ಶನಿವಾರ, ಜನವರಿ 28, 2017

ಗಾಯತ್ರಿ ಮಂತ್ರಕ್ಕೊಂದು ವಿವರಣೆ
ಗಾಯತ್ರಿ ಛಂದಸ್ಸು ಅಂದರೆ ಎಂಟು ಅಕ್ಷರಗಳ ಮೂರು ಪಾದದ (ಸಾಲುಗಳ) ಮಂತ್ರ, ಒಟ್ಟು 24  ಅಕ್ಷರಗಳ ಒಂದು
ಛಂದಸ್ಸು...

ಓಂ ಭೂರ್ಭುವ ಸ್ವಃ (ಸುವಃ – ಯಜುರ್ವೇದ ಪಾಠ)  ಇವು ಮೂರು ಓಂಕಾರ ಸಹಿತವಾದ ವ್ಯಾಹೃತಿಗಳು

ಓಂ ಭೂರ್ಭುವಸ್ವಃ
ತತ್ಸವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್||

ಇದು ಜಪದಲ್ಲಿ ಉಚ್ಚರಿಸುವ ವ್ಯಾಹೃತಿ ಸಹಿತವಾದ ವಿಶ್ವಾಮಿತ್ರ ಗಾಯತ್ರಿ ಎಂದು ಕರೆಯಲ್ಪಡುವ "ಗಾಯತ್ರಿ ಮಂತ್ರ"...

ಅದರ ಪದ ವಿಭಾಗ ಹೀಗಿದೆ

ಓಂ , ಭೂಃ , ಭುವಃ , ಸ್ವಃ (ಸುವಃ)
ತತ್ , ಸವಿತುಃ , ವರೇಣಿಯಂ, ಭರ್ಗಃ  .  ದೇವಸ್ಯ , ಧೀಮಹಿ , ಧಿಯಃ ,ಯಃ , ನಃ , ಪ್ರಚೋದಯಾತ್ ....

ನಾವು ನಿತ್ಯ ಜಪಿಸುವ ಗಾಯತ್ರಿ ಛಂದಸ್ಸಿನ ಮಂತ್ರ ಭಗವಂತನ ಸೂರ್ಯಾಂತರ್ಗತ ರೂಪವಾದ ನಾರಾಯಣನನ್ನು ಕುರಿತಾಗಿದ್ದು "ಸೂರ್ಯನಾರಾಯಣ ಮಂತ್ರ" ಅಥವಾ "ವಿಶ್ವಾಮಿತ್ರ ಗಾಯತ್ರಿಮಂತ್ರ"ವಾಗಿ,  ಬಳಕೆಯಲ್ಲಿ "ಗಾಯತ್ರಿ ಮಂತ್ರ" ಎಂದು ಪ್ರಸಿದ್ಧಿ ಪಡೆಯಿತು...

ಈ ಗಾಯತ್ರೀ ಮಂತ್ರದಲ್ಲಿ ಒಟ್ಟು 24 ಅಕ್ಷರಗಳಿವೆ... ಅವು ಭಗವಂತನ ಕೇಶವಾದಿ ಚತುರ್ವಿಂಶತಿ ಮೂರ್ತಿಗಳ ಉಪಾಸನೆಗಾಗಿ ಇವೆ... ಅಂದರೆ ಸಂಧ್ಯಾವಂದನೆಯಲ್ಲಿ ಹೇಳುವ :

ಕೇಶವ,  ನಾರಾಯಣ, ಮಾಧವ, ಗೋವಿಂದ, ವಿಷ್ಣು , ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ,  ಹೃಷೀಕೇಶ, ಪದ್ಮನಾಭ, ದಾಮೋದರ, ಸಂಕರ್ಷಣ, ವಾಸುದೇವ, ಪ್ರದ್ಯುಮ್ನ , ಅನಿರುದ್ಧ , ಪುರುಷೋತ್ತಮ,  ಅಧೋಕ್ಷಜ, ನರಸಿಂಹ, ಅಚ್ಯುತ,  ಜನಾರ್ದನ, ಉಪೇಂದ್ರ,  ಹರಿ , ಕೃಷ್ಣ....

ಇವೇ ಆ 24 ಮೂರ್ತಿಗಳು.. ಗಾಯತ್ರಿ ಪ್ರತಿಪಾದ್ಯವಾದ 24 ಭಗವಂತನ ರೂಪಗಳು...

ಅಷ್ಟೇ ಅಲ್ಲ ಗಾಯತ್ರಿಯಲ್ಲಿ ಹತ್ತು ಶಬ್ದಗಳಿವೆ... ಆ 10 ಶಬ್ದಗಳು ಭಗವಂತನ 10 ಅವತಾರದ ರೂಪಗಳನ್ನು ಹೇಳುವ ಶಬ್ದಗಳು...

 ಮೊದಲನೆಯ ಶಬ್ದ - ತತ್

"ತತ್"  ಭಗವಂತನ ಮತ್ಸ್ಯಾವತಾರವನ್ನು ಹೇಳುವ ಶಬ್ದ . ವೈವಸ್ವತ ಮನು "ಶ್ರಾದ್ಧದೇವ " ಅರ್ಘ್ಯ ಕೊಡಬೇಕು ಅಂತ ಬೊಗಸೆಯಲ್ಲಿ ನೀರು ಹಿಡಿದಾಗ, ಭಗವಂತ ಒಂದು ಚಿಕ್ಕ ಮೀನಾಗಿ ಬೊಗಸೆಯ ನೀರಿನಲ್ಲಿ ಬಿದ್ದ. ನಂತರ ಬೊಗಸೆಯಿಂದ ಪಾತ್ರೆಗೆ ಬಿದ್ದು  ದೊಡ್ಡದಾದ , ನಂತರ ಹಂಡೆಯಲ್ಲಿ ಹಾಕಿದಾಗ ಅಲ್ಲಿ ಹಂಡೆ ತುಂಬುವಷ್ಟು  ದೊಡ್ಡದಾದ, ನಂತರ ಸರೋವರಕ್ಕೆ ಬಿಟ್ಟಾಗ ಸರೋವರವೆಲ್ಲ ತುಂಬುವಷ್ಟು ದೊಡ್ಡದಾದ, ನಂತರ ಸಮುದ್ರ ಸೇರಿ ಸಮುದ್ರವನ್ನೇ ತುಂಬುವಷ್ಟು ದೊಡ್ಡದಾದ.... ಇದು ಭಗವಂತನ ಮೊದಲ ಅವತಾರ...
ತತ- ಅಂದರೆ ವಿಸ್ತಾರಗೊಳ್ಳುವುದು. ಹೀಗೆ ತತವಾಗಿ, ತತವಾಗಿ, ವಿತತವಾಗಿ ಸಮುದ್ರವನ್ನೆಲ್ಲ ತುಂಬುತ್ತಾ ಪ್ರಳಯಕಾಲದಲ್ಲಿ ಋಷಿಗಳ ದಡಹಾಯಿಸಿದ ರೂಪ ಯಾವುದೋ ಅದೇ "ಮತ್ಸ್ಯಾವತಾರ".

ಸವಿತುಃ - ಅಂದರೆ ಕೂರ್ಮಾವತಾರ

ಸವಿತಾ ಅಂದರೆ ಸವನ.  ಸೋಮಲತೆಯನ್ನು ಕುಟ್ಟಿ ಅದರಿಂದ ರಸತೆಗೆಯುವ ಕ್ರಿಯೆಗೆ ಸವನ ಅನ್ನುತ್ತಾರೆ...

ದೇವ-ರಾಕ್ಷಸರ ಸಮುದ್ರಮಥನ ಕ್ರಿಯೆಯಲ್ಲಿ ಮಂದರಕ್ಕೆ ಬೆನ್ನುಕೊಟ್ಟು ಸಮುದ್ರದಿಂದ ಅಮೃತವನ್ನು ತಂದುಕೊಟ್ಟ ರೂಪ "ಕೂರ್ಮಾವತಾರ"...

ವರೇಣ್ಯಂ - ವರಾಹಾವತಾರ...

ವರೇಣ್ಯ, ವರಾಹ ಎರಡೂ ಪರ್ಯಾಯ ಶಬ್ದಗಳು.. "ಕಪಿರ್ವರಾಹ ಶ್ರೇಷ್ಠಶ್ಚ ". ವರಾಹ ಅಂದರೆ ಶ್ರೇಷ್ಠವಾದದ್ದು , ಎತ್ತರದಲ್ಲಿರುವಂತದು. ಅದೇ ವರೇಣ್ಯ.

ಭಗವಂತ ವರಾಹ ರೂಪದಿಂದ ಆದಿದೈತ್ಯರನ್ನು ಕೊಂದು ಭೂಮಿ ಕುಸಿಯದಂತೆ ತಡೆದು ಮತ್ತೆ ಅದರ ಕಕ್ಷೆಯಲ್ಲಿಟ್ಟ ರೂಪ. ಅದೇ ವರಾಹಾವತಾರ....

"ವರೇಣ್ಯಂ" ಎಂಬುದು ಬರೆಯುವಾಗ ಮಾತ್ರ ಇರುವ ಶಬ್ದ. ಜಪದಲ್ಲಿ ಅದನ್ನು ಬಿಡಿಸಿಯೇ ಹೇಳುವುದು... ಇಲ್ಲದಿದ್ದರೆ ಗಾಯತ್ರಿ ಮಂತ್ರ 23 ಅಕ್ಷರವಷ್ಟೇ ಆಗುತ್ತದೆ... ಬಿಡಿಸಿ ಹೇಳುವ ಅಕ್ಷರ "ಣ್ಯಂ" ಅದೇ ಜಪದಲ್ಲಿ "ಣಿಯಂ" ಆಗುತ್ತದೆ.. ಅದೇ "ವಾಮನ ತ್ರಿವಿಕ್ರಮನಾದಂತೆ"....

‘ಣಿಯಂ – ಣಿ+ಯಂ – ಈ ಎರಡು ಅಕ್ಷರಗಳ ಪ್ರತಿಪಾದ್ಯದೇವತೆ ತ್ರಿವಿಕ್ರಮ ಮತ್ತು ವಾಮನ. ಆದರೆ ಅವು ಎರಡು ಅವತಾರಗಳಲ್ಲ, ಒಂದೇ ಅವತಾರದ ಎರಡು ಮುಖಗಳು ಎಂದು ತೋರಿಸುವುದಕ್ಕಾಗಿ ‘ಣ್ಯಂ’ ಎಂಬುವ ಒಂದೇ ಅಕ್ಷರ ಬಂದಿದೆ. ಆದರೂ ಚತುರ್ವಿಂಶತಿ ಮೂರ್ತಿಗಳಲ್ಲಿ ಅವು ಭಿನ್ನರೂಪಗಳೂ ಹೌದು ಎನ್ನುವುದಕ್ಕಾಗಿ ‘ಣಿಯಂ’ ಎಂದು ಬಿಡಿಸಿ ಉಚ್ಚಾರ.’ (ತಂತ್ರಸಾರ ಸಂಗ್ರಹ ಪೂಜ್ಯ ಶ್ರೀ  ಬನ್ನಂಜೆ ಗೋವಿಂದಾಚಾರ್ಯರು)

ಭರ್ಗಃ - ನರಸಿಂಹಾವತಾರ

ಶತ್ರುಗಳನ್ನು ಭರ್ಜನೆ ಮಾಡಿದ ಉಗ್ರರೂಪ... ದುಷ್ಟರನ್ನು, ದೋಷಗಳನ್ನು, ಅಜ್ಞಾನವನ್ನು ನಾಶಮಾಡಿ ಅದರ ಮೂಲಕ  "ಭ" ರತಿ ಜ್ಞಾನರೂಪ..  ತಾನು ಜ್ಞಾನಸ್ವರೂಪ ಮತ್ತು ಪ್ರಹ್ಲಾದನನ್ನು ಉದ್ಧಾರ ಮಾಡಿದ ರೂಪ ಎಂದು ತೋರಿಸಿದ "ನರಸಿಂಹಾವತಾರ"...

ದೇವಸ್ಯ - ವಾಮನಾವತಾರ

ದಿವು ವ್ಯವಹಾರೆ. ದೀವ್ಯತಿ ಇತಿ ದೇವಃ.. ಬಲಿಯ ಜೊತೆಗೆ ಮೂರು ಹೆಜ್ಜೆಗಳ ವ್ಯವಹಾರ ಮಾಡಿದ ರೂಪ. ಸ್ಪಷ್ಟವಾಗಿ "ವಾಮನಾವತಾರ"ವನ್ನು ಹೇಳುವ ಶಬ್ದ.

ಧೀಮಹಿ - ಪರಷುರಾಮಾವತಾರ

'ಮಹಿ' ಅಂದರೆ ಭೂಮಿ. ದಿನು ಪುಷ್ಟೌ.
ಇಪ್ಪತ್ತೊಂದು ಬಾರಿ ದುಷ್ಟ ಕ್ಷತ್ರಿಯರ ಸಂಹಾರ ಮಾಡಿ ಭೂಮಿಗೆ ಸಂತೋಷವನ್ನು ಕೊಟ್ಟ ರೂಪ "ಪರುಷರಾಮಾವತಾರ"...

ಧಿಯಃ - ರಾಮಾವತಾರ

'ಯಂ' ಅಂದರೆ ವಾಯುಬೀಜ. "ಯಂ" ಅಂದರೆ ಜ್ಞಾನ ಸ್ವರೂಪರಾದಂತ ವಾಯುದೇವರು... ಅವರಿಗೆ "ದಿನೋತಿ"
ಆನಂದವನ್ನು ಕೊಟ್ಟ ರೂಪ "ಧಿಯಃ" ರಾಮರೂಪ. ಅದೇ "ರಾಮಾವತಾರವ"

ಯಃ - ಕೃಷ್ಣಾವತಾರ

"ಯ"ಕಾರ ವಾಚ್ಯನಾಗಿ , ಯಃ-ಜ್ಞಾನಾವತಾರ. ಭಗವದ್ಗೀತೆಯ ಮೂಲಕ ಸಮಸ್ತ ವೇದಸಾರವನ್ನು ಆವಿಷ್ಕಾರ ಮಾಡಿರತಕ್ಕ ಪೂರ್ಣಜ್ಞಾನ ಸ್ವರೂಪನಾದವ ಕೃಷ್ಣ .ಅದೇ "ಕೃಷ್ಣಾವತಾರ".

ನಃ - ಬುದ್ಧಾವತಾರ

ನಃ ಅಂದರೆ ಬುದ್ಧ. ಸರ್ವಂ ಶೂನ್ಯಂ, ಸರ್ವಂ ಕ್ಷಣಿಕಂ...  ಏನೂ ಇಲ್ಲ , ಎಲ್ಲವೂ ಕ್ಷಣಿಕ ಅಂತ ಹೇಳಿ ನ.. ನ... ಅಂತ ಉಪದೇಶ ಮಾಡಿದವ ಬುದ್ಧ . ಬುದ್ಧ ನಮ್ಮ ಹತ್ತಿರದ ಅವತಾರ, ಆದರೂ ಅದು ಮೋಹಾವತಾರ. ಆದ್ದರಿಂದ ನಃ - ಬುದ್ಧಾವತಾರದ ಉಪಾಸನೆ ಮಾಡಬೇಡಿ ಅಂತ ಹೇಳಿತು ಭಾಗವತ.. ಇದು "ಬುದ್ಧಾವತಾರ"...

ಪ್ರಚೋದಯಾತ್ - ಕಲ್ಕ್ಯಾವತಾರ

ಯಃ ಧರ್ಮಂ ಪ್ರಚೋದಯತಿ... ಕಲಿಯುಗದ ಅಂತ್ಯದಲ್ಲಿ ಧರ್ಮದ ಪ್ರಚೋದನೆಗಾಗಿ ಬಂದವ ಕಲ್ಕಿ..
ಇದು "ಕಲ್ಕ್ಯಾವತಾರ"...

ಹೀಗೆ ಗಾಯತ್ರಿಯ ಹತ್ತು ಶಬ್ದಗಳು ಸ್ಪಷ್ಟವಾಗಿ ಭಗವಂತನ ಹತ್ತು ರೂಪಗಳನ್ನು ಹೇಳುತ್ತವೆ...

****
ಗಾಯತ್ರಿಮಂತ್ರ - ದೇಹದ ನಾಡಿ ಶುದ್ಧಿ

ಇನ್ನು ಜಪದ ಸಂಖ್ಯೆ ಎಷ್ಟು? ಅನ್ನುವುದಕ್ಕೂ ಕರಾರುವಾಕ್ಕಾದ ಗಣಿತ ಇದೆ... ಗಾಯತ್ರಿ ಮಂತ್ರವನ್ನು ದಿನದಲ್ಲಿ ಮೂರು ಕಾಲ (ತ್ರಿಸಂಧ್ಯಾ) ದಲ್ಲಿ ಜಪಿಸುತ್ತಾರೆ.. (ಪ್ರಾತಃ , ಮಧ್ಯಾಹ್ನ ಮತ್ತು ಸಾಯಂಕಾಲ...)

ಒಂದು ಬಾರಿ ಹೆಚ್ಚೆಂದರೆ 1000 ಗಾಯತ್ರಿ ಮಾಡಬೇಕು. ಆಗ ದಿನಕ್ಕೆ 3000 ಆಯಿತು... ಇದಕ್ಕಿಂತ ಹೆಚ್ಚಿಗೆ ಮಾಡಬಾರದು..

ಏಕೆಂದರೆ ಆಯುರ್ವೇದ ಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿರುವ ಪ್ರಧಾನ ನಾಡಿಗಳು 72000 (ದ್ವಾಸಪ್ತತಿಸಹಸ್ರಾಣಿ ಹೃದಯಸ್ಯ ನಾಡ್ಯಃ) ಅದು ನಮ್ಮ ದೇಹದ ಬಲಭಾಗದಲ್ಲಿ 36000 , ಎಡಭಾಗದಲ್ಲಿ 36000 ಎಂದು ವಿಭಾಗಿಸಲ್ಪಟ್ಟಿದೆ. ಆದ್ದರಿಂದಲೇ ನಮ್ಮ ಪ್ರಾಚೀನರು ಆದೇಶ ಮಾಡಿದರು ಒಂದು ದಿನದಲ್ಲಿ ನಾವು ಮಾಡತಕ್ಕ ಗಾಯತ್ರಿ ಮಂತ್ರ ಜಪ, ಒಟ್ಟು ಅಕ್ಷರ ಸಂಖ್ಯೆಯಲ್ಲಿ ಈ ಸಂಖ್ಯೆಯನ್ನು (72000) ಮೀರಬಾರದು ಎಂದು... ಆದ್ದರಿಂದ ಗಾಯತ್ರಿ ಸಂಖ್ಯೆ 24 ಅಕ್ಷರ * 3000ಜಪ ದಿನಕ್ಕೆ =72000 ಅಕ್ಷರ ಜಪವಾಯಿತು...

ವೇದದಲ್ಲಿ ಒಂದು ಮಾತಿದೆ... ವೇದಾಕ್ಷರಾಣಿ ಯಾವಂತಿ ಪಠಿತಾನಿ ದ್ವಿಜಾದಿಭಿಃ |
ತಾವಂತಿ ಹರಿನಾಮಾನಿ  ಪಠಿತಾನಿ ನಸಂಶಯಃ || ಅಂತ...

ಹಾಗೆ ಗಾಯತ್ರಿಯ ಒಂದೊಂದು ಅಕ್ಷರ ಒಂದೊಂದು ಹರಿ ನಾಮ ಆದಾಗ ಅದು ನಮ್ಮ ದೇಹದ 72000 ಪ್ರಧಾನ ನಾಡಿಗಳಲ್ಲಿರುವ  ಭಗವಂತನ 72000 ರೂಪಗಳ ಅನುಸಂಧಾನವೂ ಆಯಿತು... ನಮ್ಮ ಗಾಯತ್ರಿ ಜಪದಿಂದ ಉತ್ಪತ್ತಿಯಾದ ತೇಜಸ್ಸು ಆ 72000 ನಾಡಿಗಳ ಶುದ್ಧಿಗೆ ಕಾರಣವಾಗಿ ಸುಗಮ ರಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟಿತು ಅದು ಶಕ್ತಿ ರೂಪವಾಗಿ ನಮ್ಮಲ್ಲಿ  ಕೆಲಸಮಾಡುತ್ತದೆ.. ಆದ್ದರಿಂದಲೇ ನಮ್ಮ ಜಪ ಸಂಖ್ಯೆ 72000 ವನ್ನು ಮೀರಬಾರದು..
ಹೆಚ್ಚು ಜಪದಿಂದ ತೇಜಸ್ಸು ಹೆಚ್ಚಾಗುವುದಲ್ಲ , ಹೆಚ್ಚು ವೇಲ್ಟೇಜ್ ಸಪ್ಲೈನಿಂದ ಬಲ್ಬು ಬರ್ನಾದಂತೆ...

ಆದ್ದರಿಂದಲೇ ಹಿಂದಿನವರು ಗಾಯತ್ರಿಗೆ ಇಷ್ಟು ಮಹತ್ವ ಕೊಟ್ಟದ್ದು... ಓಂಕಾರದ ಮೂರು ಅಕ್ಷರಗಳೇ (ಅ, ಉ, ಮ) ಮೂರು ವ್ಯಾಹೃತಿಗಳಾದವು (ಭೂಃ ಭುವಃ ಸುವಃ) ಮೂರು ವ್ಯಾಹೃತಿಗಳು ಬೆಳೆದು ಮೂರು ಪಾದದ ಗಾಯತ್ರಿಯಾಯಿತು... ಈ ಮೂರು ಪಾದದ ಗಾಯತ್ರಿಯೇ ಬೆಳೆದು ಮೂರು ವರ್ಗದ ಪುರುಷಸೂಕ್ತ ಆಯಿತು... ಮೂರು ವರ್ಗದ ಪುರುಷಸೂಕ್ತ ಬೆಳೆದು ಮೂರು ವೇದಗಳಾದವು... ಆದ್ದರಿಂದಲೇ ಗಾಯತ್ರಿಯನ್ನು "ವೇದಮಾತಾ" ಅಂತಲೂ ಕರೆಯುತ್ತಾರೆ...

(Contributed by Shri B S Harish) As Said By Dr Bannanje GovindaAcharyaru.

ಬುಧವಾರ, ಜನವರಿ 25, 2017

🕉 *॥ ಸುಜ್ಞಾನ ಸ್ತೋತ್ರ ಮಂಜರಿ ॥* 🕉
   
*ಆಂಜನೇಯ ಸ್ತೋತ್ರಗಳು*

|| ಶ್ರೀಮದಾಂಜನೇಯ ಸ್ತೋತ್ರಮ್ ||
**************************
ಅಸ್ಯ ಶ್ರೀಮದ್ದಾಂಜನೇಯ ಸ್ತೋತ್ರ ಮಹಾಮಂತ್ರಸ್ಯ|
ಶ್ರೀ ರಾಮಚಂದ್ರ ಋಷಿ:| ವೀರಹನುಮಾನ್ ದೇವತಾ |
ಅನುಷ್ಟಪ್ ಛಂದ: |ಶ್ರೀರಾಮದೂತ ಪ್ರೀತ್ಯರ್ಥೇ ಜಪೇ ವಿನಿಯೋಗ:: ||

ಭಾವಾರ್ಥ:-ಶ್ರೀಮತ್ ಆಂಜನೇಯ ಸ್ತೋತ್ರಗಳಿಗೆ ಶ್ರೀ ರಾಮಚಂದ್ರನು ಋಷಿ; ವೀರ ಹನುಮನು ದೇವತೆ; ಇದು ಅನುಷ್ಟುಪ್ ಛಂದಸ್ಸಿನಲ್ಲಿದೆ. ಇದನ್ನು ಶ್ರೀರಾಮಚಂದ್ರನ ಪ್ರೀತಿಯ ನ್ನು ಪಡೆಯುವ ಸಲುವಾಗಿ ಉಪಯೋಗಿಸುವುದಾಗಿದೆ.

ಹನುಮಾನಂಜನಾಸೂನು: ವಾಯುಪುತ್ರೋ ಮಹಾಬಲ:|
ರಾಮೇಷ್ಟ: ಫಲ್ಗುಣಸಖ: ಪಿಂಗಾಕ್ಷೋಸ್ಮಿತವಿಕ್ರಮ: ||೧||

ಭಾವಾರ್ಥ:- ಹನುಮ. ಅಂಜನಾಸೂನು, ವಾಯುಪುತ್ರ, ಮಹಾಬಲ, ರಾಮೇಷ್ಟ,[ರಾಮನಿಗೆ ಇಷ್ಟನಾದವನು],ಪಲ್ಗುಣಸಖ[ ಅರ್ಜುನನಮಿತ್ರ], ಪಿಂಗಾಕ್ಷ[ರುದ್ರ], ಅಮಿತವಿಕ್ರಮ[ಮಹಾಶೂರ]------

ಉದದಿಕ್ರಮಣಶ್ಚೈವ ಸೀತಾಶೋಕವಿನಾಶನ: |
ಲಕ್ಷ್ಮಣ ಪ್ರಾಣದಾತಾ ಚ ದಶಗ್ರೀವಸ್ಯ ದರ್ಪಹಾ ||೨||

ಭಾವಾರ್ಥ:-ಉದದಿಕ್ರಮಣ[ಸಾಗರವನ್ನು ದಾಟಿದವ],ಸೀತಾಶೋಕ ವಿನಾಶನ, ಲಕ್ಷ್ಮಣಪ್ರಾಣದಾತ, ದಶಗ್ರೀವದರ್ಪಹರ[ದಶಕಂಠನ ದರ್ಪವನ್ನು ನಾಶಗೊಳಿಸಿದವ]---------

ಏವಂ ದಶನಾಮಾನಿ ಕಪೀಂದ್ರಸ್ಯ ಮಹಾತ್ಮನ: |
ಸ್ವಾಪಕಾಲೇ ಪಠೇನ್ನಿತ್ಯಂ ಯಾತ್ರಕಾಲೇ ವಿಶೇಷತ: ||೩||
ತಸ್ಯ ಮೃತ್ಯು ಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ |

ಭಾವಾರ್ಥ:-ಈ ರೀತಿಯಾಗಿ ಹತ್ತು ಹೆಸರುಗಳು ಮಹಾತ್ಮನಾಗಿರುವ ಕಪೀಶ್ವರನಿಗೆ ಇವೆ.ಇವುಗಳನ್ನು ಯಾವಾತನು ಪ್ರತಿದಿವಸ ನಿದ್ರಿಸುವ ಸಮಯದಲ್ಲಿ ;ವಿಶೇಷವಾಗಿ ಪ್ರವಾಸ ಕಾಲದಲ್ಲಿ ಪಠಿಸುವನೋ ಆತನಿಗೆ ಮೃತ್ಯುವಿನ ಭಯವಿರುವುದಿಲ್ಲ ಮಾತ್ರವಲ್ಲದೆ ಆತನಿಗೆ ಎಲ್ಲೆಡೆಯೂ ವಿಜಯ ಲಭಿಸುತ್ತದೆ.

ಸ್ಪಾಟಿಕಾಭಂ ಸ್ವರ್ಣಕಾಂತಿಂ ದ್ವಿಭುಜಂ ಚ ಕೃತಾಂಜಲಿ |
ಕುಂದಲದ್ವಯ ಸಂಶೋಭಿಮುಖಾಂಭೋಜಂ ಹರಿಂ ಭಜೇತ್ ||೪||

ಭಾವಾರ್ಥ:-ಕರ್ಪೂರದ ಕಾಂತಿ ಹಾಗೂ ಬಂಗಾರದ ಹೊಳಪಿನಿಂದ ಕೂಡಿ ಭಕ್ತಿ ವಿನಯಗಳಿಂದ  ನಮಸ್ಕರಿಸುತ್ತಿರುವ; ಎರಡು ತಾವರೆ ಪುಷ್ಪಗಳನ್ನು ಕೈಯಲ್ಲಿ ಹಿಡಿದವನಾಗಿ ಶೋಭಾಯಮಾನನಾಗಿದ್ದು ಶ್ರೀ ಹರಿಯನ್ನು ಆಂಜನೇಯನು ಪೂಜಿಸುತ್ತಿರುವನು.

ಆಂಜನೇಯಮತಿಪಾಟಲಾನನಂ ಕಾಂಚನಾದ್ರಿ ಕಮನೀಯ ವಿಗ್ರಹಂ |
ಪಾರಿಜಾತ ತರುಮೂಲವಾಸಿನಂ ಭಾವಯಾಮಿ ಪವಮಾನ ನಂದನಂ ||೫||

ಭಾವಾರ್ಥ:-ಆಂಜನೇಯ ನಸುಗೆಂಪು ಮೊಗದವನೂ; ಸುಮೇರು ಪರ್ವತದ ರಮಣೀಯವಾದ ವಿಗ್ರಹ ರೂಪನೂ; ಪಾರಿಜಾತ ಗಿಡದ ಬುಡದಲ್ಲಿ ವಾಸಿಸುವವನೂ;ಆಗಿದ್ದು ಅಂತಹಾ ವಾಯುಪುತ್ರನನ್ನು ಸ್ಮರಿಸುವೆನು.

ಯತ್ರ ಯತ್ರ ರಘುನಾಥಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಂ |
ಬಾಷ್ಪವಾರಿಪರಿ ಪೂರ್ಣಲೋಚನಂ ಮಾರುತಿಂ ನಮತ ರಾಕ್ಷಸಾಂತಕಂ ||೬||

ಭಾವಾರ್ಥ:- ಎಲ್ಲೆಲ್ಲಿ ಶ್ರೀರಾಮನ ಸಂಕೀರ್ತನೆ ಕೇಳಿಸಲ್ಪಡುತ್ತಿದೆಯೋ ಅಲ್ಲಲ್ಲಿ ಶಿರವಾಗಿ ಕೈಮುಗಿದುಕೋಂಡು ಕಣ್ತುಂಬಾ ಆನಂದ ಭಾಷ್ಪವನ್ನು ಸುರಿಸುತ್ತಾ ರಾಕ್ಷಸಾಂತಕನಾದ ಹನುಮನು ನಮಿಸುತ್ತಾ ಇರುವನು.

ವಿಜಯಂ ಲಭತೇ ಸತ್ಯಂ ಪರಂಸೌಖ್ಯಮಾಪ್ನುಯಾತ್ |
ಭೂತಪ್ರೇತ ಪಿಶಾಚಾಶ್ಚ ಬ್ರಹ್ಮರಾಕ್ಷಸದರ್ಶನೇ ||೭||

ಭಾವಾರ್ಥ:-ಈ ಸ್ತೋತ್ರಗಳನ್ನು ಪಠಿಸುವುದರಿಂದ ಸತ್ಯವಾಗಿಯೂ ವಿಜಯ ಲಭಿಸುತ್ತದೆ.ಮತ್ತು ಪರಲೋಕದಲ್ಲಿ ಸುಖವು ಲಭಿಸುತ್ತದೆ.ಭೂತ ಪ್ರೇತ ಪಿಶಾಚಾದಿಗಳಿಂದಲೂ ಬ್ರಹ್ಮ ರಾಕ್ಷಸ ದರ್ಶನ ಕಾಲದಲ್ಲಿ;--------

ಸಿಂಹವ್ಯಾಘ್ರ ಭಯಪ್ರಾಪ್ತೇ ಶತ್ರು ಶಸ್ತ್ರಾಸ್ತ್ರಪಂಜರೇ |
ದು:ಖೇ ಮಹಾರಣೇ ಚೈವ ಪಿಶಾಚಗ್ರಹ ಪಾತಕೇ ||೮||

ಭಾವಾರ್ಥ:-ಸಿಂಹ,ವ್ಯಾಘ್ರಾದಿ ಕ್ರೂರ ಮೃಗಗಳಿಂದ, ಶತ್ರುಗಳಿಂದ, ಶಸ್ತ್ರಾಸ್ತ್ರಗಳಿಂದ ಅಪಾಯದ ಸಂಭವವಿರುವ ಕಾಲದಲ್ಲಿ, ಸೆರೆಮನೆ ವಾಸದ ಭೀತಿಗೊಳಗಾಗಿರುವಾಗ,ದು:ಖದ ಸಮಯದಲ್ಲಿ; ಯುದ್ಧಭೂಮಿಯಲ್ಲಿ, ಗ್ರಹದೋಷಗಳಲ್ಲಿ,--------

ಶತವಾರಂ ಪಠೇನ್ನಿತ್ಯಂ ಮಂಡಲಂ ಭಕ್ತಿತತ್ಪರ:
ಸರ್ವ ಸೌಖ್ಯಮವಾಪ್ನೋತಿ ತ್ರಿಸಂಧ್ಯಂ ರಾಮಪೋಷಿತ: ||೯||

ಭಾವಾರ್ಥ:-ಶ್ರದ್ಧಾ ಭಕ್ತಿ ಪುರಸ್ಸರನಾಗಿ ನೂರು ಬಾರಿ ಪ್ರತಿನಿತ್ಯವೂ ಮೂರು ಹೊತ್ತೂ ಒಂದು ಮಂಡಲ ಕಾಲ[ನಲುವತ್ತೆಂಟು ದಿವಸಗಳ ಕಾಲ] ಪಠಿಸಿದಲ್ಲಿ ಸಮಸ್ತ ಸುಖಗಳೂ  ಲಭಿಸಿ ಶ್ರೀರಾಮನಿಂದ ರಕ್ಷಿಸಲ್ಪಡುತ್ತಾನೆ.

ಅಪರಾಜಿತ ಪಿಂಗಾಕ್ಷ ನಮಸ್ತೇ ರಾಮಪೂಜಿತ |
ಪ್ರಸ್ಥಾನಂ ಚ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||೧೦||

ಭಾವಾರ್ಥ:-.ಸೋಲಿಸಲಸಾಧ್ಯವಾಗಿರುವವನೂ; ಹಳದಿ ಕಣ್ಣುಗಳನ್ನು ಹೊಂದಿರುವವನೂ;ನಮಸ್ಕರಿಸುತ್ತಾ;.ರಾಮನನ್ನು ಪೂಜಿಸುತ್ತಾ, ಸದಾ ಸಂಚರಿಸುತ್ತಾ, ಶುಭ ಫಲವನ್ನು ಕರುಣಿಸುತ್ತಿರುವವನು

ಆಯು:ಪ್ರಜ್ಞಾ ಯಶೋಲಕ್ಷ್ಮೀ ಶ್ರದ್ಧಾಪುತ್ರಾ: ಸುಶೀಲತಾ |
ಆರೋಗ್ಯಂ ದೇಹಸೌಖ್ಯಂ ಚ ಕಪಿನಾಥ ನಮೋಸ್ತು ತೇ ||೧೧||

ಭಾವಾರ್ಥ:-.ಆಯುಷ್ಯವನ್ನೂ, ಪ್ರಜ್ಞೆಯನ್ನೂ, ಯಶಸ್ಸನ್ನೂ,ಸಂಪದವನ್ನೂ, ಆರೋಗ್ಯವನ್ನೂ, ಶರೀರ ಸೌಖ್ಯವನ್ನೂ, ಕರುಣಿಸುತ್ತಿರುವ ಕಪಿಕುಲದೊಡೆಯನಿಗೆ ನಮಸ್ಕರಿಸುವೆ

ದೀನೇಮಯಿ ದಯಾಂ ಕೃತ್ವಾ ಮಮ ದು:ಖಂ ವಿನಾಶಯ |
ಐಶ್ವರ್ಯಂ ಪುತ್ರಲಾಭಂ ಚ ಲಕ್ಷ್ಮೀಂ ದೇಹಿ ಸದಾಪ್ರಭೋ ||೧೨||

ಭಾವಾರ್ಥ:-.ಸಂಕಷ್ಟದಲ್ಲಿರುವ ನನಗೆ ದಯೇತೋರಿ ನನ್ನ ದು:ಖಗಳನ್ನು ನಾಶಗೊಳಿಸಿ ನನಗೆ ಸಂಪದೈಶ್ವರ್ಯ, ಪುತ್ರಸಂತಾನವನ್ನು ಕರುಣಿಸು ಸ್ವಾಮಿಯೇ.

ತ್ವತ್ಪಾದಪಂಕಜದ್ವಂದ್ವಂ ವಿನಾ ನಾನ್ಯಂ ಭಜಾಮ್ಯಹಂ |
ನ್ಯೂನಾರಿಕ್ತಂ ಯತ್ಕಿಂಚಿತ್ತ್ಸರ್ವಂ ಕ್ಷಂತು ಮಹರ್ಸಿ ||೧೩||

ಭಾವಾರ್ಥ:-.ನಿನ್ನ ಚರಣಾರವಿಂದದ್ವಯಗಳ ಹೊರತಾಗಿ ಅನ್ಯ ನಾನು ಭಜಿಸುವುದಿಲ್ಲ. ನನ್ನ ಈ ಕಾರ್ಯದಲ್ಲಿ ಏನಾದರೂ ನ್ಯೂನತೆಗಳು,ಅತಿಶಯಗಳು,ಇತ್ಯಾದಿ ಹೆಚ್ಚು ಕಡಿಮೆಯಾಗಿದ್ದಲ್ಲಿ ಅವೆಲ್ಲವನ್ನೂ ಸದಾ ಮನ್ನಿಸು ಪ್ರಭುವೇ

ಮಾತಾ ತ್ವಂ ಚ ಪಿತಾ ತ್ವಂಚ ಭ್ರಾತಾ ತ್ವಂ ಚ ಪ್ರಭುರ್ಮಮ |
ತ್ವಮೇವ ಶರಣಂ ಪ್ರಾಪ್ತಂ ರಕ್ಷ ಮಾಂ ಕರುಣಾನಿದೇ ||೧೪||

ಭಾವಾರ್ಥ:- ನೀನೇ ನನ್ನ ತಾಯಿ;ತಂದೆ, ಸಹೋದರ,ನನ್ನ ಒಡೆಯ. ನಿನ್ನಲ್ಲಿ ನಾನು ಶರಣಾಗುವೆ. ನನ್ನನ್ನು ರಕ್ಷಿಸು ಕರುಣಾನಿಧಿಯೇ

ನಾನಾ ವಿಘ್ನಾಂಶ್ಚ ರೋಗಾಂಶ್ಚ ನಾಶಯ ತ್ವಂ ಸದಾ ಮಮ |
ತ್ರಿ ಲಕ್ಷಂ ಹನುಮನ್ನಾಮಯೋ ಜಪೇದ್ಭಕ್ತಿ ತತ್ಪರ: ||೧೫||

ಭಾವಾರ್ಥ:- ನನ್ನ ನಾನಾ ವಿಧದ ಅಡ್ಡಿ‌ಆತಂಕಗಳನ್ನು; ರೋಗ ಭಾಧೆಗಳನ್ನು,ಸದಾ ನಾಶಗೊಳಿಸು ಸ್ವಾಮಿಯೇ. ಯಾವಾತನು ಮೂರು ಲಕ್ಷಸಂಖ್ಯೆ ಹನುಮ ನಾಮಗಳನ್ನು ಭಕ್ತಿಯುತನಾಗಿ ಜಪಿಸುವನೋ ಅವನಿಗೆ------

ರಾಜದ್ವಾರೇ ಮಹಾಘೋರೇ ಭಯಂ ನೈವಾರಿಸಂಕಟೇ |
ಬ್ರಹ್ಮರಾಕ್ಷಸಂ ಭೂತಾನಾಂ ಭಯಲೇಶೋ ನ ವಿದ್ಯತೇ |೧೬||

ಭಾವಾರ್ಥ:-ಅರಮನೆಯ ಮೂಲಕವಾಗಿ ಬರಬಹುದಾದ, ಮಹಾಘೋರ ಭೀತಿಯನ್ನು, ಶತ್ರುಗಳ ಕಾಟಗಳನ್ನು, ಬ್ರಹ್ಮರಾಕ್ಷಸ, ಭೂತಾದಿಗಳ ಭೀತಿಯನ್ನು  ಕಿಂಚಿತ್ತೂ ಇಲ್ಲದಂತೆ ಕಾಪಾಡುತ್ತಿರು ಸ್ವಾಮಿಯೇ.
*********************************************************************************
|| ಇತಿ ಶ್ರೀಮದಾಂಜನೇಯ ಸ್ತೋತ್ರಮ್ ||   || ಈ ರೀತಿಯಾಗಿ ಶ್ರೀಮದಾಂಜನೇಯ ಸ್ತೋತ್ರಗಳ ಭಾವಾರ್ಥವು ||

Courtesy: Whatsup

ಮಂಗಳವಾರ, ಜನವರಿ 24, 2017

ಕಲಿಯುಗದ ದುಷ್ಕರ್ಮಿಗಳಾದ ನಮಗೆ, ಭಗವತ್ಸಾಕ್ಷಾತ್ಕಾರಕ್ಕೆ ಸುಲಭವಾದ ಮಾರ್ಗವನ್ನು ತೋರಿಸಿದ ಶ್ರೀ ಶಂಕರರು.
 ಅದ್ವೈತಮತ ಪ್ರತಿಷ್ಠಾಪಕರಾದ, ಶ್ರೀಶಂಕರ ಭಗವತ್ಪಾದಾಚಾರ್ಯರನ್ನು, ಕೇವಲ 'ಜ್ಞಾನ ಯೋಗ'ಸಂಸ್ಥಾಪಕರು ಎಂದು ಭಾವಿಸುವುದು, ಅವರ ಬಗ್ಗೆ ಮಾಡುವ ಅಪಚಾರವಾದೀತು. "ಅದ್ವೈತವಾದ" ಜ್ಞಾನಯೋಗದ ಕೊನೆಯ ಹಂತವೆಂಬುದು ಸತ್ಯವಾದ ಸಂಗತಿಯಾದರೂ, ಆಚಾರ್ಯವರ್ಯರ ಉಪದೇಶ, ಇದೊಂದಕ್ಕೇ ಸೀಮಿತವಾಗಿರದೆ, ಕರ್ಮ, ಭಕ್ತಿಗಳನ್ನು ತನ್ನಲ್ಲಿ ಅಳವಡಿಸಿಕೊಂಡಿದೆ. ಯೋಗತ್ರಯಗಳಲ್ಲಿ ಒಂದಾಗಿ, ಈ ಕಲಿಯುಗಕ್ಕೆ ಸುಲಭಸಾಧ್ಯವಾದ ಭಕ್ತಿಯೋಗದ ಪ್ರಭಾವ ಅವರ ಜೀವನದಲ್ಲಿ ಬಹುಮುಖವಾಗಿ, ಕಾಣಿಸಿಕೊಂಡಿರುವುದರಿಂದ "ಭಕ್ತ ಶಂಕರ" ಎಂಬ ಅಂಕಿತಕ್ಕೆ ಆ ಪೂಜ್ಯರು ಸರ್ವಥಾ ಅರ್ಹರಾಗಿದ್ದಾರೆ.
 ಶಂಕರ ಬಾಲ್ಯ ಮಾತಾಪಿತೃಗಳ ಭಕ್ತಿಯಿಂದ ಆರಂಭವಾಯಿತು ಎಂಬುದನ್ನು ಅವರ ಜೀವನ ಚರಿತ್ರೆಯಿಂದ ಅರಿಯಬಹುದು. ತಾಯಿಯಾದ "ಆರ್ಯಂಬೆ"ಯ ಅನುಮತಿಯಿಲ್ಲದೇ, ತಮಗೆ ಪ್ರಿಯವಾದ ಸಂನ್ಯಾದೀಕ್ಷೆಯನ್ನು ತೆಗೆದುಕೊಳ್ಳಲು ಸಿದ್ದರಾಗದಿರುವುದು, ಅವರ ಮಾತೃ ಭಕ್ತಿಯ ದ್ಯೋತಕವಾದಂತಯೇ, ಸಂನ್ಯಾಸಿಯಾಗಿದ್ದರೂ, ಆಕೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ತನ್ನ ಕರ್ತವ್ಯವನ್ನು ನಿರ್ವಹಿಸಿರುವುದೂ, ಆ ಭಕ್ತಿಯ ಸ್ಪಷ್ಟಪ್ರತಿಪಾದಕವಾಗಿದೆ.
 'ಪ್ರಶ್ನೋತ್ತರಮಾಲಿಕೆ' ಎಂಬ ಅವರ ಗ್ರಂಥದಲ್ಲಿ, "ಪ್ರತ್ಯಕ್ಷ ದೇವತಾ ಕಾ? - ಮಾತಾ, ಪೂಜ್ಯೋ ಗುರುಶ್ಚ ಕಃ? -ತಾತಃ" ಎಂಬ ಪ್ರಶ್ನೋತ್ತರಗಳು, ಜಗತ್ತಿನಲ್ಲಿ ಮಾನವನಿಗೆ, ಮಾತಾಪಿತೃ ಭಕ್ತಿಯನ್ನುಪದೇಶಿಸುವ ಪವಿತ್ರ ವಾಕ್ಯಗಳಾಗಿವೆ.
 ತಮ್ಮ ದೀಕ್ಷಾಚಾರ್ಯರಾದ, ಗೋವಿಂದ ಭಗತ್ಪಾದರಲ್ಲಿ ಇವರಿಟ್ಟ ಭಕ್ತಿ ಅಪಾರವಾಗಿತ್ತು, ಪ್ರವಾಹದಿಂದ ಉಕ್ಕಿ, ಗುರುವಿನ ಗುಹಾಪ್ರವೇಶ ಮಾಡುತ್ತಿದ್ದ, ನದಿಯ ಜಲರಾಶಿಯನ್ನು ತಮ್ಮ ತಪಃಶಕ್ತಿಯಿಂದ ತಡೆದು, ತಮ್ಮ ಗುರು ಗೌರವವನ್ನು ಪ್ರದರ್ಶಿಸಿದವರು, ಈ ಭಗವತ್ಪಾದರು. "ವೈರಾಗ್ಯಮಾತ್ಮ ಬೋಧೋ ಭಕ್ತಿಶ್ಚೇತಿ ತ್ರಯಂ ಗದಿತಂ | ಮುಕ್ತೇಃ ಸಾಧಾನಮಾದೌ" ಎಂದು ಮುಕ್ತಿಗೆ, 'ವೈರಾಗ್ಯ, ಆತ್ಮಜ್ಞಾನ, ಭಕ್ತಿ' ಈ ಮೂರನ್ನು ಕಾರಣಗಳೆಂದು ಸಾಮಾನ್ಯವಾಗಿ ಹೇಳಿದ್ದರೂ "ಮೋಕ್ಷಕಾರಣಸಾಮ ಗ್ರ್ಯಾಂ ಭಕ್ತಿರೇವ ಗರೀಯಸೀ" ಎಂದಿದ್ದಾರೆ.
 ವಿವೇಕ ಚೂಡಾಮಣಿಯಲ್ಲಿ "ಸ್ವಸ್ವರೂಪಾನು ಸಂಧಾನಂ ಭಕ್ತಿರಿತ್ಯುಚ್ಯತೇ" ಎಂದು ಭಕ್ತಿಯೆಂಬುದು 'ಸ್ವಸ್ವರೂಪಾನುಸಂಧಾನು' ಎಂದು ಅದರ ಲಕ್ಷಣವನ್ನು ಹೇಳಿದ್ದಾರೆ.

"ಅಂಕೋಲಂ ನಿಜಬೀಜಸಂತತಿರ ಯಸ್ಕಾಂತೋಪಲಂ ಸೂಚಿಕಾ
 ಸಾಧ್ವೀನೈಜವಿಭುಂ ಲತಾಕ್ಷಿತಿರುಹಂ ಸಿಂಧುಃ ಸರಿದ್ವಲ್ಲಭಂ |
 ಪ್ರಾಪ್ನೋತೀಹ ಯಧಾ ತಥಾ ಪಶುಪತೇಃ ಪಾದಾರವಿಂದದ್ವಯಂ
 ಚೇತೋವೃತ್ತಿರುಪೇತ್ಯ ತಿಷ್ಠತಿ ಸದಾ ಸಾ ಭಕ್ತಿರಿತ್ಯುಚ್ಯತೇ "
ಎಂಬ ಶಿವಾನಂದಲಹರಿಯ ಶ್ಲೋಕ, 'ಭಕ್ತಿ'ಯನ್ನು ವಿಸ್ತಾರವಾಗಿ ವಿಶ್ಲೇಷಿಸಿದೆ. ಅಂಕೋಲದ ಬೀಜಗಳು ಮರವನ್ನೂ, ಸೂಚಿಯು ಅಯಸ್ಕಾಂತಶಿಲೆಯನ್ನು, ಪತಿವ್ರತೆಯು ತನ್ನ ಪತಿಯನ್ನು, ಬಳ್ಳಿಯು ಮರವನ್ನು, ನದಿಯು ಸಾಗರವನ್ನೂ ಹೇಗೆ ಹೊಂದಿಕೊಳ್ಳುತ್ತವೆಯೋ, ಅಂತೆಯೇ ಮನೋವೃತ್ತಿ ಭಗವಂತನ ಪಾದಾರವಿಂದಗಳಲ್ಲಿ ನೆಲೆಯಾಗಿ ನಿಲ್ಲುವುದು 'ಭಕ್ತಿ'.
 ಚಾಂಚಲ್ಯತೆಯ ಪರಿಣಾಮವಾಗಿ, ನಿಗ್ರಹಿಸಲಿ ಅಸಮರ್ಥವಾದ 'ಮನೋವೇಗ'ವನ್ನು ತಡೆಯಲು ಭಗವದ್ಭಕ್ತಿ ಅತ್ಯಗತ್ಯ ಎಂಬುದನ್ನು "ಹರಿಚರಣ ಭಕ್ತಿಯೋಗಾನ್ಮನಃ ಸ್ವವೇಗಂ ಜಹಾಂತಿ ಶನೈಃ"ಎಂಬ ವಾಕ್ಯದಿಂದ ಹೇಳಲಾಗಿದೆ.
 ಭಗವದ್ಭಕ್ತಿಯ ಫಲವು ಯಾವುದು? ಎಂದು ಪ್ರಶ್ನಿಸುತ್ತ, "ತಲ್ಲೋಕ ಸ್ವರೂಪ ಸಾಕ್ಷಾತ್ತ್ವಂ" ಎಂದು ಶ್ರೀ ಶಂಕರರು ಉತ್ತರಿಸಿದ್ದಾರೆ. ಭಗವದ್ಭಕ್ತಿಯಿಂದ ಸಾಲೋಕ್ಯ, ಸಾಮೀಪ್ಯ ಮತ್ತು ಸಾಯುಜ್ಯ ಪ್ರಾಪ್ತಿಯಾಗುತ್ತದೆ.
"ವಿನಾಯಸ್ಯ ಧ್ಯಾನಂ ವ್ರಜತಿ ಪಶುತಾಂ ಸೂಕರಮುಖತಾಂ
ವಿನಾಯಸ್ಯ ಜ್ಞಾನಂ ಜನಮೃತಿಭಯಂ ಯಾತಿ ಜನತಾ |
ವಿನಾಯಸ್ಯ ಸ್ಮೈತ್ಯಾ ಕ್ರಿಮಿಶತಚಿನಿಂ ಯಾತಿ ಸ ವಿಭುಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿ ವಿಷಯಃ ||
ಯಾವ ಶ್ರೀಕೃಷ್ಣನ ಧ್ಯಾನವಿಲ್ಲದೇ, ಹಂದಿಯೇ ಮೊದಲಾದ ಪಶುವಿನ ಜನ್ಮವನ್ನು ಪಡೆಯಲಾಗುವುದೋ, ಯಾವಾತನ ಸ್ಮರಣೆಯಿಲ್ಲದೇ, ಕ್ರಿಮಿಗಳ ಜನ್ಮವನ್ನು ಹೊಂದಲಾಗುವುದೋ, ಅಂತಹು ಶರಣನೂ, ಲೋಕೇಶನೂ ಆದ ಶ್ರೀಕೃಷ್ಣನು ದೃಗ್ಗೋಚರನಾಗಲಿ ಎಂದು ಭಕ್ತಿಯಿಂದ ಬೇಡಿಕೊಂಡ, ಶ್ರೀಶಂಕರರು, ಕೇವಲ ಕೃಷ್ಣೋಪಾಸಾಕರು ಎಂದು ಹೇಳುವುದು ತಪ್ಪಾದೀತು. ಷ್ಣತಸ್ಥಾಪನಾಚಾತ್ಯರೆಂದು, ಪ್ರಸಿದ್ದರಾದ ಅವರ ಭಕ್ತಿ ಬೇರೆ ಬೇರೆ ದೇವತೆಯನ್ನು ಕುರಿತು ಅವರು ರಚಿಸಿದ ಸ್ತೋತ್ರಗಳಲ್ಲಿ ಕಾಣಬಹುದು.
"ನತೇತರಾತಿಭೀಕರಂ, ನವೋದಿತಾರ್ಕ ಭಾಸ್ವರಂ |
ನಮತ್ಸುರಾರಿ ನಿರ್ಜರಂ ನತಾಧಿಕಾಪ ದುದ್ಧರಮ್ "
ಎಂದು ಗಣೇಶ ಪಂಚರತ್ನ ಸ್ತೋತ್ರದಲ್ಲಿ ಸ್ತುತಿಸಿದಂತೆಯೇ ಸುಬ್ರಹ್ಮಣ್ಯಭುಜಂಗ ಸ್ತೋತ್ರದಲ್ಲಿ "ಪುಲಿಂದಾತ್ಮಜಾಕಾಂತ ಭಕ್ತಾರ್ತಿಹಾರನ್, ಪ್ರಭೋ ತಾರಕಾರೇ ಸದಾ ರಕ್ಷಮಾಂ ತ್ವಂ" ಎಂದು ಪ್ರಾರ್ಥಿಸಿದ್ದಾರೆ.
 ಶಿವನಂದಲಹರೀ, ಶಿವಭುಜಂಗ, ಪಾದಾದಿಕೇಶಾಂತ ವರ್ಣನ ಸ್ತೋತ್ರಂಗಳು, ಆಚಾರ್ಯರ ಶಿವಭಕ್ತಿ ಪ್ರಕಾಶಕಗಳು, ಸೌಂದರ್ಯಲಹರೀ, ವೇದಪಾದಸ್ತೋತ್ರ, ತ್ರಿಪುರಸುಂದರೀ ಮಾನಸ ಪೂಜಾಸ್ತೋತ್ರಾದಿಗಳು ದೇವೀಭಕ್ತಿಪ್ರಕಾಶಕಗಳು. ಹರಿಸ್ತುತಿ, ಲಕ್ಷ್ಮೀನೃಸಿಂಹಸ್ತೋತ್ರ, ವಿಷ್ಣುಪಾದಾದಿ ಕೇಶಾಂತ ಸ್ತೋತ್ರಾದಿಗಳು ವಿಷ್ಣುಭಕ್ತಿ ಪ್ರಕಾಶಕಗಳು.
"ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ|
 ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮ ನಿವೇದನಂ "
ಎಂಬಂತೆ, ಶ್ರವಣಾದಿ ನಮವಿಧವಾದ ಭಕ್ತಿಯ ಪರಿಚಯವನ್ನು, ಶ್ರೀ ಶಂಕರ ಭಗವತ್ಪಾದಾಚಾರ್ಯರು, ತಮ್ಮ ಸ್ತೋತ್ರಶ್ರೇಣಿಯಲ್ಲಿ ಸೇರಿಸಿದ್ದಾರೆಂಬುದನ್ನು, ಆ ಸ್ತೋತ್ರಗಳ ಪಾರಕರು ಅರಿಯಬಹುದು. ಅಂತೆಯೇ "ಚತುರ್ವಿಧಂ ಭಜಂತೇ ಮಾಂ ಜನಾಃ ಸುಕೃತಿನೋರ್ಜನ | ಅರ್ತೋ ಜಿಜ್ಞಾಸುರರ್ಥಾರ್ಥಿ ಜ್ಞಾನೀ ಚ ಭರತರ್ಷಭ" ಎಂಬ ವಾಕ್ಯದಲ್ಲಿ ಹೇಳಿದ, ಚತುರ್ವಿಧ ಭಕ್ತರ ಕಳಕಳಿಯ ಪ್ರಾರ್ಥನೆಯೂ, ಶ್ರೀಮದಾಚಾರ್ಯರ ಸ್ತೋತ್ರಗಳಲ್ಲಿ ಪ್ರಕಟವಾಗಿವೆ.
 'ಭಕ್ತಿ' ಎಂಬ ಪದ 'ಭಜ್ ಸೇವಾಯಾಂ' ಎಂಬ ಧಾತುವಿನಿಂದ ಜನಿಸಿದೆ. "ಭಜಗೋವಿಂದಂ ಭಜಗೋವಿಂದಂ ಗೋವಿಂದಂ ಭಜ ಮೂಢಮತೇ ಸಂಪ್ರಾಪ್ತೇ ಸನ್ನಿಹಿತೇಕಾಲೇ..." ಎಂಬ ಶ್ರೀಶಂಕರರ ನಿರ್ದೇಶ, ಸಾರ್ವಕಾಲಿಕ, ಹಾಗೂ ಸಾರ್ವದೇಶಿಕವಾಗಿ, ಮಾನವಜೀವನದಲ್ಲಿ 'ಭಕ್ತಿ'ಯ ಪ್ರಥಮೋಪಾಸನೆಯನ್ನು ಘೋಷಿಸಿದೆ.
 ಭಗವದ್ಭಕ್ತಿಯನ್ನು ಆಶ್ರಯಿಸಿದ ವ್ಯಕ್ತಿಯು, ತನ್ನ ಅವಯವಗಳೆಲ್ಲವನ್ನೂ ಒಂದಲ್ಲ ಒಂದು ರೀತಿಯಲ್ಲಿ, ಭಗವಂತನ ಸೇವೆಗಾಗಿ ಮುಡುಪಾಗಿಟ್ಟಿರುತ್ತಾನೆ.
"ಮನಸ್ತೇಪಾದಾಭ್ಯೇ ನಿವಸತು ವಚಃ ಸ್ತೋತ್ರಫಣಿತೌ
ಕೌಂ ಚಾಭ್ಯಚಾಯಾಂ ಶ್ರುತಿರಪಿ ಕಥಾಕರ್ಣಾನ ವಿಧೌ |
ತವಧ್ಯಾನೇ ಬುದ್ಧಿರ್ನಯನಯಯುಗಳಂ ಮೂರ್ತಿವಿಭವೇ"
ಮನಸ್ಸು ಭಗವಂತನ ಪಾದಕಮಲದಲ್ಲಿ ನೆಲಸಲಿ, ವಾಕ್ಕು ಸ್ತೋತ್ರ ಪಾಠದಲ್ಲಿ ನಿರತವಾಗಲಿ, ಕೈಗಳು ಅರ್ಚಿಸಲಿ, ಕಿವಿಗಳು ಕಥೆಯನ್ನು ಕೇಳಲಿ, ಬುದ್ಧಿಯು ಭಗವತ್ ಧ್ಯಾನದಲ್ಲಿ ನಿಲ್ಲಲಿ, ಕಣ್ಣುಗಳು ವಿಗ್ರಹ ವೈಭವವನ್ನು ಕಾಣಲಿ" ಎಂಬ ಭಾವನೆಯನ್ನು ಭಕ್ತೋತ್ತಮ ಬೆಳೆಸಿರುತ್ತಾನೆ. ಭಕ್ತನ ಬಯಕೆ ಭಗವಂತನ ಸಾಕ್ಷಾತ್ಕಾರ ಎಂಬುದನ್ನು "ವೀಕ್ಷಾಂ ಮೆ ದಿಶ ಚಾಕ್ಷಪೀಂ ಸಕರುಣಾಂ ದಿವ್ಯೈಶ್ಚಿರಂ ಪ್ರಾರ್ಧಿರಾಂ" ಎಂಬ ವಾಕ್ಯದಿಂದ ಆಚಾರ್ಯರು ವಿವರಿಸಿದ್ದಾರೆ.
 ಭಕ್ತನು, ನಿತ್ಯದಲ್ಲಿ ಎಸಗುವ ಕ್ರಿಯೆಗಳೆಲ್ಲವೂ ಒಂದಲ್ಲ ಒಂದು ರೀತಿಯಿಂದ ಭಗವದುಪಾಸನೆಯಾಗಬೇಕೆಂಬ ನಂಬುಗೆಯನ್ನು "ಜಪೋ ಜಲ್ಪಃ | ಶಿಲ್ಪಂ ಸಕಲಮಪಿ ಮುದ್ರಾವಿರಾಚನಾ ಗತಿಃ ಪ್ರಾದಕ್ಷಿಣ್ಯಕ್ರಮಣಮಶನಾದ್ಯಾಹುತಿ ವಿಧಿಃ ಪ್ರಾಣಾಮಃ ಸಂವೇಶಃ ಸುಖಮಖಿಲಮಾತ್ಮಾರ್ಪಣಧಿಯಾ ಸಪರ್ಯಾಪರ್ಯಾಯಸ್ತವ ಭವತು ಯನ್ನೇವಿಲಸಿತಂ" ಎಂಬ ಸೌಂದರ್ಯಲಹರಿಯ ಶ್ಲೋಕವೊಂದರಲ್ಲಿ ತಿಳಿಸಿದ್ದಾರೆ.
 ಆತ್ಮಾರ್ಪಣಬುದ್ದಿಯಿಂದ, ನನ್ನ ವ್ಯವಹಾರ ನಡೆಯಲಿ, ಮಾತು, ಮಂತ್ರವಾಗಲಿ, ಅಂಗ ವಿನ್ಯಾಸವು ಮುದ್ರಾಪ್ರದರ್ಶನವಾಗಲಿ, ಗಮನವು ಪ್ರದಕ್ಷಿಣಕ್ರಿಯಯಾಗಲಿ, ಭೋಜನವು ಅಹುತಿಯಾಗಲಿ, ಮಲಗೆಇ ಹೊರಳಾಡುವುದು ಸಾಷ್ಟಾಂಗ ಪ್ರಣಾಮವಾಗಲಿ, ಒಟ್ಟಿನಲ್ಲಿ ನನ್ನ ಸಕಲೇಂದ್ರಿಯ ವ್ಯಾಪಾರಗಳೂ, ನಿನ್ನ ಷೋಡಶೋಪಚಾರವಾಗಲಿ.
 "ಭಕ್ತೋತ್ತಮನಾದವನು, ಭಗವಂತನನ್ನು ಮತ್ತೆ ಮತ್ತೆ ಬೇಡುವುದೂ ಆ ಭಕ್ತಿಯನ್ನೇ, ಇದರ ಮುಂದೆ ಆತನಿಗೆ, ಐಹಿಕಾಮುಷ್ಮಿಕಸುಖಗಳಲ್ಲವೂ ತುಚ್ಛವೇ." ಈ ಭಾವನೆಯನ್ನು ಅಲಂಕಾರಿಕವಾಗಿ ತೋರಗೊಟ್ಟ ಪ್ರಾರ್ಥನೆಯಿದು.
ಆಶನಂ ಗರಳಂ ಫಣೀ ಕಲಾವೋ
ವಸನಂ ಚರ್ಮಂ ಚ ವಾಹನಂ ಮಹೋಕ್ಷಃ
ಮಮದಾಸ್ಯಸಿ ಕಿಂ ಕಿಮಾಸ್ತಿ ಶಂಭೋ
ತವ ಪಾದಾಂಬುಜ ಭಕ್ತಿಮೇವ ದೇಹಿ ||
ಇದು ಪರಶಿವನ ಪ್ರಾರ್ಥನೆ "ಶಂಭುವೇ! ವಿಷವೇ ನಿನ್ನ ಆಹಾರ, ಸರ್ಪವೇ ಒಡವೆ, ಚರ್ಮವೇ ಬಟ್ಟೆ, ಎತ್ತೇ ವಾಹನ, ಹೀಗಿರುವಾಗ, ನಾನು ನಿನ್ನನ್ನು, ನನಗೆ ಅಗತ್ಯವಾದ ಆಹಾರಾದಿ ಸುಖ ಭೋಗಗಳನ್ನು ಪ್ರಾರ್ಥಿಸಿಕೊಳ್ಳುವಂತಿಲ್ಲ. ಅದುದರಿಂದ ನಿನ್ನ ಪಾದಕಮಲದ ಭಕ್ತಿಯನ್ನೇ ಕರುಣಿಸು"
 ಹೀಗೆ, ಶ್ರೀ ಶಂಕರಭಗವತ್ಪಾದರು, ತಮ್ಮ ಸ್ತೋತ್ರ ರಚನೆಗಳಲ್ಲಿ, ಭಕ್ತಿಯ ವೈಶಿಷ್ಟ್ಯವನ್ನು ಬಹುವಾಗಿ ಬಣ್ಣಿಸಿ, ಕಲಿಯುಗದ ದುಷ್ಕರ್ಮಿಗಳಾದ ನಮಗೆ, ಭಗವತ್ಸಾಕ್ಷಾತ್ಕಾರಕ್ಕೆ ಸುಲಭವಾದ ಮಾರ್ಗವನ್ನು ತೋರಿದ್ದಾರೆ.

ಭಾನುವಾರ, ಜನವರಿ 22, 2017

27 ನಕ್ಷತ್ರಗಳು ಮತ್ತದರ ಗಾಯತ್ರೀ ಮಂತ್ರಗಳು:(ಪರಿಶೋಧಿತ)
ಜಾತಕದಲ್ಲಿ ನಿಮ್ಮ ನಕ್ಷತ್ರ ಯಾವುದೆಂದು ತಿಳಿದು ಅದರ ಗಾಯತ್ರಿ ಮಂತ್ರವನ್ನು ತ್ರಿಕರಣ ಪೂರ್ವಕವಾಗಿ ಶುದ್ಧರಾಗಿ ಮುಂಜಾನೆ ಪೂರ್ವಾಭಿಮುಖವಾಗಿ ಕುಳಿತು ಸೂರ್ಯನನ್ನು ನೋಡುತ್ತಾ ೯ರಿಂದ ೧೦೮ ಮಂತ್ರ ಜಪಿಸುವುದರಿಂದ ವಿಶೇಷ ನಕ್ಷತ್ರ ಸಂಬಂಧವಾದ ಶಕ್ತಿ ದೊರೆಯುತ್ತದೆ.

1.ಅಶ್ವಿನಿ:
ಓಂ ಶ್ವೇತವರ್ಣಾಯೈ ವಿದ್ಮಹೇl
ಸುಧಾಕರಾಯೈ ಧೀಮಹಿl
ತನ್ನೋ ಅಶ್ವಿನೌ ಪ್ರಚೋದಯಾತ್ll

2. ಭರಣಿ:
ಓಂ ಕೃಷ್ಣವರ್ಣಾಯೈ ವಿದ್ಮಹೇl
ದಂಡಧರಾಯೈ ಧೀಮಹಿl
ತನ್ನೋ ಭರಣೀ ಪ್ರಚೋದಯಾತ್ll

3. ಕೃತ್ತಿಕಾ:
ಓಂ ವಹ್ನಿದೇವಾಯ ವಿದ್ಮಹೇl
ಮಹಾತಪಾಯೈ ಧೀಮಹಿl
ತನ್ನೋ ಕೃತ್ತಿಕಾ ಪ್ರಚೋದಯಾತ್ll

4.ರೋಹಿಣಿ:
ಓಂ ಪ್ರಾಜಾಪತ್ಯೈ ಚ ವಿದ್ಮಹೇl
ವಿಶ್ವರೂಪಾಯೈ ಧೀಮಹಿl
ತನ್ನೋ ರೋಹಿಣೀ ಪ್ರಚೋದಯಾತ್ll

5. ಮಗಶಿರಾ:
ಓಂ ಶಶಿಶೇಖರಾಯ ವಿದ್ಮಹೇl
ಮಹಾರಾಜಾಯ ಧೀಮಹಿl
ತನ್ನೋ ಮಗಶೀರ್ಷಾ ಪ್ರಚೋದಯಾತ್ll

6. ಆರ್ದ್ರಾ:
ಓಂ ಮಹಾರುದ್ರಾಯ ವಿದ್ಮಹೇl
ಪಶುಪೋಷಾಯ ಧೀಮಹಿl
ತನ್ನೋ ಆರ್ದ್ರಾ ಪ್ರಚೋದಯಾತ್ll

7. ಪುನರ್ವಸು:
ಓಂ ಪ್ರಜಾಭೂತ್ಯೈ ಚ ವಿದ್ಮಹೇl
ಅದಿತಿ ಪುತ್ರಾಯ ಧೀಮಹಿl
ತನ್ನಃ ಪುನರ್ವಸು ಪ್ರಚೋದಯಾತ್ll

8. ಪುಷ್ಯಾ:
ಓಂ ಬ್ರಹ್ಮವರ್ಚಸಾಯ ವಿದ್ಮಹೇl
ಮಹಾಧೀಶಾಯ ಧೀಮಹಿl
ತನ್ನಃ ಪುಷ್ಯಃ ಪ್ರಚೋದಯಾತ್ll

9. ಆಶ್ಲೇಷಾ:
ಓಂ ಸರ್ಪರಾಜಾಯ ವಿದ್ಮಹೇl
ಮಹಾರೋಚನಾಯ ಧೀಮಹಿl
ತನ್ನೋ ಆಶ್ಲೇಷಃ ಪ್ರಚೋದಯಾತ್ll

10. ಮಖಾ:
ಓಂ ಮಹಾ$ನಗಾಯ ವಿದ್ಮಹೇl
ಪಿತೃದೇವಾಯ ಧೀಮಹಿl
ತನ್ನೋ ಮಖಃ ಪ್ರಚೋದಯಾತ್ll

11. ಪುಬ್ಬಾ:
ಓಂ ಅರ್ಯಮಣಾಯ ವಿದ್ಮಹೇl
ಪಶುದೇವಾಯ ಧೀಮಹಿl
ತನ್ನೋ ಪೂರ್ವ ಫಲ್ಗುಣಿ ಪ್ರಚೋದಯಾತ್ll

12. ಉತ್ತರಾ:
ಓಂ ಮಹಾಭಗಾಯೈ ವಿದ್ಮಹೇl
ಮಹಾಶ್ರೇಷ್ಠಾಯೈ ಧೀಮಹಿl
ತನ್ನೋ ಉತ್ತರಫಲ್ಗುಣಿ ಪ್ರಚೋದಯಾತ್ll

13. ಹಸ್ತಾ:
ಓಂ ಪ್ರಯಚ್ಛತ್ಯೈ ಚ ವಿದ್ಮಹೇl
ಪ್ರತಿಗೃಭ್ಣೀತಾಯೈ ಧೀಮಹಿl
ತನ್ನೋ ಹಸ್ತಃ ಪ್ರಚೋದಯಾತ್ll

14. ಚಿತ್ತಾ:
ಓಂ ಮಹಾತ್ವಷ್ಟಾಯೈ ವಿದ್ಮಹೇl
ಪ್ರಜಾಪರಾಯೈ ಧೀಮಹಿl
ತನ್ನಶ್ಚೈತ್ರಾ ಪ್ರಚೋದಯಾತ್ll

15. ಸ್ವಾತಿ:
ಓಂ ಕಾಮಚಾರಾಯೈ ವಿದ್ಮಹೇl
ಮಹಾನಿಷ್ಠಾಯೈ ಧೀಮಹಿl
ತನ್ನಃ ಸ್ವಾತೀ ಪ್ರಚೋದಯಾತ್ll

16. ವಿಶಾಖಾ:
ಓಂ ಇಂದ್ರಾಗ್ನ್ಯೈ ಚ ವಿದ್ಮಹೇl
ಶತ್ರುನಾಶಾಯ ಧೀಮಹಿl
ತನ್ನೋ ವಿಶಾಖಾ ಪ್ರಚೋದಯಾತ್ll

17. ಅನೂರಾಧಾ:
ಓಂ ಮಿತ್ರದೇಯಾಯ ವಿದ್ಮಹೇl
ಮಹಾಮಿತ್ರಾಯ ಧೀಮಹಿl
ತನ್ನೋ ಅನೂರಾಧಾ ಪ್ರಚೋದಯಾತ್ll

18. ಜ್ಯೇಷ್ಠಾ:
ಓಂ ಇಂದ್ರಜ್ಯೇಷ್ಠಾಯೈ ವಿದ್ಮಹೇl
ಪುರಂದರಾಯ ಧೀಮಹಿl
ತನ್ನೋ ಜ್ಯೇಷ್ಠಾ ಪ್ರಚೋದಯಾತ್ll

19 ಮೂಲಾ:
ಓಂ ಪ್ರಜಾಧಿಪಾಯ ವಿದ್ಮಹೇl
ಶಿವಂಕರಾಯ ಧೀಮಹಿl
ತನ್ನೋ ಮೂಲಃ ಪ್ರಚೋದಯಾತ್ll

20. ಪೂರ್ವಾಷಾಢಾ:
ಓಂ ಸಮುದ್ರಕಾಮಾಯೈ ವಿದ್ಮಹೇl
ಮಹಾಬೀಜಿತಾಯೈ ಧೀಮಹಿl
ತನ್ನೋ ಪೂರ್ವಾಷಾಢಾ ಪ್ರಚೋದಯಾತ್ll

21. ಉತ್ತರಾಷಾಢಾ:
ಓಂ ವಿಶ್ವೇದೇವಾಯ ವಿದ್ಮಹೇl
ಮಹಾಷಾಢಾಯ ಧೀಮಹಿl
ತನ್ನೋ ಉತ್ತರಾಷಾಢಾ ಪ್ರಚೋದಯಾತ್ll

22. ಶ್ರವಣಾ:
ಓಂ ಮಹಾಶ್ರೇಷ್ಠಾಯೈ ವಿದ್ಮಹೇl
ಪುಣ್ಯಶ್ಲೋಕಾಯೈ ಧೀಮಹಿl
ತನ್ನೋ ಶ್ರವಣಾ ಪ್ರಚೋದಯಾತ್ll

23. ಧನಿಷ್ಠಾ:
ಓಂ ಅಗ್ರನಾಥಾಯ ವಿದ್ಮಹೇl
ವಸುಪ್ರೀತಾಯ ಧೀಮಹಿl
ತನ್ನೋ ಶ್ರವಿಷ್ಠಾ ಪ್ರಚೋದಯಾತ್ll

24. ಶತಭಿಷಾ:
ಓಂ ಸುಭೇಷಜಾಯ ವಿದ್ಮಹೇl
ವರುಣದೇವಾಯ ಧೀಮಹಿl
ತನ್ನೋ ಶತಭಿಷಾ ಪ್ರಚೋದಯಾತ್ll

25. ಪೂರ್ವಾಭಾದ್ರ:
ಓಂ ತೇಜಸ್ಕರಾಯ ವಿದ್ಮಹೇl
ಅಜೈಕ ಪಾದಾಯ ಧೀಮಹಿl
ತನ್ನೋ ಪೂರ್ವಪ್ರೋಷ್ಠಪತ್ ಪ್ರಚೋದಯಾತ್ll

26. ಉತ್ತರಾಭಾದ್ರ:
ಓಂ ಅಹಿರ್ಬುಧ್ನ್ಯಾಯ ವಿದ್ಮಹೇl
ಪ್ರೋಷ್ಠಪದಾಯೈ ಧೀಮಹಿl
ತನ್ನೋ ಉತ್ತರಪ್ರೋಷ್ಠಪತ್ ಪ್ರಚೋದಯಾತ್ll

27. ರೇವತಿ:
ಓಂ ವಿಶ್ವರೂಪಾಯ ವಿದ್ಮಹೇl
ಪೂಷ್ಣ ದೇವಾಯ ಧೀಮಹಿl
ತನ್ನೋ ರೇವತಿಃ ಪ್ರಚೋದಯಾತ್ll

Courtesy: WhatsApp 

ಶನಿವಾರ, ಜನವರಿ 14, 2017

ವೇದಗಳೂ ಪುರಾಣಗಳೂ ಷಡ್ದರ್ಶನ ಸಹಾಯದಿಂದ ಏಕತ್ವವನ್ನು ಹೊಂದಬೇಕೆ ಹೊರತು ಮತಾಂಧತೆಯಿಂದ ವೈಷಮ್ಯಪೂರಿತ ಉದ್ದೇಶದಿಂದ  ತತ್ತ್ವಗಳನ್ನು ಅಪಾರ್ಥಮಾಡಿಕೊಂಡು ಜನರಲ್ಲೂ ದೇವತೆಗಳಲ್ಲೂ ತಾರತಮ್ಯಮಾಡುತ್ತಿರುವ ಇಂದಿನ ಸನ್ನಿವೇಶವನ್ನು ಉದ್ದೇಶಿಸಿ ಈ ತತ್ತ್ವವನ್ನು ನಿರೂಪಿಸಿದ್ದೇನೆ.ಆಚಾರ್ಯತ್ರಯರ ಉದ್ದೇಶವೂ ಅದೇ ಆಗಿರುತ್ತದೆ. ಆದರೆ ಕೇವಲ ಪಾಂಡಿತ್ಯದಿಂದ ಕುತರ್ಕಗಳಿಂದ ದುಃಶಾಸ್ತ್ರಗಳನ್ನು ಸೃಷ್ಟಿಸಿ ಅದರ ಆಧಾರಮೇಲೆ ಕುಯುಕ್ತಿಗಳನ್ನು ಸಂಯೋಜಿಸಿ ಹಗರಣ ಮಾಡುತ್ತಿರುವರ ಮತಾಂಧತೆಯನ್ನು ಖಂಡಿಸುವುದೂ ಈ ನಿರೂಪಣೆಯ ಉದ್ದೇಶವಲ್ಲ. ನಶಿಸಿ ಹೋಗುತ್ತಿದ್ದ ವೈದಿಕ ಪರಂಪರೆಯನ್ನು ಉದ್ಧಾರಮಾಡಲೆಂದೇ ಆಚಾರ್ಯತ್ರಯರ ಅವತಾರ ಎಂಬುದು ಸಾರ್ವಕಾಲಿಕ ಸತ್ಯ ವೇದಗಳು ಆ ಸರ್ವಶಕ್ತನ ಸಾಮರ್ಥ್ಯದ ನಾನಾರೂಪಗಳನ್ನು ಕೊಂಡಾಡಿದರೆ ಪುರಾಣಳು ಆಯಾರೂಪಗಳ ಸಾಮರ್ಥ್ಯವನ್ನು ಪಾತ್ರದಮೂಲಕ ತಿಳಿಯಪಡಿಸುತ್ತದೆ. ಆದರೇ ಎಲ್ಲದಕ್ಕೂ ಆ ಸರ್ವಶಕ್ತನಾದವನೇ ಬ್ರಹ್ಮ , ವಿಷ್ಣು ಮಹೇಶ್ವರ ಎಂಬುದಾಗಿ  ತೋರಿಕೊಳ್ಳುತ್ತಾನೆ.ಒಂದು ರೂಪಾಯಿಯ ನಾಣ್ಯದಲ್ಲಿ ಹೇಗೆ  ನೂರು ಪೈಸೆಗಳು , ನಾಲ್ಕಾಣೆ ,ಎಂಟಾಣೆ, ಹನ್ನೆರಡಾಣೆ ಎಂಬುದಾಗಿ ಕಲ್ಪಿತವಾಗಿದೆಯೋ  ಹಾಗೆಯೇ ಪೈಸೆ, ಆಣೆಯಂತೆ ಏಕಮೇವಾದ್ವಿತೀಯನಾದ  ಪುರುಷೋತ್ತಮನು  ವೈವಿಧ್ಯಮಯನಾಗಿಯೂ ನಾನಾರೂಪಿಯಾಗಿಯೂ ಕಂಡುಕೊಳ್ಳುತ್ತಾನೆ. ಈ ನಾನಾರೂಪವನ್ನು ಏಕವಾಗಿ ಕಂಡುಕೊಳ್ಳುವುದೇ ಜೀವನದ ಗುರಿ.ಅದನ್ನೇ ಆಚಾರ್ಯತ್ರಯರು ಮೋಕ್ಷ , ಹರಿಸಾಯುಜ್ಯ ಎಂದು ಮುಂತಾಗಿ ಹೇಳಿರುತ್ತಾರೆ.
ಇಂದಿಗೆ ಪುರಾಣಗಳಲ್ಲಿಯೂ ಅದರಲ್ಲಿರುವ ತತ್ತ್ವಗಳನ್ನು ವೇದದ ತತ್ತ್ವವನ್ನೂ ಕೇವಲ ಕುತರ್ಕ ಮತ್ತು ಪಾಂಡಿತ್ಯದಿಂದ ತಿದ್ದಿ , ವೈಷಮ್ಯಸೂಸುವಂಥ ಅರ್ಥಗಳನ್ನು ಕಲ್ಪಿಸಿ ಭಕ್ತವೃಂದವನ್ನೂ ಸಾಮಾನ್ಯ ಜನರನ್ನೂ ಅಡ್ಡದಾರಿಗೆಳೆಯುತ್ತಿರುವ ಈ ದುರಾಚಾರಿಗಳ ಸ್ವಾರ್ಥವನ್ನು ನಾವು ಕಂಡುಕೊಳ್ಳಬೇಕು.ಶಿವನೇ ಹರಿಯು ಹರಿಯೇ ಶಿವನು ಅವನೇ ಪರಬ್ರಹ್ಮನು ಎಂಬುವುದನ್ನೇ ವೇದಪುರಾಣಗಳು ಸಾರುತ್ತಿರುವುದು  ಎಂಬ ಅರಿವು ಕೇವಲ ಸಂಸ್ಕಾರದಿಂದ ದೊರಕುವುದೇ ಹೊರತು ಪಾಂಡಿತ್ಯದಿಂದ, ಕುತರ್ಕಗಳಿಂದ ದುಃಶಾಸ್ತ್ರಗಳನು ಅಧ್ಯಯನ ಮಾಡುವ ನೆಪದಲ್ಲಿ ದೊರೆಯುವುದಲ್ಲ. ಎಲ್ಲರಿಗೂ ಅವರವರ ಆಚಾರ್ಯರು ಹಾಕಿಕೊಟ್ಟ ದಾರಿಯೇ ಅತ್ಯಂತ ಶ್ರೇಷ್ಠವಾದದ್ದು.ಅದನ್ನು ಶ್ರೇಷ್ಠವೆಂದು ತಿಳಿದುಕೊಂಡು ಸರ್ವೋತ್ತಮನಾದವನ ಸಾಯುಜ್ಯವನ್ನು ಕಂಡುಕೊಳ್ಳಬೇಕು. ಇನ್ನೊಂದು ಮತವನ್ನು ದೂಷಿಸುವುದರಿಂದ ಏಳ್ಗೆಯನ್ನು ಸಾಧಿಸಬಹುದು ಎಂಬುವ ಮಾತು ಅನರ್ಥಕ್ಕೆ ದಾರಿಮಾಡಿಕೊಡುತ್ತದೆ. ಹಿಂದೆ ತಿಳಿಗೇಡಿಗಳು ಬಿತ್ತಿದ ವಿಷಬೀಜವನುಂಡು ಆಚಾರ್ಯರನ್ನು ನಿಂದಿಸುವ ಪರಂಪರೆ ಇಲ್ಲಿಗೆ ನಿಲ್ಲಬೇಕು. ಆಚಾರ್ಯತ್ರಯರು ಇಂಥ ತಿಳಿಗೇಡಿಗಳಿಗೆ ಸದ್ಬುದ್ಧಿಯನ್ನು ದಯಪಾಲಿಸುವ ಮೂಲಕ ಸದಾಚಾರವನ್ನು ಅವರ ಮನದಲ್ಲಿ ಸ್ಥಾಪಿಸಲಿ ಎಂಬ ಮಹದಾಶಯ. ಅಲ್ಲಿಗೆ ಜೀವನದ ಸಾರ್ಥಕ್ಯವು.
 
ಪುರಾಣಾಧಾರಿತ ಹರಿ ಹರ ಅಭೇದ
ಕೂರ್ಮ ಪುರಾಣ :-

ನ ಮೇ ನಾರಾಯಣಾದ್ಭೇದೋ ವಿದ್ಯತೇ ಹಿ ವಿಚಾರತಃ  |
ತನ್ಮಯಾಹಂ ಪರಂ ಬ್ರಹ್ಮ ಸ ವಿಷ್ಣುಃ ಪರಮೇಶ್ವರಃ  || ೧,೧.೫೮ ||
ಯೇ ತ್ವಿಮಂ ವಿಷ್ಣುಮವ್ಯಕ್ತಂ ಮಾಂ ವಾ ದೇವಂ ಮಹೇಶ್ವರಮ್  |
ಏಕೀಭಾವೇನ ಪಶ್ಯನ್ತಿ ನ ತೇಷಾಂ ಪುನರುದ್ಭವಃ  || ೨,೧೧.೧೧೪ ||
ಯೇಽನ್ಯಥಾ ಮಾಂ ಪ್ರಪಶ್ಯನ್ತಿ ಮತ್ವೇಮಂ ದೇವತಾನ್ತರಮ್  |
ತೇ ಯಾನ್ತಿ ನರಕಾನ್ ಘೋರಾನ್ನಾಹಂ ತೇಷುವ್ಯವಸ್ಥಿತಃ  || ೨,೧೧.೧೧೬ ||
ಯೇ ತ್ವಿಮಂ ವಿಷ್ಣುಮವ್ಯಕ್ತಂ ಮಾಂ ವಾ ದೇವಂ ಮಹೇಶ್ವರಮ್  |
ಏಕೀಭಾವೇನ ಪಶ್ಯನ್ತಿ ನ ತೇಷಾಂ ಪುನರುದ್ಭವಃ  || ೨,೧೧.೧೧೪ ||

ನಾರದೀಯ ಪುರಾಣ

ಹರಿರೂಪಧರಂ ಲಿಙ್ಗಂ ಲಿಙ್ಗರೂಪಧರೋ ಹರಿಃ  |
ಈಷದಪ್ಯನ್ತರಂ ನಾಸ್ತಿ ಭೇದಕೃಚ್ಚಾನಯೋಃ ಕುಧೀಃ  || ೧,೬.೪೪ ||
ಅನಾದಿನಿಧನೇ ದೇವೇ ಹರಿಶಙ್ಕರಸಂಜ್ಞಿತೇ  |
ಅಜ್ಞಾನಸಾಗರೇ ಮಗ್ನಾ ಭೇದಂ ಕುರ್ವನ್ತಿ ಪಾಪಿನಃ  || ೧,೬.೪೫ ||
ಹರಿಶಙ್ಕರಯೋರ್ಮಧ್ಯೇ ಬ್ರಹ್ಮಣಶ್ಚಾಪಿ ಯೋ ನರಃ  |
ಭೇದಂ ಕರೋತಿ ಸೋಽಭ್ಯೇತಿ ನರಕಂ ಭೃಶದಾರುಣಮ್  || ೧,೬.೪೮ ||
ಹರಂ ಹರಿಂ ವಿಧಾತಾರಂ ಯಃ ಪಶ್ಯತ್ಯೇಕರೂಪಿಣಮ್  |
ಸ ಯಾತಿ ಪರಂಮಾನನ್ದಂ ಶಾಸ್ತ್ರಾಣಾಮೇಷ ವಿಷ್ವಯಃ  || ೧,೬.೪೯ ||
ಹರಿಭಕ್ತಿಪರೋ ಯತ್ರ ತತ್ರ ಬ್ರಹ್ಮಾ ಹರಿಃ ಶಿವಃ  |
ದೇವಾಃ ಸಿದ್ಧಾ ಮುನೀಶ್ವಾಶ್ಚ ನಿತ್ಯಂ ತಿಷ್ಟನ್ತಿ ಸತ್ತಮಾಃ  || ೧,೧೧.೪ ||
ಹರಿರೂಪೀ ಮಹಾದೇವಃ ಶಿವರೂಪೀ ಜನಾರ್ದನಃ  |
ಇತಿ ಲೋಕಸ್ಯ ನೇತಾ ಯಸ್ತಂ ನಮಾಮಿ ಜಗದ್ಗುರುಮ್  || ೧,೧೧.೩೦ ||
ಶಿವ ಏವ ಹರಿಃ ಸಾಕ್ಷಾದ್ಧರಿರೇವ ಶಿವಃ ಸ್ವಯಮ್  |
ದ್ವಯೋರನ್ತರದೃಗ್ಯಾತಿ ನರಕಾರನ್ಕೋಟಿಶಃ ಖಲಃ  || ೧,೧೫.೧೫೮ ||
ತಸ್ಮಾದ್ವಿಷ್ಣುಂ ಶಿವಂ ವಾಪಿ ಸಮಂ ಬುದ್ಧಾ ಸಮರ್ಚಯ  |
ಭೇದಕೃದ್ದುಃಖಮಾಪ್ನೋತಿ ಇಹ ಲೋಕೇ ಪರತ್ರಘ ಚ  || ೧,೧೫.೧೫೯ ||

ಹರಿವಂಶ :-
ಯೋವಿಷ್ಣುಃ ಸತುವೈ ರುದ್ರೋ ಯೊ ರುದ್ರಃ ಸ ಪಿತಾಮಹಃ | ಏಕಮೂರ್ತಿಸ್ತ್ರಯೋ ದೇವಾ ರುದ್ರವಿಷ್ಣುಪಿತಾಮಹಃ ||
ಮಹಾಭಾರತ :-
ರುದ್ರೋ ನಾರಾಯಣಶ್ಚೈವೇತ್ಯೇಕಂ ಸತ್ತ್ವಂ  ದ್ವಿಧಾಕೃತಮ್ ||

ತ್ವಂ ಯಜ್ಞಸ್ತ್ವಂ ವಿಷ್ಣುಸ್ತ್ವಂ ರುದ್ರಸ್ತ್ವಂ ಪ್ರಜಾಪತಿ :

ಹರಿ ಓಮ್ ತತ್ ಸತ್...
courtesy — Kanva Yuva Vedike.

ಶನಿವಾರ, ಜನವರಿ 7, 2017

ವಿಶಿಷ್ಟಾದ್ವೈತ
            ವೇದಾಂತದರ್ಶನದ ಪ್ರಕಾರಗಳಲ್ಲಿ ವಿಶಿಷ್ಟಾದ್ವೈತವೂ ಒಂದು.  ಈ ಸಿದ್ಧಾಂತಯವು ಶೃತಿಸ್ಮೃತಿ.  ಇತಿಹಾಸ ಮತ್ತು ಪುರಾಣಗಳಲ್ಲಿ ಪ್ರತಿಪಾದಿತವಾಗಿದ್ದು, ಅತಿ ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುತ್ತದೆ.  `ವಿಶಷ್ಟಾದ್ವೈತದರ್ಶನ' ಎಂಬ ಹೆಸರು ಇದಕ್ಕೆ ಮೊದಲು ಇದ್ದಂತೆ ಕಂಡು ಬರುವುದಿಲ್ಲ.  ಇದನ್ನು ಪ್ರಾಯಃ 'ವೈಷ್ಣವಧರ್ಮ' ಎಂದೊ 'ಭಾಗವತ ಧರ್ಮ' ಎಂದೊ ಕರೆಯುತ್ತಿದ್ದಿರಬಹುದು.  ಭಗವಾನ್‌ ರಾಮಾನುಜರು ಈ ಸಿದ್ಧಾಂತದ ಪ್ರವರ್ತನವನ್ನು ಮಾಡಿದ ಕಾರಣ ಇದನ್ನು 'ರಾಮಾನುಜದರ್ಶನ' ಎಂಬುದಾಗಿ ಕರೆದರೆಂದು ಕಾಣುತ್ತದೆ.  ಸರ್ವದರ್ಶನ ಸಂಗ್ರಹಕಾರರು ರಾಮಾನುಜದರ್ಶನ ಎಂದೇ ಈ ಸಿದ್ಧಾಂತವನ್ನು ನಿರೂಪಿಸದ್ದಾರೆ.  ಈ ಸಿದ್ಧಾಂತದ ಅಸಾಧಾರಣವಾದ ತತ್ತ್ವಸ್ವರೂಪಕ್ಕೆನುಗುಣವಾಗಿ 'ವಿಶಿಷ್ಟಾದ್ವೈತದರ್ಶನ' ಎಂಬ ಹೆಸರು ರೂಢಿಗೆ ಬಂದಿದೆ.

ವಿಶಿಷ್ಟಾದ್ವೈತ ಎಂಬ ಹೆಸರಿನ ಮರ್ಮ
            ಈ ದರ್ಶನ ಅದ್ವೈತ ಮತ್ತು ದ್ವೈತ ದರ್ಶನಗಳಿಗೆ ಸಮನ್ವಯವಾಗುವ ಮಧ್ಯಸ್ಥ ದೃಷ್ಟಿಯನ್ನು ಹೊಂದಿದೆ.  ದ್ವೈತ ಭಾವವನ್ನು ವಾಸ್ತವಿಕವಾಗಿ ಪುರಸ್ಕರಿಸಿ ಚೇತನರಿಗೂ ಈಶ್ವರನಿಗೂ ಪ್ರಕೃತಿಗೂ ಸ್ವಾಭಾವಿಕವಾದ ಭೇದವನ್ನೇ ಈ ದರ್ಶನ ಸಾಧಿಸಿದರೂ, ಚೇತಾನಾಚೇತನ ಪದಾರ್ಥಗಳಿಗೆಲ್ಲ ಆತ್ಮವಾದ ಬ್ರಹ್ಮವಸ್ತು ಚೇತಾನಾಚೇತನಗಳಿಂದ ವಿಶಿಷ್ಟವಾಗಿ ಅದ್ವಿತೀಯವಾದುದೆಂದು ಶ್ರತಿ ಪ್ರಮಾಣಕ್ಕನುಗುಣವಾಗಿ ಸಾಧಿಸಿ, ವಿಶಿಷ್ಟವಸ್ತುವಿನ ಅದ್ವೈತವನ್ನು ಒಪ್ಪುತ್ತದೆ.  ಪ್ರಕಾರ ಪ್ರಕಾರಿಭಾವವನ್ನೂ ಶರೀರ-ಶರೀರಿ ಂಬಂಧವನ್ನೂ ಪ್ರತಿಪಾದಿಸಿ ನಾನಾತ್ವ ಮತ್ತು ಏಕತ್ವಗಳ ಸಮನ್ವಯವನ್ನು ಈ ಸಿದ್ಧಾಂತ ಸಾಧಿಸಿ 'ಸರ್ವಶ್ರುತಿ ಮುಖ್ಯಾರ್ಥಾವಬೋಧಕತ್ವ' ವನ್ನು ಪ್ರತಿಪಾದಿಸಿದೆ.  'ಅಶೇಷ ಚಿದಚಿತ್ಪ್ರಕಾರಂ ಬ್ರಹ್ಮ ಏಕಮೇವತತ್ವಂ' ಎಂದು ವೇದಾಂತ ದೇಶಿಕರು ಈ ಅಂಶವನ್ನು ಹೇಳುತ್ತಾರೆ.  ಶಂಕರಾಚಾರ್ಯರ ಸ್ವರೂಪಾದ್ವೈತಕ್ಕಿಂತ ಇದು ಬೇರೆಯಾದುದು.  ಶಂಕರರು 'ನಿರ್ವಿಶೇಷ ಬ್ರಹ್ಮೈಕತ್ವವನ್ನು' ಪ್ರತಿಪಾದಿಸಿದರೆ ಈ ಸಿದ್ಧಾಂತ ಚೇತನಾಚೇತನಗಳೆಂಬ ವಿಶೇಷಣಗಳಿಂದ ಕೂಡಿದ ವಿಶೇಷ್ಯವಸ್ತು ಒಂದೇ ಎಂದು ಸವಿಶೇಷಾದ್ವೇತವನ್ನು ಉದ್ಘೋಡಿಸುತ್ತದೆ.  ವಿಶೇಷ್ಯ ವಸ್ತು ಒಂದೇ ಆದರೂ ವಿಶೇಷಣ ಬಹುತ್ವವನ್ನು ಇಲ್ಲಿ ಅಂಗೀಕರಿಸಲಾಗಿದೆ.  ಕಾರಣಾವಸ್ಥೆಯಲ್ಲಾಗಲೀ, ಕಾರ್ಯವಸ್ಥೆಯಲ್ಲಾಗಲೀ ಬ್ರಹ್ಮವಸ್ತುವಿಗೆ ಚೇತಾನಾಚೇತನಗಳು ವಿಶೇಷಣಗಳಾಗಿರುತ್ತದೆ.  ಚೇತನಾಚೇತನ ಪದಾರ್ಥಗಳು ಬ್ರಹ್ಮವಸ್ತುವನ್ನು ಯಾವ ಅವಸ್ಥಯಲ್ಲಿಯೂ ಬಿಟ್ಟಿರಲಾರವು.  ಅವು ಅತ್ಯಂತ ಪರತಂತ್ರಗಳಾಗಿ ಸ್ವತಂತ್ರವಾದ ಬ್ರಹ್ಮವಸ್ತುವಿಗೆ ವಿಶೇಷಣಗಳಾಗಿದೆ.  ಇವುಗಳನ್ನು ವಿಶೇಷಣಗಳನ್ನಾಗಿ ಹೊಂದಿರುವುದೇ ಬ್ರಹ್ಮವಸ್ತುವಿನ ವೈಶಿಷ್ಟ್ಯವಾಗಿದೆ.  ಭಗವಾನ್‌ ರಾಮಾನುಜರು ಈ ದರ್ಶನದ ವೈಶಿಷ್ಟ್ಯವನ್ನು ತಮ್ಮ ವೇದಾರ್ಥಸಂಗ್ರಹದಲ್ಲಿ - 'ಸರ್ವಶರೀರತಯಾ ಸರ್ವಪ್ರಕಾರಾಂ ಬ್ರಹ್ಮೈವ ಅವಸ್ಥಿತಮಿತಿ ಅಭೇದಃ ಸಮರ್ಥಿತಃ ಏಕಮೇವ ಬ್ರಹ್ಮ ನಾನಾ ಭೂತಚಿದಚಿದ್ವಸ್ತು ಪ್ರಕಾರಂ ನಾನಾತ್ವೇನ ಅವಸ್ಥಿತಮಿತಿ ಭೇದಾಭೇದೌ, ಅಚಿದ್ವಸ್ತುನಶ್ಚ ಚಿದ್ವಸ್ತುನಶ್ಚ ಈಶ್ವರಸ್ಯಚ ಸ್ವರೂಪ ಸ್ವಭಾವವೈಲಕ್ಷಣ್ಯಾತ್‌ ಅಸಂಕರಾಚ್ಚ ಭೇದಃ ಸಮರ್ಥಿತಃ' ಎಂದು ಹೇಳಿದ್ದಾರೆ.  ಚೇತನಾಚೇತನಗಳಿಗೆ ವಿಶಿಷ್ಟವಾದ ಬ್ರಹ್ಮ ವಸ್ತುತಃ ಅವಿಕಾರಿಯಾದುದು.  ಆಗುವ ವಿಕಾರಗಳೆಲ್ಲಾ ಅದರ ಶರೀರಸ್ಥಾನಿಗಳಾದ ಚೇತನಾಚೇತನಗಳಿಗೆ.  ಅಚೇತನಕ್ಕೆ ಸ್ವರೂಪ ವಿಕಾರವೂ ಚೇತನಗಳಿಗೆ ಜ್ಞಾನಸಂಕೋಚ ರೂಪವಾದ ವಿಕಾರವೂ ಸಂಭವಿಸುವುವು.  ಬ್ರಹ್ಮವಸ್ತು ಮಾತ್ರ ಯಾವ ದೋಷಕ್ಕೂ ಒಳಗಾಗದೆ 'ಅವಿಕಾರಾಯ ಶುದ್ಥಾಯ ನಿತ್ಯಾಯ ಪರಮಾತ್ಮನೇ' ಎಂದು ಹೇಳಿದಂತೆ ನಿತ್ಯಶುದ್ಥವಾಗಿಯೇ ಇರುತ್ತದೆ.  ಹೀಗೆ ಈ ಸಿದ್ಧಾಂತ 'ಚಿದಚಿದ್ವಿಶಿಷ್ಟವಾದ ಬ್ರಹ್ಮ ಒಂದೇ ತತ್ವ' ಎಂದು ಸ್ಥಾಪಿಸುತ್ತದೆ.

ಅದ್ವೈತ - ವಿಶಿಷ್ಟಾದ್ವೈತ
            ಅದ್ವೈತದರ್ಶನಕ್ಕೂ ವಿಶಿಷ್ಟಾದ್ವೈತಕ್ಕೂ ಇರುವ ವೈಲಕ್ಷಣ್ಯಗಳನ್ನು ಹೀಗೆ ಗುರುತಿಸಬಹುದು.  ಅದ್ವೈತವು ನಿಷೇಧಾತ್ಮಕವಾದರೆ ವಿಶಿಷ್ಟಾದ್ವೈತ ವಿಧ್ಯಾತ್ಮಕವಾಗಿದೆ.  ಬ್ರಹ್ಮವಸ್ತುವನ್ನು ಬಿಟ್ಟು ಎರಡನೆಯಾದಾದ ಬೇರೆ ಯಾವುದೂ ಇಲ್ಲವೆಂಬುದು ಅದ್ವೈತದ ನಿಲುವು.  ಚೇತನಾ ಚೇತಾನಾತ್ಮಕವಾದ ಸಮಸ್ತವೂ ಬ್ರಹ್ಮನಲ್ಲಿ ಅಡಗಿದೆ ಎಂಬುದು ಈ ದರ್ಶನದ ನಿಶ್ಚಯ.  ಬ್ರಹ್ಮಕ್ಕಿಂತ ಪೃಥಕ್ಕಾಗಿ, ಬೇರೆಯಾಗಿ, ಯಾವುದೂ ಇಲ್ಲವೆಂದು ಅದ್ವೈತ ಸಾರಿದರೆ ಬ್ರಹ್ಮದೊಡನೆ ಅಪೃಥಕ್ಕಾಗಿ, ಅವಿಭಾಗವಾಗಿ ಎಲ್ಲವೂ ಇದೆ ಎಂಬುದು ಈ ದರ್ಶನದ ಸಿದ್ಧಾಂತ.  'ಬ್ರಹ್ಮಸತ್ತೆಯೇ ಸತ್ತ್ವ ಅದನ್ನುಳಿದು ಪ್ರಪಂಚವೆಂಬುದಿಲ್ಲ' - ಎಂದು ಅದ್ವೈತ ಹೇಳುತ್ತದೆ.  ಬ್ರಹ್ಮಸತ್ತೆಗೆ ಅಧೀನವಾದ ಸತ್ತಾ ಪ್ರಪಂಚಕ್ಕೆ ಇದೆ ಎಂದು ವಿಶಿಷ್ಟಾದ್ವೈತ.  ಬ್ರಹ್ಮ ವಸ್ತುವಿಗೆ ಅಧೀನವಾಗಿಲ್ಲವೆಂದು ಯಾವುದೂ ಇಲ್ಲ, ಬ್ರಹ್ಮದಲ್ಲಿ ದೋಷವಾವುದೂ ಇಲ್ಲವೆಂದು ನಿಷೇಧದಲ್ಲಿ ತಾತ್ಪರ್ಯ.  ಅದ್ವೈತಕ್ಕೆ ದೋಷವಿಲ್ಲವೆಂಬುದಷ್ಟೇ ಅಲ್ಲದೆ ಬ್ರಹ್ಮದಲ್ಲಿ ಸಕಲಕಲ್ಯಾಣ ಗುಣಗಳೂ ಇವೆ ಎಂದು ವಿಧಿಯಲ್ಲಿ ತಾತ್ಪರ್ಯ ಎಂದು ವಿಶಿಷ್ಟಾದ್ವೈತವು ಸರ್ವಾನಿಷ್ಟನಿವೃತ್ತಿ ಪೂರ್ವಕವಾದ ಸರ್ವೇಷ್ಟಪ್ರಾಪ್ತಿ ಎಂದು ಹೇಳುತ್ತದೆ.  ಆತ್ಮರೆಲ್ಲರೂ ಒಂದೇ ಎಂದು ಐಕಾತ್ಮ್ಯವನ್ನು ಅದ್ವೈತ ಹೇಳಿದರೆ ಅತ್ಮರೆಲ್ಲರೂ ಜ್ಞಾನೈಕಾಕಾರರಾಗಿ ಪರಸ್ಪರ ಸಮರು ಎಂದು ವಿಶಿಷ್ಟಾದ್ವೈತ ಹೇಳುತ್ತದೆ.  ಅಭೇದಶ್ರತಿಗೆ ಪ್ರಾಧಾನ್ಯವಿತ್ತು ಅದ್ವೈತ ದರ್ಶನ ಭೇದಶ್ರತಿಗಳಿಗೆ ಗೌಣಾರ್ಥವನ್ನು ಹೇಳುತ್ತದೆ.  ಅಭೇದಶ್ರತಿಗಳಿಗೂ ಭೇದ ಶ್ರತಿಗಳಿಗೂ ಮುಖ್ಯಾರ್ಥವನ್ನೇ ಹೇಳಿ ಘಟಕಶ್ರತಿಗಳ ಮೂಲಕ ಸಮನ್ವಯವನ್ನು ವಿಶಿಷ್ಟಾದ್ವೈತವು ಸಾಧಿಸುತ್ತದೆ.

ವಿಶಿಷ್ಟಾದ್ವೈತ ದರ್ಶನದ ಪ್ರಾಚೀನತೆ
            ವಿಶಿಷ್ಟಾದ್ವೈತ ದರ್ಶನವನ್ನು ಯಾರೂ ಹೊಸದಾಗಿ ಸ್ಥಾಪಿಸಲ್ಲ.  ಅನಾದಿಕಾಲದಿಂದ ಶ್ರತಿಗಳಲ್ಲಿ, ಇತಿಹಾಸ ಪುರಾಣಗಳಲ್ಲಿ, ಆಗಮಗಳಲ್ಲಿ,ಆಳ್ವಾರುಗಳು ದವ್ಯಪ್ರಬಂಧಗಳಲ್ಲಿ ಖಚಿತವಾಗಿ ಪ್ರತಿಪಾದಿಸಿರುವ ತತ್ವಗಳನ್ನು ಆಚಾರ್ಯರಗಳು ಉಪದೇಶಿಸಿದ್ದಾರೆ.  ಉಪನಿಷತ್ತಿನಲ್ಲಿ ಉಪದೇಶಿಸಿರುವ ಪರಮ ತತ್ತ್ವದ ಬಗೆಗೆ ಬೇರೆ ಬೇರೆ ಅಭಿಪ್ರಾಯಗಳು ಅತಿ ಪ್ರಾಚೀನ ಕಾಲದಿಂದಲೂ ಇದ್ದವೆಂಬುದಕ್ಕೆ ಬಾದರಾಯಣರ ಬ್ರಹ್ಮಸೂತ್ರಗಳೇ ಸಾಕ್ಷಿಯಾಗಿದೆ.  ಆಶ್ಮರಥ್ಯರು,  ಔಡುಲೋಮಿಗಳು, ಕಾಶಕೃರು, ಮಾದರಿಗಳು ಮೊದಲಾದವರ ಅಭಿಪ್ರಾಯಗಳನ್ನು ಸೂತ್ರಕಾರರು ಉಲ್ಲೇಖಿಸಿ ತಮ್ಮ ಅಭಿಪ್ರಾಯಗಳನ್ನು ಅಲ್ಲಲ್ಲಿ ನಿರೂಪಿಸಿದ್ದಾರೆ.  ದ್ವೈತಾದ್ವೈತ ವಿಶಿಷ್ಟಾದ್ವೈತ ಭಾವನೆಗಳೆಲ್ಲಾ ಅತಿ ಪ್ರಾಚೀನ ಕಾಲದಿಂದಲೂ ಇದ್ದವೇ ಆಗಿ, ಶ್ರುತಿಗಳ ತಾತ್ಪರ್ಯವನ್ನು ನಿರ್ಣಯಿಸುವುದರಲ್ಲಿ ಪ್ರಾಮಣಿಕವಾಗಿ ತೊಡಗಿವೆ.  'ವೇದಾಮತವೆಂದರೆ ಶಂಕರದರ್ಶನವೇ.  ಶಮಕರರಿಗೆ ಮೊದಲ ವಿಶಿಷ್ಟಾದ್ವೈತವಿರಲೇ ಇಲ್ಲ,  ವಿಶಿಷ್ಟಾದ್ವೈತ ಪರವಾದ ವೃತ್ತಿ ಗ್ರಂಥವೇ ಇರಲಿಲ್ಲ, ಶಂಕರರಿಗೆ ಮೊದಲು ಮೋಕ್ಷದಲ್ಲಿ ಜೀವಬ್ರಹ್ಮರಿಗೆ ಭೇದವನ್ನು ಯಾರೂ ಹೇಳುತ್ತಿರಲಿಲ್ಲ' - ಇವೇ ಮೊದಲಾದ ಅಭಿಪ್ರಾಯಗಳಿಗೆ ಅವರವರ ಅಭಿನೀವೇಶ ಕಾರಣವೆನ್ನಬೇಕು.  ಇವುಗಳಿಗೆ ಯಾವ ಆಧಾರವೂ ಇಲ್ಲ.

            ಗೌಡಪಾದರು, ಶಂಕರರು ಇವರುಗಳಿಗಿಂತ ಹಿಂದಿನವರು ಅಜಾತಿವಾದವನ್ನಾಗಲೀ, ಅಧ್ಯಾರೋಪಾವಾದ ಪ್ರಕ್ರಿಯೆನ್ನಾಗಲೀ ಪ್ರತಿಪಾದಿಸಿರುವುದು ಕಂಡು ಬರುವುದಿಲ್ಲ.  ವಿಶಿಷ್ಟಾದ್ವೈತ ಸಂಪ್ರದಾಯವನ್ನು ಪ್ರವರ್ತನಗೊಳಿಸಿದ ಅನೇಕ ಆಚಾರ್ಯರುಗಳನ್ನು ಯಾಮುನರೂ, ರಾಮಾನುಜರೂ ಉಲ್ಲೇಖಿಸುತ್ತಾರೆ.  ಯಾಮುನರು ದ್ರಮಿಡ ಭಾಷ್ಯಕಾರರನ್ನು ಶ್ರೀವತ್ಸಾಂಕಮಿಶ್ರರು, ಆಚಾರ್ಯ ಟಂಕ, ಭರ್ತೃಮಿತ್ರ - ಭರ್ತೃಹರಿ -ಬ್ರಹ್ಮದತ್ತ = ಶಂಕರ ಶ್ರೀ ವತ್ಸಾಂಕ - ಭಾಸ್ಕರಾದಿಗಳ ಹೆಸರುಗಳನ್ನೂ ತಮ್ಮ ಗ್ರಂಥಗದಲ್ಲಿ ಹೆಸರಿಸಿದ್ದಾರೆ.  ರಾಮಾನುಜರು ಬೃತ್ತಿಕಾರ ಬೋಧಾಯನ, ಟಂಕ-ದ್ರಮಿಡ-ಗುಹದೇವ-ಭಾರುಚಿ ಕಪರ್ದಿ ಮೊದಲಾದವರನ್ನು ಹೇಳುತ್ತಾರೆ.  ಇವೆಲ್ಲ ಪ್ರಮಾಣಗಳನ್ನು ನಿರ್ಮತ್ಸರರಾಗಿ ಪರಿಶೀಲಿಸಿದಾಗ ವೇದಾಂತ ದರ್ಶನದ ಪ್ರಕಾರಗಳು ಹಿಂದಿನಿಂದಲೂ ಅನೇಕ ಪ್ರಕಾರವಾಗಿದ್ದವೆಂದೂ ಅವುಗಳಲ್ಲಿ ವಿಶಿಷ್ಟಾದ್ವೈತವೂ ಒಂದು ಪ್ರಕಾರವೆಂಬುದೂ ನಿಶ್ಚಯವಾಗುತ್ತದೆ.

ಶ್ರತಿ-ಸ್ಮೃತಿಗಲ್ಲಿ ವಿಶಿಷ್ಟಾದ್ವೈತ
            ಶ್ರುತಿ ಸ್ಮೃತೀತಿಹಾಸ ಪುರಾಣಗಳಲ್ಲಿಯೂ ಆಗಮಗಳಲ್ಲಿಯೂ ಕಂಡು ಬರದ ಯಾವ ಹೊಸ ಅಂಶವು ವಿಶಿಷ್ಟಾದ್ವೈತದಲ್ಲಿ ಇಲ್ಲ. ಶ್ರುತಿವಾಕ್ಯಗಳಿಗೆ ಪರಸ್ಪರ ಸಾಮಂಜಸ್ಯವನ್ನು ಹೇಳುವ ದರ್ಶನ ಇದು.  ಋಗ್ವೇದ ಸಂಹಿತೆಯಲ್ಲಿ, ಉಪನಿಷತ್ತುಗಳಲ್ಲಿ, ಆಗಮಗಳಲ್ಲಿ, ಭಗವದ್ಗೀತೆಯಲ್ಲಿ, ಬ್ರಹ್ಮಸೂತ್ರಗಳಲ್ಲಿ ಆಳ್ವಾರಗಳ ದಿವ್ಯ ಪ್ರಬಂಧಗಳಲ್ಲಿ ಪ್ರತಿಪಾದಿಸಿರುವ ತತ್ತ್ವಹಿತ ಪುರುಷಾರ್ಥಗಳ ಸ್ವರೂಪವನ್ನು ಹಾಗೆಯೇ ಈ ದರ್ಶನ ಪ್ರತಿಪಾದಿಸುತ್ತದೆ.

ಋಗ್ವೇದ ಸಂಹಿತೆ.
            ಅತಿ ಪ್ರಾಚೀನವಾದ ಋಗ್ವೇದ ಸಂಹಿತೆ ಭಗವತ್ಸ್ವರೂಪವನ್ನೂ ಜೀವಾತ್ಮ ಸ್ವರೂಪವನ್ನೂ, ಅವರುಗಳಿಗಿರುವ ಅವರ್ಜನೀಯವಾದ ಸಂಬಂಧವನ್ನೂ, ಭಗವತ್ಪ್ರಾತಿಗೆ ಭಗವದುಪಾಸನೆಯೇ ಉಪಾಯವೆಂದೂ ಸ್ಪಷ್ಟವಾಗಿ ನಿರೂಪಿಸಿದೆ.  'ಯತ್ರ ಆನಂದಾಶ್ಚ ಮೊದಾಶ್ಚ ಮುದಃಪ್ರಮುದ ಆಸತೇ' ಎಂದು ಹೇಳಿ ಮೋಕ್ಷ ಸ್ವರೂಪವನ್ನು ಗುರುತಿಸಿದೆ.  ಭಗವಂತನ ಅನುಗ್ರಹದಿಂದ ಪ್ರತಿಬಂಧಕವಾದ ಪಾಪ ನಿವೃತ್ತಿಯನ್ನೂ ಹೇಳಿ, 'ತವ ಸ್ವಾಮ ಪುರುವೀರಸ್ಯ ಶರ್ಮನ್‌' ಎಂದೂ  'ತುಭ್ಯವಿನ್ಮಘವ್ನಭೂಮ' ಎಂದೂ ಹೇಳಿ ಭಗವಂತನಿಗೆ ಶೇಷಭೂತರಾಗಬೇಕೆಂದು ಉಪದೇಶಿಸಿದೆ.  ಜೀವ ಬ್ರಹ್ಮೈಕ್ಯವನ್ನಾಗಲೀ, ನಿರ್ಗುಣದಬ್ರಹ್ಮವನ್ನಾಗಲೀ ಎಲ್ಲಿಯೂ ಇಲ್ಲಿ ಹೇಳಿಲ್ಲ, ಎಲ್ಲ ಅವಸ್ಥೆಗಳಲ್ಲಿಯೂ ಜಗತ್ತಿನ ಹಾಗೂ ಜೀವರಗಳ ಸತ್ಯವೇ ಪ್ರತಿಪಾದಿತವಾಗಿದೆ.

ಉಪನಿಷತ್ತುಗಳು
            ಉಪನಿಷತ್ತುಗಳಲ್ಲಿ ಜಗತ್ಕಾರಣವಾದ ಬ್ರಹ್ಮವಸ್ತುವನ್ನು ಸತ್‌, ಆತ್ಮನ್‌, ಬ್ರಹ್ಮ, ಆಕಾಶ, ಅಕ್ಷರ, ಜ್ಯೋತಿ, ಪ್ರಾಣ ಎಂಬ ಅನೇಕ ನಾಮಗಳಿಂದ ಕರೆದಿದೆ.  ಜಗತ್ಸಷ್ಥ್ರಿಯ ವಿಚಾರ ಎಲ್ಲ ಉಪನಿಷತ್ತುಗಳಲ್ಲಿಯೂ ಕಂಡು ಬಂದಿದೆ.  ಬ್ರಹ್ಮ, ಲಕ್ಷಣವನ್ನು 'ಯತೋವಾ ಇಮಾನಿಭೂತಾಚಯಂತೇ' ಎಂದೇ ಹೇಳುತ್ತದೆ.  ಸೃಷ್ಟಿಯ ನಿರೂಪಣೆ ಸುಳ್ಳಾದುದೆಂಬ ಸುಳಿವು ಎಲ್ಲಿಯೂ ಇಲ್ಲ, ಜೀವಬ್ರಹ್ಮ ಭೇದವನ್ನೇ ಮುಖ್ಯವಾಗಿ ಹೇಳಿ ಭಗವದುಪಾಸನೆಯ ಅನೇಕ ಪ್ರಕಾರಗಳನ್ನು ಹೇಳಿದೆ.  ಅಭೇಜ ವಾಕ್ಯಗಳಾದ 'ತತ್‌ತ್ವಂ ಅಸಿ', 'ಅಯಮಾತ್ಮಾ ಬ್ರಹ್ಮ', 'ಸರ್ವಂಖಲ್ಪಿದಂ ಬ್ರಹ್ಮ' ಮೊದಲಾದ ವಾಕ್ಯಗಳು, ಎಲ್ಲ ಚೇತನಾಚೇತನ ಪದಾರ್ಥಗಳಲ್ಲಿ ಬ್ರಹ್ಮವು ಅಂತರ್ಯಾಮಿಯಾಗಿರುವುದರಿಂದ ಎಲ್ಲ ಶಬ್ಚಗಳೂ ಬ್ರಹ್ಮವನ್ನೇ ಮುಖ್ಯಾರ್ಥದಲ್ಲಿ ಭೋದಿಸುತ್ತವೆ ಎಂಬುದನ್ನು ತಿಳಿಸುತ್ತದೆ.  ಭೇದವಾಕ್ಯಗಳಿಗೂ ಅಭೇದ ವಾಕ್ಯಗಳಿಗೂ ಸಮನ್ವಯವನ್ನು ಮಾಡುವ ವಿಧಾನವನ್ನು ಅಂತರ್ಯಾಮಿಬ್ರಾಹ್ಮಣ ತೋರಿಸಿಕೊಡುತ್ತದೆ.  ಅವಿದ್ಯಯಿಂದ ಬ್ರಹ್ಮಸ್ವರೂಪವು ರಿರೋಹಿತವಾಗಿದೆ ಎಂದಾಗಲೀ ಬ್ರಹ್ಮವೇ ಜಗತ್ತಿನಂತೆ ತೋರಿಬರುತ್ತದೆ ಎಂದಾಗಲೀ ಹೇಳುವ ಉಪನಿಷದ್ವಾಕ್ಯವೊಂದೂ ಇಲ್ಲ.

ಭಗವದ್ಗೀತೆ
            ಶ್ರೀಮದ್ರಾಮಾಯಣ ಮಹಾಭಾರತಗಳಲ್ಲಿಯೂ ವಿಷ್ಣುಪುರಾಣ ಮೊದಲಾದುವುಗಳಲ್ಲಿಯೂ  ಜೀವಬ್ರಹ್ಮದ ಭೇದವೇ ಕಂಡುಬರುತ್ತದೆ.  ಭಕ್ತಿಮಾರ್ಗವನ್ನೂ ಪ್ರಪತ್ತಿಮಾರ್ಗವನ್ನೂ ಮೋಕ್ಷೋಪಾಯವಾಗಿ ಇವು ವಿಧಿಸಿವೆ.  ಭಗವದ್ಗೀತಯು ಮಹಾಭಾರತದ ಸಾರಸರ್ವಸ್ವವಾಗಿದೆ.  ಪರಾ ಪ್ರಕೃತಿ, ಅಪರಾ ಪ್ರಕೃತಿ ಮತ್ತು ಈಶ್ವರ ಎಂಬ ತತ್ತ್ಪತ್ರಯವನಿನದು ಉಪದೇಶಿಸುತ್ತದೆ.  ಭಗವತ್‌ ಸ್ವರೂಪದ ಹಿರಿಮೆಯನ್ನು ಇದು ಎತ್ತಿ ತೋರಿಸುತ್ತದೆ.  ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗಗಳ ಸ್ವರೂಪವನ್ನು ವಿವರಿಸಿರುವ ಗೀತೆ 'ಸರ್ವಧರ್ಮಾನ್‌ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ' ಎಂದು ಪರಮ ಹಿತವನ್ನುಪದೇಶಿಸುತ್ತದೆ.  ಭಗವಂತನಿಗೂ ಜೀವನಿಗೂ ಅಭೇದವನ್ನು 'ಕ್ಷೇತ್ರಜ್ಞಂ ಚಾಪಿ ಮಾಂ ವಿದ್ದಿ' ಮೊದಲಾದ ವಾಕ್ಯಗಳು ಹೇಳಿದರೂ ಇವುಗಳ ಅರ್ಥವನ್ನು ಭಗವದ್ಗೀತೆಯ 'ಮಹಾತಾತ್ಪರ್ಯಕ್ಕೆ' ಅನುಗುಣವಾಗಿ ಹೇಳಬೇಕಾದುದರಿಂದ ಐಕ್ಯಾರ್ಥವನ್ನು ಹೇಳುವುದು ಹೊಂದುವಿದಿಲ್ಲ.  ಗೀತೆಯು ಉಪದೇಶಿಸುವ ಸಾಧನೆಯ ಕ್ರಮವನ್ನು ಸಮಗ್ರವಾಗಿ ವಿಶಿಷ್ಟಾದ್ವೈತ ಅಳವಿಡಿಸಿಕೊಂಡಿದೆ.

ಪಾಂಚರಾತ್ರಾಗಮ
           ಪಾಂಚರಾತ್ರ ಅಗಮಗಳಲ್ಲಿ ಪ್ರತಿಪಾದಿಸಿರುವ ಭಾಗವತ - ಸಂಪ್ರದಾಕ್ಕನುಗುಣವಾಗಿದೆ ಈ ಸಿದ್ಧಾಂತದ ಈಶ್ವರಭಾವನೆ. ಈ ಅಗಮಗಳಲ್ಲಿ ಶ್ರೀಮನ್ನಾರಯಣನ ಪರಮಕಾರಣತ್ವ್ನ್ನು ಪ್ರತಿಪಾದಿಸಿದೆ.  ಜಯಾಖ್ಯ ಸಂಹಿತೆಯಲ್ಲಿ ಹೇಳುವ ಬ್ರಹ್ಮಸರ್ಗ ಪ್ರಧಾನಸರ್ಗ ಮತ್ತು ಶುದ್ಧಸರ್ಗಗಳು, ಸೃಷ್ಠಿಯ ಮೂರು ಬಗೆಗಳಾಗಿದೆ.  ಚತುರ್ಮುಖ ಬ್ರಹ್ಮನ ಸೃಷ್ಠಿ, ಮಧುಕೈಟಭರಿಂದ ವೇದಾಪಹಾರ ಹಾಗೂ ಅವರ ನಿರಸನ ಮೊದಲಾದವು ಬ್ರಹ್ಮಸೃಷ್ಠಿಗೂ, ಪ್ರಕೃತಿಯ ಇಪ್ಪತ್ತುನಾಲ್ಕು ತತ್ತ್ಬಗಳ ಸೃಷ್ಠಿ ಪ್ರಧಾನ ಸೃಷ್ಠಿಗೂ ವಾಸುದೇವನು ತನ್ನ ಸಂಕಲ್ಪಕ್ಕನುಸಾರವಾಗಿ ಅಚ್ಯುತ, ಸತ್ಯ, ಪುರುಷ ಎಂಬ ರೂಪಗಳನ್ನು ಹೊಂದುವುದು ಶುದ್ದಸರ್ಗಕ್ಕೂ ಅನ್ವಯಿಸುವುವು.  ಭಗವಂತನು ಜ್ಞಾನಾನಂದಸ್ವರೂಪನಾಗಿ ಕಾಲದೇಶಗಳ ಪರಿಚ್ಧೇದಗಳನ್ನು ಮೀರಿದ್ದಾನೆಂದೂ ಚೇತನಾಚೇತನ ತತ್ವಗಳನ್ನು ವ್ಯಾಪಿಸದ್ಧಾನೆಂದೂ,

ಚೇತನಾಚೇತನಾಸ್ಸರ್ವೇ ಭೂತಾಃ ಸ್ಥಾವರ ಜಂಗಮಾಃ
ಪೂರಿತಾಃ ಪರಮೇಶೇನ ರಸೇನೌಷಧಯೇ ಯಥಾ (ಜಯಾಖ್ಯ ೪-೯೩)              
            ಹೀಗೆ ಜಯಾಖ್ಯ ಸಂಹಿತೆ ಹೇಳುತ್ತದೆ.  ಮುಕ್ತೈವಸ್ಥೆಯಲ್ಲಿ ನಾಮರೂಪ ಭೇದಗಳನ್ನು ಕಳೆದುಕೊಂಡು ಚೇತನರು ಭಗವಂತನಿಗೆ ಸದೃಶರಾಗುವರೆಂದೂ, ಅವನೊಂದಿಗೆ ಸೇರಿಹೋಗುವುದಿಲ್ಲವೆಂದೂ ಪಾಂಚಾರತ್ರಾಗಮ ತಿಳಿಸುತ್ತದೆ.  ಬೇರೆ ಬೇರೆ ನೀರು ಸಮುದ್ರವನ್ನು ಸೇರಿದಾಗ ಸಮುದ್ರದೊಡನೆ ಸೇರಿ ಸಮುದ್ರೋದಕಕ್ಕೆ ಸಮಾನವಾಗುತ್ತದೆ.  ಆಗ ಇದು ಇಂಥಾನದಿಯ ನೀರೆಂದು ಹೇಳುವುದಕ್ಕಾವುದಿಲ್ಲ, ಹಾಗೆಯೇ ಮುಕ್ತರು ಭಗವಂತನನ್ನು ಸೇರಿದಾಗ ಅವನಿಗೆ ಸದೃಶತಾಗುತಾರೆ.  ಆದರೆ ಅವನಿಂದ ಭಿನ್ನರಾಗಿರುತ್ತಾರೆ ಎಂದು

ಸರಿತ್ಸಂಘಾತ್‌  ಯಥಾತೋಯಂ ಸಂಪ್ರವಿಷ್ಟಂ ಮಹೋದಧೌ
ಅಲಕ್ಷೈಶ್ಚೋದಕೇ ಭೇದಃ ಪರಸ್ಮಿನ್‌ ಯೋಗಿನಾ ತಥಾ                                      
                              (ಜಯಾಖ್ಯಾ ೪-೧೨೩)
ಎಂಬಲ್ಲಿ ಹೇಳಿದೆ.  ಭಗವಂತನು ಜ್ಞಾನ, ಶಕ್ತಿ, ಬಲ, ಐಶ್ವರ್ಯ, ವೀರ್ಯ, ತೇಜಸ್ಸು ಎಂಬ ಷಡ್ಗುಣಗಳನ್ನು ಹೊಂದಿರುವನೆಂದೂ, ಅವನು ಲಕ್ಷ್ಮೀವಿಶಿಷ್ಟನಾಗಿದ್ದಾನೆಂದೂ, ಚತುರ್ವ್ಯೂಹಗಳಲ್ಲಿರುವನೆಂದೂ, ಸಂಸಾರದಿಂದ ಬಿಡುಗಡೆ ಹೊಂದಿ ಆ ಭಗವಂತನನ್ನು ಸೇರಲು ಅಂಗಪಂಚಕಗಳಿಂದ ಕೂಡಿದ ಶರಣಾಗತಿ ಉಪಾಯವೆಂದೂ ಪಾಂಚರಾತ್ರಾಗಮಗಳು ಭೋಧಿಸುತ್ತವೆ.  ವಿಶಿಷ್ಟಾದ್ವೈತ ಸಿದ್ಧಾಂತದಲ್ಲಿ ಈ ಅಂಶಗಳೆಲ್ಲಾ ಅಂಗೀಕೃತವಾಗಿವೆ.  ಪಾಂಚರಾತ್ರಾಗಮಗಳ ಉಪದೇಶದ ಮತ್ತು ಉಪನಿಷತ್ತುಗಳ ಉಪದೇಶದ ಸಮನ್ವಯವನ್ನು ವಿಶಿಷ್ಟಾದ್ವೈತ ದರ್ಶನದಲ್ಲಿ ಕಾಣಬಹುದು.

ಆಳ್ವಾರುಗಳ ದಿವ್ಯಪ್ರಬಂಧಗಳು
            ಆಳ್ವಾರರುಗಳ  ದಿವ್ಯಪ್ರಬಂಧಗಳು ಶ್ರುತಿಸ್ಮೃತೀತಹಾಸ ಪುರಾಣಗಳ ಮುಂದಿನ ಕಾಲಕ್ಕೂ ಶ್ರೀಮನ್ನಾಥಮುನಿಗಳು ಮೊದಲಾದ ದರ್ಶನ ಸ್ಥಾಪನಾಚಾರ್ಯರುಗಳ ಹಿಂದಿನ ಕಾಲಕ್ಕೂ ಸಂಬಂಧಿಸಿವೆ.  ಶ್ರುತಿ ಸ್ಮೃತಿಗಳಲ್ಲಿ ಪ್ರತಿಪಾದಿತವಾದ ತತ್ತ್ವಸ್ವರೂಪವನ್ನು ಯಥಾವತ್ತಾಗಿ ಸಾಕ್ಷಾತ್ಕರಿಸಿದ ಆಳ್ವಾರುಗಳು ತಮ್ಮ ಶ್ರೀ ಸೂಕ್ತಿಗಳಲ್ಲಿ ಅವಿಷ್ಕರಿಸಿದ್ದಾರೆ.  ಶೃತಿಗಳ ಸಾರಾರ್ಥವನ್ನು ಇವು ಖಚಿತವಾಗಿ ಅಥೈಸಿವೆ.  ಆಳ್ವಾರರುಗಲು ಹೇಳುವ ತತ್ತ್ವಸ್ವರೂಪ ವಿಶಿಷ್ಟಾದ್ವೈತದಲ್ಲಿ ಪ್ರತಿಬಿಂಬಿತವಾಗಿದೆ.  ಶಂಕರಾಚಾರ್ಯರಿಗೂ ಹಿಂದಿನ ಕಾಲಕ್ಕೆ ಸೇರಿದ ದಿವ್ಯಪ್ರಬಂಧಗಳು ಹೇಗೆ ಅನಾದಿಕಾಲದಿಂದ ವಿಶಿಷ್ಟಾದ್ವೈತ ಸಂಪ್ರದಾಯ ಅವಿಚ್ಛಿನ್ನವಾಗಿ ಮುಂದುವರಿದುಕೊಂಡು ಬಂದಿದೆ ಎಂಬುದನ್ನು ದೃಡವಾಗಿ ಪ್ರಮಾಣಿಕರಿಸುತ್ತವೆ. ಇವುಗಳು ಶ್ರೀಮನ್ನಾರಯಣನ ಸರ್ವೋತ್ತಮತ್ವವನ್ನೂ ಅವನಿಗೂ ಜೀವಾತ್ಮರುಗಳಿಗೂ ಇರುವ ಭೇದವನ್ನೂ, ಅವನಿಗೂ ಜಗತ್ತಿಗೂ ಇರುವ ಶರೀರ-ಶರೀರಿ ಸಂಬಧವನ್ನೂ, ಅವನನ್ನು ಪ್ರಸನ್ನಗೊಳಿಸಕ್ಕೊಳ್ಳಲು ಭಕ್ತಿಪ್ರಪತ್ತಿಗಳು ಉಪಾಯವೆಂಬುದನ್ನೂ, ಮುಕ್ತನು ಭಗವಂತನ ದಿವ್ಯಧಾಮಕ್ಕೆ ಹೋಗಿ ಆ ಪರಮಾತ್ಮನಿಗೆ ನಿತ್ಯ ಕೈಂಕರ್ಯ ಮಾಡುವುದೇ ಪುರುಷಾರ್ತವೆಂಬುದನ್ನೂ ಅತ್ಯಂತ ಖಚಿತವಾಗಿ ಪ್ರತಿಪಾದಿಸಿವೆ.  ದೇವಾರ್ಥವಿಶದೀಕರಣಕ್ಕೆ ಈ ಸೂಕ್ತಿಗಳು ಮಾರ್ಗದರ್ಶನ ಮಾಡಿದೆವು.

ಬ್ರಹ್ಮಸೂತ್ರಗಳು
            ಪ್ರಸ್ಥಾನತ್ರಯಗಳಲ್ಲಿ ಒಂದೆಂದು ಪರಿಗಣಿತವಾದ ಬ್ರಹ್ಮಸೂತ್ರಗಳು ಉಪನಿಷತ್ತುಗಳಲ್ಲಿ ಉಪದೇಶಿಸಿದ ಅರ್ಥಗಳನ್ನು ವಿವರಿಸಿ ದೃಢೀಕರಿಸುತ್ತವೆ.  ಬ್ರಹ್ಮವಸ್ತು ಜಗತ್ತಿಗೆ ಕಾರಣವೆಂದೂ, ಅದು ಉಪನಿಷತ್ತುಗಳನ್ನು ನಿರೂಪಿಸುವಂತೆ ಅನೇಕ ಗುಣವಿಶಿಷ್ಟವಾಗಿದೆಯೆಂದೂ, ಬ್ರಹ್ಮಪ್ರಾಪ್ತಿಗೆ ಬ್ರಹ್ಮೋಪಾಸನೆಯೇ ಉಪಾಯವೆಂದೂ ಸೂತ್ರಗಳು ಸಮರ್ಥಿಸುತ್ತವೆ.  ಬ್ರಹ್ಮಸೂತ್ರಗಳು ಅನೇಕ ಉಪಾಸನೆಯ ಪ್ರಕಾರಗಳನ್ನು ವಿಶದಪಡಿಸುತ್ತವೆ.  ಜೀವಾತ್ಮನ ಸ್ವರೂಪವನ್ನು ಸೂತ್ರಗಳು ಉಪನಿಷತ್ಪ್ರಮಾಣಗಳಿಗನುಸಾರವಾಗಿ, ನಿತ್ಯನೆಂದೂ ಉತ್ಪತ್ತಿಇಲ್ಲವೆನೆಂದೂ, ಅಣುವೆಂದೂ, ಜ್ಞಾನಗುಣವಿಶಿಷ್ಟನೆಂದೂ, ಕರ್ತೃವೆಂದೂ, ಬ್ರಹ್ಮಕ್ಕಿಂತ ಬೇರೆಯಾದವನೆಂದೂ ಸಾಧಿಸಿ ಅವನಿಗೂ ಬ್ರಹ್ಮಕ್ಕೂ ಇರುವ ಸಂಬಂಧವನ್ನು ಅಂಶಾಧಿಕರಣದಲ್ಲಿ ನಿಖರವಾಗಿ ನಿರೂಪಿಸುತ್ತವೆ.  ಜೀವನು ಬ್ರಹ್ಮವಸ್ತುವಿನ ಅಂಶ.  ವಿಶಿಷ್ಟವಾದ ವಸ್ತುವಿನಲ್ಲಿ ಬ್ರಹ್ಮವು ವಿಶೇಷ್ಯಾಂಶವಾದರೆ ಜೀವನು ವಿಶೇಷಣಾಂಶ.  ಭೇದಶ್ರುತಿಗಳಿಗೂ ಅಭೇದಶ್ರುತಿಗಳಿಗೂ ಸಮಾನವಾದ ಪ್ರಾಮಾಣ್ಯವನ್ನು ಹೇಳಿ ಎರಡರ ಸಮನ್ವಯವನ್ನು ಸೂತ್ರಕಾರರು ಮಾಡಿದ್ದಾರೆ.  ಮುಕ್ತ್ಯವಸ್ಥೆಯಲ್ಲಿ ಜೀವರು ಪರಮಾತ್ಮನನ್ನು ಅರ್ಚಿರಾದಿಯಲ್ಲಿ ಹೋಗಿ ಸೇರುವರೆಂದೂ, ಬ್ರಹ್ಮದೊಡನೆ ಅವನಿಗೆ ಆನಂದಾನುಭವದಲ್ಲಿ ಸಾಮ್ಯವಿರುವುದೆಂದೂ ಸೂತ್ರಗಳು ಸಿದ್ಧಾಂತಿಸಿವೆ.  ಸೂತ್ರಗಳಲ್ಲಿ ಗುಣ, ಧರ್ಮ, ಸುಖ, ವಿಶಿಷ್ಟ, ವಿಶೇಷಣ, ಭೇದ ಮೊದಲಾದ ಶಬ್ದಗಳನ್ನು ಪ್ರಯೋಗಿಸಿ ಬ್ರಹ್ಮವಸ್ತುವಿನ ಸಗುಣತ್ವವನ್ನೇ ಸ್ಥಾಪಿಸಿದೆ.  ಜಿಜ್ಞಾಸ್ಯ ಮತ್ತು ಉಪಾಸ್ಯ ಎಂಬ ಭೇದದ ಸುಳಿವೂ ಸೂತ್ರಗಳಲ್ಲಿಲ್ಲ.  ಸೂತ್ರಗಳಿಗನುಸಾರ ಬ್ರಹ್ಮವು ಸಗುಣವಾಗಿದೆ.  ಜೀವಾತ್ಮನಿಗಿಂತ ಬೇರೆಯಾಗಿ ಅವನಿಗೆ ಅಂತರ್ಯಾಮಿಯಾಗಿದೆ.  ಜಗತ್ತು ಸೂತ್ರಗಳಿಗನುಗುಣವಾಗಿ ಸತ್ಯವಾದುದೇ ವಿನಾ ಮಿಥ್ಯೆಯಲ್ಲ.  ಅವಿದ್ಯೆಯಿಂದ ಬ್ರಹ್ಮಸ್ವರೂಪ ತಿರೋಹಿತವಾಗಿದೆ ಎಂಬ ಅಂಶದ ಸೂಚನೆ ಎಲ್ಲಿಯೂ ಇಲ್ಲ.  ಸೃಷ್ಟಿ ವಿಚಾರ ಹೇಳುವಾಗ ಸೂತ್ರಕಾರರು 'ಪರಿಣಾಮಾತ್‌' ಎಂದೇ ಹೇಳಿದ್ದಾರೆ.  ಸೂತ್ರಗಳಲ್ಲಿ ಪ್ರತಿಪಾದಿಸುವ ಈ ಅಂಶಗಳೆಲ್ಲಾ ವಿಶಿಷ್ಟಾದ್ವೈತ ದರ್ಶನದಲ್ಲಿ ಯಥಾವತ್ತಾಗಿ ಕಂಡುಬರುತ್ತವೆ.

Courtesy: Facebook 
ಅದ್ವೈತ ವೇದಾಂತ
         ವೇದಾಂತವೆಂದರೆ ವೇದದ ಕೊನೆಯಭಾಗ.  ವೇದದ ಸಿದ್ಧಾಂತ.  ಇದು ಉಪನಿಷತ್ತುಗಳ ಸಾರಾರ್ಥ.  ವೈದಿಕ ಸಾಹಿತ್ಯದ ಮಥಿತಾರ್ಥ.  ವೇದವಯದ ಜ್ಞಾನ  ಕಾಂಡವೆನಿಸಿಕೊಂಡಿರುವ ಭಾಗ, ಭಾರತೀಯ ಋಷಿ ಮುನಿಗಳು ಮಾನವತೆಗೆ ನೀಡಿದ ಅಪೂರ್ವ ಕೊಡುಗೆ ವೈದಿಕ ಚಿಂತಕರು ತಪಸ್ಸಿನಿಂದ  ಕಂಡುಕೊಂಡ ಸತ್ಯ.  ಮಾನವ ಬುದ್ದಿಯ ಪರಾಕಾಷ್ಠೆಯ ಸತ್ಪಲ.  ಇದರಲ್ಲಿ ಜೀವ, ಜಗತ್ತು, ಬ್ರಹ್ಮ ಇತ್ಯಾದಿಗಳನ್ನು ಕುರಿತ ವಿಸ್ತಾರವಾದ ಚರ್ಚೆ - ವಿಫುಲ ಪರಾಮರ್ಶೆಗಳು ಸಮ್ಮಿಳಿತವಾಗಿವೆ.  ದಶ ಉಪನಿಷತ್ತುಗಳೆಂದು ಪ್ರಸಿದ್ದಿವಾಗಿರುವ ವೇದ ಸಾಹಿತ್ಯದ ಸಾರಭೂತ ಜ್ಞಾನಕ್ಕೆ ಆಚಾರ್ಯತ್ರಯರು ತಂತಮ್ಮ ನಿಲುವಿಗೆ ಆನುಗುಣವಾಗಿ ವಿಸ್ತಾರವಾಗಿ ವ್ಯಾಖ್ಯಾನ ಮಾಡಿದ್ದಾರೆ.

       ಆಚಾರ್ಯ ಶಂಕರರು ಮೂವರು ಭಾಷ್ಯಕರ್ತರಾದ ಆಚಾರ್ಯರಲ್ಲಿ ಮೊದಲನೆಯವರು.  ಇವರ ಕಾಲದಲ್ಲಿ ಶ್ರುತಿ ಪ್ರಸ್ಥಾನವಾದ ಉಪನಿಷತ್ತುಗಳು ವೇದಾಂತವೆಂಬ ಅಭಿಧಾನಕ್ಕೆ ಪಾತ್ರವಾಗಿದ್ದವು.  ಶ್ರೀ ಶಂಕರರ ಕಾಲದಲ್ಲಿ ವೇದಾಂತವೆಂಬ ಶಬ್ದವು ಈಗ ಅದ್ವೈತವೆಂದು ಕರೆಯಲಾಗುವ ತತ್ತ್ವವನ್ನು ಮಾತ್ರ ಪ್ರತಿನಿಧಿಸುತ್ತಿತ್ತು.  ಹಾಗಾಗಿ ಶಂಕರರ ಕಾಲದವರೆಗೆ ವೇದಾಂತವೆಂದರೆ ಅದ್ವೈತ ವೇದಾಂತವೆಂದೇ ಆರ್ಥೃಸಿಕೊಳ್ಳುವುದು ಸಹಜ ಹಾಗೂ ಸೂಕ್ತವಾದದ್ದು.  ಶ್ರೀ ರಾಮಾನುಜಾಚಾರ್ಯರು ಹಾಗೂ ಶ್ರೀ ಮಧ್ವಾಚಾರ್ಯರು ತಂತಮ್ಮ ಮತಗಳನ್ನು ಪ್ರತಿಪಾದಿಸದ ಮೇಲೆ ವೇದಾಂತದಲ್ಲಿ ಮುಖ್ಯವಾಗಿ ಮೂರು ಬಗೆಗಳಾದವು.  ಅದರ ಆನ್ವಯ ಶ್ರೀ ಶಂಕರಾಚಾರ್ಯರು ಪ್ರತಿಪಾದಿಸಿದ ವೇದಾಂತವು ಅದ್ವೈತ ವೇದಾಂತವಾಯಿತು.  ಈ ಪರಂಪರೆಯ ಮುಂದುವರೆದು ವಿಶುದ್ದಾದ್ವೈತ, ಶಕ್ತಿವಿಶಿಷ್ಟಾದ್ವೈತ ಮುಂತಾದ ಇನ್ನೂ ಅನೇಕ ಮತಭೇದಗಳು ಉಂಟಾದವು.

         ದ್ವೈತಾದ್ವೈತ ವಿಶಿಷ್ಟಾದ್ವೈತಗಳೆಂದು ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸಿದ್ಧವಿರುವ ಮೂರು ಪಂಥಗಳಲ್ಲಿ ಅದ್ವೈತುವು ಪ್ರಾಚೀನವಾದದ್ದು.  ದ್ವೈತ ಎಂದರೆ ಭೇದ.  ಅದ್ವೈತ ಎಂದರೆ ಭೇದವಿಲ್ಲದ್ದು ಅಂದರೆ ಒಂದೇ ಒಂದಾಗಿರುವಂಥಾದ್ದು.  ಈ ಸಿದ್ಧಾಂತದ ಪ್ರಕಾರ ನಾಮರೂಪಾತ್ಮಕವಾದ ಜಗತ್ತು ಆನೇಕ ವೈವಿಧ್ಯಗಳಿಂದ ಕೂಡಿದ್ದರೂ ಪಾರಮಾರ್ಥಿಕ ದೃಷ್ಥಿಯಿಂದ  ಇರುವುದು ಒಂದೇ.  ನಾವು ಎನೇನನ್ನು ಕಾಣಬಹುದೋ, ಹೇಳಬಹುದೋ, ಕೇಳಬಹುದೋ, ಊಹಿಸಿಕೊಳ್ಳಬಹುದೋ, ಅದೆಲ್ಲವೂ ಅತ್ಯಂತಿಕವಾಗಿ ಒಂದು ವಸ್ತುವೇ.  ಆದಕ್ಕೆ ಹೆಸರು ಕೊಡಲಾಗುವುದಿಲ್ಲ.  ಮಾತುಗಳಿಂದ ಅದನ್ನು ಬಣ್ಣಿಸಲಾಗುವುದಿಲ್ಲ.  ಅದು ಅನುಭವೈಕವೇದ್ಯವಾದದ್ದು.  ಅದನ್ನು ನಮ್ಮ ಆರಿವಿಗೆ ನಿಲುಕವಂತೆ ಮಾಡಿಕೊಳ್ಳಲು ' ಬ್ರಹ್ಮ ' ಎಂದು ಕರೆಯಬಹುದೇನೋ!  ಆದರೆ ಅದೂ ಅದಕ್ಕೆ ಸಮರ್ಪಕವಾದ ಶಬ್ದವಲ್ಲ,  'ಸತ್‌-ಚಿತ್‌-ಆನಂದ' ಎಂದು ಕರೆದರೂ ಅದು ಅದರ ಎಕದೇಶದ ವರ್ಣನೆಯಾಗವಹುದು.  ಎಕೆಂದರೆ ಆ ಪರವಸ್ತುವು 'ವಾಚಾಂ ಅಗೋಚರ', ಅಲ್ಲಿಗೆ ' ನ ಚಕ್ಷುಃ ಗಚ್ಛತಿ, ನ ವಾಗ್‌ ಗಚ್ಛತಿ, ನ ಮನೋ, ನ ವಿದ್ಮೋ, ನವಿಜಾನೀಮೋ, ಯಥೃತದನುಶಿಷ್ಟಾತ್‌' - ಕಣ್ಣು ಹೋಗದು, ಮಾತು ಹೋಗದು, ಮನಸ್ಸು ಹೋಗದು, ನಮಗೆ ಗೊತ್ತಿಲ್ಲ, ನಾವು ತಿಳಿದಿಲ್ಲ - ಇದನ್ನು ಹೇಗೆ ಹೇಳಿಕೊಡಬೇಕೆಂದು ಇರುವುದೇ ಒಂದು, ಅದನ್ನೂ ನಾವು ತಿಳಿವುದು ಕಷ್ಟ.  ತಿಳಿದರೂ ತಿಳಿಸುವುದು ಕಷ್ಟ.  ಇದು 'ಅದ್ವೈತ' ವೇದಾಂತ.

         ಈ ವೇದಾಂತವು ಎಲ್ಲರಿಗೂ ಕೂಡಲೇ ನಿಲುಕುವಂಥದಲ್ಲ .  ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ತಕ್ಕಷ್ಟು ಪೂರ್ವ ಸಿದ್ಧತೆ ಇರಬೇಕು.  ಅದಿಲ್ಲದೇ ಇದ್ದರೆ ಅದ್ವೈತವು  ಅರ್ಥವಾಗುವುದಕ್ಕಿಂತ ಅನರ್ಥವಾಗುವುದೇ ಹೆಚ್ಚು.  ಅದಕ್ಕೇ ಹೀಗೆ ಹೇಳಿದ್ದಾರೆ - 'ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಚ್ಛಿನ್ನ ಸಂಶಯಾಃ' - ಗುರುಗಳು ಮೌನವಾಗಿದ್ದಾರೆ - ಶಿಷ್ಯರಿಗೆ ಸಂದೇಹವುಳಿದಿಲ್ಲ. ಈ ಮೌನ ವ್ಯಾಖ್ಯೆಯನ್ನು ಅದ್ವೈತದ ವಿಶೇಷವೆನ್ನಬಹುದು.

         ಶ್ರೀ ಶಂಕರರು ಪ್ರತಿಪಾದಿಸಿದ, ಪುನಃ ಪ್ರತಿಷ್ಠಾಪನೆಗೊಳಿಸಿದ ಅದ್ವೈತದ ಬಗ್ಗೆ ಅನೇಕ ಅನ್ಯಥಾಭಿಪ್ರಾಯಗಳಿರುವ ಕಾರಣ ಅಂತಹ ಒಂದೆರಡು ಸಂಗತಿಗಳ ಬಗ್ಗೆ ತಕ್ಕಮಟ್ಟಿಗೆ ಬೆಳಕನ್ನು ಯಥಾಮತಿ ಹರಿಸುವ ಲಘು ಪ್ರಯತ್ನವೊಂದನ್ನು ಈ ಲೇಖನದಲ್ಲಿ ಕಾಣಬಹುದು.

         ಅದ್ವೈತದ ಪ್ರಕಾರ `ಬ್ರಹಂ ಸತ್ಯಂ, ಜಗನ್ಮಿಥ್ಯಾ` - ಬ್ರಹ್ಮವು ಸತ್ಯ, ಜಗತ್ತು ಮಿಥ್ಯಾ.  ಇಲ್ಲಿ 'ಸತ್ಯ-ಮಿಥ್ಯಾ'ಗಳೆರಡೂ ಅಪಾರ್ಥಕ್ಕೆ ಗುರಿಯಾಗಿದೆ.  ಯಾವುದೇ ಮಾತನ್ನು ಯಾರು, ಯಾರಿಗೆ, ಯಾವಾಗ, ಎಕೆ ಹೇಳಿದರೆಂಬ ಸಂದರ್ಭವನ್ನು ಸರಿಯಾಗಿ ಗಮನಿಸದೇ ಹೋದರೆ ಲೌಕಿಕ ವಿಷಯಗಳಲ್ಲಿಯೇ ಅದೆಷ್ಟೋ ಅನರ್ಥಗಳು ಉಂಟಾಗುವುದುಂಟು.  ಹೀಗಿರುವಾಗ ವೇದಾಂತ ತತ್ತ್ವದ ಬಗ್ಗೆ ಹೇಳುವುದಿನ್ನೇನು ? ಬ್ರಹ್ಮ ಸತ್ಯವೆಂದರೆ ಜಗತ್ತು ಅಸತ್ಯವೆಂದು ಸರಳ ಅರ್ಥವಲ್ಲ, ಮಾತ್ರವಲ್ಲದೇ ಶ್ರೀ ಶಂಕರರು ಜಗತ್ತನ್ನು ನಾವು ಅರ್ಥಮಾಡಿಕೊಂಡಿರುವ ತರದಲ್ಲಿ ಅಸತ್ಯವೆಂದು ಹೇಳಿಲ್ಲ.  ಸತ್ಯವು 'ಪ್ರಾತಿಭಾಸಿಕ'  'ಪಾರಮಾರ್ಥಿಕ' ಎಂದು ಎರಡು ಬಗೆಯಾಗಿದೆ.  ಪ್ರಾತಿಭಾಸಿಕವೆಂದರೆ ತೋರುಗಾಣಿಕೆಯದು.  ಪಾರಮಾರ್ಥಿಕವೆಂದರೆ ಶಾಶ್ವತವಾದುದು.  ಕನಸಿನಲ್ಲದ್ದಾಗ ನನಸಿನ ಲೋಕವಿಲ್ಲ ಅಥವಾ ಸುಳ್ಳು / ಮಿಥ್ಯೆ, ನೆನೆಪಿನಲ್ಲಿದ್ದಾಗ ಕನಸು ಸತ್ಯವಲ್ಲ ಅಥವಾ ಮಿಥ್ಯೆ.  ಹೀಗೆಯೇ ಪರಬ್ರಹ್ಮದ ಅನುಭವದ ಹಿನ್ನಲೆಯಲ್ಲಿ ನೋಡಿದಾಗ ಪ್ರಪಂಚವೆಲ್ಲ ಬರಿಯ ಕಾಣ್ಕೆ, ತೋರುಗಾಣಿಕೆ, ವಾಸ್ತವ ಸತ್ಯವಲ್ಲ, ಅತ್ಯಂತಿಕ ತಥ್ಯವಲ್ಲ, ಅದೇ ಕನಸು ಕಾಣುತ್ತಿದ್ದಾಗ ಕನಸು ಸತ್ಯ, ನೆನಪಿನಲ್ಲಿದ್ದಾಗ ನನಸು ಸತ್ಯ.  ವ್ಯಾವಹಾರಿಕ ಜಗತ್ತಿನಲ್ಲಿರುವವರೆಗೆ ಜಗತ್ತು ಸತ್ಯ.  ಆದರೆ ಪ್ರಾತಿಭಾಷಿಕ ಸತ್ಯ.  ಇದೂ ಒಂದು ತರಹೆಯ, ಒಂದು ಮಟ್ಟದ, ಒಂದು ಅರ್ಥದ ಸತ್ಯವೇ.  ಜಗತ್ತು ಮಿಥ್ಯೆಯೆಂದರೆ ಪಾರಮಾರ್ಥಿಕ ದೃಷ್ಟಿಯಿಂದ, ಹಂತದಿಂದ, ಮಟ್ಟದಿಂದ ಶಾಶ್ವತ ಸತ್ಯವಲ್ಲ ಎಂದರ್ಥ.  ಆದರೆ ಜಗತ್ತಿನಲ್ಲಿರುವವರೆಗೆ ಜಗತ್ತು ಸತ್ಯ. ಸತ್ಯವಾದರೂ ಇದು ಮಾಯೆ.  ಇದು ಕ್ಷಣಿಕ, ಖಂಡಸತ್ಯ - ' ಮಾಯಾಮಾತ್ರಮಿದಂ ದ್ವೈತಂ ಅದ್ವೈತಂ ಪರಮಾರ್ಥತಃ ' - ಇದರ ಪೂರ್ಣ ಅರ್ಥವು ಅರಿವಾಗುವುದು ಬ್ರಹ್ಮದ ಅನುಭವವಾದಾಗ ಮಾತ್ರ.  ಅದು ಅಷ್ಟು ಸುಲಭವಾಗಿ ಸಿದ್ಧಿಸುವ ಸಂಗತಿಯಲ್ಲ.

         ಇನ್ನು ಭೇದಾಭೇದದ ವಿಚಾರ.  ನಾನು - ನೀನು ಬೇರೆ.  ನಾವಿಬ್ಬರೂ ಬೇರೆ ಜಗತ್ತೇ ಬೇರೆ.  ಜಗತ್ತೇ ಬೇರೆ - ದೇವರೇ ಬೇರೆ.  ಹೀಗೆ ಹೊಸದಾಗಿ ಹೇಳಬೇಕಾದ್ದೇ ಇಲ್ಲ.  ಇದೊಂದು ವೇದಾಂತದ ಗಹನ ಚಿಂತನೆಯೆಂದು ಭಾವಿಸುವುದು ಕಷ್ಟ.  ಅದೇ ಬೇರೆ ಬೇರೆ ತೋರುವುದೆಲ್ಲವೂ ಒಂದೇ ಎಂದು ಹೇಳಲು, ಪ್ರಮಾಣ ಪಡಿಸಲು ತರ್ಕಬೇಕು.  ಈ ತತ್ತ್ವದ ಬಗ್ಗೆ ಪೂರ್ಣ ವಿಶ್ವಾಸಬೇಕು.  ಶ್ರೀ ಶಂಕರರು ಮಾಡಿರುವುದು ಇದನ್ನೇ. ಆದ್ದರಿಂದಲೇ ವಿಶ್ವಚಿಂತಕರ ಬುದ್ಧಿಮಟ್ಟವು ಹೆಚ್ಚಿದಂತೆಲ್ಲಾ ಅದ್ವ್ಯತ ವೇದಾಂತವು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವುದು.  ಇದು ಈ ತತ್ವದ ಹಿರಿಮೆ.  ಇದನ್ನು ತರ್ಕಬದ್ಧವಾಗಿ ನೆಲೆಗೊಳಿಸಿದ ಶ್ರೀ ಶಂಕರರ ಹಿರಿಮೆ.

         ದ್ವೈತಾದ್ವೈತ ವಿಶಿಷ್ಟಾದ್ವೈತಗಳ ಬಗ್ಗೆ ನಮ್ಮಂಥ ಪಾಮರರು ಜಗಳವಾಡುವುದು ಒಂದು ವ್ಯರ್ಥ ಕಾಲಯಾಪನೆ ಆಷ್ಟೆ.  ಈ ಮೂರೂ ಸಿದ್ಧಾಂತಗಳು ಮೂರು ಅರ್ಹತೆಯ ನಾನಾ ಜನರಿಗೆಂದು ಪ್ರತಿಪಾದಿತವಾಗಿರುವ, ಪರಬ್ರಹ್ಮನನ್ನು ಅರಿಯಲು ಸಹಕರಿಸುವ, ಮೆಟ್ಟಲುಗಳು.  ಪ್ರತಿ ಸಿದ್ಧಾಂತದ ಉನ್ನತಸ್ಥಾನಕ್ಕೆ ಅದೆಷ್ಟೋ ಮೆಟ್ಟಲುಗಳನ್ನು ದಾಟಿ ಹೋಗಬೇಕು.  ಅಷ್ಟನ್ನು ಮೊದಲು ಸಾಧಿಸಲು ಪ್ರಯತ್ನಿಸೋಣ.  ಅಲ್ಲದೆ ಹೋದಮೇಲೆಯೂ ಇನ್ನೂ ಸಂಶಯಗಳು ಉಳಿದಿದ್ದರೆ ಈ ಆಚಾರ್ಯರನ್ನು ಕೇಳೋಣ. ಇವರೆಲ್ಲರ ಮಾರ್ಗದರ್ಶನ ಪಡೆಯೋಣ.  'ವಸುದೈವ ಕುಟುಂಬಕಂ', 'ಸರ್ವೇ ಅಮೃತಸ್ಯ ಪುತ್ರಾಃ',  'ವಿಶ್ವಂ ಎಕನೀಡಂ' - ಪ್ರಪಂಚವೆಲ್ಲವೂ ಒಂದು ಪುಟ್ಟ ಮನೆ, ಎಲ್ಲರೂ ಅಮೃತದ ಮಕ್ಕಳು, ವಿಶ್ವವೊಂದು ಗೂಡಿದ್ದಂತೆ ಎಂದೆಲ್ಲಾ ಘೋಷಣೆ ಮಾಡುವ ನಾವು ನಮ್ಮ ನಮ್ಮಲ್ಲಿಯೇ ಇಷ್ಟು ಸಂಕುಚಿತ ಭಾವನೆಯಿಂದ ವರ್ತಿಸುವುದೇಕೆ?  ಅವರವರ ಮತ ಅವರಿಗೆ ಸರಿ.  ಅವರಿಗೆ ದೊಡ್ಡದು.  ನಮ್ಮದು ಮಾತ್ರವೇ ಸರಿಯೆಂಬ ದುರಾಗ್ರಹವೇಕೆ?  ನಮ್ಮ ನಂಬಿಕೆಯಂತೆ ನಾವು ಬದುಕೋಣ.  'ಪಂಡಿತಾಃ ಸಮದರ್ಶಿನಃ'  ನಾವು ಅಪಂಡಿತರಾಗಿ ಎಕೆ ಉಳಿಯೋಣ?  ನಮ್ಮ ಒಳಜಗಳದಿಂದ 'ಸನಾತನಧರ್ಮ' ವನ್ನೇಕೆ ಹಾಳುಗೆಡವೋಣ?

Courtesy: Facebook
ಶ್ರೀ ಮಧ್ವರ ದಿವ್ಯ ಸಂದೇಶ

ಕರ್ನಾಟಕದ ಆಚಾರ್ಯರು
          ವಿಶ್ವದಲ್ಲಿ ಎಣಿಕೆಗೆ ಸಿಗದಷ್ಟು ಆಚಾರ್ಯ ಪುರುಷರು ಅವತರಿಸಿದ್ದಾರೆ.  ಆದರೆ ಇತಿಹಾಸದ ಪುಟಗಳು ಗುರುತಿಸಿದ, ಸನ್ಮಾನಿಸಿದ, ವಿಮರ್ಶಕರನ್ನು ಬೆರಗುಗೊಳಿಸಿದ ಮಂದಿ ಬಹಳೇ ವಿರಳ.  ಈ ಬಗೆಯ ಆಚಾರ್ಯಪುರುಷರಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದವರು ಶಂಕರ, ರಾಮಾನುಜ ಹಾಗೂ ಮಧ್ವರು.  ವಿಶ್ವಮಾನ್ಯವಾದ ಸಂದೇಶವನ್ನು ಹೊತ್ತು ಬಂದ ಈ ಮೂವರಲ್ಲಿ ಶ್ರೀ ಮಧ್ವರು ಕನ್ನಡದ ಕೊಡುಗೆಯೆಂಬುದು, ಕನ್ನಡಿಗರೆಲ್ಲ  ಹೆಮ್ಮೆ ಪಡಬೇಕಾದ ಸಂಗತಿ.  ಆದರೆ, ವಿಮರ್ಶಕರೆಂದು ಕರೆಯಿಸಿಕೊಂಡ ಬಹಳ ಮಂದಿ, ಆಚಾರ್ಯರ ಸಂದೇಶವನ್ನು ಅರ್ಥೈಸಿಕೊಳ್ಳುವ ಪ್ರಾಮಾಣಿಕ ಯತ್ನ ನಡೆಸದಿರುವುದು, ಐತಿಹಾಸಿಕ ದುರಂತಗಳಲ್ಲೊಂದು.  ವಿಮರ್ಶಗೆ ನಮ್ಮಲ್ಲಿರುವ ಅಜ್ಞಾನವೇ ಸಾಕೆನ್ನುವ , ವಿಚಾರವಂತರ ಒಂದು ವರ್ಗ ಆಚಾರ್ಯರನ್ನು ಇಂದಿಗೂ ಜನತೆಗೆ ತಪ್ಪಾಗಿಯೇ ಪರಿಚಯಿಸುತ್ತಿದೆ.  'ಸತ್ಯ' 'ಸುಳ್ಳು'ಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿ ಸಂತಸಪಡುವ ಮಂದಿಗೆ ಆಚಾರ್ಯರ ಈ 'ತತ್ವವಾದ' ಎಂದಿಗೂ ಒಂದು ಸಮಸ್ಯೆಯಾಗೇ ಉಳಿದಿದೆ.

 ಮಾನವನ -ಜೀವನ-ತತ್ವಶಾಸ್ತ್ರ
         ಯಾವ ಹಿನ್ನಲೆಯಲ್ಲಿ ಮಾನವ ಪಶು, ಇತರ ಪಶುಗಳಿಗಿಂತ ಹೆಚ್ಚಳವನ್ನು ಪಡೆದಿದೆ?  ಎಂಬ ಪ್ರಶ್ನೆಗೆ ಭಾಗವತ ಈ ರೀತಿ ಉತ್ತರಿಸುತ್ತದೆ -  'ಮಾನವ ಬುದ್ದಿಜೀವಿ, ತನಗೆ ಅಪೂರ್ವವಾದ ಬುದ್ಧಿಶಕ್ತಿಯನ್ನು ನೀಡಿದ, ದೇಹೇಂದ್ರಿಯಾದಿ ಸಕಲ ಸಾಧನ ಸಂಪತ್ತಿಯನ್ನು ನೀಡಿದ, ಕಣ್ಣಿನ ಎವೆಯಂದದಿ ತನ್ನನ್ನು ರಕ್ಷಿಸುವ, ಮತ್ತು ಹಸನಾದ ಬದುಕಿಗೆ ಜ್ಞಾನ ವಿಜ್ಞಾನಗಳನ್ನು ನೀಡಿದ ಪರಶಕ್ತಿಯನ್ನು ಕೃತಜ್ಞತೆಯಿಂದ ಸ್ಮರಿಸುವನು, ಮತ್ತು ಪರೋಪಕಾರಿಯಾಗಿ ಜೀವಿಸಿ, ತನ್ನೊಂದಿಗೆ ಇತರರ ಬದುಕಿಗೆ ಆಸರೆಯಾಗುವನು, ಎಂಬ ಹಿನ್ನಲೆಯಲ್ಲಿ ಮಾನವ ಜನ್ಮದ ಸಾರ್ಥಕ್ಯವನ್ನು ಪ್ರತಿಪಾದಿಸಲಾಗಿದೆ  (ಸೃಷ್ಟ್ವಾ ಪುರಾಣಿ ವಿವಿಧಾನ್ಯಜಯಾತ್ಮಶಕ್ತ್ಯಾ ವೃಕ್ಷಾನ್‌ ಸರೀಸೃಪಪಶೂನ್‌ ಖಗದಂಶಮತ್ಸ್ಯಾನ್‌ :  ತೈಸ್ತೈರತಿಷ್ಟಹೃದಯ: ಪುರುಷಂ ವಿಧಾಯ ಬ್ರಹ್ಮಾವಬೋಧಧಿಷಣಂ ಮುದಮಾಪ ದೇವ:  ಭಾಗವತ)

            ಹುಟ್ಟು ಸಾವುಗಳಾಚೆ ಎನಿದೆ?  ಮಾನವ ಎಲ್ಲಿಂದ ಬಂದ?  ವಿಶ್ವದಲ್ಲಿ ಕಾಣುವ ವೈಚಿತ್ರದ, ಮಾನವೀಯ ವಿಭಿನ್ನ ಸ್ವಭಾವಗಳ ಮೂಲವೇನು?  ಸುಖದ ಸುಪ್ಪತ್ತಿಗೆಯಲ್ಲಿ ಜೀವಸ ಬಯಸುವ ಮಾನವ ಎಂದೂ ದು:ಖಪಡುವುದೇಕೆ?  ತನ್ನ ವ್ಯಕ್ತಿತ್ವನ್ನು ಪ್ರಯತ್ನವನ್ನೂ ಮೀರಿನಿಂದು, ವಿಶ್ವವನ್ನು ನಿಯಂತ್ರಿಸುವ ಸೂತ್ರಶಕ್ತಿ ಇದೆಯೇ?  ಇವೇ ಮೊದಲಾದ ಸಮಸ್ಯೆಗಳನ್ನು ಬುದ್ಛಿಜೀವಿಗಳೆನಿಸದ ಮಂದಿ ಅಂದಿನಿಂದ ಇಂದಿನವರೆಗೂ ಎದರಿಸುತ್ತಲೇ ಇರುವರು.  ಭೌತ ವಿಜ್ಞಾನದ ವ್ಯಾಪ್ತಿಗೆ ಒಳಪಡದ ಈ ಮೂಲ ಸಮಸ್ಯೆಗಳ ಆಥವಾ ಜೈವಿಕ ಸಮಸ್ಯೆಗಳ ಅಥವಾ ಜೈವಿಕ ಸಮಸ್ಯೆಗಳ ಪರಿಹಾರ ಚಿಂತನೆಗಾಗಿ, ಅವತಾರ ಪುರುಷರನ್ನಿಸಿಕೊಂಡ ಆನೇಕ ಮಂದಿ ಯತ್ನಿಸಿದರು.  ಅವರು ನೀಡಿದ ವಿಚಾರಧಾರೆಗಳು ಅವರ ಆನುಯಾಯಿಗಳಿಂದ ಉಳಿಸಿ ಬೆಳೆಸಲ್ಪಟ್ಟವು.  ಹೀಗೆ ಹೆಮ್ಮರವಾಗಿ ಬೆಳೆದ, ವಿಭಿನ್ನ ವಿಚಾರಧಾರೆಗಳನ್ನು 'ದಾರ್ಶನಿಕ ವಿಚಾರ'ಗಳೆಂದು ಹೆಸರಿಸಲಾಯಿತು.

            ಹೀಗೆ ವಿಶ್ವದ ಎಲ್ಲಡೆ ಬೆಳೆದ ಎಲ್ಲ ವಿಭಿನ್ನ ದರ್ಶನಗಳೂ, ಮಾನವನ  ಅಭೌತಿಕ ಜೀವನದ ಗೊತ್ತು ಗುರಿಗಳನ್ನು ತೀರ್ಮಾನಿಸಲು ರೂಪುತಳೆದವು.  ಬದುಕಿನಾಚೆಗೆ ಏನಿದೆ? ಎಂಬ ಪ್ರಶ್ನೆಗೆ ಉತ್ತರ ನೀಡಲು ಶ್ರಮಿಸಿದವು.  ಇನ್ನಿತರ ಮಾಧ್ಯಮಗಳಿಂದ ದೊರಕದ, ಶಾಶ್ವತ ಶಾಂತಿಯನ್ನು ದೊರಕಿಸಲು ಕಟಿಬದ್ಧವಾಗಿ ಪ್ರಯತ್ನಿಸದವು.  ಹೀಗೆ ಮಾನವ ಮತ್ತು ಅವನ ಮೌಲಿಕ ಬಾಳ್ವೆಯ ರೂಪಿಗಾಗಿ ಜನಿಸಿದ ದರ್ಶನಗಳ ಸಂಬಂಧವನ್ನು ಅರಿಯಬಹುದಾಗಿದೆ.

            ಎಂಟು ಜನ ತಮ್ಮ ಪ್ರಿಯ ಶಿಷ್ಯರನ್ನು,  ತತ್ವ ಪ್ರಚಾರದಲ್ಲಿ ಕಟಿಬದ್ಧರಾಗಿಸಿದರು.  ತಮ್ಮ ಇನ್ನೊಂದು ಪ್ರತಿಕೃತಿಯಂತಿರುವ ದಿವ್ಯಜ್ಞಾನಸಂಪತ್ತನ್ನು ಸಜ್ಜನರ ವಿನಿಯೋಗಕ್ಕೆ ನೀಡಿ, ಭಗವತ್ಕೈಂರ್ಯಕ್ಕಾಗಿ, ಮಾಘಶುದ್ಧನವಮಿಯಂದು ಬದರಿಗೆ ತೆರಳಿದರು.  ಇಂತಹ  'ತತ್ವವಾದ' ವನ್ನು ಉಳಿಸಿ ಬೆಳೆಯಿಸಿಕೊಂಡು ಹೋಗುವುದೇ, ವಿಚಾರ ಪ್ರಿಯರು ಶ್ರೀ ಮಧ್ವರಿಗೆ ಸಲ್ಲಿಸಬಹುದಾದ `ಗೌರವ'.

ಆಚಾರ್ಯ ಮಧ್ವರ ಸಂದೇಶ

೧.        ವಿಶ್ವದ ಯಾವುದೋ ಒಂದೊಂದು ಚೇತನದಲ್ಲಿ, ದಯೆ, ಶಾಂತಿ, ಔದಾರ್ಯ, ವಿದ್ವತ್ತು, ಮೊದಲಾದ, ಗುಣಗಳನ್ನು ಕಾಣುತ್ತೇವೆ. ಇಂತಹ ಆಮೂಲ್ಯವಾದ ಜ್ಞಾನ, ವಿಜ್ಞಾನ, ದಯೆ, ಸೌಂದರ್ಯ, ಔದಾರ್ಯ, ಗಾಂಭೀರ್ಯವೇ ಮೊದಲಾದ, ಅಪ್ರಾಕೃತವಾದ ಅನಂತ ಶುಭಗುಣಗಳ ಅಂತಿಮಧಾಮವೂ, ನಿರ್ದೋಷವೂ ಆದ ವಿಶ್ವದ ಚಾಲಕ ಶಕ್ತಿಯೇ ಪರಮಾತ್ಮನೆನಿಸಿದೆ.  ( ಅತೋಶೇಷಗುಣೋನ್ನದ್ದಂ ನಿರ್ದೋಷಂ ಯಾವದೇವ ಹಿ ತಾವದೇವೇಶ್ವರೋ ನಾಮಃ)

೨.        ಇಂತಹ ಪರಶಕ್ತಿಯ ಆದ್ಭುತ ಕರ್ತೃತ್ವದ ಸಂಕೇತವೇ ಸತ್ಯವಾದ, (ಮಿಥ್ಯೆಯಲ್ಲದ) ಕಾಣುವ ವಿಶ್ವವಾಗಿದೆ.  ಜನಿಸಿದ, ವೈವಿಧ್ಯಮಯವಾದ ಈ ಪ್ರಪಂಚದಲ್ಲಿರುವ ಕೌಶಲದಿಂದ ಇದರ ನಿರ್ಮಾರ್ತೃವಾದ ಪರಮಾತ್ಮನ ಮಹಾತ್ಮ್ಯವನ್ನು ನಾವು ಅರಿಯಬಹುದಾಗಿದೆ.

            ವಿಶ್ವದ ಒಂದೊಂದು ಪದಾರ್ಥವೂ ಹಲವು ಅದ್ಭುತಗಳನ್ನೊಳಗೊಂಡಿದೆ.  ಕಾಣ್ಕೆ, ಅಭಿರುಚಿಗಳ ವಿಭಿನ್ನತೆಯು, ವಸ್ತುವಿನ ಬಹುಮುಖತೆಯ ಪರಿಚಾಯಕವಾಗಿದೆ.  ಪರಿಶುದ್ಧವಾದ ಜ್ಞಾನಯುತವಾದ ಅನುಭವದ ಪರಾಕಾಷ್ಥೆಯನ್ನು ತಲುಪುವವರೆಗೂ ಯಾವುದೇ ಒಂದು ವಸ್ತುವನ್ನು ಮಾನವನು ಪೂರ್ತಿಯಾಗಿ ಅರಿಯಲಾರನು.  ಸಂಶೋಧನೆ ನಡೆಸಿದಂತೆಲ್ಲ ಪ್ರಕೃತಿಯ ವಿಚಿತ್ರ ಸೊಬಗನ್ನು ಕಾಣುವ ನಾವು, ಇದರಿಂದ ಅದರ ಸೂತ್ರಶಕ್ತಿಯ ಮಹತ್ವವನ್ನು ಮನಗಾಣಬಹುದಾಗಿದೆ.  ಆದ್ದರಿಂದಲೇ ಆಚಾರ್ಯರು, `'ಅತ್ಯಂತ ವಿಚಿತ್ರವಾದ, ನಮ್ಮ ಸಂಶೋಧನೆಗೆ ನಿಲುಕದ, ಚೇತನಾಚೇತನಾತ್ಮಕವಾದ ಈ ವಿಶ್ವದ, ನಿರ್ಮಾತೃವು, ಸರ್ವೋತ್ಕೃಷ್ಟಶಕ್ತಿಯುತನೂ, ಗುಣಪೂರ್ಣನೂ ಆಗಿರುವನು`` ಎಂದಿದ್ದಾರೆ.  (ಬಹುಚಿತ್ರ ಜಗದ್ಬಹುಧಾ ಕರಣಾತ್‌ ಪರಶಕ್ತಿರನಂತಗುಣಃ !! ದ್ವಾದಶಸ್ತೋತ್ರ)

೩.        ಪ್ರತಿಯೊಂದು ವಸ್ತುವು, ತನ್ನದೇ ಆದ ವೈಶಿಷ್ಟ್ಯ, ವೈಚಿತ್ರವನ್ನೊಳಗೊಂಡಿದೆ.  ಆದ್ದರಿಂದಲೇ ಪ್ರತಿಯೊಂದು ವಸ್ತುವು ತನಗಿಂತ ಬೇರೆಯಾದ ಎಲ್ಲ ವಸ್ತುಗಳಿಂದ ವಿಭಿನ್ನವಾಗಿದೆ.  ವಸ್ತುವಿನ ಜ್ಞಾನ ಬರುವಾಗಲೇ, `` ಇದು ಉಳಿದೆಲ್ಲ ವಸ್ತುಗಳಿಂದ ಭಿನ್ನವಾಗಿದೆ `` ಎಂದೇ ಜ್ಞಾನ ಬರುವುದು.  ಎಲ್ಲಡೆ ಆನುಭವಕ್ಕೆ ಬರುವ ಈ ಭೇದವು ಯಥಾರ್ಥವಾಗಿದೆ.``  `` ನಾವೆಲ್ಲಾ ಒಂದು ನಮ್ಮಲ್ಲಿ ಭೇದವಿಲ್ಲ `` ವೆಂದು ಸುಲಭವಾಗಿ ಘೋಷಿಸಬಹುದಾದರೂ, ಎಲ್ಲರೂ ಒಂದಾಗುವುದು ಪ್ರಕೃತಿ ನಿಯಮಕ್ಕೆ ನಿಲುಕದೆಂಬುದು ಎಲ್ಲರ ಅನುಭವಕ್ಕೆ ಬಂದಿರುವ ವಿಷಯ.  ಈ ಹಿನ್ನಲೆಯಲ್ಲಿ ಪ್ರತಿಯೋರ್ವ ಜೀವಾತ್ಮನೂ ಇನ್ನೊರ್ವ ಜೀವಾತ್ಮನಿಂದ ಭಿನ್ನನಾತಿರುವನು.  ಇದರಂತೆ ಜೀವಾತ್ಮರೆಲ್ಲರೂ ವಿಶ್ವದ ಚಾಲಕ ಶಕ್ತಿಯಾದ ಪರಮಾತ್ಮನಿಂದ ಭಿನ್ನರಾಗಿದ್ದಾರೆ.  ಜೀವ ಜಡ, ಪರಮಾತ್ಮರಲ್ಲಿರುವ ಈ ಭೇದ, ಸ್ವಾಭಾವಿಕವಾಗಿರುತ್ತದೆ.  ಜನತೆಯಲ್ಲ ಒಂದೇ ನಿಲುವು ತಳೆದಾಗ ಒಂದೆನಿಸಬಹುದು.  ಆದರೆ ಔಪಚಾರಿಕವಾಗಿ ಈ ಏಕತೆ, ಪ್ರಕೃತಿ ಸಹಜವಾದ ``ಭೇದ '' ವನ್ನು ನಿರಾಕರಿಸುವುದಿಲ್ಲವಷ್ಟೆ !  ಈ ಹಿನ್ನಲೆಯಲ್ಲಿ ಭೇದ, ಸತ್ಯ ಹಾಗೂ ಶಾಶ್ವತ.

೪.        ಅನಂತಗುಣಗಳ ಅಮತಿಮಧಾಮವಾದ ಪರಮಾತ್ಮನ ಅನುಗ್ರಯಕ್ಕೆ ಪ್ರಮುಖವಾದುದು, ನಿರ್ವ್ಯಾಜವಾದ ಹಾಗೂ ಸರ್ವೋತೃಷ್ಟವಾದ ಪ್ರೇಮ.  ಕೇವಲ ಭಕ್ತಿಯಿಂದ, ಸಾಧಕನ ಹೃದಯದಲ್ಲಿ ನರ್ತಿಸುವ ಪರಮಾತ್ಮನ  ಜ್ಞಾನಕ್ಕೆ ಸಾಧನವಾದುದು, ವೇದ ಹಾಗೂ ಬ್ರಹ್ಮಸೂತ್ರಗಳು.  ಶುಷ್ಕ ತರ್ಕದಿಂದ ಪರಮಾತ್ಮನನ್ನು ಅರಿಯಲಾಗದು.  ಎಕೆಂದರೆ ತರ್ಕದಿಂದ ಒಂದನ್ನು ಸಾಧಿಸಬಹುದಾದಂತೆ, ನಿರಾಕರಿಸಲೂಬಹುದು.  ಈ ಹಿನ್ನಲೆಯಲ್ಲಿ ತರ್ಕಾತೀತವಾದ ಆ ಪರಶಕ್ತಿಯ ಸಾಕ್ಷಾತ್ಕಾರಕ್ಕಾಗಿ ಅಧ್ಯಯನ ರೂಪವಾದ ತಪಸ್ಸು ಅಗತ್ಯವಾಗಿದೆ.

೫.        ಅಧ್ಯಯನ ಶೀಲನಾದವನು `` ಸತ್ಯ ``ದ ಸಾಕ್ಷಾತ್ಕಾರ ಪಡೆಯುವನು.  ಆದರೆ, ಅಧ್ಯಯನ ನಡೆಯಿಸಿದವರಲ್ಲ ಸಿದ್ಧಿ ಪಡೆಯಲಾರರು.  ಕೆಲವರೇ ಸಿದ್ಧಿ ಪಡೆದಂತೆ ಹಲವರು ಕೈ ಸುಟ್ಟುಕೊಳ್ಳುವುದು ಅನಿವಾರ್ಯ.  ನಿಂಬೆಯಲ್ಲಿ ಕಾಣುವ ಹುಳಿಯಂತೆ, ಹಾಲಿನಲ್ಲಿ ಕಾಣುವ ಮಾಧುರ್ಯದಂತೆ, ಪ್ರತಿಯೋರ್ವ ಆತ್ಮರೂ ತಮ್ಮದೇ ಆದ ವಿಶಿಷ್ಟವಾದ, ಸ್ವಭಾವ-ವ್ಯಕ್ತಿತ್ವವನ್ನು ಪಡೆದಿದ್ದಾರೆ.  ಅವರವರ ಸಾಧನೆ, ವಿಭಿನ್ನ ಸ್ವಭಾವ, ಮೊದಲಾದವನ್ನು ಅವಲಂಬಿಸಿ ಅವರವರು ಫಲ (ಸಿದ್ಧಿ) ಪಡೆಯುತ್ತಾರೆ.  ಇದು ಅಪ್ರಿಯ ಹಾಗೂ ಅನಿವಾರ್ಯವಾದ ಸತ್ಯ.  ನಮಗೆ ಪ್ರಿಯವಾದುದೇ ಸತ್ಯವಾಗಬೇಕೆಂದಾಗಲೀ ಸತ್ಯ ನಮ್ಮ ಮೂಗಿನ ನೇರಕ್ಕೆ ಇರಲಿ ಎಂದೂ ಯಾರೂ ಹಕ್ಕು ಚಲಾವಣೆ ಮಾಡಲಾಗದು.  ಯೋಗ್ಯತೆಯನ್ನು ಮೀರಿ ದೊರಕದಿರುವಾಗ್ಯೂ, ಯೋಗ್ಯತೆಯ ಪರಿಚಯವಿಲ್ಲದಿರುವುದರಿಂದ ಶ್ರದ್ಧಾಯಿತವಾದ ಪ್ರಯತ್ನ ನಿರಂತರ ನಡೆಯಬೇಕು.

೬         ಭಗವಂತನನ್ನು ಉಪಾಸನೆ ಮಾಡುವುದೆಂದರೆ, ಅನಂತ ಶುಭ ಗುಣನಾದ ಅವನನ್ನು ಹೃದಯದಲ್ಲಿ ಆಹ್ವಾನಿಸುವುದು  ಮತ್ತು ದಯೆ, ಧರ್ಮ, ಔದಾರ್ಯಗಳಿಂದ ವರ್ತಿಸುವ ದೀಕ್ಷೆ ತೊಡುವುದೇ ಆಗಿದೆ.  ಹೀಗೆ ಪರಮಾತ್ಮನನ್ನು ಪೂಜಿಸುವುದರ ಜೊತೆಗೆ, ಅವನ ಕಿಂಕರರಾದ ಭಕ್ತರನ್ನು ಮಾತಾಪಿತೃ ಗುರುಗಳನ್ನೂ ಪೂಜಿಸಬೇಕು, ಇದರಂತೆಯೇ ವಿಶ್ವದಲ್ಲಿ ಅಜ್ಞಾನದಿಂದ, ದಾಸ್ಯದಿಂದ, ಹತ್ತಾರು ಸಮಸ್ಯೆಗಳಿಂದ ತೊಳಲಾಡುವ, ದೀನ ಜನತೆಗೆ ಸಲ್ಲಿಸುವ ಸೇವೆಯೂ ಒಂದು ವಿಧವಾದ ಭಗವತ್ಪೂಜೆ, ಭಗವಂತನ ರಾಜ್ಯದ ಪ್ರಜೆಗಳಾದ ಎಲ್ಲಾ ಜ್ಞಾನಿಗಳಿಗೂ ಈ ಕಂದಾಯದ ನೀಡಿಕೆ ಅನಿವಾರ್ಯ (ನಾನಾಜನಸ್ಯ ಶುಶ್ರೂಷಾ ಕರ್ತವ್ಯಾ ಕರವನ್ಮಿತೆಃ - ಗೀ.ತಾ. ೬.೩)  ಈ ಹಿನ್ನಲೆಯಲ್ಲಿ ನಾನಾ ವಿಧವಾದ ಜನತೆಯ ಸೇವೆ, ಸಾಧಕನ ಉತ್ತಮ ಕರ್ತವ್ಯವಾಗಿದೆ.

೭.        ಒಂದನ್ನು ಅಂಗೀಕರಿಸಲು ಅನುಭವಕ್ಕಿಂತ ಮಿಗಿಲಾದ ಸಾಧನವಿಲ್ಲ, ಶಾಸ್ತ್ರಗಳು ಎನು ಪ್ರತಿಪಾದಿಸುತ್ತವೆ ಎಂದು ಗಿಳಿಪಾಠ ಮಾಡುವುದಕ್ಕಿಂತ, ಪ್ರತಿಪಾದಿಸಿದ ವಿಷಯಗಳು ಎಷ್ಟು ಅನುಭವಿಕವಾಗಿದೆ ಮತ್ತು ನಮ್ಮ ಜೀವನದಲ್ಲಿ ಎಷ್ಟು ಅಳವಡಿಸಿಕೊಂಡಿದ್ದೇವೆ, ಎಂಬ ಚಿಂತನೆ ಮುಖ್ಯ.  ಅನುಭವ ಉತ್ತಮ ಪಾಠವಾದರೂ ಅನುಭವ ಬಂದ ಮೇಲೆಯೇ ಅದು ಸತ್ಯವೆಂಬ ಹಠಬೇಡ.  ಜ್ಞಾನಿಗಳ ಅನುಭವ -ಹೇಳಿಕೆಗಳಲ್ಲಿ ನಂಬಿಕೆ ಶ್ರದ್ಧೆ ಇರಲಿ.  ಶ್ರದ್ಧೆಯೇ ಮುಕುತಿಗೆ ದಾರಿ.

೮.        ಸತ್ಯ, ದಾನ, ಅಧ್ಯಯನಶೀಲತೆ, ಭಗವತ್ಕೈಂಕರ್ಯ ಮೊದಲಾದ ಉತ್ತಮ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಹಿತಕಾರಿಯಾದವನೇ ಬ್ರಾಹ್ಮಣ.  ಉತ್ತಮ ಕುಲದಲ್ಲಿ ಜನಿಸಿದವರೆಲ್ಲ ಉತ್ತಮರೆಂದು ಪರಿಗಣಿಸಲಾಗದು. ಹುಟ್ಟಿಗಿಂತ, ಆತ್ಮನಲ್ಲಿರುವ ಸಹಜ ಮತ್ತು ಉತ್ತಮವಾದ ಸಂಸ್ಕೃತಿ, ಭಗವದ್ಬಕ್ತಿ, ಸತ್ಕರ್ಮಾನುಷ್ಠಾನ ರತಿಯೇ ಅವನ ಬ್ರಾಹ್ಮಣ್ಯದ ಅಳತೆಗೋಲು.  ಸದ್ಗುಣಗಳಿಲ್ಲದ ಬ್ರಾಹ್ಮಣ ಹರಿಭಕ್ತಿಯುಳ್ಳ ವರ್ಣಾವರನಿಗಿಂತ ಕಡೆ.  ಗುಣಾಧಿಕನಾದ ಶೂದ್ರ ಬ್ರಾಹ್ಮಣನೆನಿಸುವನು.  ಈ ಹಿನ್ನಲೆಯಲ್ಲಿ ಹುಟ್ಟಿನ ಬ್ರಾಹ್ಮಣ್ಯಕ್ಕಿಂತ, ಗುಣದ ಮೂಲಕ ಬ್ರಾಹ್ಮಣ್ಯವನ್ನು ಪಡಯುವ ಯತ್ನ ನಡೆಸಬೇಕು.

            ಆಚಾರ್ಯರು ನೀಡಿದ ಈ ವಿಶ್ವಮಾನ್ಯವಾದ ಸಂದೇಶ ಮಾಧ್ವರ ಗುತ್ತಿಗೆಯೇನು ಅಲ್ಲ.  ವಿಚಾರಶೀಲರೆಲ್ಲರೂ ಅಧ್ಯಯನ ನಡೆಸಿ ಅನುಷ್ಠಾನಕ್ಕೆ ತರಬಹುದಾದ ಉತ್ತಮ ಮಾರ್ಗ.  ಇಂತಹ ತತ್ವವಾದವನ್ನು ವಿಶ್ವದ ಎಲ್ಲಡೆಗೆ ಪ್ರಚಾರಗೊಳಿಸಲು, ಆಚಾರ್ಯರು ನೀಡಿದ ದಿವ್ಯ ಸಂದೇಶವನ್ನು ಅವರ ಶಿಷ್ಯರೆಲ್ಲ ಲಿಪಿಬದ್ದಗೊಳಿಸಿದರು.  ಇತ್ತೀಚಿಗೆ ಉಪಲಬ್ದವಾದ ತಿಥಿನಿರ್ಣಯ ನ್ಯಾಸಪದ್ಧತಿಗಳನ್ನು ಸೇರಿ, ಇಂದು ನಲವತ್ತು ಗ್ರಂಥಗಳು ಉಪಲಬ್ದವಾಗಿದೆ.  ಇದನ್ನು ಸುಜನರೆಲ್ಲ ಅರಿತು ಬೆಳೆಕಿನ ದಾರಿಯಲ್ಲಿ ಸಾಗಬೇಕು.

Courtesy: Facebook 

ಗುರುವಾರ, ಜನವರಿ 5, 2017

*ಮೋಹ*

ಮಾನವನ ಬದುಕೇ ಹೀಗೆ.
ಕಷ್ಟಪಟ್ಟು ದುಡಿದು
ಮಕ್ಕಳಿಗಾಗಿ ಸಂಪತ್ತು ಗಳಿಸಿ
ಕೊನೆಗೆ ಹಸಿವು ಹಸಿವು ಅಂತಾ
ಕೈಯಲ್ಲಿ ಸಂಪತ್ತನ್ನೆ ಹಿಡಿದು
ಅದೆಷ್ಟೋ ಜನ ಮರಣವನ್ನಪ್ಪಿದ್ದಾರೆ.

ಅಂತಹ ಮೋಹದ ನಿಧಿಯ
ಕಥಾಹಂದರ ಓದಿ.

ಒಂದು ಯುರೋಪಿಯನ್‌ ಕಥೆ.

ಒಬ್ಬ ಮನುಷ್ಯ ಆಯುಷ್ಯದ ತುಂಬಾ ದುಡಿದು ಅಪಾರ ಸಂಪತ್ತು ಗಳಿಸಿದ್ದ.
ಒಂದು ದೊಡ್ಡ ಮಹಡಿಯ ಮನೆಯ ಕಟ್ಟಿಸಿದ್ದ.
ಮನೆಯ ತುಂಬ ಬಂಧುಬಳಗವಿತ್ತು. ಯಾವುದಕ್ಕೇನೂ ಕೊರತೆಯಿರಲಿಲ್ಲ .
ಈಗ ಆತನಿಗೆ 80 ವರ್ಷ ವಯಸ್ಸು.
ಈ ಮುದುಕ ತನ್ನ ಮನೆಯ ಕೆಳಗೊಂದು ನೆಲಮನೆಯ ಮಾಡಿಸಿದ್ದ.
ಅದರಲ್ಲಿ ತಾನು ಗಳಿಸಿದ್ದ ಸಂಪತ್ತನ್ನೆಲ್ಲ ಸಂಗ್ರಹಿಸಿ ಗುಪ್ತವಾಗಿಟ್ಟಿದ್ದ.
ಅದು ವಿಶೇಷವಾದ ಗಾಳಿ,ಬೆಳಕು ಇರಲಾದ ಕತ್ತಲೆಯ ಕೋಣೆ.
ಅಲ್ಲೊಂದು ಮೇಣದ ಬತ್ತಿ, ಕಡ್ಡಿ ಪೆಟ್ಟಿಗೆ ಇಟ್ಟಿದ್ದ.
ತನಗೆ ಸಂಪತ್ತನ್ನು ನೋಡುವ ಆಶೆಯಾದಾಗ ಯಾರಿಗೂ ಹೇಳದೆ ಒಬ್ಬನೇ ಬಂದು ನೋಡಿಕೊಂಡು ಹೋಗುತ್ತಿದ್ದ.

ಒಂದು ದಿನ ಮಧ್ಯರಾತ್ರಿ
ಮುದುಕನಿಗೆ ಎಚ್ಚರವಾಯಿತು.
ಮೋಹದ ನಿಧಿಯ ನೋಡುವ ಅಪೇಕ್ಷೆಯಾಯಿತು, ಎದ್ದ
ಮನೆಯವರೆಲ್ಲ ಮಲಗಿದ್ದಾರೆ.
ಮುದುಕ ನೆಲಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡ.
ದೀಪ ಬೆಳಗಿಸಿದ.
ಕಣ್ತುಂಬ ನಿಧಿಯ ನೋಡಿ ಸಂತಸಪಟ್ಟ.
ಹಾಗೇ ಎಷ್ಟು ಹೊತ್ತು ನಿಧಿಯ ನೋಡುತ್ತ ಮೈಮರೆತು ಕುಳಿತಿದ್ದನೋ ಏನೋ ?

ಈತನ ಜಡಸಿರಿಯನ್ನೆಲ್ಲ ಬೆಳಗುತ್ತಿದ್ದ ಏಕೈಕ ದೀಪ ನಂದುವ ಸಮಯವಾಯಿತು.
ಮೇಲೆದ್ದು ಬಾಗಿಲು ತೆಗೆಯಲು ಹೋದ. ಬಾಗಿಲು ತೆಗೆಯಲಿಲ್ಲ .
ಅದೇಕೋ ಬಾಗಿಲು ಭದ್ರವಾಗಿ ಮುಚ್ಚಿಕೊಂಡಿತ್ತು.
ಮತ್ತೆ ಮತ್ತೆ ಪ್ರಯತ್ನಿಸಿದ.
ಮುದುಕನ ದುರಾಶೆಗೆ ಮೈ
ಸೋತು ಸಣ್ಣಾಗಿತ್ತು.

ಬಾಗಿಲು ತೆಗೆಯಲು ಶಕ್ತಿ ಸಾಲಲಿಲ್ಲ.
ಮುದುಕ ಗಾಬರಿಯಾದ.
ಅಷ್ಟರಲ್ಲಿ ದೀಪವೂ ನಂದಿತು. ಮುದುಕನಿಗೆ ಜಗತ್ತೆಲ್ಲ ಈಗ ಶೂನ್ಯವಾಯಿತು.

ಸ್ವಲ್ಪ ಸಮಯದ ನಂತರ ಹೊರಗೆ ಬೆಳಕಾಗಿತ್ತು.
ಮುದುಕನ ಪಾಲಿಗೆ ಮಾತ್ರ ಕತ್ತಲೆ ಶಾಶ್ವತವಾಗಿತ್ತು.
ಮಕ್ಕಳು ಮೊಮ್ಮಕ್ಕಳೆಲ್ಲ ಎದ್ದರು.
ಮುದುಕ ಕಾಣಲಿಲ್ಲ.
ಮನೆಯೆಲ್ಲ ನೋಡಿದರು.
ಊರೆಲ್ಲ ಹುಡುಕಿದರು.
ಮುದುಕ ದೊರೆಯಲಿಲ್ಲ.
ಕಳೆದಿದ್ದರಲ್ಲವೆ ದೊರೆಯುವುದು.

ತಮ್ಮ ಮನೆಯ ಕೆಳಗೆಯೇ ನಶ್ವರ ಸಿರಿಯ ಮೋಹದಲ್ಲಿ ಮುಳುಗಿದ್ದ ಮುದುಕನನ್ನು ಅವರು ಕಾಣದೇ ಹೋದರು.
ದಿನಗಳೆದಂತೆ ಮನೆಯವರೆಲ್ಲ ಮುದುಕನನ್ನು ಮರೆತೇಬಿಟ್ಟರು.

ನೆಲಮನೆಯಲ್ಲಿದ್ದ ಮುದುಕ ಎರಡು ದಿನ ಹೇಗೋ ಕಳೆದಿದ್ದ.
ಮುಂದೆ ಹಸಿವೆ ತಾಳದೆ ಅಲ್ಲೇ ಬಿದ್ದಿದ್ದ ಮೇಣದ ಬತ್ತಿಯ ಚೂರು ತಿಂದಿದ್ದ !

ಕೊನೆಗೆ ಅನ್ನ-ನೀರು,
ನೀರು-ಅನ್ನವೆಂದು ಕೈಯಲ್ಲಿ ಮುತ್ತುರತ್ನ ಹಿಡಿದು ಪ್ರಾಣ ಬಿಟ್ಟಿದ್ದ

ಹತ್ತಾರು ವರುಷಗಳ ನಂತರ ಮಕ್ಕಳೆಲ್ಲ ಈ ಮನೆಯನ್ನು ಮಾರಿ ಪಟ್ಟಣ ಸೇರಿದರು.
ಕೊಂಡವನು ಹೊಸಮನೆಯ ಕಟ್ಟಲೆಂದು ಈ ಹಳೆಮನೆಯ ಕೆಡವಿದ.

ಅಡಿಪಾಯ ತೆಗೆಯಿಸುವಾಗ ನೆಲಮನೆಯು ಕಾಣಿಸಿತು.
ಬಾಗಿಲು ಮುರಿದು ಒಳಗೆ ಹೋದ. ಕುರ್ಚಿಯ ಮೇಲೆ ಅಸೀನನಾಗಿದ್ದ ಮುದುಕನ ಅಸ್ಥಿಪಂಜರ ಕಂಡಿತು
ಅದರ ಕೈಯಲ್ಲಿ ಮುತ್ತುರತ್ನಗಳಿದ್ದವು
ಹೊಸ ಮಾಲೀಕ ಕ್ಷಣಕಾಲ ತನ್ನ ಕಣ್ಣನ್ನು ತಾನೇ ನಂಬಲು ಆಗದಂತೆ ನಿಬ್ಬೆರಗಾದ.
ನಿರಾಯಾಸವಾಗಿ ದೊರಕಿದ್ದ ಅಪಾರ ಸಿರಿಯ ಕಂಡು ಅವನಿಗೆ ಅಂತ್ಯತ ಸಂತೋಷವಾಯಿತು.

ತಕ್ಷಣವೇ ಜಡಸಿರಿ ನಕ್ಕು ನುಡಿಯಿತು- "ಮುದುಕನ ಸರದಿ ಮುಗಿಯಿತು, ಇನ್ನು ನಿನ್ನದು"

*- ಶ್ರೀ.ಸಿದ್ದೇಶ್ವರ ಶ್ರೀಗಳು*

ಬುಧವಾರ, ಜನವರಿ 4, 2017

Jai Gurudeva Datta.

||Sruthi Smriti Purananam Aalayam Karunalayam|
Namaami Bhagavathpada Shankaram Loka Shankaram||



ಶ್ರೀಗುರುಪರಮ್ಪರಾಸ್ತೋತ್ರಮ್


ಗುರುರ್ಬ್ರಹ್ಮಾ ಗುರುರ್ವಿಷ್ಣುರ್ಗುರುರ್ದೇವೋ ಮಹೇಶ್ವರ:
ಗುರುಸ್ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ

Master is Brahma; Master is Vishnu; The Master is Divine Mahesvara; Supreme Divine, the Master is truly, We salute hence the glorious Master.

ಶುದ್ಧಸ್ಫಟಿಕಸಂಕಾಶಂ ಶುದ್ಧವಿದ್ಯಾಪ್ರದಾಯಕಮ್
ಶುದ್ಧಂ ಪೂರ್ಣಂ ಚಿದಾನನ್ದಂ ಸದಾಶಿವಮಹಂ ಶ್ರಯೇ ೧

He is resplendent like a crystal pure; He kindles in us sacred knowledge serene Immaculate, Consciousness-Bliss He is. Obeisance to Lord Sadasiva !

ಸೀಮಾತೀತಮನಾದ್ಯನ್ತಂ ನಾಮೋಚ್ಚಾರಣಭೇಷಜಮ್
 ಕಾಮಿತಾಶೇಷಫಲದಂ ಶ್ರೀಮದ್ವಿಷ್ಣುಮಹಂ ಶ್ರಯೇ ೨

Limitless He’s beginningless, endless; His very name, it cures the ills of birth; His Grace accords what one desires in life. To that Vishnu, my Lord, salutations !

ಯೋಗಿ ಹೃತ್ಪದ್ಮನಿಲಯಂ ನತಜೀವಹಿತೇ ರತಮ್
ಶ್ರುತೀನಾಂ ಜನ್ಮಭೂಮಿಂ ತ್ವಾಂ ಚತುರ್ಮುಖಮಹಂ ಶ್ರಯೇ ೩

The lotus heart of yogis is Thy seat; Thou givest humble bhaktas what is good; The birth and source of all scriptures Thou art. I bow to thee, O Lord of four faces!

ಪ್ರಸಮಾಹಿತಮತ್ಯನ್ತಂ ಪ್ರಥಿಮಾಮಿತತೇಜಸಮ್
ವಶೀಕೃತಪರಾನನ್ದಂ ವಸಿಷ್ಠಂ ಗುರುಮಾಶ್ರಯೇ ೪

Immersed He is in deep transcendent trance; The splendid sage of serene peace and bliss; Alluring Light of lofty beatitude; Salutations to seigneur Vasistha !

ಶುಕ್ತೌ ರೂಪ್ಯಮಿವಾಭಾತಿ ಯದ್ರೂಪಂ ಮಯಿ ಕಲ್ಪಿತಮ್
 ಶಕ್ತ್ಯಾ ಪರಿ ತಂ ಯೇನ ಶಕ್ತಿಂ ತಂ ಗುರುಮಾಶ್ರಯೇ ೫

He has the holy puissance to annul; The form imagined by my delusion ; Shining like silver in the oyster shell. I take refuge in That Master Shakti.

ಕರಣಾತೀತಚಿದ್ರೂಪಂ ಪರಿಪೂರ್ಣಂ ಪರಾಯಣಮ್
 ಪರಮಾನನ್ದಸಂತುಷ್ಟಂ ಪರಾಶರಮಹಂ ಶ್ರಯೇ ೬

His form is Knowledge transcending the mind; The perfect Lord of integral wisdom; The happy Master of supreme delight; Salutations to Sire Parasara!

ವೇದವ್ಯಾಸಂ ಸ್ವಾತ್ಮರೂಪಂ ಸತ್ಯಸನ್ಧಂ ಪರಾಯಣಮ್
ಶಾನ್ತಂ ಜಿತೇನ್ದ್ರಿಯಕ್ರೋಧಂ ಸಶಿಷ್ಯಂ ಪ್ರಣಮಾಮ್ಯಹಮ್ ೭
 
Veda Vyasa, the form of inner Self, The light to Truth and life serene divine; The peaceful saint who has the wrath subdued; We bow to Him followed by disciples.

ತ್ರಿಕಾಲಾತೀತಚಿನ್ಮಾತ್ರಪ್ರಶಾನ್ತಸ್ವಾನ್ತಸಂಯುತಮ್
ವಿಕಾರಾದ್ಯೈರಸಂಸ್ಪೃಷ್ಟಂ ಶುಕಂ ಗುರುಮಹಂ ಶ್ರಯೇ ೮

God-conscious one beyond the triple time; The sage of peace and solemn selfdelight; Immutable, illusionless and sweet. I humbly bow at Master Suka’s feet.

ಗೂಢಾ ಮಾಯಾ ಯಸ್ಯ ವಾಕ್ಯೈರ್ವ್ರೀಡಿತಾ ವಿಲಯಂ ಗತಾ
ಕ್ರೀಡನ್ತಂ ವಿದ್ಯಯಾ ಸಾರ್ಧಂ ಗೌಡಪಾದಂ ತಮಾಶ್ರಯೇ ೯

The splendid sage who cows down sly Maya; That deludes the mind and confuses all; He who sports with spiritual learning; To that graceful Gaudapada I bow.

ಜೀವೇಶಭೇದರಹಿತಂ ನಾವಿಕಂ ಭವವಾರಿಧೇಃ
ಭಾವಾಭಾವವಿದೂರಸ್ಥಂ ಗೋವಿನ್ದಂ ಗುರುಮಾಶ್ರಯೇ ೧೦

He does not distinguish his self from God; He steers our life across the sea of birth; “Is and Is-not” he easily surmounts; To Master Govinda salutations !

ಶಙ್ಕಾರೂಪೇಣ ಮಚ್ಚಿತ್ತಂ ಪಙ್ಕೀಕೃತಮಭೂದ್ಯಯಾ
ಕಿಙ್ಕರೀ ಯಸ್ಯ ಸಾ ಮಾಯಾ ಶಙ್ಕರಾಚಾರ್ಯಮಾಶ್ರಯೇ ೧೧

The tricky Maya that cleverly deludes; And raises storms of dismay in my mind, That illusion is his servant maid; Salutations to Sankaracharya !

ವಿಶ್ವಂ ಮಾಯಾಮಯತ್ವೇನ ರೂಪಿತಂ ಯತ್ಪ್ರಬೋಧತಃ
ವಿಶ್ವಂ ಚ ಯತ್ಸ್ವರೂಪಂ ತಂ ವಾರ್ತಿಕಾಚಾರ್ಯಮಾಶ್ರಯೇ ೧೨

A lucid gloss he wrote upon the Truth; That the illusion which pervades the world Is imbedded nowhere but in the mind-Suresvaracharya – him I salute !

ಅನಾದ್ಯವಿದ್ಯಾಮುತ್ಸಾರ್ಯ ಪ್ರಜ್ಞಾನಘನರೂಪತಾಮ್
ಯೋ ಬೋಧಯತಿ ಸಚ್ಛಿಷ್ಯಾನ್ ತಂ ಬೋಧಘನಮಾಶ್ರಯೇ ೧೩

This Truth he teaches worthy disciples; “Thou art the wakeful conscious inner Self Which shall root out the ancient delusion” ; I bow at the feet of Bhodhaghana !

ಸಿತಾಘನಾದಿದೃಷ್ಟಾನ್ತೈರ್ಯತ್ಸ್ವರೂಪಂ ಶ್ರುತಿರ್ಜಗೌ
ಪ್ರಜ್ಞಾನಘನ ಏವೇತಿ ತಂ ಜ್ಞಾನಘನಮಾಶ್ರಯೇ ೧೪

His clear wisdom culling analogies; From ancient Upanishads candy-sweet; Kindles ablaze the Knowledge of the Self; Such is Jnanaghana; him I adore.

ಜ್ಞಾನಾನಾಮುತ್ತಮಂ ಜ್ಞಾನಂ ಜ್ಞಾನಿನಾಮುತ್ತಮೋ ಯತಃ
ಜ್ಞಾನೋತ್ತಮ ಇತಿ ಖ್ಯಾತಂ ಗುರುಂ ತಮಹಮಾಶ್ರಯೇ ೧೫

The Sage among sages-Jnanottama; He knows the self, knowing Knowledge supreme; The world honours Him as the highest One;To Him I bow-adorable Master!

ಜ್ಞಾನನಿಶ್ರೇಣಿಮಾಲಮ್ಬ್ಯ ಬ್ರಹ್ಮಾಖ್ಯಂ ಗಿರಿಮುನ್ನತಮ್
ಆರುಹ್ಯ ಕೃತಕೃತ್ಯೋ ಯಸ್ತಂ ಜ್ಞಾನಗಿರಿಮಾಶ್ರಯೇ ೧೬

He scaled the mount of wisdom step by step; And climbed the peak of Brahman transcendent; His life was fulfilled in That, lofty Truth, To Sage Jnanagiri salutations!

ದುರ್ವಾದಿದುಷ್ಟಮಾತಙ್ಗವಿದಾರಣಪಟೀಯಸೇ
ನಮಃ ಶ್ರೀಸಿಂಹಗಿರಯೇ ಗುರವೇ ದಿವ್ಯಚಕ್ಷುಷೇ ೧೭

Salutations to Sage Simhagiri; Whose divine vision beams with true wisdom; Whose lion like inner strength rips as under; Wicked elephants, wrangling stubborn foes.

ಈಪ್ಸಿತಾರ್ಥಪ್ರದೋ ನಿತ್ಯಂ ಪ್ರಣತಾನಾಂ ಚ ದೇಹಿನಾಮ್
ಯತಿರೀಶ್ವರತೀರ್ಥಾಖ್ಯ: ತಂ ನಮಾಮಿ ಗುರುಂ ಶಿವಮ್ ೧೮

Great as Siva, he grants with gracious heart; The boons that pure beloved souls aspire; I do salute and solemnly adore; That saintly Master Isvara Tirtha.

ಶ್ರುತಿಮಸ್ತಕಕೂಟಸ್ಥಮಜ್ಞಾನದ್ವಿಪಭೇದಿನಮ್
ಶ್ರೀಮನ್ತ್ರರಾಜಮೂರ್ತಿಂ ತಂ ನೃಸಿಂಹಂ ಗುರುಮಾಶ್ರಯೇ ೧೯

The light effulgent up the Vedic Hill; The power that kills elephant-Ignorance; The royal Sage of mantras-embodied; I humbly seek the Master Nrisimha.

ಅವಿದ್ಯಾಚ್ಛನ್ನಭಾವಾನಾಂ ನೃಣಾಂ ವಿದ್ಯೋಪದೇಶತಃ
ಪ್ರಕಾಶಯತಿ ಯಸ್ತತ್ತ್ವಂ ತಂ ವಿದ್ಯಾತೀರ್ಥಮಾಶ್ರಯೇ ೨೦

He brings the Light of Wisdom by His words; To men that are immersed in ignorance; He holds the torch of Truth for all the world; Homage to Him, holy Vidya Tirtha !

ಅಜ್ಞಾನಾಂ ಜಾಹ್ನವೀ ತೀರ್ಥಂ ವಿದ್ಯಾತೀರ್ಥಂ ವಿವೇಕಿನಾಮ್
ಸರ್ವೇಷಾಂ ಸುಖದಂ ತೀರ್ಥಂ ಭಾರತೀತೀರ್ಥಮಾಶ್ರಯೇ ೨೧

Ganga is Tirtha to the ignorant, Gnosis is the Tirtha of the wise, There is the Tirtha of the wise, Bharati Tirtha ! Unto Him I bow!

ಅವಿದ್ಯಾರಣ್ಯಕಾನ್ತಾರೇ ಭ್ರಮತಾಂ ಪ್ರಾಣಿನಾಂ ಸದಾ
ವಿದ್ಯಾಮಾರ್ಗೋಪದೇಷ್ಟಾರಂ ವಿದ್ಯಾರಣ್ಯಗುರುಂ ಶ್ರಯೇ ೨೨

To souls that saunter in utter dismay; The dark woodlands of mental ignorance; He shows the path of wisdom, Vidya true, Homage to Saint Vidyaranya the Great !

ವಿದ್ಯಾವಿದ್ಯಾವಿವೇಕೇನ ಪಾರಂ ಸಂಸಾರವಾರಿಧೇಃ
ಪ್ರಾಪಯತ್ಯನಿಶಂ ಭಕ್ತಾನ್ ತಂ ವಿದ್ಯಾರಣ್ಯಮಾಶ್ರಯೇ ೨೩

Homage to this Vidyaranya serene; Who holds the high light that discriminates Knowledge of the Real from unreal; And helps bhaktas cross the sea of birth.

ಅವಿದ್ಯಾರಣ್ಯಸಂಕ್ಲೇಶಕೃಶಾನುಭೃಶತಾಪಿತಃ
ಸಂಶ್ರಯೇ ಸತತಂ ಭೂತ್ಯೈ ಚನ್ದ್ರಶೇಖರಚನ್ದ್ರಿಕಾಮ್ ೨೪

Led astray and caught in forest fire; Of ignorance I suffered wounds of woe; That moon allayed me with ambrosial rays; Him I adore. Hail Chandrasekhara !

ಅವಿದ್ಯಾಖ್ಯದ್ವಿಪದ್ವೈಧೀಭಾವೇ ದಕ್ಷಂ ಸಮಾಶ್ರಯೇ
ನೃಸಿಂಹಭಾರತೀಶಾಖ್ಯಹರಿಂ ಶ್ರುತಿಗುಹಾಶ್ರಯಮ್ ೨೫

He has the lion-like strength and great courage; To rend the wild tusker of ignorance The light that always shines in Vedic Cave; Him I adore Nrisimha Bharati !

ಪುರುಷೋತ್ತಮತಾಂ ಯಾನ್ತಿ ಯಮಾಶ್ರಿತ್ಯ ಜನಾಃ ಶ್ರಯೇ
ಕ್ಷರಾಕ್ಷರಮತೀತಂ ತಂ ಪುರುಷೋತ್ತಮಯೋಗಿನಮ್ ೨೬

They shall be supermen who seek His feet; He is the fleeting world and lasting soul; Beyond them both He is the transcendent. Homage to that Purushottama Yogi !

ಕಿಙ್ಕರೀಕೃತಭೂಪಾಲಂ ಪಙ್ಕೇರುಹಸಮಾನನಮ್
ತಂ ಕಾರುಣ್ಯಪಯೋರಾಶಿಂ ಶಙ್ಕರಾಖ್ಯಂ ಗುರುಂ ಶ್ರಯೇ ೨೭

Sovereigns of earth are His humble servants; His smiling face is like the lotus flower; His heart is an ocean of compassion; Master Shankara, in Him I take refuge !

ಚನ್ದ್ರಿಕಾಧವಲೋದಾರಸಾನ್ದ್ರಕೀರ್ತಿಚ್ಛಟಾಧರಮ್
ಇನ್ದ್ರಿಯೈರ್ದುರ್ಜಯಂ ನೌಮಿ ಚನ್ದ್ರಶೇಖರಭಾರತೀಮ್ ೨೮

Like silver moonlight shines His sacred ash; His spotless fame is sung by seer poets! He has conquered the senses rare to win; Salute Chandrasekhara Bharati !

ಪ್ರಸಿದ್ಧವಿದ್ಯಾನಿಲಯಂ ಲಸಮಾನಗುಣೋತ್ಕಟಮ್
ಬಿಸಜಾಕ್ಷಾರ್ಚಕಂ ಭಕ್ತ್ಯಾ ನೃಸಿಂಹಂ ತೀರ್ಥಮಾಶ್ರಯೇ ೨೯

He is the famous home of high learning; Supreme Master full of sacred virtues; The fervent votary of Sri Krishna; I pay homage to Nrisimha Tirtha !

ಪುರುಹೂತಾದಿದೇವೌಘಪೌರುಷೇಯಗುಣೋತ್ಕಟಮ್
ಪುರುಷಾರ್ಥಪ್ರದಂ ನೌಮಿ ಪುರುಷೋತ್ತಮಯೋಗಿನಮ್ ೩೦

Indra following, all celestials; Adore this Sage of all manly virtues; He fulfils the four ideals of life. I hail the Yogi Purushottama !

ಕಾಮದ್ವಿರದಪಞ್ಚಾಸ್ಯರಾಮಣೀಯಕಮನ್ದಿರಮ್
ಸೋಮೋಪಮಾನನಂ ಶ್ರೀಮದ್ರಾಮಚನ್ದ್ರಗುರುಂ ಭಜೇ ೩೧

The lion that kills the elephant of lust; The holy shrine of pleasing qualities; His smiling face is always full-moon bright; Hail holy Master Srimat Ramchandra !

ಸುರಸಿನ್ಧುಲಸತ್ಕೀರ್ತಿಂ ಸ್ಮರಸಿನ್ಧುಘಟೋದ್ಭವಮ್
ನಾರಸಿಂಹಾರ್ಚಕಂ ಶ್ರೀಮನ್ನಾರಸಿಂಹಯತಿಂ ಭಜೇ ೩೨

His fame is like the swelling Ganges-flood; Like Agastya He drinks the desire-sea; He does adore God Nrisimha daily; With love I worship Nrisimha the Saint !

ಸಾರಾಸಾರವಿವೇಕಜ್ಞಂ ಮಾರಕಾನನಕುಞ್ಜರಮ್
ಶೂರಂ ದಾನೇ ಚ ನಿರತಂ ನಾರಸಿಂಹಯತಿಂ ಭಜೇ ೩೩

His wisdom knows what is worth and not worth; His will is a tusker that kills the lust He gives and gives; He is heroic brave; I hail with love Nrisimha Saint of Saints !

ನೃಸಿಂಹತಾಂ ಪ್ರಯಾನ್ತ್ಯಾಶು ಯಮಾಶ್ರಿತ್ಯ ಜನಾ ಭುವಿ
ತಂ ನೃಸಿಂಹಗುರುಂ ವನ್ದೇ ದ್ವಿಗುಣೋಪಪದಂ ಸದಾ ೩೪

Men of earth that take refuge in him; Shall become lions of loftiest virtues; His holy feet I adore in full faith; Hail Nrisimha Bharati the saint !

ತಂ ಸರ್ವಭೂತಾಭಯದಂ ವಿಭವೈರನ್ವಿತಂ ಪರಮ್
ನಾರಸಿಂಹಂ ಗುರುಂ ಚಾಪಿ ನವಂ ಜ್ಞಾನಾರ್ಣವಂ ಭಜೇ ೩೫

Fear he removes from all the human minds; He is majestic and magnanimous; An ocean of spiritual knowledge; Hail Abhinava Nrisimha Bharati !

ಸತ್ಯಸ್ವರೂಪಂ ಸದ್ಜ್ಞಾನನಿಷ್ಠಂ ಸಾಕ್ಷಾಚ್ಛಿವಂ ಪರಮ್
ಸದಾ ದಾನರತಂ ದಾನ್ತಂ ಸಚ್ಚಿದಾನನ್ದಮಾಶ್ರಯೇ ೩೬

Truth incarnate, firm in self-knowledge; Like supreme Siva, He is ever blissful; Self-controlled. He delights in giving; Homage to Master Satchidananda !

ಮಹಾಮೇರುಸಮಂ ಧೈರ್ಯೇ ಮಾಧುರ್ಯೇಪ್ಯಮೃತೋಪಮಮ್
ಊಹಾಪೋಹಾರ್ಥನಿಷ್ಣಾತಂ ನಾರಸಿಂಹಂ ಗುರುಂ ಭಜೇ ೩೭

In mightly courage He is the mount Meru, In heart He is like nectar tender sweet, Intrepid in inner truth of things; I hail the holy Master Nrisimha !

ಸಚ್ಚಿತ್ತಾಮ್ಬುಜಮಿತ್ರಾಯ ಸಚ್ಚರಿತ್ರಯುಜೇ ನಮಃ
ಸಚ್ಚಿದಾನನ್ದಭಾರತ್ಯೈ ಸಚ್ಚಿದಾನನ್ದಮೂರ್ತಯೇ ೩೮

The Sun who opens blooming lotus-hearts; Whose sacred life is sung by seer poets; Who is the Truth-Knowledge-Bliss embodied; I bow to Satchidananda Bharati.

ಸಚ್ಚಿದನನ್ದಭಾರತ್ಯೈ ನವ್ಯಾಯಾಸ್ತು ನಮೋನಿಶಮ್
ಭವ್ಯಾತ್ಮಜ್ಞಾನನಿರ್ಧೂತಾವಿದ್ಯಾಕಾರ್ಯೋಪಲಬ್ಧಯೇ ೩೯

By radiating blessed Self-knowledge; He annuls ignorance in all beings; Abhinava Satchidananda Bharati; Him I adore as my Master supreme !

ಮಾರಮಾತಙ್ಗಪಞ್ಚಾಸ್ಯಂ ಮದಸರ್ಪದ್ವಿಜರ್ಷಭಮ್
ನೃಸಿಂಹಭಾರತೀಂ ವನ್ದೇ ಜಿತಾಕ್ಷತುರಗಂ ಸದಾ ೪೦

The elephant that quells vital passions; Eagle that kills the snake of mental pride; Hero controlling steeds of wild senses. Salutation, Nrisimha Bharati !

ತತ್ತ್ವಮಸ್ಯಾದಿವೇದಾನ್ತವಾಕ್ಯಾರ್ಥಜ್ಞಾನವಾರಿಧೇಃ
ಪೂರ್ಣಚನ್ದ್ರಮಸಂ ವನ್ದೇ ಸಚ್ಚಿದಾನನ್ದಯೋಗಿನಮ್ ೪೧

He is the sea of knowledge that expounds; Vedanta’s essence which is Thou art That ; His visage beams with wisdom like the moon. I bow to Satchidananda Yogi !

ಅಭಿನವಪದಪೂರ್ವಾನ್ ಸಚ್ಚಿದಾನನ್ದಸಂಜ್ಞಾನ್
ನಿಗಮಶಿಖರವೇದ್ಯಾನ್ ನಿತ್ಯಕಲ್ಯಾಣರೂಪಾನ್
ತ್ರಿಭುವನಜನವನ್ದ್ಯಾನ್ ಸರ್ವಲೋಕೈಕಹೃದ್ಯಾನ್
ಹೃದಯ ಕಮಲಮಧ್ಯೇ ಭಾವಯಾಮ್ಯಮ್ಬುಜಾಸ್ಯಾನ್ ೪೨

The Sage aloft the peak of Vedic lore, Auspicious One, Eternal Bliss Divine; Adored by great men of the triple planes, Gladdening the hearts of good devotees; The lotus faced effulgent saint He is Abhinava Satchidananda Bharati. I worship Him in my lotus heart.

ಪ್ರಹ್ಲಾದವರದೋ ದೇವೋ ಯೋ ನೃಸಿಂಹಃ ಪರೋ ಹರಿಃ
ನೃಸಿಂಹೋಪಾಸಕಂ ನಿತ್ಯಂ ತಂ ನೃಸಿಂಹಗುರುಂ ಭಜೇ ೪೩

He’s Hari who protected Prahlada; The lion who quells the foes of faith and truth; The worshipper of Nrisimha the Lord. Salute Master Nrisimha Bharati !

ಶ್ರೀಸಚ್ಚಿದಾನನ್ದಶಿವಾಭಿನವ್ಯನೃಸಿಂಹಭಾರತ್ಯಭಿಧಾನ್ ಯತೀನ್ದ್ರಾನ್
ವಿದ್ಯಾನಿಧೀನ್ ಮನ್ತ್ರನಿಧೀನ್ ಸದಾತ್ಮನಿಷ್ಠಾನ್ ಭಜೇ ಮಾನವಶಂಭುರೂಪಾನ್ ೪೪

Hail self-immersed Siva in human form; Treasure of learning, treasure of mantric lore; King of Sages, Satchidananda Siva Abhinava Nrisimha Bharati !

ಸದಾತ್ಮಧ್ಯಾನನಿರತಂ ವಿಷಯೇಭ್ಯಃ ಪರಾಙಮುಖಮ್
ನೌಮಿ ಶಾಸ್ತ್ರೇಷು ನಿಷ್ಣಾತಂ ಚನ್ದ್ರಶೇಖರಭಾರತೀಮ್ ೪೫

Unattached to objects of the senses; Immersed in meditation day and night; Skilful in sacred lore which he does live; Salute Chandrasekhara Bharati !

ವಿವೇಕಿನಂ ಮಹಾಪ್ರಜ್ಞಂ ಧೈರ್ಯೌದಾರ್ಯಕ್ಷಮಾನಿಧಿಮ್
ಸದಾಭಿನವಪೂರ್ವಂ ತಂ ವಿದ್ಯಾತೀರ್ಥಗುರುಂ ಭಜೇ ೪೬

I worship my Guru Sri Abhinava Vidya Tirtha; Endowed with discrimination; Great perception, a repository of courage, Forgiveness and generosity.

ಭಾರತೀಕರುಣಾ ಪಾತ್ರಂ ಭಾರತೀ ಪದಭೂಷಣಮ್
ಭಾರತೀ ಪದಮಾರೂಢಂ ಭಾರತೀತೀರ್ಥಮಾಶ್ರಯೇ ೪೭

ಸದಾಶಿವಸಮಾರಮ್ಭಾಂ ಶಙ್ಕರಾಚಾರ್ಯಮಧ್ಯಮಾಮ್
ಅಸ್ಮದಾಚಾರ್ಯಪರ್ಯನ್ತಾಂ ವನ್ದೇ ಗುರುಪರಮ್ಪರಾಮ್ ೪೮

ಇತಿ ಶ್ರೀಗುರುಪರಮ್ಪರಾಸ್ತೋತ್ರಂ ಸಂಪೂರ್ಣಮ್