಾ ಸರ್ವಮಹಮೇಕೋ ನಿರಂತರಮ್ ।
ನಿರಾಲಂಬಮಶೂನ್ಯಂ ಚ ಶೂನ್ಯಂ ವ್ಯೋಮಾದಿಪಂಚಕಮ್ ॥ 46॥

ನ ಷಂಢೋ ನ ಪುಮಾನ್ನ ಸ್ತ್ರೀ ನ ಬೋಧೋ ನೈವ ಕಲ್ಪನಾ ।
ಸಾನಂದೋ ವಾ ನಿರಾನಂದಮಾತ್ಮಾನಂ ಮನ್ಯಸೇ ಕಥಮ್ ॥ 47॥

ಷಡಂಗಯೋಗಾನ್ನ ತು ನೈವ ಶುದ್ಧಂ
     ಮನೋವಿನಾಶಾನ್ನ ತು ನೈವ ಶುದ್ಧಮ್ ।
ಗುರೂಪದೇಶಾನ್ನ ತು ನೈವ ಶುದ್ಧಂ
     ಸ್ವಯಂ ಚ ತತ್ತ್ವಂ ಸ್ವಯಮೇವ ಬುದ್ಧಮ್ ॥ 48॥

ನ ಹಿ ಪಂಚಾತ್ಮಕೋ ದೇಹೋ ವಿದೇಹೋ ವರ್ತತೇ ನ ಹಿ ।
ಆತ್ಮೈವ ಕೇವಲಂ ಸರ್ವಂ ತುರೀಯಂ ಚ ತ್ರಯಂ ಕಥಮ್ ॥ 49॥

ನ ಬದ್ಧೋ ನೈವ ಮುಕ್ತೋಽಹಂ ನ ಚಾಹಂ ಬ್ರಹ್ಮಣಃ ಪೃಥಕ್ ।
ನ ಕರ್ತಾ ನ ಚ ಭೋಕ್ತಾಹಂ ವ್ಯಾಪ್ಯವ್ಯಾಪಕವರ್ಜಿತಃ ॥ 50॥

ಯಥಾ ಜಲಂ ಜಲೇ ನ್ಯಸ್ತಂ ಸಲಿಲಂ ಭೇದವರ್ಜಿತಮ್ ।
ಪ್ರಕೃತಿಂ ಪುರುಷಂ ತದ್ವದಭಿನ್ನಂ ಪ್ರತಿಭಾತಿ ಮೇ ॥ 51॥

ಯದಿ ನಾಮ ನ ಮುಕ್ತೋಽಸಿ ನ ಬದ್ಧೋಽಸಿ ಕದಾಚನ ।
ಸಾಕಾರಂ ಚ ನಿರಾಕಾರಮಾತ್ಮಾನಂ ಮನ್ಯಸೇ ಕಥಮ್ ॥ 52॥

ಜಾನಾಮಿ ತೇ ಪರಂ ರೂಪಂ ಪ್ರತ್ಯಕ್ಷಂ ಗಗನೋಪಮಮ್ ।
ಯಥಾ ಪರಂ ಹಿ ರೂಪಂ ಯನ್ಮರೀಚಿಜಲಸನ್ನಿಭಮ್ ॥ 53॥

ನ ಗುರುರ್ನೋಪದೇಶಶ್ಚ ನ ಚೋಪಾಧಿರ್ನ ಮೇ ಕ್ರಿಯಾ ।
ವಿದೇಹಂ ಗಗನಂ ವಿದ್ಧಿ ವಿಶುದ್ಧೋಽಹಂ ಸ್ವಭಾವತಃ ॥ 54॥

ವಿಶುದ್ಧೋಽಸ್ಯ ಶರೀರೋಽಸಿ ನ ತೇ ಚಿತ್ತಂ ಪರಾತ್ಪರಮ್ ।
ಅಹಂ ಚಾತ್ಮಾ ಪರಂ ತತ್ತ್ವಮಿತಿ ವಕ್ತುಂ ನ ಲಜ್ಜಸೇ ॥ 55॥

ಕಥಂ ರೋದಿಷಿ ರೇ ಚಿತ್ತ ಹ್ಯಾತ್ಮೈವಾತ್ಮಾತ್ಮನಾ ಭವ ।
ಪಿಬ ವತ್ಸ ಕಲಾತೀತಮದ್ವೈತಂ ಪರಮಾಮೃತಮ್ ॥ 56॥

ನೈವ ಬೋಧೋ ನ ಚಾಬೋಧೋ ನ ಬೋಧಾಬೋಧ ಏವ ಚ ।
ಯಸ್ಯೇದೃಶಃ ಸದಾ ಬೋಧಃ ಸ ಬೋಧೋ ನಾನ್ಯಥಾ ಭವೇತ್ ॥ 57॥

ಜ್ಞಾನಂ ನ ತರ್ಕೋ ನ ಸಮಾಧಿಯೋಗೋ
     ನ ದೇಶಕಾಲೌ ನ ಗುರೂಪದೇಶಃ ।
ಸ್ವಭಾವಸಂವಿತ್ತರಹಂ ಚ ತತ್ತ್ವ-
     ಮಾಕಾಶಕಲ್ಪಂ ಸಹಜಂ ಧ್ರುವಂ ಚ ॥ 58॥

ನ ಜಾತೋಽಹಂ ಮೃತೋ ವಾಪಿ ನ ಮೇ ಕರ್ಮ ಶುಭಾಶುಭಮ್ ।
ವಿಶುದ್ಧಂ ನಿರ್ಗುಣಂ ಬ್ರಹ್ಮ ಬಂಧೋ ಮುಕ್ತಿಃ ಕಥಂ ಮಮ ॥ 59॥

ಯದಿ ಸರ್ವಗತೋ ದೇವಃ ಸ್ಥಿರಃ ಪೂರ್ಣೋ ನಿರಂತರಃ ।
ಅಂತರಂ ಹಿ ನ ಪಶ್ಯಾಮಿ ಸ ಬಾಹ್ಯಾಭ್ಯಂತರಃ ಕಥಮ್ ॥ 60॥

ಸ್ಫುರತ್ಯೇವ ಜಗತ್ಕೃತ್ಸ್ನಮಖಂಡಿತನಿರಂತರಮ್ ।
ಅಹೋ ಮಾಯಾಮಹಾಮೋಹೋ ದ್ವೈತಾದ್ವೈತವಿಕಲ್ಪನಾ ॥ 61॥

ಸಾಕಾರಂ ಚ ನಿರಾಕಾರಂ ನೇತಿ ನೇತೀತಿ ಸರ್ವದಾ ।
ಭೇದಾಭೇದವಿನಿರ್ಮುಕ್ತೋ ವರ್ತತೇ ಕೇವಲಃ ಶಿವಃ ॥ 62॥

ನ ತೇ ಚ ಮಾತಾ ಚ ಪಿತಾ ಚ ಬಂಧುಃ
     ನ ತೇ ಚ ಪತ್ನೀ ನ ಸುತಶ್ಚ ಮಿತ್ರಮ್ ।
ನ ಪಕ್ಷಪಾತೀ ನ ವಿಪಕ್ಷಪಾತಃ
     ಕಥಂ ಹಿ ಸಂತಪ್ತಿರಿಯಂ ಹಿ ಚಿತ್ತೇ ॥ 63॥

ದಿವಾ ನಕ್ತಂ ನ ತೇ ಚಿತ್ತಂ ಉದಯಾಸ್ತಮಯೌ ನ ಹಿ ।
ವಿದೇಹಸ್ಯ ಶರೀರತ್ವಂ ಕಲ್ಪಯಂತಿ ಕಥಂ ಬುಧಾಃ ॥ 64॥

ನಾವಿಭಕ್ತಂ ವಿಭಕ್ತಂ ಚ ನ ಹಿ ದುಃಖಸುಖಾದಿ ಚ ।
ನ ಹಿ ಸರ್ವಮಸರ್ವಂ ಚ ವಿದ್ಧಿ ಚಾತ್ಮಾನಮವ್ಯಯಮ್ ॥ 65॥

ನಾಹಂ ಕರ್ತಾ ನ ಭೋಕ್ತಾ ಚ ನ ಮೇ ಕರ್ಮ ಪುರಾಽಧುನಾ ।
ನ ಮೇ ದೇಹೋ ವಿದೇಹೋ ವಾ ನಿರ್ಮಮೇತಿ ಮಮೇತಿ ಕಿಮ್ ॥ 66॥

ನ ಮೇ ರಾಗಾದಿಕೋ ದೋಷೋ ದುಃಖಂ ದೇಹಾದಿಕಂ ನ ಮೇ ।
ಆತ್ಮಾನಂ ವಿದ್ಧಿ ಮಾಮೇಕಂ ವಿಶಾಲಂ ಗಗನೋಪಮಮ್ ॥ 67॥

ಸಖೇ ಮನಃ ಕಿಂ ಬಹುಜಲ್ಪಿತೇನ
     ಸಖೇ ಮನಃ ಸರ್ವಮಿದಂ ವಿತರ್ಕ್ಯಮ್ ।
ಯತ್ಸಾರಭೂತಂ ಕಥಿತಂ ಮಯಾ ತೇ
     ತ್ವಮೇವ ತತ್ತ್ವಂ ಗಗನೋಪಮೋಽಸಿ ॥ 68॥

ಯೇನ ಕೇನಾಪಿ ಭಾವೇನ ಯತ್ರ ಕುತ್ರ ಮೃತಾ ಅಪಿ ।
ಯೋಗಿನಸ್ತತ್ರ ಲೀಯಂತೇ ಘಟಾಕಾಶಮಿವಾಂಬರೇ ॥ 69॥

ತೀರ್ಥೇ ಚಾಂತ್ಯಜಗೇಹೇ ವಾ ನಷ್ಟಸ್ಮೃತಿರಪಿ ತ್ಯಜನ್ ।
ಸಮಕಾಲೇ ತನುಂ ಮುಕ್ತಃ ಕೈವಲ್ಯವ್ಯಾಪಕೋ ಭವೇತ್ ॥ 70॥

ಧರ್ಮಾರ್ಥಕಾಮಮೋಕ್ಷಾಂಶ್ಚ ದ್ವಿಪದಾದಿಚರಾಚರಮ್ ।
ಮನ್ಯಂತೇ ಯೋಗಿನಃ ಸರ್ವಂ ಮರೀಚಿಜಲಸನ್ನಿಭಮ್ ॥ 71॥

ಅತೀತಾನಾಗತಂ ಕರ್ಮ ವರ್ತಮಾನಂ ತಥೈವ ಚ ।
ನ ಕರೋಮಿ ನ ಭುಂಜಾಮಿ ಇತಿ ಮೇ ನಿಶ್ಚಲಾ ಮತಿಃ ॥ 72॥

ಶೂನ್ಯಾಗಾರೇ ಸಮರಸಪೂತ-
     ಸ್ತಿಷ್ಠನ್ನೇಕಃ ಸುಖಮವಧೂತಃ ।
ಚರತಿ ಹಿ ನಗ್ನಸ್ತ್ಯಕ್ತ್ವಾ ಗರ್ವಂ
     ವಿಂದತಿ ಕೇವಲಮಾತ್ಮನಿ ಸರ್ವಮ್ ॥ 73॥

ತ್ರಿತಯತುರೀಯಂ ನಹಿ ನಹಿ ಯತ್ರ
     ವಿಂದತಿ ಕೇವಲಮಾತ್ಮನಿ ತತ್ರ ।
ಧರ್ಮಾಧರ್ಮೌ ನಹಿ ನಹಿ ಯತ್ರ
     ಬದ್ಧೋ ಮುಕ್ತಃ ಕಥಮಿಹ ತತ್ರ ॥ 74॥

ವಿಂದತಿ ವಿಂದತಿ ನಹಿ ನಹಿ ಮಂತ್ರಂ
     ಛಂದೋಲಕ್ಷಣಂ ನಹಿ ನಹಿ ತಂತ್ರಮ್ ।
ಸಮರಸಮಗ್ನೋ ಭಾವಿತಪೂತಃ
     ಪ್ರಲಪಿತಮೇತತ್ಪರಮವಧೂತಃ ॥ 75॥

ಸರ್ವಶೂನ್ಯಮಶೂನ್ಯಂ ಚ ಸತ್ಯಾಸತ್ಯಂ ನ ವಿದ್ಯತೇ ।
ಸ್ವಭಾವಭಾವತಃ ಪ್ರೋಕ್ತಂ ಶಾಸ್ತ್ರಸಂವಿತ್ತಿಪೂರ್ವಕಮ್ ॥ 76॥

ಇತಿ ಪ್ರಥಮೋಽಧ್ಯಾಯಃ ॥ 1॥

ಅಥ ದ್ವಿತೀಯೋಽಧ್ಯಾಯಃ ॥

ಬಾಲಸ್ಯ ವಾ ವಿಷಯಭೋಗರತಸ್ಯ ವಾಪಿ
     ಮೂರ್ಖಸ್ಯ ಸೇವಕಜನಸ್ಯ ಗೃಹಸ್ಥಿತಸ್ಯ ।
ಏತದ್ಗುರೋಃ ಕಿಮಪಿ ನೈವ ನ ಚಿಂತನೀಯಂ
     ರತ್ನಂ ಕಥಂ ತ್ಯಜತಿ ಕೋಽಪ್ಯಶುಚೌ ಪ್ರವಿಷ್ಟಮ್ ॥ 1॥

ನೈವಾತ್ರ ಕಾವ್ಯಗುಣ ಏವ ತು ಚಿಂತನೀಯೋ
     ಗ್ರಾಹ್ಯಃ ಪರಂ ಗುಣವತಾ ಖಲು ಸಾರ ಏವ ।
ಸಿಂದೂರಚಿತ್ರರಹಿತಾ ಭುವಿ ರೂಪಶೂನ್ಯಾ
     ಪಾರಂ ನ ಕಿಂ ನಯತಿ ನೌರಿಹ ಗಂತುಕಾಮಾನ್ ॥ 2॥

ಪ್ರಯತ್ನೇನ ವಿನಾ ಯೇನ ನಿಶ್ಚಲೇನ ಚಲಾಚಲಮ್ ।
ಗ್ರಸ್ತಂ ಸ್ವಭಾವತಃ ಶಾಂತಂ ಚೈತನ್ಯಂ ಗಗನೋಪಮಮ್ ॥ 3॥

ಅಯತ್ನಾಛಾಲಯೇದ್ಯಸ್ತು ಏಕಮೇವ ಚರಾಚರಮ್ ।
ಸರ್ವಗಂ ತತ್ಕಥಂ ಭಿನ್ನಮದ್ವೈತಂ ವರ್ತತೇ ಮಮ ॥ 4॥

ಅಹಮೇವ ಪರಂ ಯಸ್ಮಾತ್ಸಾರಾತ್ಸಾರತರಂ ಶಿವಮ್ ।
ಗಮಾಗಮವಿನಿರ್ಮುಕ್ತಂ ನಿರ್ವಿಕಲ್ಪಂ ನಿರಾಕುಲಮ್ ॥ 5॥

ಸರ್ವಾವಯವನಿರ್ಮುಕ್ತಂ ತಥಾಹಂ ತ್ರಿದಶಾರ್ಚಿತಮ್ ।
ಸಂಪೂರ್ಣತ್ವಾನ್ನ ಗೃಹ್ಣಾಮಿ ವಿಭಾಗಂ ತ್ರಿದಶಾದಿಕಮ್ ॥ 6॥

ಪ್ರಮಾದೇನ ನ ಸಂದೇಹಃ ಕಿಂ ಕರಿಷ್ಯಾಮಿ ವೃತ್ತಿಮಾನ್ ।
ಉತ್ಪದ್ಯಂತೇ ವಿಲೀಯಂತೇ ಬುದ್ಬುದಾಶ್ಚ ಯಥಾ ಜಲೇ ॥ 7॥

ಮಹದಾದೀನಿ ಭೂತಾನಿ ಸಮಾಪ್ಯೈವಂ ಸದೈವ ಹಿ ।
ಮೃದುದ್ರವ್ಯೇಷು ತೀಕ್ಷ್ಣೇಷು ಗುಡೇಷು ಕಟುಕೇಷು ಚ ॥ 8॥

ಕಟುತ್ವಂ ಚೈವ ಶೈತ್ಯತ್ವಂ ಮೃದುತ್ವಂ ಚ ಯಥಾ ಜಲೇ ।
ಪ್ರಕೃತಿಃ ಪುರುಷಸ್ತದ್ವದಭಿನ್ನಂ ಪ್ರತಿಭಾತಿ ಮೇ ॥ 9॥

ಸರ್ವಾಖ್ಯಾರಹಿತಂ ಯದ್ಯತ್ಸೂಕ್ಷ್ಮಾತ್ಸೂಕ್ಷ್ಮತರಂ ಪರಮ್ ।
ಮನೋಬುದ್ಧೀಂದ್ರಿಯಾತೀತಮಕಲಂಕಂ ಜಗತ್ಪತಿಮ್ ॥ 10॥

ಈದೃಶಂ ಸಹಜಂ ಯತ್ರ ಅಹಂ ತತ್ರ ಕಥಂ ಭವೇತ್ ।
ತ್ವಮೇವ ಹಿ ಕಥಂ ತತ್ರ ಕಥಂ ತತ್ರ ಚರಾಚರಮ್ ॥ 11॥

ಗಗನೋಪಮಂ ತು ಯತ್ಪ್ರೋಕ್ತಂ ತದೇವ ಗಗನೋಪಮಮ್ ।
ಚೈತನ್ಯಂ ದೋಷಹೀನಂ ಚ ಸರ್ವಜ್ಞಂ ಪೂರ್ಣಮೇವ ಚ ॥ 12॥

ಪೃಥಿವ್ಯಾಂ ಚರಿತಂ ನೈವ ಮಾರುತೇನ ಚ ವಾಹಿತಮ್ ।
ವರಿಣಾ ಪಿಹಿತಂ ನೈವ ತೇಜೋಮಧ್ಯೇ ವ್ಯವಸ್ಥಿತಮ್ ॥ 13॥

ಆಕಾಶಂ ತೇನ ಸಂವ್ಯಾಪ್ತಂ ನ ತದ್ವ್ಯಾಪ್ತಂ ಚ ಕೇನಚಿತ್ ।
ಸ ಬಾಹ್ಯಾಭ್ಯಂತರಂ ತಿಷ್ಠತ್ಯವಚ್ಛಿನ್ನಂ ನಿರಂತರಮ್ ॥ 14॥

ಸೂಕ್ಷ್ಮತ್ವಾತ್ತದದೃಶ್ಯತ್ವಾನ್ನಿರ್ಗುಣತ್ವಾಚ್ಚ ಯೋಗಿಭಿಃ ।
ಆಲಂಬನಾದಿ ಯತ್ಪ್ರೋಕ್ತಂ ಕ್ರಮಾದಾಲಂಬನಂ ಭವೇತ್ ॥ 15॥

ಸತತಾಽಭ್ಯಾಸಯುಕ್ತಸ್ತು ನಿರಾಲಂಬೋ ಯದಾ ಭವೇತ್ ।
ತಲ್ಲಯಾಲ್ಲೀಯತೇ ನಾಂತರ್ಗುಣದೋಷವಿವರ್ಜಿತಃ ॥ 16॥

ವಿಷವಿಶ್ವಸ್ಯ ರೌದ್ರಸ್ಯ ಮೋಹಮೂರ್ಚ್ಛಾಪ್ರದಸ್ಯ ಚ ।
ಏಕಮೇವ ವಿನಾಶಾಯ ಹ್ಯಮೋಘಂ ಸಹಜಾಮೃತಮ್ ॥ 17॥

ಭಾವಗಮ್ಯಂ ನಿರಾಕಾರಂ ಸಾಕಾರಂ ದೃಷ್ಟಿಗೋಚರಮ್ ।
ಭಾವಾಭಾವವಿನಿರ್ಮುಕ್ತಮಂತರಾಲಂ ತದುಚ್ಯತೇ ॥ 18॥

ಬಾಹ್ಯಭಾವಂ ಭವೇದ್ವಿಶ್ವಮಂತಃ ಪ್ರಕೃತಿರುಚ್ಯತೇ ।
ಅಂತರಾದಂತರಂ ಜ್ಞೇಯಂ ನಾರಿಕೇಲಫಲಾಂಬುವತ್ ॥ 19॥

ಭ್ರಾಂತಿಜ್ಞಾನಂ ಸ್ಥಿತಂ ಬಾಹ್ಯಂ ಸಮ್ಯಗ್ಜ್ಞಾನಂ ಚ ಮಧ್ಯಗಮ್ ।
ಮಧ್ಯಾನ್ಮಧ್ಯತರಂ ಜ್ಞೇಯಂ ನಾರಿಕೇಲಫಲಾಂಬುವತ್ ॥ 20॥

ಪೌರ್ಣಮಾಸ್ಯಾಂ ಯಥಾ ಚಂದ್ರ ಏಕ ಏವಾತಿನಿರ್ಮಲಃ ।
ತೇನ ತತ್ಸದೃಶಂ ಪಶ್ಯೇದ್ದ್ವಿಧಾದೃಷ್ಟಿರ್ವಿಪರ್ಯಯಃ ॥ 21॥

ಅನೇನೈವ ಪ್ರಕಾರೇಣ ಬುದ್ಧಿಭೇದೋ ನ ಸರ್ವಗಃ ।
ದಾತಾ ಚ ಧೀರತಾಮೇತಿ ಗೀಯತೇ ನಾಮಕೋಟಿಭಿಃ ॥ 22॥

ಗುರುಪ್ರಜ್ಞಾಪ್ರಸಾದೇನ ಮೂರ್ಖೋ ವಾ ಯದಿ ಪಂಡಿತಃ ।
ಯಸ್ತು ಸಂಬುಧ್ಯತೇ ತತ್ತ್ವಂ ವಿರಕ್ತೋ ಭವಸಾಗರಾತ್ ॥ 23॥

ರಾಗದ್ವೇಷವಿನಿರ್ಮುಕ್ತಃ ಸರ್ವಭೂತಹಿತೇ ರತಃ ।
ದೃಢಬೋಧಶ್ಚ ಧೀರಶ್ಚ ಸ ಗಚ್ಛೇತ್ಪರಮಂ ಪದಮ್ ॥ 24॥

ಘಟೇ ಭಿನ್ನೇ ಘಟಾಕಾಶ ಆಕಾಶೇ ಲೀಯತೇ ಯಥಾ ।
ದೇಹಾಭಾವೇ ತಥಾ ಯೋಗೀ ಸ್ವರೂಪೇ ಪರಮಾತ್ಮನಿ ॥ 25॥

ಉಕ್ತೇಯಂ ಕರ್ಮಯುಕ್ತಾನಾಂ ಮತಿರ್ಯಾಂತೇಽಪಿ ಸಾ ಗತಿಃ ।
ನ ಚೋಕ್ತಾ ಯೋಗಯುಕ್ತಾನಾಂ ಮತಿರ್ಯಾಂತೇಽಪಿ ಸಾ ಗತಿಃ ॥ 26॥

ಯಾ ಗತಿಃ ಕರ್ಮಯುಕ್ತಾನಾಂ ಸಾ ಚ ವಾಗಿಂದ್ರಿಯಾದ್ವದೇತ್ ।
ಯೋಗಿನಾಂ ಯಾ ಗತಿಃ ಕ್ವಾಪಿ ಹ್ಯಕಥ್ಯಾ ಭವತೋರ್ಜಿತಾ ॥ 27॥

ಏವಂ ಜ್ಞಾತ್ವಾ ತ್ವಮುಂ ಮಾರ್ಗಂ ಯೋಗಿನಾಂ ನೈವ ಕಲ್ಪಿತಮ್ ।
ವಿಕಲ್ಪವರ್ಜನಂ ತೇಷಾಂ ಸ್ವಯಂ ಸಿದ್ಧಿಃ ಪ್ರವರ್ತತೇ ॥ 28॥

ತೀರ್ಥೇ ವಾಂತ್ಯಜಗೇಹೇ ವಾ ಯತ್ರ ಕುತ್ರ ಮೃತೋಽಪಿ ವಾ ।
ನ ಯೋಗೀ ಪಶ್ಯತೇ ಗರ್ಭಂ ಪರೇ ಬ್ರಹ್ಮಣಿ ಲೀಯತೇ ॥ 29॥

ಸಹಜಮಜಮಚಿಂತ್ಯಂ ಯಸ್ತು ಪಶ್ಯೇತ್ಸ್ವರೂಪಂ
     ಘಟತಿ ಯದಿ ಯಥೇಷ್ಟಂ ಲಿಪ್ಯತೇ ನೈವ ದೋಷೈಃ ।
ಸಕೃದಪಿ ತದಭಾವಾತ್ಕರ್ಮ ಕಿಂಚಿನ್ನಕುರ್ಯಾತ್
     ತದಪಿ ನ ಚ ವಿಬದ್ಧಃ ಸಂಯಮೀ ವಾ ತಪಸ್ವೀ ॥ 30॥

ನಿರಾಮಯಂ ನಿಷ್ಪ್ರತಿಮಂ ನಿರಾಕೃತಿಂ
     ನಿರಾಶ್ರಯಂ ನಿರ್ವಪುಷಂ ನಿರಾಶಿಷಮ್ ।
ನಿರ್ದ್ವಂದ್ವನಿರ್ಮೋಹಮಲುಪ್ತಶಕ್ತಿಕಂ
     ತಮೀಶಮಾತ್ಮಾನಮುಪೈತಿ ಶಾಶ್ವತಮ್ ॥ 31॥

ವೇದೋ ನ ದೀಕ್ಷಾ ನ ಚ ಮುಂಡನಕ್ರಿಯಾ
     ಗುರುರ್ನ ಶಿಷ್ಯೋ ನ ಚ ಯಂತ್ರಸಂಪದಃ ।
ಮುದ್ರಾದಿಕಂ ಚಾಪಿ ನ ಯತ್ರ ಭಾಸತೇ
     ತಮೀಶಮಾತ್ಮಾನಮುಪೈತಿ ಶಾಶ್ವತಮ್ ॥ 32॥

ನ ಶಾಂಭವಂ ಶಾಕ್ತಿಕಮಾನವಂ ನ ವಾ
     ಪಿಂಡಂ ಚ ರೂಪಂ ಚ ಪದಾದಿಕಂ ನ ವಾ ।
ಆರಂಭನಿಷ್ಪತ್ತಿಘಟಾದಿಕಂ ಚ ನೋ
     ತಮೀಶಮಾತ್ಮಾನಮುಪೈತಿ ಶಾಶ್ವತಮ್ ॥ 33॥

ಯಸ್ಯ ಸ್ವರೂಪಾತ್ಸಚರಾಚರಂ ಜಗ-
     ದುತ್ಪದ್ಯತೇ ತಿಷ್ಠತಿ ಲೀಯತೇಽಪಿ ವಾ ।
ಪಯೋವಿಕಾರಾದಿವ ಫೇನಬುದ್ಬುದಾ-
     ಸ್ತಮೀಶಮಾತ್ಮಾನಮುಪೈತಿ ಶಾಶ್ವತಮ್ ॥ 34॥

ನಾಸಾನಿರೋಧೋ ನ ಚ ದೃಷ್ಟಿರಾಸನಂ
     ಬೋಧೋಽಪ್ಯಬೋಧೋಽಪಿ ನ ಯತ್ರ ಭಾಸತೇ ।
ನಾಡೀಪ್ರಚಾರೋಽಪಿ ನ ಯತ್ರ ಕಿಂಚಿ-
     ತ್ತಮೀಶಮಾತ್ಮಾನಮುಪೈತಿ ಶಾಶ್ವತಮ್ ॥ 35॥

ನಾನಾತ್ವಮೇಕತ್ವಮುಭತ್ವಮನ್ಯತಾ
     ಅಣುತ್ವದೀರ್ಘತ್ವಮಹತ್ತ್ವಶೂನ್ಯತಾ ।
ಮಾನತ್ವಮೇಯತ್ವಸಮತ್ವವರ್ಜಿತಂ
     ತಮೀಶಮಾತ್ಮಾನಮುಪೈತಿ ಶಾಶ್ವತಮ್ ॥ 36॥

ಸುಸಂಯಮೀ ವಾ ಯದಿ ವಾ ನ ಸಂಯಮೀ
     ಸುಸಂಗ್ರಹೀ ವಾ ಯದಿ ವಾ ನ ಸಂಗ್ರಹೀ ।
ನಿಷ್ಕರ್ಮಕೋ ವಾ ಯದಿ ವಾ ಸಕರ್ಮಕ-
     ಸ್ತಮೀಶಮಾತ್ಮಾನಮುಪೈತಿ ಶಾಶ್ವತಮ್ ॥ 37॥

ಮನೋ ನ ಬುದ್ಧಿರ್ನ ಶರೀರಮಿಂದ್ರಿಯಂ
     ತನ್ಮಾತ್ರಭೂತಾನಿ ನ ಭೂತಪಂಚಕಮ್ ।
ಅಹಂಕೃತಿಶ್ಚಾಪಿ ವಿಯತ್ಸ್ವರೂಪಕಂ
     ತಮೀಶಮಾತ್ಮಾನಮುಪೈತಿ ಶಾಶ್ವತಮ್ ॥ 38॥

ವಿಧೌ ನಿರೋಧೇ ಪರಮಾತ್ಮತಾಂ ಗತೇ
     ನ ಯೋಗಿನಶ್ಚೇತಸಿ ಭೇದವರ್ಜಿತೇ ।
ಶೌಚಂ ನ ವಾಶೌಚಮಲಿಂಗಭಾವನಾ
     ಸರ್ವಂ ವಿಧೇಯಂ ಯದಿ ವಾ ನಿಷಿಧ್ಯತೇ ॥ 39॥

ಮನೋ ವಚೋ ಯತ್ರ ನ ಶಕ್ತಮೀರಿತುಂ
     ನೂನಂ ಕಥಂ ತತ್ರ ಗುರೂಪದೇಶತಾ ।
ಇಮಾಂ ಕಥಾಮುಕ್ತವತೋ ಗುರೋಸ್ತ-
     ದ್ಯುಕ್ತಸ್ಯ ತತ್ತ್ವಂ ಹಿ ಸಮಂ ಪ್ರಕಾಶತೇ ॥ 40॥

ಇತಿ ದ್ವಿತೀಯೋಽಧ್ಯಾಯಃ ॥ 2॥

ಅಥ ತೃತೀಯೋಽಧ್ಯಾಯಃ ॥

ಗುಣವಿಗುಣವಿಭಾಗೋ ವರ್ತತೇ ನೈವ ಕಿಂಚಿತ್
     ರತಿವಿರತಿವಿಹೀನಂ ನಿರ್ಮಲಂ ನಿಷ್ಪ್ರಪಂಚಮ್ ।
ಗುಣವಿಗುಣವಿಹೀನಂ ವ್ಯಾಪಕಂ ವಿಶ್ವರೂಪಂ
     ಕಥಮಹಮಿಹ ವಂದೇ ವ್ಯೋಮರೂಪಂ ಶಿವಂ ವೈ ॥ 1॥

ಶ್ವೇತಾದಿವರ್ಣರಹಿತೋ ನಿಯತಂ ಶಿವಶ್ಚ
     ಕಾರ್ಯಂ ಹಿ ಕಾರಣಮಿದಂ ಹಿ ಪರಂ ಶಿವಶ್ಚ ।
ಏವಂ ವಿಕಲ್ಪರಹಿತೋಽಹಮಲಂ ಶಿವಶ್ಚ
     ಸ್ವಾತ್ಮಾನಮಾತ್ಮನಿ ಸುಮಿತ್ರ ಕಥಂ ನಮಾಮಿ ॥ 2॥

ನಿರ್ಮೂಲಮೂಲರಹಿತೋ ಹಿ ಸದೋದಿತೋಽಹಂ
     ನಿರ್ಧೂಮಧೂಮರಹಿತೋ ಹಿ ಸದೋದಿತೋಽಹಮ್ ।
ನಿರ್ದೀಪದೀಪರಹಿತೋ ಹಿ ಸದೋದಿತೋಽಹಂ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 3॥

ನಿಷ್ಕಾಮಕಾಮಮಿಹ ನಾಮ ಕಥಂ ವದಾಮಿ
     ನಿಃಸಂಗಸಂಗಮಿಹ ನಾಮ ಕಥಂ ವದಾಮಿ ।
ನಿಃಸಾರಸಾರರಹಿತಂ ಚ ಕಥಂ ವದಾಮಿ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 4॥

ಅದ್ವೈತರೂಪಮಖಿಲಂ ಹಿ ಕಥಂ ವದಾಮಿ
     ದ್ವೈತಸ್ವರೂಪಮಖಿಲಂ ಹಿ ಕಥಂ ವದಾಮಿ ।
ನಿತ್ಯಂ ತ್ವನಿತ್ಯಮಖಿಲಂ ಹಿ ಕಥಂ ವದಾಮಿ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 5॥

ಸ್ಥೂಲಂ ಹಿ ನೋ ನಹಿ ಕೃಶಂ ನ ಗತಾಗತಂ ಹಿ
     ಆದ್ಯಂತಮಧ್ಯರಹಿತಂ ನ ಪರಾಪರಂ ಹಿ ।
ಸತ್ಯಂ ವದಾಮಿ ಖಲು ವೈ ಪರಮಾರ್ಥತತ್ತ್ವಂ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 6॥

ಸಂವಿದ್ಧಿ ಸರ್ವಕರಣಾನಿ ನಭೋನಿಭಾನಿ
     ಸಂವಿದ್ಧಿ ಸರ್ವವಿಷಯಾಂಶ್ಚ ನಭೋನಿಭಾಂಶ್ಚ ।
ಸಂವಿದ್ಧಿ ಚೈಕಮಮಲಂ ನ ಹಿ ಬಂಧಮುಕ್ತಂ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 7॥

ದುರ್ಬೋಧಬೋಧಗಹನೋ ನ ಭವಾಮಿ ತಾತ
     ದುರ್ಲಕ್ಷ್ಯಲಕ್ಷ್ಯಗಹನೋ ನ ಭವಾಮಿ ತಾತ ।
ಆಸನ್ನರೂಪಗಹನೋ ನ ಭವಾಮಿ ತಾತ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 8॥

ನಿಷ್ಕರ್ಮಕರ್ಮದಹನೋ ಜ್ವಲನೋ ಭವಾಮಿ
     ನಿರ್ದುಃಖದುಃಖದಹನೋ ಜ್ವಲನೋ ಭವಾಮಿ ।
ನಿರ್ದೇಹದೇಹದಹನೋ ಜ್ವಲನೋ ಭವಾಮಿ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 9॥

ನಿಷ್ಪಾಪಪಾಪದಹನೋ ಹಿ ಹುತಾಶನೋಽಹಂ
     ನಿರ್ಧರ್ಮಧರ್ಮದಹನೋ ಹಿ ಹುತಾಶನೋಽಹಮ್ ।
ನಿರ್ಬಂಧಬಂಧದಹನೋ ಹಿ ಹುತಾಶನೋಽಹಂ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 10॥

ನಿರ್ಭಾವಭಾವರಹಿತೋ ನ ಭವಾಮಿ ವತ್ಸ
     ನಿರ್ಯೋಗಯೋಗರಹಿತೋ ನ ಭವಾಮಿ ವತ್ಸ ।
ನಿಶ್ಚಿತ್ತಚಿತ್ತರಹಿತೋ ನ ಭವಾಮಿ ವತ್ಸ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 11॥

ನಿರ್ಮೋಹಮೋಹಪದವೀತಿ ನ ಮೇ ವಿಕಲ್ಪೋ
     ನಿಃಶೋಕಶೋಕಪದವೀತಿ ನ ಮೇ ವಿಕಲ್ಪಃ ।
ನಿರ್ಲೋಭಲೋಭಪದವೀತಿ ನ ಮೇ ವಿಕಲ್ಪೋ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 12॥

ಸಂಸಾರಸಂತತಿಲತಾ ನ ಚ ಮೇ ಕದಾಚಿತ್
     ಸಂತೋಷಸಂತತಿಸುಖೋ ನ ಚ ಮೇ ಕದಾಚಿತ್ ।
ಅಜ್ಞಾನಬಂಧನಮಿದಂ ನ ಚ ಮೇ ಕದಾಚಿತ್
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 13॥

ಸಂಸಾರಸಂತತಿರಜೋ ನ ಚ ಮೇ ವಿಕಾರಃ
     ಸಂತಾಪಸಂತತಿತಮೋ ನ ಚ ಮೇ ವಿಕಾರಃ ।
ಸತ್ತ್ವಂ ಸ್ವಧರ್ಮಜನಕಂ ನ ಚ ಮೇ ವಿಕಾರೋ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 14॥

ಸಂತಾಪದುಃಖಜನಕೋ ನ ವಿಧಿಃ ಕದಾಚಿತ್
     ಸಂತಾಪಯೋಗಜನಿತಂ ನ ಮನಃ ಕದಾಚಿತ್ ।
ಯಸ್ಮಾದಹಂಕೃತಿರಿಯಂ ನ ಚ ಮೇ ಕದಾಚಿತ್
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 15॥

ನಿಷ್ಕಂಪಕಂಪನಿಧನಂ ನ ವಿಕಲ್ಪಕಲ್ಪಂ
     ಸ್ವಪ್ನಪ್ರಬೋಧನಿಧನಂ ನ ಹಿತಾಹಿತಂ ಹಿ ।
ನಿಃಸಾರಸಾರನಿಧನಂ ನ ಚರಾಚರಂ ಹಿ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 16॥

ನೋ ವೇದ್ಯವೇದಕಮಿದಂ ನ ಚ ಹೇತುತರ್ಕ್ಯಂ
     ವಾಚಾಮಗೋಚರಮಿದಂ ನ ಮನೋ ನ ಬುದ್ಧಿಃ ।
ಏವಂ ಕಥಂ ಹಿ ಭವತಃ ಕಥಯಾಮಿ ತತ್ತ್ವಂ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 17॥

ನಿರ್ಭಿನ್ನಭಿನ್ನರಹಿತಂ ಪರಮಾರ್ಥತತ್ತ್ವ-
     ಮಂತರ್ಬಹಿರ್ನ ಹಿ ಕಥಂ ಪರಮಾರ್ಥತತ್ತ್ವಮ್ ।
ಪ್ರಾಕ್ಸಂಭವಂ ನ ಚ ರತಂ ನಹಿ ವಸ್ತು ಕಿಂಚಿತ್
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 18॥

ರಾಗಾದಿದೋಷರಹಿತಂ ತ್ವಹಮೇವ ತತ್ತ್ವಂ
     ದೈವಾದಿದೋಷರಹಿತಂ ತ್ವಹಮೇವ ತತ್ತ್ವಮ್ ।
ಸಂಸಾರಶೋಕರಹಿತಂ ತ್ವಹಮೇವ ತತ್ತ್ವಂ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 19॥

ಸ್ಥಾನತ್ರಯಂ ಯದಿ ಚ ನೇತಿ ಕಥಂ ತುರೀಯಂ
     ಕಾಲತ್ರಯಂ ಯದಿ ಚ ನೇತಿ ಕಥಂ ದಿಶಶ್ಚ ।
ಶಾಂತಂ ಪದಂ ಹಿ ಪರಮಂ ಪರಮಾರ್ಥತತ್ತ್ವಂ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 20॥

ದೀರ್ಘೋ ಲಘುಃ ಪುನರಿತೀಹ ನಮೇ ವಿಭಾಗೋ
     ವಿಸ್ತಾರಸಂಕಟಮಿತೀಹ ನ ಮೇ ವಿಭಾಗಃ ।
ಕೋಣಂ ಹಿ ವರ್ತುಲಮಿತೀಹ ನ ಮೇ ವಿಭಾಗೋ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 21॥

ಮಾತಾಪಿತಾದಿ ತನಯಾದಿ ನ ಮೇ ಕದಾಚಿತ್
     ಜಾತಂ ಮೃತಂ ನ ಚ ಮನೋ ನ ಚ ಮೇ ಕದಾಚಿತ್ ।
ನಿರ್ವ್ಯಾಕುಲಂ ಸ್ಥಿರಮಿದಂ ಪರಮಾರ್ಥತತ್ತ್ವಂ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 22॥

ಶುದ್ಧಂ ವಿಶುದ್ಧಮವಿಚಾರಮನಂತರೂಪಂ
     ನಿರ್ಲೇಪಲೇಪಮವಿಚಾರಮನಂತರೂಪಮ್ ।
ನಿಷ್ಖಂಡಖಂಡಮವಿಚಾರಮನಂತರೂಪಂ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 23॥

ಬ್ರಹ್ಮಾದಯಃ ಸುರಗಣಾಃ ಕಥಮತ್ರ ಸಂತಿ
    ಸ್ವರ್ಗಾದಯೋ ವಸತಯಃ ಕಥಮತ್ರ ಸಂತಿ ।
ಯದ್ಯೇಕರೂಪಮಮಲಂ ಪರಮಾರ್ಥತತ್ತ್ವಂ
      ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 24॥

ನಿರ್ನೇತಿ ನೇತಿ ವಿಮಲೋ ಹಿ ಕಥಂ ವದಾಮಿ
     ನಿಃಶೇಷಶೇಷವಿಮಲೋ ಹಿ ಕಥಂ ವದಾಮಿ ।
ನಿರ್ಲಿಂಗಲಿಂಗವಿಮಲೋ ಹಿ ಕಥಂ ವದಾಮಿ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 25॥

ನಿಷ್ಕರ್ಮಕರ್ಮಪರಮಂ ಸತತಂ ಕರೋಮಿ
     ನಿಃಸಂಗಸಂಗರಹಿತಂ ಪರಮಂ ವಿನೋದಮ್ ।
ನಿರ್ದೇಹದೇಹರಹಿತಂ ಸತತಂ ವಿನೋದಂ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 26॥

ಮಾಯಾಪ್ರಪಂಚರಚನಾ ನ ಚ ಮೇ ವಿಕಾರಃ ।
     ಕೌಟಿಲ್ಯದಂಭರಚನಾ ನ ಚ ಮೇ ವಿಕಾರಃ ।
ಸತ್ಯಾನೃತೇತಿ ರಚನಾ ನ ಚ ಮೇ ವಿಕಾರೋ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 27॥

ಸಂಧ್ಯಾದಿಕಾಲರಹಿತಂ ನ ಚ ಮೇ ವಿಯೋಗೋ-
     ಹ್ಯಂತಃ ಪ್ರಬೋಧರಹಿತಂ ಬಧಿರೋ ನ ಮೂಕಃ ।
ಏವಂ ವಿಕಲ್ಪರಹಿತಂ ನ ಚ ಭಾವಶುದ್ಧಂ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 28॥

ನಿರ್ನಾಥನಾಥರಹಿತಂ ಹಿ ನಿರಾಕುಲಂ ವೈ
     ನಿಶ್ಚಿತ್ತಚಿತ್ತವಿಗತಂ ಹಿ ನಿರಾಕುಲಂ ವೈ ।
ಸಂವಿದ್ಧಿ ಸರ್ವವಿಗತಂ ಹಿ ನಿರಾಕುಲಂ ವೈ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 29॥

ಕಾಂತಾರಮಂದಿರಮಿದಂ ಹಿ ಕಥಂ ವದಾಮಿ
     ಸಂಸಿದ್ಧಸಂಶಯಮಿದಂ ಹಿ ಕಥಂ ವದಾಮಿ ।
ಏವಂ ನಿರಂತರಸಮಂ ಹಿ ನಿರಾಕುಲಂ ವೈ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 30॥

ನಿರ್ಜೀವಜೀವರಹಿತಂ ಸತತಂ ವಿಭಾತಿ
     ನಿರ್ಬೀಜಬೀಜರಹಿತಂ ಸತತಂ ವಿಭಾತಿ ।
ನಿರ್ವಾಣಬಂಧರಹಿತಂ ಸತತಂ ವಿಭಾತಿ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 31॥

ಸಂಭೂತಿವರ್ಜಿತಮಿದಂ ಸತತಂ ವಿಭಾತಿ
     ಸಂಸಾರವರ್ಜಿತಮಿದಂ ಸತತಂ ವಿಭಾತಿ ।
ಸಂಹಾರವರ್ಜಿತಮಿದಂ ಸತತಂ ವಿಭಾತಿ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 32॥

ಉಲ್ಲೇಖಮಾತ್ರಮಪಿ ತೇ ನ ಚ ನಾಮರೂಪಂ
     ನಿರ್ಭಿನ್ನಭಿನ್ನಮಪಿ ತೇ ನ ಹಿ ವಸ್ತು ಕಿಂಚಿತ್ ।
ನಿರ್ಲಜ್ಜಮಾನಸ ಕರೋಷಿ ಕಥಂ ವಿಷಾದಂ
      ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 33॥

ಕಿಂ ನಾಮ ರೋದಿಷಿ ಸಖೇ ನ ಜರಾ ನ ಮೃತ್ಯುಃ
     ಕಿಂ ನಾಮ ರೋದಿಷಿ ಸಖೇ ನ ಚ ಜನ್ಮ ದುಃಖಮ್ ।
ಕಿಂ ನಾಮ ರೋದಿಷಿ ಸಖೇ ನ ಚ ತೇ ವಿಕಾರೋ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 34॥

ಕಿಂ ನಾಮ ರೋದಿಷಿ ಸಖೇ ನ ಚ ತೇ ಸ್ವರೂಪಂ
     ಕಿಂ ನಾಮ ರೋದಿಷಿ ಸಖೇ ನ ಚ ತೇ ವಿರೂಪಮ್ ।
ಕಿಂ ನಾಮ ರೋದಿಷಿ ಸಖೇ ನ ಚ ತೇ ವಯಾಂಸಿ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 35॥

ಕಿಂ ನಾಮ ರೋದಿಷಿ ಸಖೇ ನ ಚ ತೇ ವಯಾಂಸಿ
     ಕಿಂ ನಾಮ ರೋದಿಷಿ ಸಖೇ ನ ಚ ತೇ ಮನಾಂಸಿ ।
ಕಿಂ ನಾಮ ರೋದಿಷಿ ಸಖೇ ನ ತವೇಂದ್ರಿಯಾಣಿ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 36॥

ಕಿಂ ನಾಮ ರೋದಿಷಿ ಸಖೇ ನ ಚ ತೇಽಸ್ತಿ ಕಾಮಃ
     ಕಿಂ ನಾಮ ರೋದಿಷಿ ಸಖೇ ನ ಚ ತೇ ಪ್ರಲೋಭಃ ।
ಕಿಂ ನಾಮ ರೋದಿಷಿ ಸಖೇ ನ ಚ ತೇ ವಿಮೋಹೋ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 37॥

ಐಶ್ವರ್ಯಮಿಚ್ಛಸಿ ಕಥಂ ನ ಚ ತೇ ಧನಾನಿ
     ಐಶ್ವರ್ಯಮಿಚ್ಛಸಿ ಕಥಂ ನ ಚ ತೇ ಹಿ ಪತ್ನೀ ।
ಐಶ್ವರ್ಯಮಿಚ್ಛಸಿ ಕಥಂ ನ ಚ ತೇ ಮಮೇತಿ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 38॥

ಲಿಂಗಪ್ರಪಂಚಜನುಷೀ ನ ಚ ತೇ ನ ಮೇ ಚ
     ನಿರ್ಲಜ್ಜಮಾನಸಮಿದಂ ಚ ವಿಭಾತಿ ಭಿನ್ನಮ್ ।
ನಿರ್ಭೇದಭೇದರಹಿತಂ ನ ಚ ತೇ ನ ಮೇ ಚ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 39॥

ನೋ ವಾಣುಮಾತ್ರಮಪಿ ತೇ ಹಿ ವಿರಾಗರೂಪಂ
     ನೋ ವಾಣುಮಾತ್ರಮಪಿ ತೇ ಹಿ ಸರಾಗರೂಪಮ್ ।
ನೋ ವಾಣುಮಾತ್ರಮಪಿ ತೇ ಹಿ ಸಕಾಮರೂಪಂ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 40॥

ಧ್ಯಾತಾ ನ ತೇ ಹಿ ಹೃದಯೇ ನ ಚ ತೇ ಸಮಾಧಿ-
     ರ್ಧ್ಯಾನಂ ನ ತೇ ಹಿ ಹೃದಯೇ ನ ಬಹಿಃ ಪ್ರದೇಶಃ ।
ಧ್ಯೇಯಂ ನ ಚೇತಿ ಹೃದಯೇ ನ ಹಿ ವಸ್ತು ಕಾಲೋ
     ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 41॥

ಯತ್ಸಾರಭೂತಮಖಿಲಂ ಕಥಿತಂ ಮಯಾ ತೇ
     ನ ತ್ವಂ ನ ಮೇ ನ ಮಹತೋ ನ ಗುರುರ್ನ ನ ಶಿಷ್ಯಃ ।
ಸ್ವಚ್ಛಂದರೂಪಸಹಜಂ ಪರಮಾರ್ಥತತ್ತ್ವಂ
    ಜ್ಞಾನಾಮೃತಂ ಸಮರಸಂ ಗಗನೋಪಮೋಽಹಮ್ ॥ 42॥

ಕಥಮಿಹ ಪರಮಾರ್ಥಂ ತತ್ತ್ವಮಾನಂದರೂಪಂ
     ಕಥಮಿಹ ಪರಮಾರ್ಥಂ ನೈವಮಾನಂದರೂಪಮ್ ।
ಕಥಮಿಹ ಪರಮಾರ್ಥಂ ಜ್ಞಾನವಿಜ್ಞಾನರೂಪಂ
     ಯದಿ ಪರಮಹಮೇಕಂ ವರ್ತತೇ ವ್ಯೋಮರೂಪಮ್ ॥ 43॥

ದಹನಪವನಹೀನಂ ವಿದ್ಧಿ ವಿಜ್ಞಾನಮೇಕ-
     ಮವನಿಜಲವಿಹೀನಂ ವಿದ್ಧಿ ವಿಜ್ಞಾನರೂಪಮ್ ।
ಸಮಗಮನವಿಹೀನಂ ವಿದ್ಧಿ ವಿಜ್ಞಾನಮೇಕಂ
     ಗಗನಮಿವ ವಿಶಾಲಂ ವಿದ್ಧಿ ವಿಜ್ಞಾನಮೇಕಮ್ ॥ 44॥

ನ ಶೂನ್ಯರೂಪಂ ನ ವಿಶೂನ್ಯರೂಪಂ
     ನ ಶುದ್ಧರೂಪಂ ನ ವಿಶುದ್ಧರೂಪಮ್ ।
ರೂಪಂ ವಿರೂಪಂ ನ ಭವಾಮಿ ಕಿಂಚಿತ್
     ಸ್ವರೂಪರೂಪಂ ಪರಮಾರ್ಥತತ್ತ್ವಮ್ ॥ 45॥

ಮುಂಚ ಮುಂಚ ಹಿ ಸಂಸಾರಂ ತ್ಯಾಗಂ ಮುಂಚ ಹಿ ಸರ್ವಥಾ ।
ತ್ಯಾಗಾತ್ಯಾಗವಿಷಂ ಶುದ್ಧಮಮೃತಂ ಸಹಜಂ ಧ್ರುವಮ್ ॥ 46॥

ಇತಿ ತೃತೀಯೋಽಧ್ಯಾಯಃ ॥ 3॥

ಅಥ ಚತುರ್ಥೋಽಧ್ಯಾಯಃ ॥

ನಾವಾಹನಂ ನೈವ ವಿಸರ್ಜನಂ ವಾ
     ಪುಷ್ಪಾಣಿ ಪತ್ರಾಣಿ ಕಥಂ ಭವಂತಿ ।
ಧ್ಯಾನಾನಿ ಮಂತ್ರಾಣಿ ಕಥಂ ಭವಂತಿ
     ಸಮಾಸಮಂ ಚೈವ ಶಿವಾರ್ಚನಂ ಚ ॥ 1॥

ನ ಕೇವಲಂ ಬಂಧವಿಬಂಧಮುಕ್ತೋ
     ನ ಕೇವಲಂ ಶುದ್ಧವಿಶುದ್ಧಮುಕ್ತಃ ।
ನ ಕೇವಲಂ ಯೋಗವಿಯೋಗಮುಕ್ತಃ
     ಸ ವೈ ವಿಮುಕ್ತೋ ಗಗನೋಪಮೋಽಹಮ್ ॥ 2॥

ಸಂಜಾಯತೇ ಸರ್ವಮಿದಂ ಹಿ ತಥ್ಯಂ
     ಸಂಜಾಯತೇ ಸರ್ವಮಿದಂ ವಿತಥ್ಯಮ್ ।
ಏವಂ ವಿಕಲ್ಪೋ ಮಮ ನೈವ ಜಾತಃ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 3॥

ನ ಸಾಂಜನಂ ಚೈವ ನಿರಂಜನಂ ವಾ
     ನ ಚಾಂತರಂ ವಾಪಿ ನಿರಂತರಂ ವಾ ।
ಅಂತರ್ವಿಭನ್ನಂ ನ ಹಿ ಮೇ ವಿಭಾತಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 4॥

ಅಬೋಧಬೋಧೋ ಮಮ ನೈವ ಜಾತೋ
     ಬೋಧಸ್ವರೂಪಂ ಮಮ ನೈವ ಜಾತಮ್ ।
ನಿರ್ಬೋಧಬೋಧಂ ಚ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 5॥

ನ ಧರ್ಮಯುಕ್ತೋ ನ ಚ ಪಾಪಯುಕ್ತೋ
     ನ ಬಂಧಯುಕ್ತೋ ನ ಚ ಮೋಕ್ಷಯುಕ್ತಃ ।
ಯುಕ್ತಂ ತ್ವಯುಕ್ತಂ ನ ಚ ಮೇ ವಿಭಾತಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 6॥

ಪರಾಪರಂ ವಾ ನ ಚ ಮೇ ಕದಾಚಿತ್
     ಮಧ್ಯಸ್ಥಭಾವೋ ಹಿ ನ ಚಾರಿಮಿತ್ರಮ್ ।
ಹಿತಾಹಿತಂ ಚಾಪಿ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 7॥

ನೋಪಾಸಕೋ ನೈವಮುಪಾಸ್ಯರೂಪಂ
     ನ ಚೋಪದೇಶೋ ನ ಚ ಮೇ ಕ್ರಿಯಾ ಚ ।
ಸಂವಿತ್ಸ್ವರೂಪಂ ಚ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 8॥

ನೋ ವ್ಯಾಪಕಂ ವ್ಯಾಪ್ಯಮಿಹಾಸ್ತಿ ಕಿಂಚಿತ್
     ನ ಚಾಲಯಂ ವಾಪಿ ನಿರಾಲಯಂ ವಾ ।
ಅಶೂನ್ಯಶೂನ್ಯಂ ಚ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 9॥

ನ ಗ್ರಾಹಕೋ ಗ್ರಾಹ್ಯಕಮೇವ ಕಿಂಚಿತ್
     ನ ಕಾರಣಂ ವಾ ಮಮ ನೈವ ಕಾರ್ಯಮ್ ।
ಅಚಿಂತ್ಯಚಿಂತ್ಯಂ ಚ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 10॥

ನ ಭೇದಕಂ ವಾಪಿ ನ ಚೈವ ಭೇದ್ಯಂ
     ನ ವೇದಕಂ ವಾ ಮಮ ನೈವ ವೇದ್ಯಮ್ ।
ಗತಾಗತಂ ತಾತ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 11॥

ನ ಚಾಸ್ತಿ ದೇಹೋ ನ ಚ ಮೇ ವಿದೇಹೋ
     ಬುದ್ಧಿರ್ಮನೋ ಮೇ ನ ಹಿ ಚೇಂದ್ರಿಯಾಣಿ ।
ರಾಗೋ ವಿರಾಗಶ್ಚ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 12॥

ಉಲ್ಲೇಖಮಾತ್ರಂ ನ ಹಿ ಭಿನ್ನಮುಚ್ಚೈ-
     ರುಲ್ಲೇಖಮಾತ್ರಂ ನ ತಿರೋಹಿತಂ ವೈ ।
ಸಮಾಸಮಂ ಮಿತ್ರ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 13॥

ಜಿತೇಂದ್ರಿಯೋಽಹಂ ತ್ವಜಿತೇಂದ್ರಿಯೋ ವಾ
     ನ ಸಂಯಮೋ ಮೇ ನಿಯಮೋ ನ ಜಾತಃ ।
ಜಯಾಜಯೌ ಮಿತ್ರ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 14॥

ಅಮೂರ್ತಮೂರ್ತಿರ್ನ ಚ ಮೇ ಕದಾಚಿ-
     ದಾದ್ಯಂತಮಧ್ಯಂ ನ ಚ ಮೇ ಕದಾಚಿತ್ ।
ಬಲಾಬಲಂ ಮಿತ್ರ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 15॥

ಮೃತಾಮೃತಂ ವಾಪಿ ವಿಷಾವಿಷಂ ಚ
     ಸಂಜಾಯತೇ ತಾತ ನ ಮೇ ಕದಾಚಿತ್ ।
ಅಶುದ್ಧಶುದ್ಧಂ ಚ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 16॥

ಸ್ವಪ್ನಃ ಪ್ರಬೋಧೋ ನ ಚ ಯೋಗಮುದ್ರಾ
     ನಕ್ತಂ ದಿವಾ ವಾಪಿ ನ ಮೇ ಕದಾಚಿತ್ ।
ಅತುರ್ಯತುರ್ಯಂ ಚ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 17॥

ಸಂವಿದ್ಧಿ ಮಾಂ ಸರ್ವವಿಸರ್ವಮುಕ್ತಂ
     ಮಾಯಾ ವಿಮಾಯಾ ನ ಚ ಮೇ ಕದಾಚಿತ್ ।
ಸಂಧ್ಯಾದಿಕಂ ಕರ್ಮ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 18॥

ಸಂವಿದ್ಧಿ ಮಾಂ ಸರ್ವಸಮಾಧಿಯುಕ್ತಂ
     ಸಂವಿದ್ಧಿ ಮಾಂ ಲಕ್ಷ್ಯವಿಲಕ್ಷ್ಯಮುಕ್ತಮ್ ।
ಯೋಗಂ ವಿಯೋಗಂ ಚ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 19॥

ಮೂರ್ಖೋಽಪಿ ನಾಹಂ ನ ಚ ಪಂಡಿತೋಽಹಂ
     ಮೌನಂ ವಿಮೌನಂ ನ ಚ ಮೇ ಕದಾಚಿತ್ ।
ತರ್ಕಂ ವಿತರ್ಕಂ ಚ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 20॥

ಪಿತಾ ಚ ಮಾತಾ ಚ ಕುಲಂ ನ ಜಾತಿ-
     ರ್ಜನ್ಮಾದಿ ಮೃತ್ಯುರ್ನ ಚ ಮೇ ಕದಾಚಿತ್ ।
ಸ್ನೇಹಂ ವಿಮೋಹಂ ಚ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 21॥

ಅಸ್ತಂ ಗತೋ ನೈವ ಸದೋದಿತೋಽಹಂ
     ತೇಜೋವಿತೇಜೋ ನ ಚ ಮೇ ಕದಾಚಿತ್ ।
ಸಂಧ್ಯಾದಿಕಂ ಕರ್ಮ ಕಥಂ ವದಾಮಿ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 22॥

ಅಸಂಶಯಂ ವಿದ್ಧಿ ನಿರಾಕುಲಂ ಮಾಂ
     ಅಸಂಶಯಂ ವಿದ್ಧಿ ನಿರಂತರಂ ಮಾಮ್ ।
ಅಸಂಶಯಂ ವಿದ್ಧಿ ನಿರಂಜನಂ ಮಾಂ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 23॥

ಧ್ಯಾನಾನಿ ಸರ್ವಾಣಿ ಪರಿತ್ಯಜಂತಿ
     ಶುಭಾಶುಭಂ ಕರ್ಮ ಪರಿತ್ಯಜಂತಿ ।
ತ್ಯಾಗಾಮೃತಂ ತಾತ ಪಿಬಂತಿ ಧೀರಾಃ
     ಸ್ವರೂಪನಿರ್ವಾಣಮನಾಮಯೋಽಹಮ್ ॥ 24॥

ವಿಂದತಿ ವಿಂದತಿ ನ ಹಿ ನ ಹಿ ಯತ್ರ
     ಛಂದೋಲಕ್ಷಣಂ ನ ಹಿ ನ ಹಿ ತತ್ರ ।
ಸಮರಸಮಗ್ನೋ ಭಾವಿತಪೂತಃ
     ಪ್ರಲಪತಿ ತತ್ತ್ವಂ ಪರಮವಧೂತಃ ॥ 25॥

ಇತಿ ಚತುರ್ಥೋಽಧ್ಯಾಯಃ ॥ 4॥

ಅಥ ಪಂಚಮೋಧ್ಯಾಯಃ ॥

ಓಂ ಇತಿ ಗದಿತಂ ಗಗನಸಮಂ ತತ್
     ನ ಪರಾಪರಸಾರವಿಚಾರ ಇತಿ ।
ಅವಿಲಾಸವಿಲಾಸನಿರಾಕರಣಂ
     ಕಥಮಕ್ಷರಬಿಂದುಸಮುಚ್ಚರಣಮ್ ॥ 1॥

ಇತಿ ತತ್ತ್ವಮಸಿಪ್ರಭೃತಿಶ್ರುತಿಭಿಃ
     ಪ್ರತಿಪಾದಿತಮಾತ್ಮನಿ ತತ್ತ್ವಮಸಿ ।
ತ್ವಮುಪಾಧಿವಿವರ್ಜಿತಸರ್ವಸಮಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 2॥

ಅಧ ಊರ್ಧ್ವವಿವರ್ಜಿತಸರ್ವಸಮಂ
     ಬಹಿರಂತರವರ್ಜಿತಸರ್ವಸಮಮ್ ।
ಯದಿ ಚೈಕವಿವರ್ಜಿತಸರ್ವಸಮಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 3॥

ನ ಹಿ ಕಲ್ಪಿತಕಲ್ಪವಿಚಾರ ಇತಿ
     ನ ಹಿ ಕಾರಣಕಾರ್ಯವಿಚಾರ ಇತಿ ।
ಪದಸಂಧಿವಿವರ್ಜಿತಸರ್ವಸಮಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 4॥

ನ ಹಿ ಬೋಧವಿಬೋಧಸಮಾಧಿರಿತಿ
     ನ ಹಿ ದೇಶವಿದೇಶಸಮಾಧಿರಿತಿ ।
ನ ಹಿ ಕಾಲವಿಕಾಲಸಮಾಧಿರಿತಿ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 5॥

ನ ಹಿ ಕುಂಭನಭೋ ನ ಹಿ ಕುಂಭ ಇತಿ
     ನ ಹಿ ಜೀವವಪುರ್ನ ಹಿ ಜೀವ ಇತಿ ।
ನ ಹಿ ಕಾರಣಕಾರ್ಯವಿಭಾಗ ಇತಿ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 6॥

ಇಹ ಸರ್ವನಿರಂತರಮೋಕ್ಷಪದಂ
     ಲಘುದೀರ್ಘವಿಚಾರವಿಹೀನ ಇತಿ ।
ನ ಹಿ ವರ್ತುಲಕೋಣವಿಭಾಗ ಇತಿ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 7॥

ಇಹ ಶೂನ್ಯವಿಶೂನ್ಯವಿಹೀನ ಇತಿ
     ಇಹ ಶುದ್ಧವಿಶುದ್ಧವಿಹೀನ ಇತಿ ।
ಇಹ ಸರ್ವವಿಸರ್ವವಿಹೀನ ಇತಿ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 8॥

ನ ಹಿ ಭಿನ್ನವಿಭಿನ್ನವಿಚಾರ ಇತಿ
     ಬಹಿರಂತರಸಂಧಿವಿಚಾರ ಇತಿ ।
ಅರಿಮಿತ್ರವಿವರ್ಜಿತಸರ್ವಸಮಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 9॥

ನ ಹಿ ಶಿಷ್ಯವಿಶಿಷ್ಯಸ್ವರೂಪ ಇತಿ
     ನ ಚರಾಚರಭೇದವಿಚಾರ ಇತಿ ।
ಇಹ ಸರ್ವನಿರಂತರಮೋಕ್ಷಪದಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 10॥

ನನು ರೂಪವಿರೂಪವಿಹೀನ ಇತಿ
     ನನು ಭಿನ್ನವಿಭಿನ್ನವಿಹೀನ ಇತಿ ।
ನನು ಸರ್ಗವಿಸರ್ಗವಿಹೀನ ಇತಿ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 11॥

ನ ಗುಣಾಗುಣಪಾಶನಿಬಂಧ ಇತಿ
     ಮೃತಜೀವನಕರ್ಮ ಕರೋಮಿ ಕಥಮ್ ।
ಇತಿ ಶುದ್ಧನಿರಂಜನಸರ್ವಸಮಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 12॥

ಇಹ ಭಾವವಿಭಾವವಿಹೀನ ಇತಿ
     ಇಹ ಕಾಮವಿಕಾಮವಿಹೀನ ಇತಿ ।
ಇಹ ಬೋಧತಮಂ ಖಲು ಮೋಕ್ಷಸಮಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 13॥

ಇಹ ತತ್ತ್ವನಿರಂತರತತ್ತ್ವಮಿತಿ
     ನ ಹಿ ಸಂಧಿವಿಸಂಧಿವಿಹೀನ ಇತಿ ।
ಯದಿ ಸರ್ವವಿವರ್ಜಿತಸರ್ವಸಮಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 14॥

ಅನಿಕೇತಕುಟೀ ಪರಿವಾರಸಮಂ
     ಇಹಸಂಗವಿಸಂಗವಿಹೀನಪರಮ್ ।
ಇಹ ಬೋಧವಿಬೋಧವಿಹೀನಪರಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 15॥

ಅವಿಕಾರವಿಕಾರಮಸತ್ಯಮಿತಿ
     ಅವಿಲಕ್ಷವಿಲಕ್ಷಮಸತ್ಯಮಿತಿ ।
ಯದಿ ಕೇವಲಮಾತ್ಮನಿ ಸತ್ಯಮಿತಿ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 16॥

ಇಹ ಸರ್ವಸಮಂ ಖಲು ಜೀವ ಇತಿ
     ಇಹ ಸರ್ವನಿರಂತರಜೀವ ಇತಿ ।
ಇಹ ಕೇವಲನಿಶ್ಚಲಜೀವ ಇತಿ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 17॥

ಅವಿವೇಕವಿವೇಕಮಬೋಧ ಇತಿ
     ಅವಿಕಲ್ಪವಿಕಲ್ಪಮಬೋಧ ಇತಿ ।
ಯದಿ ಚೈಕನಿರಂತರಬೋಧ ಇತಿ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 18॥

ನ ಹಿ ಮೋಕ್ಷಪದಂ ನ ಹಿ ಬಂಧಪದಂ
     ನ ಹಿ ಪುಣ್ಯಪದಂ ನ ಹಿ ಪಾಪಪದಮ್ ।
ನ ಹಿ ಪೂರ್ಣಪದಂ ನ ಹಿ ರಿಕ್ತಪದಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 19॥

ಯದಿ ವರ್ಣವಿವರ್ಣವಿಹೀನಸಮಂ
     ಯದಿ ಕಾರಣಕಾರ್ಯವಿಹೀನಸಮಮ್ ।
ಯದಿಭೇದವಿಭೇದವಿಹೀನಸಮಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 20॥

ಇಹ ಸರ್ವನಿರಂತರಸರ್ವಚಿತೇ
     ಇಹ ಕೇವಲನಿಶ್ಚಲಸರ್ವಚಿತೇ ।
ದ್ವಿಪದಾದಿವಿವರ್ಜಿತಸರ್ವಚಿತೇ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 21॥

ಅತಿಸರ್ವನಿರಂತರಸರ್ವಗತಂ
     ಅತಿನಿರ್ಮಲನಿಶ್ಚಲಸರ್ವಗತಮ್ ।
ದಿನರಾತ್ರಿವಿವರ್ಜಿತಸರ್ವಗತಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 22॥

ನ ಹಿ ಬಂಧವಿಬಂಧಸಮಾಗಮನಂ
     ನ ಹಿ ಯೋಗವಿಯೋಗಸಮಾಗಮನಮ್ ।
ನ ಹಿ ತರ್ಕವಿತರ್ಕಸಮಾಗಮನಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 23॥

ಇಹ ಕಾಲವಿಕಾಲನಿರಾಕರಣಂ
     ಅಣುಮಾತ್ರಕೃಶಾನುನಿರಾಕರಣಮ್ ।
ನ ಹಿ ಕೇವಲಸತ್ಯನಿರಾಕರಣಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 24॥

ಇಹ ದೇಹವಿದೇಹವಿಹೀನ ಇತಿ
     ನನು ಸ್ವಪ್ನಸುಷುಪ್ತಿವಿಹೀನಪರಮ್ ।
ಅಭಿಧಾನವಿಧಾನವಿಹೀನಪರಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 25॥

ಗಗನೋಪಮಶುದ್ಧವಿಶಾಲಸಮಂ
     ಅತಿಸರ್ವವಿವರ್ಜಿತಸರ್ವಸಮಮ್ ।
ಗತಸಾರವಿಸಾರವಿಕಾರಸಮಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 26॥

ಇಹ ಧರ್ಮವಿಧರ್ಮವಿರಾಗತರ-
     ಮಿಹ ವಸ್ತುವಿವಸ್ತುವಿರಾಗತರಮ್ ।
ಇಹ ಕಾಮವಿಕಾಮವಿರಾಗತರಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 27॥

ಸುಖದುಃಖವಿವರ್ಜಿತಸರ್ವಸಮ-
     ಮಿಹ ಶೋಕವಿಶೋಕವಿಹೀನಪರಮ್ ।
ಗುರುಶಿಷ್ಯವಿವರ್ಜಿತತತ್ತ್ವಪರಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 28॥

ನ ಕಿಲಾಂಕುರಸಾರವಿಸಾರ ಇತಿ
     ನ ಚಲಾಚಲಸಾಮ್ಯವಿಸಾಮ್ಯಮಿತಿ ।
ಅವಿಚಾರವಿಚಾರವಿಹೀನಮಿತಿ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 29॥

ಇಹ ಸಾರಸಮುಚ್ಚಯಸಾರಮಿತಿ ।
     ಕಥಿತಂ ನಿಜಭಾವವಿಭೇದ ಇತಿ ।
ವಿಷಯೇ ಕರಣತ್ವಮಸತ್ಯಮಿತಿ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 30॥

ಬಹುಧಾ ಶ್ರುತಯಃ ಪ್ರವದಂತಿ ಯತೋ
     ವಿಯದಾದಿರಿದಂ ಮೃಗತೋಯಸಮಮ್ ।
ಯದಿ ಚೈಕನಿರಂತರಸರ್ವಸಮಂ
     ಕಿಮು ರೋದಿಷಿ ಮಾನಸಿ ಸರ್ವಸಮಮ್ ॥ 31॥

ವಿಂದತಿ ವಿಂದತಿ ನ ಹಿ ನ ಹಿ ಯತ್ರ
     ಛಂದೋಲಕ್ಷಣಂ ನ ಹಿ ನ ಹಿ ತತ್ರ ।
ಸಮರಸಮಗ್ನೋ ಭಾವಿತಪೂತಃ
     ಪ್ರಲಪತಿ ತತ್ತ್ವಂ ಪರಮವಧೂತಃ ॥ 32॥

ಇತಿ ಪಂಚಮೋಽಧ್ಯಾಯಃ ॥ 5॥

ಅಥ ಷಷ್ಠಮೋಽಧ್ಯಾಯಃ ॥

ಬಹುಧಾ ಶ್ರುತಯಃ ಪ್ರವದಂತಿ ವಯಂ
     ವಿಯದಾದಿರಿದಂ ಮೃಗತೋಯಸಮಮ್ ।
ಯದಿ ಚೈಕನಿರಂತರಸರ್ವಶಿವ-
     ಮುಪಮೇಯಮಥೋಹ್ಯುಪಮಾ ಚ ಕಥಮ್ ॥ 1॥

ಅವಿಭಕ್ತಿವಿಭಕ್ತಿವಿಹೀನಪರಂ
     ನನು ಕಾರ್ಯವಿಕಾರ್ಯವಿಹೀನಪರಮ್ ।
ಯದಿ ಚೈಕನಿರಂತರಸರ್ವಶಿವಂ
     ಯಜನಂ ಚ ಕಥಂ ತಪನಂ ಚ ಕಥಮ್ ॥ 2॥

ಮನ ಏವ ನಿರಂತರಸರ್ವಗತಂ
     ಹ್ಯವಿಶಾಲವಿಶಾಲವಿಹೀನಪರಮ್ ।
ಮನ ಏವ ನಿರಂತರಸರ್ವಶಿವಂ
     ಮನಸಾಪಿ ಕಥಂ ವಚಸಾ ಚ ಕಥಮ್ ॥ 3॥

ದಿನರಾತ್ರಿವಿಭೇದನಿರಾಕರಣ-
     ಮುದಿತಾನುದಿತಸ್ಯ ನಿರಾಕರಣಮ್ ।
ಯದಿ ಚೈಕನಿರಂತರಸರ್ವಶಿವಂ
     ರವಿಚಂದ್ರಮಸೌ ಜ್ವಲನಶ್ಚ ಕಥಮ್ ॥ 4॥

ಗತಕಾಮವಿಕಾಮವಿಭೇದ ಇತಿ
     ಗತಚೇಷ್ಟವಿಚೇಷ್ಟವಿಭೇದ ಇತಿ ।
ಯದಿ ಚೈಕನಿರಂತರಸರ್ವಶಿವಂ
     ಬಹಿರಂತರಭಿನ್ನಮತಿಶ್ಚ ಕಥಮ್ ॥ 5॥

ಯದಿ ಸಾರವಿಸಾರವಿಹೀನ ಇತಿ
     ಯದಿ ಶೂನ್ಯವಿಶೂನ್ಯವಿಹೀನ ಇತಿ ।
ಯದಿ ಚೈಕನಿರಂತರಸರ್ವಶಿವಂ
     ಪ್ರಥಮಂ ಚ ಕಥಂ ಚರಮಂ ಚ ಕಥಮ್ ॥ 6॥

ಯದಿಭೇದವಿಭೇದನಿರಾಕರಣಂ
     ಯದಿ ವೇದಕವೇದ್ಯನಿರಾಕರಣಮ್ ।
ಯದಿ ಚೈಕನಿರಂತರಸರ್ವಶಿವಂ
     ತೃತೀಯಂ ಚ ಕಥಂ ತುರೀಯಂ ಚ ಕಥಮ್ ॥ 7॥

ಗದಿತಾವಿದಿತಂ ನ ಹಿ ಸತ್ಯಮಿತಿ
     ವಿದಿತಾವಿದಿತಂ ನಹಿ ಸತ್ಯಮಿತಿ ।
ಯದಿ ಚೈಕನಿರಂತರಸರ್ವಶಿವಂ
     ವಿಷಯೇಂದ್ರಿಯಬುದ್ಧಿಮನಾಂಸಿ ಕಥಮ್ ॥ 8॥

ಗಗನಂ ಪವನೋ ನ ಹಿ ಸತ್ಯಮಿತಿ
     ಧರಣೀ ದಹನೋ ನ ಹಿ ಸತ್ಯಮಿತಿ ।
ಯದಿ ಚೈಕನಿರಂತರಸರ್ವಶಿವಂ
     ಜಲದಶ್ಚ ಕಥಂ ಸಲಿಲಂ ಚ ಕಥಮ್ ॥ 9॥

ಯದಿ ಕಲ್ಪಿತಲೋಕನಿರಾಕರಣಂ
     ಯದಿ ಕಲ್ಪಿತದೇವನಿರಾಕರಣಮ್ ।
ಯದಿ ಚೈಕನಿರಂತರಸರ್ವಶಿವಂ
     ಗುಣದೋಷವಿಚಾರಮತಿಶ್ಚ ಕಥಮ್ ॥ 10॥

ಮರಣಾಮರಣಂ ಹಿ ನಿರಾಕರಣಂ
     ಕರಣಾಕರಣಂ ಹಿ ನಿರಾಕರಣಮ್ ।
ಯದಿ ಚೈಕನಿರಂತರಸರ್ವಶಿವಂ
     ಗಮನಾಗಮನಂ ಹಿ ಕಥಂ ವದತಿ ॥ 11॥

ಪ್ರಕೃತಿಃ ಪುರುಷೋ ನ ಹಿ ಭೇದ ಇತಿ
     ನ ಹಿ ಕಾರಣಕಾರ್ಯವಿಭೇದ ಇತಿ ।
ಯದಿ ಚೈಕನಿರಂತರಸರ್ವಶಿವಂ
     ಪುರುಷಾಪುರುಷಂ ಚ ಕಥಂ ವದತಿ ॥ 12॥

ತೃತೀಯಂ ನ ಹಿ ದುಃಖಸಮಾಗಮನಂ
     ನ ಗುಣಾದ್ದ್ವಿತೀಯಸ್ಯ ಸಮಾಗಮನಮ್ ।
ಯದಿ ಚೈಕನಿರಂತರಸರ್ವಶಿವಂ
     ಸ್ಥವಿರಶ್ಚ ಯುವಾ ಚ ಶಿಶುಶ್ಚ ಕಥಮ್ ॥ 13॥

ನನು ಆಶ್ರಮವರ್ಣವಿಹೀನಪರಂ
     ನನು ಕಾರಣಕರ್ತೃವಿಹೀನಪರಮ್ ।
ಯದಿ ಚೈಕನಿರಂತರಸರ್ವಶಿವ-
     ಮವಿನಷ್ಟವಿನಷ್ಟಮತಿಶ್ಚ ಕಥಮ್ ॥ 14॥

ಗ್ರಸಿತಾಗ್ರಸಿತಂ ಚ ವಿತಥ್ಯಮಿತಿ
     ಜನಿತಾಜನಿತಂ ಚ ವಿತಥ್ಯಮಿತಿ ।
ಯದಿ ಚೈಕನಿರಂತರಸರ್ವಶಿವ-
     ಮವಿನಾಶಿ ವಿನಾಶಿ ಕಥಂ ಹಿ ಭವೇತ್ ॥ 15॥

ಪುರುಷಾಪುರುಷಸ್ಯ ವಿನಷ್ಟಮಿತಿ
     ವನಿತಾವನಿತಸ್ಯ ವಿನಷ್ಟಮಿತಿ ।
ಯದಿ ಚೈಕನಿರಂತರಸರ್ವಶಿವ-
     ಮವಿನೋದವಿನೋದಮತಿಶ್ಚ ಕಥಮ್ ॥ 16॥

ಯದಿ ಮೋಹವಿಷಾದವಿಹೀನಪರೋ
     ಯದಿ ಸಂಶಯಶೋಕವಿಹೀನಪರಃ ।
ಯದಿ ಚೈಕನಿರಂತರಸರ್ವಶಿವ-
     ಮಹಮತ್ರ ಮಮೇತಿ ಕಥಂ ಚ ಪುನಃ ॥ 17॥ ಮಹಮೇತಿ
ನನು ಧರ್ಮವಿಧರ್ಮವಿನಾಶ ಇತಿ
     ನನು ಬಂಧವಿಬಂಧವಿನಾಶ ಇತಿ ।
ಯದಿ ಚೈಕನಿರಂತರಸರ್ವಶಿವಂ-
     ಮಿಹದುಃಖವಿದುಃಖಮತಿಶ್ಚ ಕಥಮ್ ॥ 18॥

ನ ಹಿ ಯಾಜ್ಞಿಕಯಜ್ಞವಿಭಾಗ ಇತಿ
     ನ ಹುತಾಶನವಸ್ತುವಿಭಾಗ ಇತಿ ।
ಯದಿ ಚೈಕನಿರಂತರಸರ್ವಶಿವಂ
     ವದ ಕರ್ಮಫಲಾನಿ ಭವಂತಿ ಕಥಮ್ ॥ 19॥

ನನು ಶೋಕವಿಶೋಕವಿಮುಕ್ತ ಇತಿ
     ನನು ದರ್ಪವಿದರ್ಪವಿಮುಕ್ತ ಇತಿ ।
ಯದಿ ಚೈಕನಿರಂತರಸರ್ವಶಿವಂ
     ನನು ರಾಗವಿರಾಗಮತಿಶ್ಚ ಕಥಮ್ ॥ 20॥

ನ ಹಿ ಮೋಹವಿಮೋಹವಿಕಾರ ಇತಿ
     ನ ಹಿ ಲೋಭವಿಲೋಭವಿಕಾರ ಇತಿ ।
ಯದಿ ಚೈಕನಿರಂತರಸರ್ವಶಿವಂ
     ಹ್ಯವಿವೇಕವಿವೇಕಮತಿಶ್ಚ ಕಥಮ್ ॥ 21॥

ತ್ವಮಹಂ ನ ಹಿ ಹಂತ ಕದಾಚಿದಪಿ
     ಕುಲಜಾತಿವಿಚಾರಮಸತ್ಯಮಿತಿ ।
ಅಹಮೇವ ಶಿವಃ ಪರಮಾರ್ಥ ಇತಿ
     ಅಭಿವಾದನಮತ್ರ ಕರೋಮಿ ಕಥಮ್ ॥ 22॥

ಗುರುಶಿಷ್ಯವಿಚಾರವಿಶೀರ್ಣ ಇತಿ
     ಉಪದೇಶವಿಚಾರವಿಶೀರ್ಣ ಇತಿ ।
ಅಹಮೇವ ಶಿವಃ ಪರಮಾರ್ಥ ಇತಿ
     ಅಭಿವಾದನಮತ್ರ ಕರೋಮಿ ಕಥಮ್ ॥ 23॥

ನ ಹಿ ಕಲ್ಪಿತದೇಹವಿಭಾಗ ಇತಿ
     ನ ಹಿ ಕಲ್ಪಿತಲೋಕವಿಭಾಗ ಇತಿ ।
ಅಹಮೇವ ಶಿವಃ ಪರಮಾರ್ಥ ಇತಿ
     ಅಭಿವಾದನಮತ್ರ ಕರೋಮಿ ಕಥಮ್ ॥ 24॥

ಸರಜೋ ವಿರಜೋ ನ ಕದಾಚಿದಪಿ
     ನನು ನಿರ್ಮಲನಿಶ್ಚಲಶುದ್ಧ ಇತಿ ।
ಅಹಮೇವ ಶಿವಃ ಪರಮಾರ್ಥ ಇತಿ
     ಅಭಿವಾದನಮತ್ರ ಕರೋಮಿ ಕಥಮ್ ॥ 25॥

ನ ಹಿ ದೇಹವಿದೇಹವಿಕಲ್ಪ ಇತಿ
     ಅನೃತಂ ಚರಿತಂ ನ ಹಿ ಸತ್ಯಮಿತಿ ।
ಅಹಮೇವ ಶಿವಃ ಪರಮಾರ್ಥ ಇತಿ
     ಅಭಿವಾದನಮತ್ರ ಕರೋಮಿ ಕಥಮ್ ॥ 26॥

ವಿಂದತಿ ವಿಂದತಿ ನ ಹಿ ನ ಹಿ ಯತ್ರ
     ಛಂದೋಲಕ್ಷಣಂ ನ ಹಿ ನ ಹಿ ತತ್ರ ।
ಸಮರಸಮಗ್ನೋ ಭಾವಿತಪೂತಃ
     ಪ್ರಲಪತಿ ತತ್ತ್ವಂ ಪರಮವಧೂತಃ ॥ 27॥

ಇತಿ ಷಷ್ಠಮೋಽಧ್ಯಾಯಃ ॥ 6॥

ಅಥ ಸಪ್ತಮೋಽಧ್ಯಾಯಃ ॥

ರಥ್ಯಾಕರ್ಪಟವಿರಚಿತಕಂಥಃ
     ಪುಣ್ಯಾಪುಣ್ಯವಿವರ್ಜಿತಪಂಥಃ ।
ಶೂನ್ಯಾಗಾರೇ ತಿಷ್ಠತಿ ನಗ್ನೋ
     ಶುದ್ಧನಿರಂಜನಸಮರಸಮಗ್ನಃ ॥ 1॥

ಲಕ್ಷ್ಯಾಲಕ್ಷ್ಯವಿವರ್ಜಿತಲಕ್ಷ್ಯೋ
     ಯುಕ್ತಾಯುಕ್ತವಿವರ್ಜಿತದಕ್ಷಃ ।
ಕೇವಲತತ್ತ್ವನಿರಂಜನಪೂತೋ
     ವಾದವಿವಾದಃ ಕಥಮವಧೂತಃ ॥ 2॥

ಆಶಾಪಾಶವಿಬಂಧನಮುಕ್ತಾಃ
     ಶೌಚಾಚಾರವಿವರ್ಜಿತಯುಕ್ತಾಃ ।
ಏವಂ ಸರ್ವವಿವರ್ಜಿತಶಾಂತಾ-
     ಸ್ತತ್ತ್ವಂ ಶುದ್ಧನಿರಂಜನವಂತಃ ॥ 3॥

ಕಥಮಿಹ ದೇಹವಿದೇಹವಿಚಾರಃ
     ಕಥಮಿಹ ರಾಗವಿರಾಗವಿಚಾರಃ ।
ನಿರ್ಮಲನಿಶ್ಚಲಗಗನಾಕಾರಂ
     ಸ್ವಯಮಿಹ ತತ್ತ್ವಂ ಸಹಜಾಕಾರಮ್ ॥ 4॥

ಕಥಮಿಹ ತತ್ತ್ವಂ ವಿಂದತಿ ಯತ್ರ
     ರೂಪಮರೂಪಂ ಕಥಮಿಹ ತತ್ರ ।
ಗಗನಾಕಾರಃ ಪರಮೋ ಯತ್ರ
     ವಿಷಯೀಕರಣಂ ಕಥಮಿಹ ತತ್ರ ॥ 5॥

ಗಗನಾಕಾರನಿರಂತರಹಂಸ-
     ಸ್ತತ್ತ್ವವಿಶುದ್ಧನಿರಂಜನಹಂಸಃ ।
ಏವಂ ಕಥಮಿಹ ಭಿನ್ನವಿಭಿನ್ನಂ
     ಬಂಧವಿಬಂಧವಿಕಾರವಿಭಿನ್ನಮ್ ॥ 6॥

ಕೇವಲತತ್ತ್ವನಿರಂತರಸರ್ವಂ
     ಯೋಗವಿಯೋಗೌ ಕಥಮಿಹ ಗರ್ವಮ್ ।
ಏವಂ ಪರಮನಿರಂತರಸರ್ವ-
     ಮೇವಂ ಕಥಮಿಹ ಸಾರವಿಸಾರಮ್ ॥ 7॥

ಕೇವಲತತ್ತ್ವನಿರಂಜನಸರ್ವಂ
     ಗಗನಾಕಾರನಿರಂತರಶುದ್ಧಮ್ ।
ಏವಂ ಕಥಮಿಹ ಸಂಗವಿಸಂಗಂ
     ಸತ್ಯಂ ಕಥಮಿಹ ರಂಗವಿರಂಗಮ್ ॥ 8॥

ಯೋಗವಿಯೋಗೈ ರಹಿತೋ ಯೋಗೀ
     ಭೋಗವಿಭೋಗೈ ರಹಿತೋ ಭೋಗೀ ।
ಏವಂ ಚರತಿ ಹಿ ಮಂದಂ ಮಂದಂ
     ಮನಸಾ ಕಲ್ಪಿತಸಹಜಾನಂದಮ್ ॥ 9॥

ಬೋಧವಿಬೋಧೈಃ ಸತತಂ ಯುಕ್ತೋ
     ದ್ವೈತಾದ್ವೈತೈಃ ಕಥಮಿಹ ಮುಕ್ತಃ ।
ಸಹಜೋ ವಿರಜಃ ಕಥಮಿಹ ಯೋಗೀ
     ಶುದ್ಧನಿರಂಜನಸಮರಸಭೋಗೀ ॥ 10॥

ಭಗ್ನಾಭಗ್ನವಿವರ್ಜಿತಭಗ್ನೋ
     ಲಗ್ನಾಲಗ್ನವಿವರ್ಜಿತಲಗ್ನಃ ।
ಏವಂ ಕಥಮಿಹ ಸಾರವಿಸಾರಃ
     ಸಮರಸತತ್ತ್ವಂ ಗಗನಾಕಾರಃ ॥ 11॥

ಸತತಂ ಸರ್ವವಿವರ್ಜಿತಯುಕ್ತಃ
     ಸರ್ವಂ ತತ್ತ್ವವಿವರ್ಜಿತಮುಕ್ತಃ ।
ಏವಂ ಕಥಮಿಹ ಜೀವಿತಮರಣಂ
     ಧ್ಯಾನಾಧ್ಯಾನೈಃ ಕಥಮಿಹ ಕರಣಮ್ ॥ 12॥

ಇಂದ್ರಜಾಲಮಿದಂ ಸರ್ವಂ ಯಥಾ ಮರುಮರೀಚಿಕಾ ।
ಅಖಂಡಿತಮನಾಕಾರೋ ವರ್ತತೇ ಕೇವಲಃ ಶಿವಃ ॥ 13॥

ಧರ್ಮಾದೌ ಮೋಕ್ಷಪರ್ಯಂತಂ ನಿರೀಹಾಃ ಸರ್ವಥಾ ವಯಮ್ ।
ಕಥಂ ರಾಗವಿರಾಗೈಶ್ಚ ಕಲ್ಪಯಂತಿ ವಿಪಶ್ಚಿತಃ ॥ 14॥

ವಿಂದತಿ ವಿಂದತಿ ನ ಹಿ ನ ಹಿ ಯತ್ರ
     ಛಂದೋಲಕ್ಷಣಂ ನ ಹಿ ನ ಹಿ ತತ್ರ ।
ಸಮರಸಮಗ್ನೋ ಭಾವಿತಪೂತಃ
     ಪ್ರಲಪತಿ ತತ್ತ್ವಂ ಪರಮವಧೂತಃ ॥ 15॥

ಇತಿ ಸಪ್ತಮೋಽಧ್ಯಾಯಃ ॥ 7॥

ಅಥ ಅಷ್ಟಮೋಽಧ್ಯಾಯಃ ॥

ತ್ವದ್ಯಾತ್ರಯಾ ವ್ಯಾಪಕತಾ ಹತಾ ತೇ
     ಧ್ಯಾನೇನ ಚೇತಃಪರತಾ ಹತಾ ತೇ ।
ಸ್ತುತ್ಯಾ ಮಯಾ ವಾಕ್ಪರತಾ ಹತಾ ತೇ
     ಕ್ಷಮಸ್ವ ನಿತ್ಯಂ ತ್ರಿವಿಧಾಪರಾಧಾನ್ ॥ 1॥

ಕಾಮೈರಹತಧೀರ್ದಾಂತೋ ಮೃದುಃ ಶುಚಿರಕಿಂಚನಃ ।
ಅನೀಹೋ ಮಿತಭುಕ್ ಶಾಂತಃ ಸ್ಥಿರೋ ಮಚ್ಛರಣೋ ಮುನಿಃ ॥ 2॥

ಅಪ್ರಮತ್ತೋ ಗಭೀರಾತ್ಮಾ ಧೃತಿಮಾನ್ ಜಿತಷಡ್ಗುಣಃ ।
ಅಮಾನೀ ಮಾನದಃ ಕಲ್ಪೋ ಮೈತ್ರಃ ಕಾರುಣಿಕಃ ಕವಿಃ ॥ 3॥

ಕೃಪಾಲುರಕೃತದ್ರೋಹಸ್ತಿತಿಕ್ಷುಃ ಸರ್ವದೇಹಿನಾಮ್ ।
ಸತ್ಯಸಾರೋಽನವದ್ಯಾತ್ಮಾ ಸಮಃ ಸರ್ವೋಪಕಾರಕಃ ॥ 4॥

ಅವಧೂತಲಕ್ಷಣಂ ವರ್ಣೈರ್ಜ್ಞಾತವ್ಯಂ ಭಗವತ್ತಮೈಃ ।
ವೇದವರ್ಣಾರ್ಥತತ್ತ್ವಜ್ಞೈರ್ವೇದವೇದಾಂತವಾದಿಭಿಃ ॥ 5॥

ಆಶಾಪಾಶವಿನಿರ್ಮುಕ್ತ ಆದಿಮಧ್ಯಾಂತನಿರ್ಮಲಃ ।
ಆನಂದೇ ವರ್ತತೇ ನಿತ್ಯಮಕಾರಂ ತಸ್ಯ ಲಕ್ಷಣಮ್ ॥ 6॥

ವಾಸನಾ ವರ್ಜಿತಾ ಯೇನ ವಕ್ತವ್ಯಂ ಚ ನಿರಾಮಯಮ್ ।
ವರ್ತಮಾನೇಷು ವರ್ತೇತ ವಕಾರಂ ತಸ್ಯ ಲಕ್ಷಣಮ್ ॥ 7॥

ಧೂಲಿಧೂಸರಗಾತ್ರಾಣಿ ಧೂತಚಿತ್ತೋ ನಿರಾಮಯಃ ।
ಧಾರಣಾಧ್ಯಾನನಿರ್ಮುಕ್ತೋ ಧೂಕಾರಸ್ತಸ್ಯ ಲಕ್ಷಣಮ್ ॥ 8॥

ತತ್ತ್ವಚಿಂತಾ ಧೃತಾ ಯೇನ ಚಿಂತಾಚೇಷ್ಟಾವಿವರ್ಜಿತಃ ।
ತಮೋಽಹಂಕಾರನಿರ್ಮುಕ್ತಸ್ತಕಾರಸ್ತಸ್ಯ ಲಕ್ಷಣಮ್ ॥ 9॥

ದತ್ತಾತ್ರೇಯಾವಧೂತೇನ ನಿರ್ಮಿತಾನಂದರೂಪಿಣಾ ।
ಯೇ ಪಠಂತಿ ಚ ಶೃಣ್ವಂತಿ ತೇಷಾಂ ನೈವ ಪುನರ್ಭವಃ ॥ 10॥

ಇತಿ ಅಷ್ಟಮೋಽಧ್ಯಾಯಃ ॥ 8॥

ಇತಿ ಅವಧೂತಗೀತಾ ಸಮಾಪ್ತಾ ॥