ನನ್ನ ಕಣ್ಣಿಗೆ ಕೃಷ್ಣನು ಗೋಚರನಾಗಲಿ (ಶ್ರೀಶಂಕರಾಚಾರ್ಯರ ಕೃತಿಸಂಗ್ರಹ)
ಶ್ರಿಯಾಶ್ಲಿಷ್ಟೋ ವಿಷ್ಣುಃ ಸ್ಥಿರಚರಗುರುರ್ವೇದವಿಷಯೋ
ಧಿಯಾಂ ಸಾಕ್ಷೀ ಶುದ್ಧೋ ಹರಿರಸುರಹನ್ತಾಬ್ಜನಯನಃ |
ಗದೀ ಶಙ್ಖೇ ಚಕ್ರೀ ವಿಮಲವನಮಾಲೀ ಸ್ಥಿರರುಚಿಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ನೋಕ್ಷಿವಿಷಯಃ ||1||
ಲಕ್ಷ್ಮಿಯಿಂದಾಲಿಂಗತನಾಗಿರುವ ವಿಷ್ಣುವೂ, ಸ್ಥಾವರಜಂಗಮಪ್ರಾಣಿಗಳಿಗೆಲ್ಲ ಗುರುವೂ, ವೇದಗಳು ತಿಳಿಸಿಕೊಡತಕ್ಕ ಪರಮಾರ್ಥವಿಷಯವೂ, ಬುದ್ಧಿವೃತ್ತಿಗಳಿಗೆ ಸಾಕ್ಷಿಯಾಗಿರುವ ಶುದ್ಧಚೈತನ್ಯಸ್ವರೂಪನೂ, ಅಸುರರನ್ನು ಕೊಲೆಮಾಡುವ ಹರಿಯೂ, ಕಮಲನೇತ್ರನೂ, ಗದೆ, ಶಂಖ, ಚಕ್ರ, ನಿರ್ಮಲವಾದ ವನಮಾಲೆ ಇವುಗಳನ್ನು ಧರಿಸಿರುವವನೂ ನಿತ್ಯವಾದ ಕಾಂತಿಯುಳ್ಳವನೂ ಶರಣುಹೋಗುವದಕ್ಕೆ ತಕ್ಕವನೂ ಆದ ಶ್ರೀಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!
ಯತಃ ಸರ್ವಂ ಜಾತಂ ವಿಯದನಿಲಮುಖ್ಯಂ ಜಗದಿದಂ
ಸ್ಥಿತೌ ನಿಃಶೇಷಂ ಯೋವತಿ ನಿಜಸುಖಾಂಶೇನ ಮಧುಹಾ |
ಲಯೇ ಸರ್ವಂ ಸ್ವಸ್ಮಿನ್ ಹರತಿ ಕಲಯಾ ಯಸ್ತು ಸ ವಿಭುಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||2||
ಆಕಾಶ, ವಾಯು - ಮುಂತಾದ ಈ ಜಗತ್ತೆಲ್ಲವೂ ಯಾವಾತನಿಂದ ಹುಟ್ಟಿರುವದೋ, ಸ್ಥಿತಿಕಾಲದಲ್ಲಿ ಇದೆಲ್ಲವನ್ನೂ ತನ್ನ ಆನಂದದ ಅಂಶದಿಂದ ಯಾವಾತನು ಕಾಪಾಡುತ್ತಿರುವನೋ, ಯಾವ ಮಧುಸೂದನನು ಪ್ರಲಯಕಾಲದಲ್ಲಿ ತನ್ನ ಕಲಾಮಾತ್ರದಿಂದ ಎಲ್ಲವನ್ನೂ ತನ್ನಲ್ಲಿಯೇ ಅಡಗಿಸಿಕೊಳ್ಳುವನೋ, ಆ ಸರ್ವವ್ಯಾಪಕನೂ ಶರಣುಹೋಗುವದಕ್ಕೆ ತಕ್ಕವನ್ನೂ, ಲೋಕಗಳೊಡೆಯನೂ ಆದ ಶ್ರೀ ಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!
ಅಸೂನಾಯಮ್ಯಾದೌ ಯಮನಿಯಮಮುಖ್ಯೈಃ ಸುಕರಣೈ-
ರ್ನಿರುಧ್ಯೇದಂ ಚಿತ್ತಂ ಪೃದಿ ವಿಲಯಮಾನೀಯ ಸಕಲಮ್ |
ಯಮಿಡ್ಯಂ ಪಶ್ಯನ್ತಿ ಪ್ರವರಮತಯೋ ಮಾಯಿನಮಸೌ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||3||
ಶ್ರೇಷ್ಠಮತಿಗಳಾದವರು ಪ್ರಾಣಾಯಾಮವನ್ನು ಮಾಡಿಕೊಂಡು ಯಮ, ನಿಯಮ ಮುಂತಾದ ಉತ್ತಮ ಸಾಧನಗಳಿಂದ ಈ ಚಿತ್ತವನ್ನು ನಿರೋಧಮಾಡಿಕೊಂಡು ಸಕಲವನ್ನೂ ಹೃದಯದಲ್ಲಿ ಲಯಮಾಡಿಕೊಂಡು ಸ್ತುತ್ಯನೂ ಮಾಯಾವಿಯೂ ಆದ ಯಾವಾತನನ್ನು ಕಾಣುವರೋ ಆ ಶರಣುಹೋಗುವದಕ್ಕೆ ತಕ್ಕವನೂ ಲೋಕಗಳೊಡೆಯನೂ ಆದ ಶ್ರೀಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!
ಪೃಥಿವ್ಯಾಂ ತಿಷ್ಮನ್ಯೋ ಯಮಯತಿ ಮಹೀಂ ವೇದ ನ ಧರಾ
ಯಮಿತ್ಯಾದೌ ವೇದೋ ವದತಿ ಜಗತಾಮೀಶಮಮಲಮ್ |
ನಿಯನ್ತಾರಂ ಧ್ಯೇಯಂ ಮುನಿಸುರನೃಣಾಂ ಮೋಕ್ಷದಮಸೌ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||4||
ಯಾವಾತನು ಪೃಥ್ವಿಯಲ್ಲಿದ್ದುಕೊಂಡು ಪೃಥ್ವಿಯನ್ನು ವಶದಲ್ಲಿಟ್ಟುಕೊಂಡಿರುವನೋ ಆದರೆ ಯಾವಾತನನ್ನು ಪೃಥ್ವೀದೇವಿಯು ಅರಿಯಳೋ ಎಂಬುದೇ ಮುಂತಾದ ವಾಕ್ಕಿನಲ್ಲಿ ವೇದವು ಯಾವಾತನನ್ನೇ ಜಗತ್ತಿಗೆ ಈಶ್ವರನೆಂದೂ ನಿರ್ಮಲನೆಂದೂ ನಿಯಂತೃವೆಂದೂ ಧ್ಯಾನಮಾಡುವುದಕ್ಕೆ ತಕ್ಕವನೆಂದೂ ಮುನಿಗಳಿಗೂ ದೇವತೆಗಳಿಗೂ ಮನುಷ್ಯರಿಗೂ ಮೋಕ್ಷವನ್ನು ಕೊಡತಕ್ಕವನೆಂದೂ ಹೇಳಿತ್ತಿದೆಯೋ ಆ ಶರಣಹೋಗುವದಕ್ಕೆ ತಕ್ಕವನೂ ಲೋಕಗಳೊಡೆಯನೂ ಆದ ಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!
ಮಹೇನ್ದ್ರಾದಿರ್ದೇವೋ ಜಯತಿ ದಿತಿಜಾನ್ಯಸ್ಯ ಬಲತೋ
ನ ಕಸ್ಯ ಸ್ವಾತನ್ತ್ಯ್ರಂ ಕ್ವಚಿದಪಿ ಕೃತೌ ಯತ್ಕೃತಿಮೃತೇ |
ಬಲಾರಾತೇರ್ಗರ್ವಂ ಪರಿಹರತಿ ಯೋಸೌ ವಿಜಯಿನಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||5||
ಮಹೇಂದ್ರನೇ ಮೊದಲಾದ ದೇವತೆಗಳು ಯಾವಾತನ ಬಲದಿಂದಲೇ ದೈತ್ಯರನ್ನು ಗೆಲ್ಲುವರೋ, ಯಾವಾತನ ಪ್ರಯತ್ನವಿಲ್ಲದಿದ್ದರೆ ಮತ್ತೆ ಯಾರಿಗೂ ಪ್ರಯತ್ನಸ್ವಾತಂತ್ರ್ಯವಿಲ್ಲವೋ, ವಿಜಯಿಯಾದ ಇಂದ್ರನ ಗರ್ವವನ್ನು ಯಾವಾತನು ಹೋಗಲಾಡಿಸಿರುವನೋ ಆ ಶರಣುಹೋಗುವದಕ್ಕೆ ತಕ್ಕವನೂ ಲೋಕಗಳ ಒಡೆಯನೂ ಆದ ಕೃಷ್ಣನು ನನ್ನ
ಕಣ್ಣುಗಳಿಗೆ ಗೋಚರನಾಗಲಿ!
ವಿನಾ ಯಸ್ಯ ಧ್ಯಾನಂ ವ್ರಜತಿ ಪಶುತಾಂ ಸೂಕರಮುಖಾಂ
ವಿನಾ ಯಸ್ಯ ಜ್ಞಾನಂ ಜನಿಮೃತಿಭಯಂ ಯಾತಿ ಜನತಾ |
ವಿನಾ ಯಸ್ಯ ಸ್ಮೃತ್ಯಾ ಕ್ಷಮಿಶತಜನಿಂ ಯಾತಿ, ಸ ವಿಭುಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||6||
ಯಾವಾತನ ಧ್ಯಾನವಿಲ್ಲದಿದ್ದರೆ ಜನರು ಹಂದಿಯೇ ಮುಂತಾದ ಪಶುಜನ್ಮವನ್ನು ಪಡೆಯುವರೋ, ಯಾವಾತನ ಜ್ಞಾನವಿಲ್ಲದಿದ್ದರೆ ಜನನಮರಣ ಭಯವನ್ನು ಪಡೆಯವರೋ, ಯಾವಾತನ ಸ್ಮೃತಿಯಿಲ್ಲದಿದ್ದರೆ ನೂರಾರು ಬಗೆಯ ಕ್ರಿಮಿಗಳ ಜನ್ಮವನ್ನು ಪಡೆಯುವರೋ ಆ ವಿಭುವೂ ಶರಣು ಹೋಗುವದಕ್ಕೆ ತಕ್ಕವನೂ ಲೋಕಗಳ ಒಡೆಯನೂ ಆದ ಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!
ನರಾತಙ್ಕೋಟ್ಟಙ್ಕಃ ಶರಣಶರಣೋ ಭ್ರಾನ್ತಿಹರಣೋ
ಘನಶ್ಯಾಮೋ ವಾಮೋ ವ್ರಜಶಿಶುವಯಸ್ಯೋರ್ಜುನಸಖಃ |
ಸ್ವಯಮ್ಭೂರ್ಭೂತಾನಾಂ ಜನಕ ಉಚಿತಾಚಾರಸುಖದಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||7||
ಜನರಿಗೆ ಒದಗುವ ಭಯಗಳನ್ನು ನಾಶಪಡಿಸುವವನೂ ಶರಣಾಗತರನ್ನೂ ರಕ್ಷಿಸುವವನೂ, ಭ್ರಾಂತಿಯನ್ನು ತೊಲಗಿಸುವವನೂ, ಮೇಘದಂತೆ ಕಪ್ಪುಬಣ್ಣದವನೂ, ಸುಂದರನೂ, ಗೋಪಾಲಕರ ಗೆಳೆಯನೂ, ಅರ್ಜುನನ ಸ್ನೇಹಿತನೂ, ತಾನೇ ತೋರಿಕೊಳ್ಳುವನನೂ, ಸಕಲಭೂತಗಳನ್ನು ಸೃಷ್ಟಿಸಿದಾತನೂ, ಯೋಗ್ಯವಾದ ಆಚಾರವುಳ್ಳವರಿಗೆ ಸುಖವನ್ನು ಕೊಡುವಾತನೂ, ಶರಣುಹೋಗುವದಕ್ಕೆ ತಕ್ಕವನೂ, ಲೋಕಗಳೊಡೆಯನೂ ಆದ ಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!
ಯದಾ ಧರ್ಮಗ್ಲಾನಿರ್ಭವತಿ ಜಗತಾಂ ಕ್ಷೋಭಕರಣೀ
ತದಾ ಲೋಕಸ್ವಾಮಿ ಪ್ರಕಟಿತವಪುಃ ಸೇತುಧೃಗಜಃ |
ಸತಾಂ ಧಾತಾ ಸ್ವಚ್ಛೋ ನಿಗಮಗುಣಗೀತೋ ವ್ರಜಪತಿಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||8||
ಯಾವಯಾವಾಗ ಧರ್ಮವು ಕುಂದಿ ಜಗತ್ತಿಗೆಲ್ಲ ಕ್ಷೋಭವನ್ನುಂಟುಮಾಡುವದೋ ಆಗಾಗ ದೇಹವನ್ನು ಪ್ರಕಟಿಗೊಳಿಸಿಕೊಂಡು ಧರ್ಮಸೇತುವನ್ನು ಹಿಡಿದೆತ್ತಿ ಸತ್ಪುರುಷರನ್ನು ಕಾಪಾಡುವವನೂ ಸ್ವಚ್ಛನೂ ಶಾಸ್ತ್ರಗಳ ಸಮುದಾಯದಿಂದ ಕೊಂಡಾಡಲ್ಪಟ್ಟವನೂ ಗೋಕುಲದೊಡೆಯನೂ ಶರಣುಹೋಗುವದಕ್ಕೆ ತಕ್ಕವನೂ ಆದ ಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!
Taken from Facebook
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ